Asianet Suvarna News Asianet Suvarna News

ಚಂದ್ರು ಕಿವಿ ಕಚ್ಚಿ ಹಿಂಸಿಸಿ ಕೊಲೆ: ತಂದೆ ರಮೇಶ್‌ ಆರೋಪ

  • ಚಂದ್ರು ಕಿವಿ ಕಚ್ಚಿ ಹಿಂಸಿಸಿ ಕೊಲೆ: ತಂದೆ ರಮೇಶ್‌ ಆರೋಪ
  • ಚಂದ್ರುವನ್ನು ಜತೆಗಿದ್ದ ಸ್ನೇಹಿತರೇ ಕೊಲೆ ಮಾಡಿರಬಹುದು
  • ಆತನಿಗೆ ಇಂಜೆಕ್ಷನ್‌ ನೀಡಿ, ಆ್ಯಸಿಡ್‌ ಸುರಿದಿರುವ ಶಂಕೆ
Chandru murder case ear biting torture and murder says Father Ramesh rav
Author
First Published Nov 7, 2022, 8:44 AM IST

ದಾವಣಗೆರೆ (ನ.7) : ತಮ್ಮ ಮಗ ಚಂದ್ರು ತಲೆ ಮೇಲೆ ಹಲ್ಲೆ ಮಾಡಿ, ಕಿವಿಗಳನ್ನು ಕಚ್ಚಿ ಕೊಲೆ ಮಾಡಿದ್ದಾರೆ. ಇದರಲ್ಲಿ ಸ್ನೇಹಿತರ ಕೈವಾಡ ಇರಬಹುದು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಗುತ್ತಿಗೆದಾರ ಎಂ.ಆರ್‌.ರಮೇಶ್‌ ಆರೋಪಿಸಿದ್ದಾರೆ. ಜತೆಗೆ, ಮುಂದೆ ಯಾರೂ ಹೀಗೆ ಬಲಿಯಾಗದಂತೆ ಈ ಕೊಲೆ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

ಅಪ್ರಾಪ್ತ ಬಾಲಕನ ಗುಪ್ತಾಗಂಕ್ಕೆ ಬಣ್ಣ ಹಾಕಿ ಹಿಂಸಿಸಿದ ಊರ ಗೌಡ!

ಹೊನ್ನಾಳಿಯ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರುವನ್ನು ಆತನ ಜೊತೆಗೆ ಇದ್ದ ಸ್ನೇಹಿತರೆ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿ, ಕೊಲೆ ಮಾಡಿರಬಹುದು. ಈ ಪ್ರಕರಣವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ಮಾಡಬೇಕು ಎಂದರು.

ಶವವಾಗಿ ಪತ್ತೆಯಾದ ತಮ್ಮ ಮಗ ಎಂದಿಗೂ ಒಳಉಡುಪು ಧರಿಸದೇ ಹೊರಗೆ ಹೋದವನಲ್ಲ. ಆದರೆ, ಶವವಾಗಿ ಪತ್ತೆಯಾದಾಗ ಆತನ ಮೈಮೇಲೆ ಒಳಉಡುಪು ಇರಲಿಲ್ಲ. ಆತನ ದೇಹದ ಕೆಳಭಾಗ ಊದಿಕೊಂಡಿದ್ದು, ಚುಚ್ಚು ಮದ್ದು ನೀಡಿರುವ ಸಾಧ್ಯತೆ ಇದೆ. ಆ್ಯಸಿಡ್‌ ಅನ್ನು ದೇಹದ ಭಾಗದ ಮೇಲೆ ಸುರಿದಿರುವ ಅನುಮಾನವಿದೆ. ದೇಹದ ಮೇಲಿನ ಬಣ್ಣವು ಈ ಅನುಮಾನ ಹುಟ್ಟು ಹಾಕುತ್ತಿದೆ. ಚಂದ್ರು ತಲೆಗೆ ಹೊಡೆದು, ಕಿವಿಗಳನ್ನು ಕಚ್ಚಿ, ವಿಚಿತ್ರ ಹಿಂಸೆ ನೀಡಲಾಗಿದೆ. ಆತನ ಕೈ-ಕಾಲುಗಳನ್ನು ಕಟ್ಟಿ, ದೈಹಿಕ ಹಿಂಸೆ ನೀಡಿ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.

