Latest Videos

6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿದ ತಾತ; ದೂರು ಕೊಡದಂತೆ ಮನೆ, ಬಂಗಾರದ ಆಮಿಷವೊಡ್ಡಿದ

By Sathish Kumar KHFirst Published Jun 27, 2024, 4:21 PM IST
Highlights

ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ವಾಸವಾಗಿರುವ ಕುಟುಂಬವೊಂದರಲ್ಲಿ ತಾಯಿ ಕೆಲಸಕ್ಕೆ ಹೋದಾಗ ತಾತನೇ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. 

ಬೆಂಗಳೂರು (ಜೂ.27): ಬೆಂಗಳೂರಿನ ಹುಳಿಮಾವು ಪ್ರದೇಶದಲ್ಲಿ ವಾಸವಾಗಿರುವ ಕುಟುಂಬವೊಂದರಲ್ಲಿ ತಾಯಿ ಕೆಲಸಕ್ಕೆ ಹೋದಾಗ ತಾತನೇ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ. 

ಹೌದು, ಬೆಂಗಳೂರಿನಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವಂತ ಘಟನೆ ನಡೆದಿದೆ. ಸ್ವಂತ ತಾತನೇ ಮೊಮ್ಮಗಳ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 6 ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಘಟನೆ ನಂತರ ಮೊಮ್ಮಗಳ ತಾಯಿ ಮತ್ತು ತಂದೆಗೆ ನಿನ್ನ ಮಗಳ ಹೆಸರಿಗೆ ಮನೆ ಬರೆದು ಕೊಡ್ತೇನೆ ಪೊಲೀಸ್ ಕಂಪ್ಲೇಂಟ್ ಕೊಡಬೇಡಿ ಎಂದು ನಾಟಕವಾಡಿದ ಘಟನೆ ನಡೆದಿದೆ. ಆದರೆ, ಅತ್ಯಾಚಾರಕ್ಕೆ ಒಳಗಾದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. 

ಮೂಲತಃ ತಮಿಳುನಾಡು ಮೂಲದ ಕುಟುಂಬ ಬಂದು ಹುಳಿಮಾವು ಪ್ರದೇಶದಲ್ಲಿ ನೆಲೆಸಿದೆ. ಬಾಲಕಿಯ ತಾಯಿ  ನೀಡಿದ ದೂರಿನಂತೆ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ಯಾಚಾರಕ್ಕೆ ಒಳಗಾದ ವಿಚಾರದ ಬಗ್ಗೆ ದೂರು ನೀಡದೇ ಮುಚ್ಚಿಟ್ಟಿದ್ದ ಬಾಲಕಿಯ ತಂದೆ ತಂದೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮೊಮ್ಮಗಳ ಮೇಲೆ ಅತ್ಯಾಚಾರ ಎಸೆಗಿದ ತಾತ, ಅಜ್ಜಿ ಹಾಗೂ ಮನೆಯಲ್ಲಿದ್ದ ಚಿಕ್ಕಂಪ್ಪದಿರು ತಲೆ ಮರೆಸಿಕೊಳ್ಳಲು ಬಾಲಕಿಯ ತಂದೆಯೇ ಸಹಾಯ ಮಾಡಿದ್ದಾನೆ ಎಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ ಮಹಿಳೆ ಸೇರಿ 13 ಮಂದಿಗೆ ಜೈಲು ಶಿಕ್ಷೆ

ಬಾಲಕಿಯ ತಾಯಿ ಕೆಲಸಕ್ಕೆ ತೆರಳಿರುವ ಸಂದರ್ಭದಲ್ಲಿ ತಾತನೇ ಮೊಮ್ಮಗಳ ಮೇಲೆ ಅತ್ಯಾಚಾರ ಮಾಡಿದ ಘಟನೆ ನಡೆದಿದೆ. ನಂತರ, ಈ ವಿಚಾರವನ್ನು ಯಾರಿಗೂ ಹೇಳಿದಂತೆ ತಾತ ಬಾಲಕಿಯ ತಾಯಿಗೆ ಮನವಿ ಮಾಡಿದ್ದಾರೆ. ಇನ್ನು ತನ್ನ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ಆಗಿರುವ ಘಟನೆಯ ಹಿನ್ನೆಲೆಯಲ್ಲಿ ಇದನ್ನು ಮಚ್ಚಿಡುವಂತೆ ಸ್ವತಃ ಬಾಲಕಿಯ ತಂದೆ, ಆತನ ತಾಯಿ ಹಾಗೂ ಸಹೋದರರು ಕೂಡ ಬಾಲಕಿಯ ತಾಯಿಗೆ ಆಮಿಷವೊಡ್ಡಿದ್ದಾರೆ. ನಮ್ಮ ಮನೆಯನ್ನು ಮೊಮ್ಮಗಳ ಹೆಸರಿಗೆ ಬರೆಯುತ್ತೇವೆ. ಚಿನ್ನದ ಒಡವೆ ಕೊಡಿಸುತ್ತೇವೆ. ವಿಷಯ ಯಾರಿಗೂ ಗೊತ್ತಾಗಬಾರದು ಮನವಿ ಮಾಡಿದ್ದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇದಾದ ನಂತರ ಸುಮ್ಮನಿದ್ದ ಬಾಲಕಿಯ ತಾಯಿ ನಾನು ಕೆಲಸಕ್ಕೆ ಹೊರಡುತ್ತೇನೆ ಎಂದು ಸಬೂಬು ಹೇಳಿ ಮನೆಯಿಂದ ಆಚೆಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಲ್ಲಿಗೆ ಬಂದ ಪೊಲೀಸರು ತಾಯಿಗೆ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಮಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಿದ ಬಾಲಕಿಯ ತಾಯಿ ತೆರಳಿ ಹುಳಿಮಾವು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಳ್ಳತನಕ್ಕೆ ಬಂದೋನು ಹಾಸಿಗೆ ಮೇಲಿದ್ದ ಪತಿ ಪತ್ನಿ ವಿಡಿಯೋ ಮಾಡ್ದ! ವಾಟ್ಸಪ್ ಮೆಸೇಜ್ ನೋಡಿ ದಂಪತಿ ಕಂಗಾಲು!

ಪೊಲೀಸರು ಅತ್ಯಾಚಾರ ಘಟನೆಯನ್ನು ಮುಚ್ಚಿಟ್ಟ ಬಾಲಕಿಯ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಅತ್ಯಾಚಾರ ಆರೋಪಿ ತಾತ, ಆತನ ಹೆಂಡತಿ ಹಾಗೂ ಇಬ್ಬರು ಸಹೋದರರಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಸದ್ಯಕ್ಕೆ ಬಾಲಕಿಗೆ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

click me!