Latest Videos

ಗೆಳೆಯನ ಮರ್ಮಾಂಗಕ್ಕೆ 100 ಬಾರಿ ಒದ್ದ; ಸತ್ತರೂ ನಿಲ್ಲದ ಕ್ರೂರತೆ, ಕೇಳಿದ್ರೆ ಶಾಕ್ ಆಗ್ತೀರಿ

By Mahmad RafikFirst Published Jun 27, 2024, 10:13 PM IST
Highlights

ಗೆಳೆಯನ ಮರ್ಮಾಂಗಕ್ಕೆ (Private Part) 100ಕ್ಕೂ ಅಧಿಕ ಬಾರಿ ಒದ್ದು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಗೆಳೆಯ ಸತ್ತರೂ ಆತನ ಕ್ರೂರತೆ ಮುಂದುವರಿದಿತ್ತು. 

ಭೋಪಾಲ್: ಅಣ್ತಮ್ಮಂದಿರು ಬೆಳೆಯತ್ತಾ ದಾಯಾದಿಗಳು ಆಗಬಹುದು. ಆದ್ರೆ ಬಾಲ್ಯದ ಗೆಳತನ (Childhood friendship) ಎಂದಿಗೂ ಹಸಿರಾಗಿರುತ್ತದೆ. ಮುಪ್ಪಿನ ಕಾಲದವರೆಗೂ ಬಾಲ್ಯದ ಗೆಳಯರ (friends) ನೆನಪು ಇರುತ್ತದೆ. ಆದ್ರೆ ಇಂತಹ ಮಾತುಗಳಿಗೆ ಅಪವಾದ ಎಂಬಂತಹ ಘಟನೆಯೊಂದು ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಗೆಳೆಯನ ಮರ್ಮಾಂಗಕ್ಕೆ (Private Part) 100ಕ್ಕೂ ಅಧಿಕ ಬಾರಿ ಒದ್ದು ಕೊಲೆ ಮಾಡಿರುವ ಭಯಾನಕ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಗೆಳೆಯ ಸತ್ತರೂ ಆತನ ಕ್ರೂರತೆ ಮುಂದುವರಿದಿತ್ತು. 

ಮರ್ಮಾಂಗಕ್ಕೆ ತೀವ್ರ ಪೆಟ್ಟು ಬಿದ್ದ ನಂತರ ಮೃತದೇಹದ ಗುರುತು ಸಿಗಬಾರದು ಎಂದು ಮುಖವನ್ನು ಕಲ್ಲಿನಿಂದನ ಜಜ್ಜಿ ವಿಕಾರಗೊಳಿಸಿದ್ದಾನೆ. ಈ ಕೊಲೆಯ ಹಿಂದಿನ ಕಾರಣ ಕೇವಲ 2,500 ರೂಪಾಯಿ. ಮೃತ ವ್ಯಕ್ತಿ ಗೆಳಯನಿಂದ ಸಾಲವಾಗಿ ಎರಡೂವರೆ ಸಾವಿರ ರೂಪಾಯಿ ಪಡೆದುಕೊಂಡು ಹಿಂದಿರುಗಿಸರಿಲಿಲ್ಲ. 

ಐವರು ಯುವಕರ ಜೊತೆ ವಧುವಿನ ಫಸ್ಟ್ ನೈಟ್- ಶಾಕಿಂಗ್ ನ್ಯೂಸ್ ಬೆಳಕಿಗೆ 

2,500 ರೂಪಾಯಿಗಾಗಿ ಕೊಲೆ

ಸದ್ಯ ಪೊಲೀಸರು ಆರೋಪಿ ಪಪ್ಪು ಎಂಬಾತನನ್ನು ಬಂಧಿಸಿದ್ದಾರೆ. ಸಂಜು ಲೋಧಿ ಗೆಳೆಯನಿಂದಲೇ ಕೊಲೆಯಾದ ವ್ಯಕ್ತಿ. ಜಬಲ್ಪುರ ಜಿಲ್ಲೆಯ ಗಢಾ ವ್ಯಾಪ್ತಿಯ ಅಂಧ್ಮೂಕ್ ಬೈಪಾಸ್ ಬಳಿ ಸಂಜು ಲೋಧಿಯ ಕೊಲೆಯಾಗಿದೆ. ಸಂಜು ಮತ್ತು ಪಪ್ಪು ಮಧ್ಯೆ 2,500 ರೂಪಾಯಿಗಾಗಿ ಜಗಳ ಶುರುವಾಗಿತ್ತು. ಈ ವೇಳೆ ಕೋಪದಲ್ಲಿ ಪಪ್ಪು ಗೆಳೆಯ ಸಂಜು ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೆಣ ಸುಡುವ ಪ್ಲಾನ್, ಪೊಲೀಸರಿಗೆ ಲಾಕ್

ಸಂಜು ಮತ್ತು ಪಪ್ಪು 10 ವರ್ಷಗಳಿಂದ ಗೆಳಯರಾಗಿದ್ದು, ಜೊತೆಯಲ್ಲಿಯೇ ಡ್ರೈವರ್ ಮತ್ತು ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಪಪ್ಪು ಜೇಬಿನಿಂದ ಸಂಜು 2,500 ರೂಪಾಯಿ ತೆಗೆದುಕೊಂಡಿದ್ದನು. ಈ ವಿಷಯ ಸಂಬಂಧ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಇದರಿಂದ ಸಂಜುಗೆ ಬುದ್ಧಿ ಕಲಿಸಬೇಕೆಂದು ಪಪ್ಪು ಪ್ಲಾನ್ ಮಾಡಿಕೊಂಡಿದ್ದನು.

ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು, ಒಂದು ಶೂಟೌಟ್​​.. ಮೂರು ಕಾರಣಗಳು!

ಸಂಜು ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿ, ಮುಖವನ್ನು ಕಲ್ಲಿನಿಂದ ಜಜ್ಜಿ ವಿಕಾರಗೊಳಿಸಿದ್ದನು. ನಂತರ ಶವವನ್ನು ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ತಂದು ಸುಡಲು ಪ್ಲಾನ್ ಮಾಡಿಕೊಂಡಿದ್ದನು. ಆದ್ರೆ ಭಾರೀ ಮಳೆ ಬಂದ ಹಿನ್ನೆಲೆ ಪಪ್ಪು ಪ್ಲಾನ್ ಫೇಲ್ ಆಗಿತ್ತು. ಇನ್ನು ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ರವಾನಿಸಿದ್ದಾರೆ.

click me!