ತುಂಗಾ ಮೇಲ್ದಂಡೆ ಕಾಲುವೆಗೆ 25 ಅಡಿ ಎತ್ತರ ಇರುವ ರಸ್ತೆಯ ಬದಿ ಸೇತುವೆ ಮಧ್ಯದಿಂದ ಕಾರು ಬಂದು ಬೀಳಲು ಹೇಗೆ ಸಾಧ್ಯ? 120 ವೇಗದಲ್ಲಿ ಕಾರು ಬಂದಿದ್ದರೆ ರಸ್ತೆಯ ಪಕ್ಕದ ಪೈಪ್‌ ಅಥವಾ ಸೇತುವೆ ಭಾಗ ಉಳಿಯುತ್ತಿತ್ತೆ? ಎಂದರು. ಚಂದ್ರು ಒಯ್ದಿದ್ದ ಕಾರಿಗೆ ಈಚೆಗಷ್ಟೇ ಹೊಸದಾಗಿ ನಾಲ್ಕೂ ಟೈಯರ್‌ಗಳನ್ನು ಹಾಕಿಸಲಾಗಿದೆ. ಹೀಗಾಗಿ ಅದು ಪಂಕ್ಚರ್‌ ಆಗುವ ಸಾಧ್ಯತೆಯೂ ಇಲ್ಲ. ಅಲ್ಲದೆ, ನಾಲೆಗೆ ಕಾರು ಬಿದ್ದ ಮಾರ್ಗವು ಸುವ್ಯವಸ್ಥಿತವಾಗಿದ್ದು, ಅಂಥದ್ದರಲ್ಲಿ ಹೊಸ ಗಾಲಿಗಳು ಹೇಗೆ ಪಂಕ್ಚರ್‌ ಆಗಲು ಸಾಧ್ಯ? ಎಂದರು.

8 ತಿಂಗಳ ಹಿಂದೆ ನಡೆದ ಘೋರ ಘಟನೆ.. ಮಹಿಳೆಗೆ ಕೊಡಬಾರದ ಹಿಂಸೆ ಕೊಟ್ಟರು!

ನೀರಿನಲ್ಲಿದ್ದಾಗ ಕಾರು ಬಿದ್ದರೆ ಯಾವುದೇ ಕಾರಣಕ್ಕೂ ಗಾಜು ಒಡೆಯಲ್ಲ. ಆದರೆ, ಚಂದ್ರು ಕಾರು ಮೇಲಿನಿಂದ ಬಿದ್ದರೆ ಮುಂಭಾಗ ತೀವ್ರ ಜಖಂ ಆಗಬೇಕಿತ್ತು. ಆದರೆ, ಹಿಂಭಾಗ ಜಖಂ ಆಗಿದ್ದು, ಇಂಡಿಕೇಟರ್‌ ಇತರೆ ಲೈಟ್‌ ಒಡೆದಿವೆ. ಹಿಂಬದಿ ಸೀಟಿನಲ್ಲಿ ಕೈ-ಕಾಲು ಕಟ್ಟಿದಂತೆ ಚಂದ್ರು ಮಲಗಿದ್ದು ಹೇಗೆ? ಚಂದ್ರು ಸಾವಿನ ಕುರಿತು ಹೈಕೋರ್ಚ್‌, ಸುಪ್ರೀಂ ಕೋರ್ಚ್‌ ಮೆಟ್ಟಿಲನ್ನೂ ಏರುತ್ತೇನೆ ಎಂದರು.

Follow Us:
Download App:
  • android
  • ios