ಸಾನಿಯಾ ಮಾಜಿ ಪತಿ ಶೋಯೆಬ್ ಮಲಿಕ್ ಸನಾ ಜಾವೇದ್ ಜೊತೆ ವಿವಾಹವಾದ ಫೋಟೋವನ್ನು ಇನ್ಸ್ಟಾದಲ್ಲಿ ಹಾಕಿದಾಗಿನಿಂದ ಮಾಧ್ಯಮಗಳಲ್ಲಿ ಕೋಲಾಹಲ ಉಂಟಾಗಿದೆ. ಇದೀಗ ಪಾಕ್ ಮಾಧ್ಯಮಗಳು ಇವರಿಬ್ಬರ ಸಂಬಂಧದ ಬಗ್ಗೆ ಹಲವು ಶಾಕಿಂಗ್ ವಿಚಾರಗಳನ್ನು ಬಹುರಂಗಪಡಿಸಿವೆ. ಈ ಮಧ್ಯೆ ಶೋಯೆಬ್ ಮತ್ತು ಸನಾ ಫ್ಲರ್ಟ್ ಮಾಡುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.
ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಸನಾ ಜಾವೇದ್‌ರನ್ನು ವಿವಾಹವಾದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಾಗಿನಿಂದ ಎಲ್ಲೆಡೆ ಕೋಲಾಹಲವೇ ಉಂಟಾಗಿದೆ. ಇದರ ನಂತರವಷ್ಟೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶೋಯೆಬ್‌ರಿಂದ ಬೇರ್ಪಟ್ಟಿದ್ದಾರೆ ಎಂಬುದು ದೃಢವಾಗಿದ್ದು. ನಂತರದಲ್ಲೇ ಸಾನಿಯಾ ಕುಟುಂಬ ಕೆಲವು ತಿಂಗಳ ಹಿಂದೆ ದಂಪತಿಗಳು ಬೇರ್ಪಟ್ಟಿದ್ದಾರೆ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು. ಸಾನಿಯಾ ಮತ್ತು ಶೋಯೆಬ್ ನಡುವೆ ಏನು ತಪ್ಪಾಗಿತ್ತು ಎಂದು ಅಭಿಮಾನಿಗಳು ಊಹಿಸುತ್ತಲೇ ಇದ್ದಾರೆ. ಕಡೆಗೂ ಅದಕ್ಕೆ ಕಾರಣಗಳು ಹೊರ ಬಿದ್ದಿವೆ.
ಇದೀಗ ಪಾಕ್ ಮೀಡಿಯಾಗಳು ಶೋಯೆಬ್ ಮಲಿಕ್ ಹಾಗೂ ಸನಾ ಜಾವೇದ್ ಕುರಿತ ಹಲವು ವಿಷಯಗಳನ್ನು ಒಂದೊಂದಾಗಿ ಹೊರಗೆಳೆಯುತ್ತಿವೆ.
ಶೋಯೆಬ್- ಸನಾ ಸಂಬಂಧ
ಸಮಾ ಟಿವಿಯಲ್ಲಿನ ವರದಿಯ ಪ್ರಕಾರ, ಶೋಯೆಬ್ ಮತ್ತು ಸನಾ ಟಿವಿ ಕಾರ್ಯಕ್ರಮದ ಸೆಟ್‌ಗಳಲ್ಲಿ ಪರಸ್ಪರ ಭೇಟಿಯಾದ ನಂತರ ಮೂರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ಕಳೆದ ಮೂರು ವರ್ಷಗಳಿಂದ ಸನಾ ಜಾವೇದ್ ಮತ್ತು ಶೋಯೆಬ್ ಮಲಿಕ್ ಭೇಟಿಯಾಗುತ್ತಿದ್ದಾರೆ. ಜೀತೋ ಪಾಕಿಸ್ತಾನ ಕಾರ್ಯಕ್ರಮದಲ್ಲಿ ಶೋಯಬ್ ಮಲಿಕ್ ಅವರನ್ನು ಸನಾ ಮೊದಲ ಬಾರಿ ಭೇಟಿಯಾದರು. ನಂತರದಲ್ಲಿ ಶೋಯಬ್ ಮಲಿಕ್ ಮತ್ತು ಸನಾ ಜಾವೇದ್ ಭೇಟಿಯಾಗಲು ಪ್ರಾರಂಭಿಸಿದರು. ಸನಾ ಜಾವೇದ್ ಈಗಾಗಲೇ ಉಮೈರ್ ಜಸ್ವಾಲ್ ಅವರನ್ನು ಮದುವೆಯಾಗಿದ್ದ ಕಾರಣ ಇವರ ಸಂಬಂಧ ಅಷ್ಟಾಗಿ ಅನುಮಾನಕ್ಕೆಡೆ ಮಾಡಲಿಲ್ಲ ಎಂದು ಮೀಡಿಯಾ ಹೇಳಿವೆ.
