KGF vs Zero: ಜೀರೋ vs ಕೆಜಿಎಫ್ ರಿಲೀಸ್ ಕ್ಲ್ಯಾಶ್! ಯಶ್‌ ಉತ್ತರಕ್ಕೆ ಬಾಲಿವುಡ್‌ ಫಿದಾ

Published : Aug 14, 2026, 01:09 PM IST
Yash Shah Rukh Khan

ಸಾರಾಂಶ

ಎಲ್ಲಿ ನೋಡಿದ್ರೂ ಈಗ ರಾಕಿ ಭಾಯ್‌ ಯಶ್‌ ಹವಾ. ಟಾಕ್ಸಿಕ್‌ ಸಿನಿಮಾ ಮೂಲಕ ಮತ್ತೆ ಚರ್ಚೆಗೆ ಬಂದಿರುವ ಯಶ್‌, ಆಪ್‌ ಕಿ ಅದಾಲತ್‌ ನಲ್ಲಿ ಶಾರುಖ್‌ ಖಾನ್‌‌ ಬಗ್ಗೆ ಆಸಕ್ತಿಕರ ವಿಷ್ಯ ಹಂಚಿಕೊಂಡಿದ್ದಾರೆ.

ತಾವು ಬೆಳೆದು ಬಂದ ದಾರಿಯನ್ನು ಮರೆಯದೆ, ಹಿರಿಯರಿಗೆ ಸದಾ ಗೌರವ ನೀಡಬೇಕು ಎಂಬುದನ್ನು ಸ್ಯಾಂಡಲ್ವುಡ್ ಸೂಪರ್ಸ್ಟಾರ್ ಯಶ್ ಅವರಿಂದ ಕಲಿಯಬೇಕು. ಬಾಲಿವುಡ್ನ ದೊಡ್ಡ ಸ್ಟಾರ್ಗಳನ್ನೇ ಮೀರಿಸುವಷ್ಟು ಎತ್ತರಕ್ಕೆ ಬೆಳೆದಿದ್ದರೂ ಯಶ್ ಎಂದಿಗೂ ಅಹಂಕಾರ ತೋರಿಸಿಲ್ಲ. ತಾವು ಇಷ್ಟಪಡುವ ನಟರಿಗೆ ಗೌರವ ನೀಡುವುದನ್ನು ಅವರು ಇಂದಿಗೂ ಬಿಟ್ಟಿಲ್ಲ.

ಶಾರುಖ್ ಖಾನ್ ಅಭಿಮಾನಿ ಯಶ್

ಯಶ್ ಬಾಲಿವುಡ್ನ ಕಿಂಗ್ ಖಾನ್ ಶಾರುಖ್ ಖಾನ್ ಅವರ ಅಭಿಮಾನಿ ಎಂಬುದು ಹಲವರಿಗೆ ಗೊತ್ತಿರುವ ವಿಚಾರ. ಇದನ್ನು ಯಶ್ ಕೂಡ ಹಲವು ಬಾರಿ ಹೇಳಿಕೊಂಡಿದ್ದಾರೆ. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ನಿರೂಪಕ ರಜತ್ ಶರ್ಮಾ ಇದೇ ವಿಚಾರವಾಗಿ ಪ್ರಶ್ನೆ ಕೇಳಿದ್ದಾರೆ. ನೀವು ಶಾರುಖ್ ಖಾನ್ ಅವರ ಅಭಿಮಾನಿ. ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದಿರಿ. ಆದರೆ ನಿಮಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಶಾರುಖ್ ಖಾನ್ ಅವರ ಜೀರೋ ಸಿನಿಮಾ ಬಿಡುಗಡೆಯಾದ ದಿನವೇ ನೀವು ‘ಕೆಜಿಎಫ್’ ಸಿನಿಮಾವನ್ನು ಬಿಡುಗಡೆ ಮಾಡಿದಿರಿ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ನಗುತ್ತಲೇ ಉತ್ತರಿಸಿದ ಯಶ್, ನಾನು ಈಗಲೂ ಶಾರುಖ್ ಖಾನ್ ಅವರ ಅಭಿಮಾನಿ. ನಂದು ಸಣ್ಣ ಸಿನಿಮಾ, ಶಾರುಖ್ ಸರ್ ಅವರದ್ದು ದೊಡ್ಡ ಸಿನಿಮಾ. ಹಾಗಾಗಿ ನಾವು ಅದೇ ದಿನ ರಿಲೀಸ್ ಮಾಡಿದೆವು ಎಂದಿದ್ದಾರೆ.

ಇದಾದ ಬಳಿಕ ರಜತ್ ಶರ್ಮಾ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. ನಿಮ್ಮ ಸಿನಿಮಾ 250 ಕೋಟಿ ರೂಪಾಯಿ ಗಳಿಸಿತು. ಆದರೆ ಶಾರುಖ್ ಖಾನ್ ಅವರ ಸಿನಿಮಾ 100 ಕೋಟಿ ರೂಪಾಯಿ ಗಳಿಸಿತ್ತು ಎಂದಾಗ, ಯಶ್ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅವರು ಸೂಪರ್ಸ್ಟಾರ್. ಅವರಿಗಿಂತ ನಾನು ದೊಡ್ಡವನು ಎಂದು ನಾನು ಯೋಚಿಸಿದ ದಿನವೇ ನನ್ನ ಕಥೆ ಮುಗಿಯಿತು ಎಂದು ಯಶ್ ಹೇಳಿದ್ದಾರೆ.

ಯಶ್ ಅವರ ಈ ಮಾತು ಅವರ ವ್ಯಕ್ತಿತ್ವವನ್ನು ಮತ್ತೊಮ್ಮೆ ತೋರಿಸಿದೆ. ಸಿನಿಮಾ ಕೋಟಿ ಕೋಟಿ ರೂಪಾಯಿ ಗಳಿಸಿದರೂ, ಎಷ್ಟೇ ಎತ್ತರಕ್ಕೆ ಬೆಳೆದರೂ ಹಿರಿಯ ಕಲಾವಿದರಿಗೆ ನೀಡುವ ಗೌರವವನ್ನು ಅವರು ಕಳೆದುಕೊಂಡಿಲ್ಲ. ಯಶ್ ಅವರ ಈ ಮಾತುಗಳು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಶಾರುಖ್ ಖಾನ್ ಅಭಿಮಾನಿಗಳಿಗೂ ಮೆಚ್ಚುಗೆಯಾಗಿವೆ. ಅದಕ್ಕಾಗಿಯೇ ಯಶ್ ಅವರ ಸರಳತೆ ಮತ್ತು ಹಿರಿಯ ಕಲಾವಿದರ ಮೇಲಿನ ಗೌರವದ ಬಗ್ಗೆ ಈಗ ಸ್ಯಾಂಡಲ್ವುಡ್ ಮಾತ್ರವಲ್ಲ, ಬಾಲಿವುಡ್ನಲ್ಲೂ ಚರ್ಚೆಯಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಕ್ಕಾಗಿ ಹೋರಾಡಿದ ವೀರರ ಕಥೆಗಳು… Independence Dayಗೆ OTTಯಲ್ಲಿ ನೋಡಲೇಬೇಕಾದ ಸಿನಿಮಾಗಳಿವು!
ರಿಷಬ್ ಶೆಟ್ಟಿಗೆ ಮತ್ತೊಂದು ಗೌರವ; 'ಲೀಡರ್‌ಶಿಪ್ ಇನ್ ಸಿನಿಮಾ' ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ!