ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!

ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!

Published : Aug 04, 2026, 08:48 PM IST

ಪತ್ನಿಯ ನಡತೆಯ ಮೇಲೆ ಅನುಮಾನಗೊಂಡ ಪತಿಯೊಬ್ಬ, ತನ್ನ ಹೆಂಡತಿ ಮತ್ತು ಏಳು ತಿಂಗಳ ಹಸುಗೂಸನ್ನು ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘೋರ ಕೃತ್ಯದ ನಂತರ, ಆರೋಪಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸುಖವಾಗಿದ್ದ ಸಂಸಾರವೊಂದು ಅನುಮಾನದಿಂದ ಸರ್ವನಾಶವಾಯಿತು.

ಸಂಸಾರವೆಂದರೆ ಅಲ್ಲಿ ಸಣ್ಣಪುಟ್ಟ ಜಗಳಗಳು, ಪ್ರೀತಿ-ವಿಶ್ವಾಸಗಳು ಇರುವುದು ಸಹಜ. ಆದರೆ, ಅದೇ ಸಂಸಾರದಲ್ಲಿ ‘ಅನುಮಾನ’ (Suspicion) ಎನ್ನುವ ಭೂತ ಹೊಕ್ಕರೆ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ ಎಂಬುದಕ್ಕೆ ಈ ಕ್ರೂರ ಘಟನೆಯೇ ಸಾಕ್ಷಿ. ಪತ್ನಿಯ ನಡತೆಯ ಮೇಲೆ ಸದಾ ಅನುಮಾನ ಪಡುತ್ತಿದ್ದ ಪಾಪಿ ಗಂಡನೊಬ್ಬ, ತನ್ನ ಹೆಂಡತಿ ಮಾತ್ರವಲ್ಲದೆ ಜಗತ್ತನ್ನೇ ಕಾಣದ ಏಳು ತಿಂಗಳ ಹಸುಗೂಸನ್ನು ಸುತ್ತಿಗೆಯಿಂದ (Hammer) ಹೊಡೆದು ದಾರುಣವಾಗಿ ಹತ್ಯೆ (Double Murder) ಮಾಡಿರುವ ಘಟನೆ ನಡೆದಿದೆ.

ಸಂತಸದ ಸಂಸಾರದಲ್ಲಿದ್ದ ಆ ಭೂತ ಯಾವುದು? 

ಆರಂಭದಲ್ಲಿ ಹೊನ್ನೂರಸ್ವಾಮಿ (Honnooraswamy) ಮತ್ತು ರಾಜೇಶ್ವರಿ (Rajeshwari) ದಂಪತಿಯ ಸಂಸಾರ ಅತ್ಯಂತ ಸುಂದರವಾಗಿತ್ತು. ಪತಿ ಹೊನ್ನೂರಸ್ವಾಮಿ ಕೆಲಸಕ್ಕೆ ಹೋಗಿ ದುಡಿದು ತರುತ್ತಿದ್ದರೆ, ಪತ್ನಿ ರಾಜೇಶ್ವರಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಆದರೆ, ಸುಖವಾಗಿದ್ದ ಈ ಕುಟುಂಬದಲ್ಲಿ ಇದ್ದಕ್ಕಿದ್ದಂತೆ ಅನುಮಾನದ ಪಿಶಾಚಿ ಆವರಿಸಿಕೊಂಡಿತ್ತು. ಹೊನ್ನೂರಸ್ವಾಮಿಗೆ ಪತ್ನಿ ರಾಜೇಶ್ವರಿಯ ಮೇಲೆ ತೀವ್ರ ಅನುಮಾನ ಶುರುವಾಗಿತ್ತು. ಇದೇ ವಿಷಯವಾಗಿ ಪ್ರತಿದಿನ ಪತ್ನಿಗೆ ಹೊಡೆದು, ಬಡಿದು ಕಿರುಕುಳ (Domestic Violence / Torture) ನೀಡುತ್ತಿದ್ದ.

ಅಂದು ಮನೆಯಲ್ಲಿ ನಡೆದಿದ್ದೇನು? 

ಸದಾ ಜಗಳವಾಡುತ್ತಿದ್ದ ಹೊನ್ನೂರಸ್ವಾಮಿ, ಘಟನೆ ನಡೆದ ದಿನ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗಲೇ ಪತ್ನಿಯನ್ನು ಮುಗಿಸಿಬಿಡಬೇಕು ಎಂಬ ಕ್ರೂರ ನಿರ್ಧಾರ ಮಾಡಿಕೊಂಡೇ ಬಂದಿದ್ದ. ಮನೆಗೆ ಬರುತ್ತಿದ್ದಂತೆಯೇ ಪತ್ನಿ ರಾಜೇಶ್ವರಿ ಜೊತೆ ಸುಖಾಸುಮ್ಮನೆ ಜಗಳ ತೆಗೆದಿದ್ದಾನೆ. ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಮನೆಯಲ್ಲಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಪತ್ನಿಯ ತಲೆಗೆ ಹೊಡೆದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಪತ್ನಿಯನ್ನು ನೋಡಿದರೂ ಆತನ ರಕ್ತಪಿಪಾಸು ಕೋಪದ ಬುದ್ಧಿ ತಣಿಯಲಿಲ್ಲ. ತಾಯಿಯ ಪಕ್ಕದಲ್ಲೇ ಆಟವಾಡುತ್ತಿದ್ದ ತನ್ನದೇ ಏಳು ತಿಂಗಳ ಮುದ್ದು ಮಗುವಿನ ತಲೆಗೂ ಅದೇ ಸುತ್ತಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಪರಿಣಾಮವಾಗಿ, ತಾಯಿ ಹಾಗೂ ಮಗು ಇಬ್ಬರೂ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾದ ಹಂತಕ: 

ಹೆಂಡತಿ ಮತ್ತು ಹಸುಗೂಸಿನ ಹೆಣ ಕೆಡವಿದ ನಂತರ, ಹಂತಕ ಹೊನ್ನೂರಸ್ವಾಮಿ ರಕ್ತಸಿಕ್ತ ಬಟ್ಟೆಯಲ್ಲೇ ನೇರವಾಗಿ ಪೊಲೀಸ್ ಠಾಣೆಗೆ (Police Station) ತೆರಳಿ ಶರಣಾಗಿದ್ದಾನೆ (Surrendered). 'ನಾನೇ ನನ್ನ ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿದ್ದೇನೆ' ಎಂದು ಪೊಲೀಸರ ಮುಂದೆ ಒಪ್ಪಿಕೊಂಡಾಗ ಅಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಪೊಲೀಸರು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ (Post-Mortem) ರವಾನಿಸಿದ್ದಾರೆ.

ಗಂಡ ಹೊಡೆದು, ಬಡಿದು ಮಾಸ್ತಾನೆ ಎಂದು ರಾಜೇಶ್ವರಿ ತವರು ಮನೆಗೆ ಕರೆ ಮಾಡಿ ಅಪ್ಪ-ಅಮ್ಮನಿಗೆ ಹೇಳಿದ್ದಾಳೆ. ಆಗ ಮಗಳೇ ನೀನು ಮಗು ಕರೆದುಕೊಂಡು ಇಲ್ಲಿಗೆ ಬಂದುಬಿಡು ಎಂದು ಹೇಳಿದ್ದಾರೆ. ಒಂದು ವೇಳೆ ಪೋಷಕರ ಮಾತು ಕೇಳಿ ರಾಜೇಶ್ವರಿ ತವರು ಮನೆಗೆ ತೆರಳಿದ್ದರೆ ಇಂದು ಜೀವದೊಡನೆ ಬದುಕಿರುತ್ತಿದ್ದಳೇನೋ. ಗಂಡನೇ ಸರ್ವಸ್ವ ಎಂದು ನಂಬಿದಾಕೆಗೆ ಕಡೆಗೆ ಗಂಡನಿಂದಲೇ ಸಾವು ಎದುರಾಗಿದೆ. ಕೇವಲ ಅನುಮಾನಕ್ಕಾಗಿ 7 ತಿಂಗಳ ಕಂದಮ್ಮನನ್ನು ಬಲಿ ಪಡೆದ ಈ ನರರಾಕ್ಷಸನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more