ಮೂರನೇ ಮದುವೆಯಾದ ಶೋಯೆಬ್ ಮಲಿಕ್‌ರ ಭವಿಷ್ಯಕ್ಕೆ ಸಾನಿಯಾ ಮಿರ್ಜಾ ಶುಭ ಹಾರೈಕೆ..!
ಸನಾ ಅತಿಥಿಯಾಗಿ ಬಂದರೆ ಮಾತ್ರ ಬರುವೆ ಎನ್ನುತ್ತಿದ್ದ ಶೋಯೆಬ್!
ಶೋಯೆಬ್ ಮಲಿಕ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೊದಲು ಸನಾ ಜಾವೇದ್ ಅವರನ್ನು ಅತಿಥಿಯಾಗಿ ಕರೆದರೆ ಮಾತ್ರ ಬರುತ್ತೇನೆ ಎಂದು ಷರತ್ತುಗಳನ್ನು ಹಾಕುತ್ತಿದ್ದರಂತೆ.ಆದರೆ, ಎಲ್ಲವೂ ಗುಟ್ಟಾಗಿಯೇ ನಡೆಯುತ್ತಿದ್ದುದರಿಂದ ಈ ವಿಷಯ ಎಲ್ಲೂ ಹೊರ ಬರಲಿಲ್ಲ. ಕಡೆಗೆ ಕೆಲವು ತಿಂಗಳುಗಳ ಹಿಂದೆ ವಿಚ್ಛೇದನದ ಬಗ್ಗೆ ಸನಾ ತನ್ನ ಪತಿ ಉಮರ್ ಜಸ್ವಾಲ್‌ಗೆ ತಿಳಿಸಿದ್ದಾಳೆ. ಇದು ಅವರ ಪತಿಗೆ ಆಘಾತವನ್ನುಂಟು ಮಾಡಿದೆ ಎಂದು ವರದಿಗಳಲ್ಲಿ ತಿಳಿಸಲಾಗಿದೆ.
ಇತ್ತ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನ ವಿಷಯವನ್ನು ಕೂಡಾ ಬಹಳ ಎಚ್ಚರಿಕೆಯಿಂದ ಮತ್ತು ಮೌನವಾಗಿ ನಿಭಾಯಿಸಲಾಯಿತು. ಭಾರತೀಯ ಟೆನಿಸ್ ತಾರೆಯಾಗಲಿ ಅಥವಾ ಪಾಕ್ ಕ್ರಿಕೆಟಿಗನಾಗಲೀ- ವಿಚ್ಚೇದನದ ವಿಷಯವಾಗಿ ಮೌನ ಮುರಿಯಲಿಲ್ಲ. ಇದೆಲ್ಲವೂ ಎಷ್ಟು ಸದ್ದಿಲ್ಲದೆ ನಡೆಯಿತೆಂದರೆ,ಯಾರೊಬ್ಬರಿಗೂ ವಿಷಯ ತಿಳಿಯಲೇ ಇಲ್ಲ ಎಂದು ಪಾಕ್ ಪತ್ರಕರ್ತ ಹೇಳಿದ್ದಾರೆ. ಈ ಮಧ್ಯೆ ಶೋಯೆಬ್ ಮತ್ತು ಸನಾ ಕಾರ್ಯಕ್ರಮವೊಂದರಲ್ಲಿ ಫ್ಲರ್ಟ್ ಮಾಡುವ ವಿಡಿಯೋ ಈಗ ವೈರಲ್ ಆಗುತ್ತಿದೆ.
ಪತಿಯ 3ನೇ ಮದ್ವೆ ಬಗ್ಗೆ ಕೊನೆಗೂ ಮೌನ ಮುರಿದ ಟೆನ್ನಿಸ್ ತಾರೆ
ಸಾನಿಯಾ ಪರ ನಿಂತ ಮಲಿಕ್ ಕುಟುಂಬ!
ಶೋಯೆಬ್ ಮಲಿಕ್ ಅವರ ಇಡೀ ಕುಟುಂಬವು ಈ ವಿಷಯದಲ್ಲಿ ಸಾನಿಯಾ ಮಿರ್ಜಾ ಪರವಾಗಿ ನಿಂತಿದೆ ಮತ್ತು ಅವರಲ್ಲಿ ಯಾರೂ ಸನಾ ಜಾವೇದ್ ಅವರ ಮದುವೆಗೆ ಹಾಜರಾಗಲಿಲ್ಲ ಎಂದು ವರದಿ ಹೇಳಿದೆ.