ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?

ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?

Published : Jun 13, 2026, 08:26 PM IST

Suvarna FIR: ನಾವು ಮೂರು ದಿನದಿಂದ ಹೇಳುತ್ತಲೇ ಬಂದ್ವಿ.. ಐದುವರೆ ವರ್ಷದ ಬಾಲಕಿ ಕೊಲೆ ಕೇಸ್​ನಲ್ಲಿ ಪೊಲೀಸರ ಮೇಲೆಯೆ ಅನುಮಾನ ಬರ್ತಿದೆ ಅಂತ.. ಅದಕ್ಕೆ ಪುಷ್ಟಿ ನೀಡುವಂತೆ ಇವತ್ತು ಮೂವರು ಪೊಲೀಸರು ಸಸ್ಪೆಂಡ್​​ ಆಗಿದ್ದಾರೆ.

ನಾವು ಮೂರು ದಿನದಿಂದ ಹೇಳುತ್ತಲೇ ಬಂದ್ವಿ.. ಐದುವರೆ ವರ್ಷದ ಬಾಲಕಿ ಕೊಲೆ ಕೇಸ್​ನಲ್ಲಿ ಪೊಲೀಸರ ಮೇಲೆಯೆ ಅನುಮಾನ ಬರ್ತಿದೆ ಅಂತ.. ಅದಕ್ಕೆ ಪುಷ್ಟಿ ನೀಡುವಂತೆ ಇವತ್ತು ಮೂವರು ಪೊಲೀಸರು ಸಸ್ಪೆಂಡ್​​ ಆಗಿದ್ದಾರೆ.. ಮಗು ಸತ್ತು 3 ತಿಂಗಳು ಎಫ್​.ಐ.ಆರ್​​ನೇ ದಾಖಲಿಸದ ಅಧಿಕಾರಿಗಳು ಇನ್ನೇನು ಮಾಡಿಯಾರು ಅಂತ ಅವರನ್ನ ಮನೆಗೆ ಕಳುಹಿಸಿದ್ದಾರೆ. ಅಷ್ಟಕ್ಕೂ ಸಸ್ಪೆಂಡ್​​​ ಆದ ಆ ಮೂವರು ಪೊಲೀಸರು ಯಾರು..?

ಅವರು ಈ ಕೇಸ್​​ನಲ್ಲಿ ಮಾಡಿದ ಲೋಪಗಳೇನು..? ಇನ್ನೂ ಅರೆಸ್ಟ್​​ ಆಗಿರೋ ಪ್ರಿಯಾಂಕ ಪೊಲೀಸರ ಮುಂದೆ ಹೇಳಿರುವ ಸತ್ಯಗಳೇನು ಅನ್ನೋದನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್​.ಐ.ಆರ್​​. ದೊಡ್ಡವರ ತಪ್ಪಿಗೆ ಚಿಕ್ಕವರಿಗೆ ಶಿಕ್ಷೆ ಅನ್ನೋ ಹಾಗಾಗಿದೆ ಪೊಲೀಸರ ಅಮಾನತ್ತು ಕಥೆ.. ಸದ್ಯ ಕೇಸ್​​​ ACP ಅನುಷಾ ರವರಿಗೆ ಹೋಗಿದೆ.. ನೋಡೋಣ ಹೆಣ್ಣುಮಗಳ ಸಾವಿಗೆ ಮತ್ತೊಬ್ಬ ಹೆಣ್ಣುಮಗಳು ನ್ಯಾಯ ಕೊಡಿಸುತ್ತಾರಾ ಅಂತ. ನಿನ್ನೆ ಪೊಲೀಸರು ಸಕಲೇಶ್​ಪುರದವರೆಗೆ ಹೋಗಿ ಪ್ರಿಯಾಂಕಳನ್ನ ಅರೆಸ್ಟ್​​ ಮಾಡಿಕೊಂಡು ಕರೆತಂದಿದ್ರು.. ಜಡ್ಜ್​ ಮುಂದೆ ಹಾಜರುಪಡಿಸಿ 5 ದಿನ ಕಸ್ಟಡಿಗೂ ತಗೆದುಕೊಂಡರು.

ಇನ್ನೂ ಪೊಲೀಸರ ಮುಂದೆ ಕೂತು ಆ ಕಿಲ್ಲರ್​​ ಅಮ್ಮನ್ನ ಮಗುವನ್ನ ಕೊಂದ ನಂತರ ಏನೇನು ಮಾಡಿದ್ಲು..? ಆ ಮಗುವನ್ನ ಯಾಕಾಗಿ ಕೊಂದ್ಲು ಅಂತ ಡಿಟೇಲಾಗಿ ಹೇಳಿದ್ಲು.. ಇನ್ನೂ ಆ ಪರಮ ಪಾಪಿ ಹೆಳಿದನ್ನ ಕೇಳಿ ಸ್ವತಃ ಪೊಲೀಸರೇ ದಂಗಾಗಿ ಹೋಗಿದ್ರು. ನಿಜಕ್ಕೂ ಇವರಿಬ್ಬರು ಮನುಷ್ಯ ಜಾತಿಗೇ ಅವಮಾನ. ಇವರಿಗೆ ಅದೇನ್​ ಶಿಕ್ಷೆ ಕೊಟ್ಟರೂ ಕಡಿಮೇನೇ.. ಇನ್ನೂ ಇಂಥಹ ಕ್ರೂರತೆಯನ್ನ ತಿಳಿದರೂ ಕ್ರಮಕೈಗೊಳ್ಳದ ಇಂಥಹ ಪೊಲೀಸರಿಗೂ ಬಿಸಿ ಮುಟ್ಟಿಸಬೇಕು ಇಲ್ಲವಾದ್ರೆ ಸಮಾಜಕ್ಕೆ ರಾಂಗ್​ ಮೆಸೆಜ್ ಹೋಗುತ್ತೆ.

25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more