ಸಹೋದರಿ ಜೊತೆ ಮಾತನಾಡ್ತಾರೆ ಸುಶಾಂತ್ ಸಿಂಗ್ ! ಧೋನಿ ಮೇಲೆ ಕುಟುಂಬದ ಮುನಿಸು

Published : Aug 13, 2026, 01:04 PM IST
sushant singh rajput rejected films padmawat half girfriend to andhadhun

ಸಾರಾಂಶ

ಸುಶಾಂತ್ ಸಿಂಗ್ ರಜಪೂತ್ ಈಗ್ಲೂ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರನ್ನು ಸದಾ ನೆನಪಿಸಿಕೊಳ್ಳುವ ಸಹೋದರಿ ಅವರ ಬಗ್ಗೆ ಸಂದರ್ಶನವೊಂದರಲ್ಲಿ ಅನೇಕ ವಿಷ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಆರು ವರ್ಷಗಳು ಕಳೆದಿವೆ. ಅವ್ರ ನಿಧನದ ಬಗ್ಗೆ ಇನ್ನೂ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡ್ತಿವೆ. ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಸುಶಾಂತ್ ನೆನಪಿಸಿಕೊಂಡು ಈಗ್ಲೂ ಕಣ್ಣೀರಿಡ್ತಿದ್ದಾರೆ. ಅವರ ಜೊತೆ ಅದೆಷ್ಟೋ ಬಾರಿ ಕನಸಿನಲ್ಲಿ ಮಾತನಾಡಿದ್ದೇನೆ ಅಂತ ಶ್ವೇತಾ ಹೇಳ್ಕೊಂಡಿದ್ದಾರೆ.

ಸುಶಾಂತ್ ಸಿಂಗ್ ಜೊತೆಯಲ್ಲಿರುವ ಅನುಭವ

ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಶ್ವೇತಾ, ತಮ್ಮ ಕನಸಿನಲ್ಲಿ ಸುಶಾಂತ್ ಸಿಂಗ್ ಬರ್ತಾರೆ, ಅವರ ಜೊತೆ ಮಾತನಾಡ್ತೇನೆ ಎಂದಿದ್ದಾರೆ. ಪಾಟ್ನಾದಲ್ಲಿ ನಡೆದ ಘಟನೆಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಪಾಟ್ನಾಕ್ಕೆ ಚಿತಾಭಸ್ಮ ವಿಸರ್ಜನೆಗೆ ಹೋದಾಗ, ಅವರ ರೂಮಿನಲ್ಲೇ ಚಿತಾಭಸ್ಮ ಇಟ್ಟಿದ್ದರಂತೆ. ರಾತ್ರಿ ಮಲಗಿದಾಗ ಅವರ ಮುಂದೆ ಸುಶಾಂತ್ ಬಂದಿದ್ರಂತೆ. ಸುಶಾಂತ್ ಜೊತೆ ಗಂಟೆಗಟ್ಟಲೆ ಮಾತನಾಡಿದ್ದರಂತೆ. ಅವರು ನನ್ನನ್ನು ತಬ್ಬಿಕೊಂಡಿದ್ದರು. ನನಗೆ ತುಂಬಾ ಪ್ರಶ್ನೆಗಳಿದ್ದವು. ನಾನು ಕೇಳಿದ ಎಲ್ಲದಕ್ಕೂ ಅವರು ಉತ್ತರ ನೀಡಿದರು. ನನ್ನ ಕೆನ್ನೆಗೆ ಮುತ್ತಿಟ್ಟಿದ್ದರು. ಅವರ ವಾಸನೆ ಮತ್ತು ಉಸಿರನ್ನು ನಾನು ಅನುಭವಿಸಿದೆ. ಅದು ನನಗೆ ಆತ್ಮಸ್ಥೈರ್ಯವನ್ನು ನೀಡಿತು ಎಂದು ಶ್ವೇತಾ ಹೇಳಿಕೊಂಡಿದ್ದಾರೆ.

