
ಹೈದರಾಬಾದ್(ಜ.24): ಭಾರತದ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ, ಮಾಜಿ ಕ್ರಿಕೆಟಿಗ ಫಾರೊಕ್ ಇಂಜಿನಿಯರ್ ಬಿಸಿಸಿಐ ಜೀವಮಾನ ಸಾಧನೆ, ಯುವ ಬ್ಯಾಟರ್ ಶುಭ್‌ಮನ್ ಗಿಲ್ ವರ್ಷದ(2022-23) ಶ್ರೇಷ್ಠ ಪುರುಷರ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಗಳವಾರ ಬಿಸಿಸಿಐ ಆಯೋಜಿಸಿದ್ದ ಸಮಾರಂಭದಲ್ಲಿ ಹಲವು ಸಾಧಕರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಲಾಯಿತು.
ಮೊಹಮದ್ ಶಮಿ(2019-20), ಆರ್.ಅಶ್ವಿನ್(2020-21), ಜಸ್‌ಪ್ರೀತ್ ಬುಮ್ರಾ(2021-22) ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟಿಗರ ಪ್ರಶಸ್ತಿಗೆ ಭಾಜನರಾದರು. ಮಹಿಳೆಯರ ವಿಭಾಗದಲ್ಲಿ ದೀಪ್ತಿ ಶರ್ಮಾ(2019-20 ಮತ್ತು 2022-23), ಸ್ಮೃತಿ ಮಂಧನಾ(2020-21 ಮತ್ತು 2021-22) ಪ್ರಶಸ್ತಿ ಪಡೆದುಕೊಂಡರು.
ಸಮಾರಂಭದಲ್ಲಿ ಭಾರತ ತಂಡದ ಹಾಲಿ, ಮಾಜಿ ಆಟಗಾರರು, ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡಾನ್ ಮೆಕಲಮ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
Ind vs Eng Test Series: ಮುಂದುವರಿಯುತ್ತಾ ಭಾರತದ ಜಯದ ಓಟ?
ಮಯಾಂಕ್‌ಗೆ ಪ್ರಶಸ್ತಿ
ಪಾದಾರ್ಪಣಾ ವರ್ಷದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ನೀಡುವ ಪ್ರಶಸ್ತಿಯನ್ನು ಕರ್ನಾಟಕದ ಮಯಾಂಕ್ ಅಗರ್‌ವಾಲ್(2019-20), ಅಕ್ಷರ್ ಪಟೇಲ್(2020-21), ಶ್ರೇಯಸ್ ಅಯ್ಯರ್(2021-22), ಯಶಸ್ವಿ ಜೈಸ್ವಾಲ್(2022-23) ಪಡೆದುಕೊಂಡರು. ಮಹಿಳಾ ವಿಭಾಗದಲ್ಲಿ ಪ್ರಿಯಾ ಪೂನಿಯಾ(2019-20), ಶಫಾಲಿ ವರ್ಮಾ(2020-21), ಎಸ್.ಮೇಘನಾ(2021-22), ಅಮನ್‌ಜೋತ್ ಕೌರ್(2022-23)ಗೆ ನೀಡಲಾಯಿತು.
ಐಸಿಸಿ ವರ್ಷದ ಏಕದಿನ ತಂಡಕ್ಕೆ ರೋಹಿತ್ ನಾಯಕ
ದುಬೈ: 2023ರ ಶ್ರೇಷ್ಠ ಏಕದಿನ ತಂಡವನ್ನು ಮಂಗಳವಾರ ಐಸಿಸಿ ಪ್ರಕಟಿಸಿದ್ದು, ರೋಹಿತ್ ಶರ್ಮಾ ನಾಯಕನಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಇನ್ನೂ ಐವರು ಭಾರತೀಯರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್, ಮೊಹಮದ್ ಸಿರಾಜ್, ಮೊಹಮದ್ ಶಮಿ, ಕುಲ್ದೀಪ್ ಯಾದವ್ ತಂಡದಲ್ಲಿದ್ದಾರೆ. ಇದೇ ವೇಳೇ ವರ್ಷದ ಟೆಸ್ಟ್ ತಂಡದಲ್ಲಿ ರವೀಂದ್ರ ಜಡೇಜಾ, ಆರ್.ಅಶ್ವಿನ್ ಸ್ಥಾನ ಪಡೆದಿದ್ದಾರೆ. ಪ್ಯಾಟ್ ಕಮಿನ್ಸ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ ವರ್ಷದ ಮಹಿಳಾ ಏಕದಿನ ತಂಡದಲ್ಲಿ ಯಾವುದೇ ಭಾರತೀಯರಿಲ್ಲ.
ಇಂಡಿಯಾ-ಇಂಗ್ಲೆಂಡ್ ಟೆಸ್ಟ್ ಸಮರ: ಕೊಹ್ಲಿ ಅಲಭ್ಯತೆ ಇಂಗ್ಲೆಂಡ್ ಪಾಲಿಗೆ ವರ..!
ಏಕದಿನ ತಂಡ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಟ್ರ್ಯಾವಿಸ್ ಹೆಡ್, ವಿರಾಟ್ ಕೊಹ್ಲಿ, ಡ್ಯಾರಿಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಯಾನ್ಸನ್, ಆ್ಯಡಂ ಜಂಪಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.
ಟೆಸ್ಟ್ ತಂಡ: ಉಸ್ಮಾನ್ ಖವಾಜ, ಕರುಣಾರತ್ನೆ, ಕೇನ್ ವಿಲಿಯಮ್ಸನ್, ಜೋ ರೂಟ್, ರವೀಂದ್ರ ಜಡೇಜಾ, ಅಲೆಕ್ಸ್ ಕೇರಿ, ಪ್ಯಾಟ್ ಕಮಿನ್ಸ್(ನಾಯಕ), ಅಧ್ವಿನ್, ಮಿಚೆಲ್ ಸ್ಟಾರ್ಕ್, ಸ್ಟುವರ್ಟ್ ಬ್ರಾಡ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.