ಮಯಾಂಕ್ ಅಗರ್ವಾಲ್ ದ್ವಿಶತಕ, JDS ಗೆಲ್ಲದಂತೆ ಕೈ ತಂತ್ರ; ನ.15ರ ಟಾಪ್ 10 ಸುದ್ದಿ!

Published : Nov 15, 2019, 05:27 PM ISTUpdated : Nov 15, 2019, 05:32 PM IST
ಮಯಾಂಕ್ ಅಗರ್ವಾಲ್ ದ್ವಿಶತಕ, JDS ಗೆಲ್ಲದಂತೆ ಕೈ ತಂತ್ರ; ನ.15ರ ಟಾಪ್ 10 ಸುದ್ದಿ!

ಸಾರಾಂಶ

ರಾಜ್ಯದಲ್ಲಿ ಉಪಚುನಾವಣೆ ಕಾವಿನ ನಡುವೆಯೂ, ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಸದ್ದು ಮಾಡುತ್ತಿದೆ.  ಬಾಂಗ್ಲಾದೇಶ ವಿರುದ್ಧದ  ಮೊದಲ ಟೆಸ್ಟ್ ಪಂದ್ಯದಲ್ಲಿ ಅಗರ್ವಾಲ್ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ಪರವಾಗಿಲ್ಲ, ಆದರೆ ಜೆಡಿಎಸ್ ಮಾತ್ರ ಗೆಲ್ಲಲೇಬಾರದು ಎಂದು ಕಾಂಗ್ರೆಸ್ ರಣತಂತ್ರ ಮಾಡುತ್ತಿದೆ. ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ದುರ್ಮರಣ, ಅರ್ಧಶತಕ ಪೂರೈಸಿದ ಜೊತೆ ಜೊತೆಯಲಿ ಸೇರಿದಂತೆ ನವೆಂಬರ್ 15 ರಂದು ಗಮನಸೆಳೆದ ಟಾಪ್ 10 ಸುದ್ದಿ.

1) ಶಂಕರ್​ಗೂ ಇಲ್ಲ, ಈಶ್ವರಪ್ಪ ಮಗನಿಗೂ ಇಲ್ಲ ಟಕೆಟ್: ರಾಣೇಬೆನ್ನೂರಿಗೆ ಅಚ್ಚರಿ ಅಭ್ಯರ್ಥಿ

ತೀವ್ರ ಗೊಂದಲವಾಗಿದ್ದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಕ್ಷೇತ್ರದ ಉಪಚುನಾವಣೆ ಟಿಕೆಟ್ ಅನ್ನು ಕೊನೆಗೂ ಬಿಜೆಪಿ ಫೈನಲ್ ಮಾಡಿದೆ. ಆದ್ರೆ, ಅನರ್ಹ ಶಾಸಕ ಆರ್. ಶಂಕರ್ ಹಾಗೂ ಈಶ್ವರಪ್ಪ ಪುತ್ರ ಕಾಂತೇಶ್ ಗೂ ಟಿಕೆಟ್ ಸಿಕ್ಕಿಲ್ಲ. ಇವರಿಬ್ಬರ ನಡುವೆ ಮೂರನೇ ವ್ಯಕ್ತಿಗೆ ಟಿಕೆಟ್ ಸಿಕ್ಕಿದೆ

2) ಪೂಜಾರಿ ನೇತೃತ್ವದಲ್ಲಿ ಬಿಜೆಪಿ ಸೇರಿದ ಹಲವು ಕೈ ಮುಖಂಡರು

ಹಿರಿಯ ಮುಖಂಡ ಪೂಜಾರಿ ನೇತೃತ್ವದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಬಿಗ್ ಶಾಕ್ ನೀಡಿದ್ದಾರೆ.

3) ಅನರ್ಹ ಶಾಸಕರ ಸೋಲಿಸುವುದೇ ನಮ್ಮ ಗುರಿ ಎಂದ ಹೆಚ್‌ಡಿಕೆ

ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎಲ್ಲಾ ಅನರ್ಹ ಶಾಸಕರನ್ನು ಸೋಲಿಸುವುದೇ ಜೆಡಿಎಸ್‌ ಪಕ್ಷದ ಮುಖ್ಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹೇಳಿದ್ದಾರೆ. 

4) ಡಿಕೆಶಿಗೆ ಬಿಗ್ ರಿಲೀಫ್, ಜಾಮೀನು ಪ್ರಶ್ನಿಸಿದ್ದ ED ಅರ್ಜಿ ವಜಾ!

ಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿದ್ದ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದ ದೆಹಲಿ ಹೈಕೋರ್ಟ್‌ನ ಕ್ರಮವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ.)ವು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಹಗೊಳಿಸಿದೆ. ಈ ಮೂಲಕ ಡಿಕೆಶಿಗೆ ಕೊಂಚ ರಿಲೀಫ್ ಸಿಕ್ಕಿದೆ.