ಸುಶಾಂತ್ ಸಾವಿನ ನೋವನ್ನು ಹಲವು ಬಾರಿ ಅನುಭವಿಸಿದ್ದೇನೆ ಎಂದು ಶ್ವೇತಾ ಬಹಿರಂಗಪಡಿಸಿದ್ದಾರೆ. ಸುಶಾಂತ್ ಸಾವಿನ ಸುದ್ದಿ ತಿಳಿದಾಗ ಏನಾಯ್ತು ಎಂಬುದನ್ನೂ ಶ್ವೇತಾ ಹೇಳಿದ್ದಾರೆ. ಆ ಟೈಮ್ ನಲ್ಲಿ ಶ್ವೇತಾ ಕ್ಯಾಲಿಫೋರ್ನಿಯಾದಲ್ಲಿದ್ದರು. ರಾತ್ರಿ ಮಲಗಿದ್ದಾಗ ಅವರಿಗೆ ಈ ಸುದ್ದಿ ತಿಳಿತು. ತಕ್ಷಣ ನನ್ನ ದೇಹ ಜಡವಾಯ್ತು. ನಾನು ಶಾಂತವಾಗಿದ್ದೆ. ಆದರೆ ಅದು ಹೆಚ್ಚು ಕಾಲ ಉಳಿಯಲಿಲ್ಲ. ನಾನು ಜೋರಾಗಿ ಅಳಲು ಪ್ರಾರಂಭಿಸಿದೆ. ಕೊರೊನಾ ಕಾರಣದಿಂದಾಗಿ ನಾನು ಭಾರತಕ್ಕೆ ಬರಲಾಗ್ಲಿಲ್ಲ. ಸುಶಾಂತ್ ಗೆ ಅಂತಿಮ ವಿದಾಯ ಹೇಳಲು ಸಹ ನನಗೆ ಸಾಧ್ಯವಾಗಲಿಲ್ಲ ಅಂತ ಶ್ವೇತಾ ಹೇಳ್ಕೊಂಡಿದ್ದಾರೆ.

ಧೋನಿ ಭೇಟಿಯಾಗಿಲ್ಲ

ಸುಶಾಂತ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಯಾದ ಎಂಎಸ್ ಧೋನಿ - ದಿ ಅನ್ಟೋಲ್ಡ್ ಸ್ಟೋರಿಯಲ್ಲಿ ಕೆಲಸ ಮಾಡಿದ್ದರು. ಈ ಸಿನಿಮಾ, ಸುಶಾಂತ್ ಅವರ ವೃತ್ತಿಜೀವನವನ್ನು ಉನ್ನತ ಸ್ಥಾನಕ್ಕೆ ಏರಿಸಿತ್ತು. ಸುಶಾಂತ್ ಸಾವು ಚಿತ್ರೋದ್ಯಮಕ್ಕೆ ದೊಡ್ಡ ಹೊಡೆತವಾಗಿತ್ತು. ಆದ್ರೆ ನಟನ ಮರಣದ ನಂತರ, ಧೋನಿ ಅವರ ಕುಟುಂಬವನ್ನು ಸಂಪರ್ಕಿಸಲಿಲ್ವಂತೆ. ಧೋನಿ ನಮ್ಮನ್ನು ಸಂಪರ್ಕಿಸಿಲ್ಲ. ಕಂಗನಾ ರನೌತ್ ಮತ್ತು ಇತರ ಕೆಲವು ಸೆಲೆಬ್ರಿಟಿಗಳು ನಮ್ಮನ್ನು ಸಂಪರ್ಕಿಸಿದ್ದರು ಎಂದು ಶ್ವೇತಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

KBC 18ರಲ್ಲಿ 'ರಾಕಿಂಗ್ ಸ್ಟಾರ್' ಯಶ್ ಹವಾ: ಅಮಿತಾಭ್ ಬಚ್ಚನ್ ಕೇಳಿದ ಈ ಪ್ರಶ್ನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್!
ಮಗಳಿಗಾಗಿ ತಂದೆಯ ಹೋರಾಟ, ಅಯ್ಯಪ್ಪ ಭಕ್ತನ ರೌದ್ರಾವತಾರ: ರವಿತೇಜ 'ಇರುಮುಡಿ' ಟ್ರೇಲರ್‌ ಹೇಗಿದೆ?