
ಇತ್ತೀಚೆಗೆ ಸಾಮಾಜಿಕ ಜಾಲತಾಣ (Social Media) ಬಳಕೆ ಮಾಡುವವರ ಸಂಖ್ಯೆ ಹೆಚ್ಚೇ ಇದೆ. ಮಹಿಳೆ, ಮಕ್ಕಳು, ಪುರುಷರೆನ್ನದೆ ಯಾವ ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ (Photo), ವಿಡಿಯೋ (Video) ಅಪ್ಲೋಡ್ ಮಾಡುವುದು ಇತರೆ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಇದೇ ರೀತಿ, ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ (Reels) ಮಾಡಿದ್ದು, ಆಕೆಯ ಪ್ರಾಣಕ್ಕೇ ಮುಳುವಾಗಿದೆ. ಹೌದು, ತನ್ನ ಪತ್ನಿ ಹೆಚ್ಚು ಸಮಯ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ (Tamil Nadu) ತಿರುಪ್ಪುರ್ (Tiruppur) ಜಿಲ್ಲೆಯಲ್ಲಿ ನಡೆದಿದೆ.
38 ವರ್ಷದ ವ್ಯಕ್ತಿ ಆಕೆಯ ಶಾಲಿನಿಂದ ಉಸಿರುಗಟ್ಟಿಸಿ ಭಾನುವಾರ ರಾತ್ರಿ ಕೊಲೆ (Murder) ಮಾಡಿದ್ದಾನೆ. ತಮಿಳುನಾಡಿನ ತಿರುಪ್ಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಆರೋಪ ಹಿನ್ನೆಲೆ ಸ್ಥಳೀಯ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ದಿಂಡಿಗಲ್ ಮೂಲದ 38 ವರ್ಷದ ಅಮಿರ್ಥಲಿಂಗಂ ಚಿತ್ರಾಳನ್ನು ಮದುವೆಯಾದ ಬಳಿಕ ತಿರುಪ್ಪುರ್‌ನ ಸೆಲ್ಲಂ ನಗರದಲ್ಲಿ ವಾಸ ಮಾಡುತ್ತಿದ್ದರು. ಥೆನ್ನಂ ಪಲಾಯಂ ತರಕಾರಿ ಮಾರ್ಕೆಟ್‌ನಲ್ಲಿ ಆತ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿ: ಚಂದ್ರು ಕಿವಿ ಕಚ್ಚಿ ಹಿಂಸಿಸಿ ಕೊಲೆ: ತಂದೆ ರಮೇಶ್ ಆರೋಪ
ಇನ್ನು, ಆತನ ಪತ್ನಿ ಚಿತ್ರಾ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಟಿಕ್‌ಟಾಖ್ ಹಾಘೂ ಇನ್ಸ್ಟಾಗ್ರಾಮ್‌ನಲ್ಲಿ ಆಕೆ ರೀಲ್ಸ್‌ಗಳನ್ನು ಪೋಸ್ಟ್ ಮಾಡುತ್ತಿದ್ದರು. ಈ ವಿಚಾರಕ್ಕೆ. ಅಮಿರ್ಥಲಿಂಗಂ ಚಿತ್ರಾ ಜತೆಯಲ್ಲಿ ಹಲವು ಬಾರಿ ಜಗಳವಾಡುತ್ತಿದ್ದರು. ಹಾಗೂ, ರೀಲ್ಸ್ ಪೋಸ್ಟ್ ಮಾಡಲು ಹಾಗೂ ವಿಡಿಯೋಗಳನ್ನು ಮಾಡಲು ಹೆಚ್ಚು ಸಮಯ ಕಳೆಯುತ್ತಾರೆ ಎಂದು ಆತ ಆರೋಪಿಸುತ್ತಿದ್ದ.
ಇನ್ನು, ಹೆಚ್ಚು ಫಾಲೋವರ್‌ಗಳು ಹಾಗೂ ಕಾಂಟ್ಯಾಕ್ಟ್‌ಗಳನ್ನು ಪಡೆದುಕೊಮಡ ಬಳಿಕ, ಚಿತ್ರಾ ನಟನೆಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದು, ಇದಕ್ಕೆ ಆಕೆ 2 ತಿಂಗಳ ಹಿಂದೆ ಚೆನ್ನೈಗೆ ಹೋಗಿದ್ದರು. ಅಲ್ಲದೆ, ಚಿತ್ರಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ 33 ಸಾವಿರಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ, ಚಿತ್ರಾ ತನ್ನ ಮಗಳ ಮದುವೆ ಹಿನ್ನೆಲೆ ಮನೆಗೆ ಬಂದಿದ್ದರು. ಆದರೆ, ಮದುವೆಯ ನಂತರ, ಆಕೆ ವಾಪಸ್ ಚೆನ್ನೈಗೆ ಹೊರಟಾಗ ಪತಿ ಹೋಗಲು ಬಿಡಲಿಲ್ಲ ಎಂದೂ ಹೇಳಲಾಗಿದೆ.
ಇದನ್ನೂ ಓದಿ: Tripura: ತಾಯಿ, ತಂಗಿ ಸೇರಿ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಬಾಲಕ ಬಂಧನ
ಅಲ್ಲದೆ, ರೀಲ್ಸ್‌ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುವುದು ಹಾಗೂ ಸಿನಿಮಾಗಳಲ್ಲಿ ನಟನೆ ಮಾಡುವ ಆಕೆಯ ಇಚ್ಛೆಗೆ ಪತಿ ವಿರೋಧ ವ್ಯಕ್ತಪಡಿಸಿ ಭಾನುವಾರ ರಾತ್ರಿ ಈ ವಿಚಾರವಾಗಿ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದ ಅಮಿರ್ಥಲಿಂಗಂ ಚಿತ್ರಾಳನ್ನು ಆಕೆಯ ಶಾಲಿನಿಂದ ಉಸಿರುಗಟ್ಟುವಂತೆ ಮಾಡಿದ್ದಾನೆ. ಬಳಿಕ, ಆಕೆ ಕುಸಿದು ಬಿದ್ದಾಗ ಗಾಬರಿಗೊಂಡ ಪತಿ ಮನೆ ಬಿಟ್ಟು ಹೋಗಿದ್ದಾನೆ. ಅಲ್ಲದೆ, ತಾನು ಚಿತ್ರಾಗೆ ಹೊಡೆದೆ ಎಂದು ಮಗಳಿಗೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ನಂತರ, ಚಿತ್ರಾಳನ್ನು ನೋಡಲು ಮಗಳು ಹೋದಾಗ, ಆಕೆ ಸತ್ತು ಬಿದ್ದಿದ್ದಳು. ಬಳಿಕ, ಆಕೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಚಿತ್ರಾ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ, ಪೆರುಮನಲ್ಲೂರಿನಲ್ಲಿ ಆರೋಪಿ ಪತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಇನ್ನು, ಈ ಘಟನೆ ಸಂಬಂಧ ಹೆಚ್ಚಿನ ತನಿಖೆಗಳು ನಡೆಯುತ್ತಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ: ಸ್ನೇಹಿತನ ಹೆಂಡತಿ ಮೇಲೆಯೇ ಕಣ್ಣು ಹಾಕಿದ ಪಾಪಿ: ಪ್ರಶ್ನಿಸಿದ್ದಕ್ಕೆ ಕೊಂದೇ ಬಿಟ್ಟ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