5) ಬಿಜೆಪಿ ಗೆದ್ದರೂ ಓಕೆ, ಜೆಡಿಎಸ್ ಗೆಲ್ಲದಂತೆ ಕೈ ತಂತ್ರ


ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಸಾಧನೆ ಮಾಡಿದರೆ ಅದರ ಲಾಭ ಜೆಡಿಎಸ್‌ಗೆ ಆಗುತ್ತಾ? ಇಂತಹದ್ದೊಂದು ಗಂಭೀರ ಚಿಂತೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಹೀಗಾಗಿ ಬಿಜೆಪಿ ಗೆದ್ದರೂ ಚಿಂತೆಯಿಲ್ಲ, ಜೆಡಿಎಸ್‌ಗೆ ಲಾಭವಾಗದಂತೆ ಏನಾದರೂ ತಂತ್ರ ಮಾಡಲು ಸಾಧ್ಯವೇ ಎಂಬ ಲೆಕ್ಕಾಚಾರ ಪಕ್ಷದಲ್ಲಿ ಆರಂಭವಾ ಗಿದೆ ಎಂದು ತಿಳಿದುಬಂದಿದೆ.

6) INDvBAN: 2ನೇ ದ್ವಿಶತಕ ಸಿಡಿಸಿ ದಾಖಲೆ ಬರೆದ ಕನ್ನಡಿಗ ಮಯಾಂಕ್!

ಬಾಂಗ್ಲಾದೇಶ ವಿರುದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಲಾಗಿಟ್ಟಿದೆ. ಮಯಾಂಕ್ ದ್ವಿಶತಕ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ. 


7) ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ದುರ್ಮರಣ

ಮರಾಠಿ ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಲಿ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ. ಮುಂಬೈನ ಥಾಣೆ ಜಿಲ್ಲೆಯ ಮುಂಬೈ ಆಗ್ರಾ ಹೈವೆಯಲ್ಲಿ ಅಪಘಾತ ಸಂಭವಿಸಿದೆ. ಅಮೆರಿಕಾದಿಂದ ವಾಪಸ್ಸಾದ ನಂತರ ನಾಸಿಕ್‌ನಲ್ಲಿರುವ ಮನೆಗೆ ಪತಿಯ ಜೊತೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದಿದ್ದು ಗೀತಾ ಬಾಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

8) 'ಜೊತೆ ಜೊತೆಯಲಿ' 50 ಸಂಚಿಕೆ ಸಂಭ್ರಮ; ಅನುಗೂ, ಆರ್ಯವರ್ಧನ್‌ಗೂ ಆಗುತ್ತಾ ಲಗ್ನ?

ಜೀ ಕನ್ನಡ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ಧಾರಾವಾಹಿ ಹೊಸ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು 50 ನೇ ಸಂಚಿಕೆಗೆ ಬಂದು ತಲುಪಿದೆ. ಧಾರಾವಾಹಿ ತಂಡ ಈ ಸಂಭ್ರಮನ್ನು ಕೇಕ್ ಕಟ್ ಮಾಡಿ ಆಚರಿಸಿಕೊಂಡಿದ್ದಾರೆ.  

9) ಮನೆ ಮನೆಗೆ ತಂತ್ರಜ್ಞಾನ: ಸರ್ಕಾರದ ಐಟಿ ಸಮ್ಮೇಳನ ಬದಲಿಸಲಿದೆ ಜೀವನ!

ದೇಶದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬೆಂಗಳೂರಿನದ್ದೇ ಸಿಂಹಪಾಲು. ದೇಶದ ಬೇರೆ ಯಾವ ನಗರಗಳೂ ಬೆಂಗಳೂರನ್ನು ಬೀಟ್ ಮಾಡುವುದು ಅಷ್ಟು ಸುಲಭವಲ್ಲ. ಹಾಗಂಥ ಇಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಗೆ ಯಾವುದೇ ತೊಡಕಿಲ್ಲವೆಂದರ್ಥವಲ್ಲ. ಇರೋ ನೂರಾರು ತೊಡಕುಗಳನ್ನು ಹೋಗಲಾಡಿಸಿ, ನಗರವನ್ನು ಮತ್ತಷ್ಟು ತಂತ್ರಜ್ಞಾನ ಸ್ನೇಹಿಯನ್ನಾಗಿಸುವ ನಿಟ್ಟಿನಲ್ಲಿ ಸರಕಾರವೇ ಐಟಿ ಸಮ್ಮಿಟ್ ನಡೆಸುತ್ತಿದೆ. 

10) 'ಗುಪ್ತಾಂಗ ಎಲ್ಲ ಮುಟ್ಟಂಗಿಲ್ಲ' ನಾಗಿಣಿ ಗರಂ ಆಗಿದ್ದು ಯಾರ ಮೇಲೆ?

ಬಿಗ್ ಬಾಸ್ ಮನೆ ಸೇರಿರುವ ನಾಗಿಣಿ ಮನೆಯೊಳಗೆ ಇದ್ದರೂ ಎಲ್ಲರಿಂದಲೂ ಒಂದು ಅಂತರ ಕಾಯ್ದುಕೊಂಡೆ ಬಂದಿದ್ದಾರೆ. ಇಂಥ ನಾಗಿಣಿ ಮೊನ್ನೆ ಟಾಸ್ಕ್ ವೊಂದರ ವೇಳೆ ಸಿಕ್ಕಾಪಟ್ಟೆ ರಾಂಗ್ ಆಗಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!