ಡೇಟಿಂಗ್ ಮಾಡ್ತಿದ್ರೆ ಹಾಸಿಗೆ ವಿಷ್ಯದಲ್ಲಿ ಹೇಗಿರಬೇಕು? ಇಂದಿನ ಯುವ ಪೀಳಿಕೆಗೆ ಬಾಲಿವುಡ್ ನಟಿ ಜೀನತ್ ಅಮನ್ ಪಾಠ ಮಾಡಿದ್ದೇನು?
ಬಾಲಿವುಡ್ನ ಹಿರಿಯ ನಟಿ ಜೀನತ್ ಅಮನ್ (Zeenat Aman) 70 ರಿಂದ 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರಲ್ಲಿ ಒಬ್ಬರು. ತಮ್ಮ ಸೆಕ್ಸಿ ಲುಕ್ ಹಾಗೂ ಅಮಲೇರಿದ ಕಣ್ಣುಗಳಿಂದಲೇ ಪಡ್ಡೆ ಹುಡುಗರ ಹೃದಯ ಕದ್ದ ನಟಿ ಇವರು. ತಮ್ಮ ಮಾದಕ ನೋಟ, ನೃತ್ಯದಿಂದ ಜೀನತ್ ಹಲವರ ಹೃದಯ ಗೆದ್ದಿದ್ದರು. ಆ ಕಾಲದಲ್ಲಿಯೇ ಅತ್ಯಂತ ಬೋಲ್ಡ್ ಆಗಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ ಹರೇ ಕೃಷ್ಣ ಹರೇ ರಾಮ್ ಚಿತ್ರದಲ್ಲಿನ ದಮ್ಮರೇ ದಂ... ಹಾಡಂತೂ ಕೆಲ ದಶಕಗಳವರೆಗೆ ಎಲ್ಲರ ಬಾಯಲ್ಲೂ ನಲಿದಾಡಿತ್ತು. ಇಂಥ ನಟಿ ಕೆಲ ದಿನಗಳ ಹಿಂದೆ ದುಡ್ಡು ಹಾಗೂ ಜೀವನದ ಪಾಠವನ್ನು ಜಾಹೀರಾತಿನ ಮೂಲಕ ಹೇಳಿದ್ದರು. 'ನಟನಾಗುವುದು ಸುಲಭ, ಆದರೆ ನಿಮ್ಮನ್ನು ನೀವೇ ತಿಳಿದುಕೊಳ್ಳುವುದು ಹಾಗೂ ನೀವು ನೀವೇ ಆಗಿರುವುದು ತುಂಬಾ ಕಷ್ಟ' ಎಂದಿದ್ದಾರೆ. 'ನೀವು ಯಾರು?' 'ನಿಮ್ಮ ಉದ್ದೇಶವೇನು?' 'ನಾನೇಕೆ ಇಲ್ಲಿದ್ದೇನೆ?' ಎಂಬ ಅಸ್ತಿತ್ವವಾದದ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ನೀವು ನೀವಾದಾಗ ಉದ್ಭವಿಸುತ್ತದೆ ಎಂದಿರುವ ನಟಿ, ಜೀವನದಲ್ಲಿ ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಹಣದಿಂದ ಪ್ರೀತಿ ಖರೀದಿಸಲು ಸಾಧ್ಯವಿಲ್ಲ ಎಂದಿದ್ದರು.
ಇದೀಗ ನಟಿ ಜೀನತ್, ಡೇಟಿಂಗ್ (Dating) ವಿಷಯದ ಕುರಿತು ಮಾತನಾಡಿದ್ದಾರೆ. ವಿದೇಶಗಳಲ್ಲಷ್ಟೇ ಭಾರಿ ಪ್ರಚಲಿತದಲ್ಲಿರೋ ಡೇಟಿಂಗ್, ಲಿವ್ ಇನ್ ರಿಲೇಷನ್ ಭಾರತಕ್ಕೆ ಕಾಲಿಟ್ಟು ದಶಕಗಳೇ ಆಗಿ ಹೋಗಿವೆ. ಸಂಬಂಧಗಳಿಗೆ ಅತ್ಯಂತ ಮಹತ್ವ ಕೊಡುತ್ತಿದ್ದ ಭಾರತದಲ್ಲಿ ಈಗ ಈ ರೀತಿಯ ಸಂಬಂಧಗಳೇ ಹೈಲೈಟ್ ಆಗುತ್ತಿವೆ. ಮದುವೆಯಾಗದೇ ಒಟ್ಟಿಗೇ ಇರುವುದು, ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು ಇವೆಲ್ಲವೂ ಮಾಮೂಲಾಗಿದೆ. ಅದರಲ್ಲಿಯೂ ನಟ-ನಟಿಯರಿಂದ ಹೆಚ್ಚಿನ ಪ್ರಭಾವಿತರಾಗುತ್ತಿರುವ ಇಂದಿನ ಯುವ ಪೀಳಿಗೆ ಸಂಪ್ರದಾಯಬದ್ಧ ಸಂಬಂಧಗಳಿಗಿಂತಲೂ ಈ ರೀತಿಯ ಅನೈತಿಕ ಎನ್ನಬಹುದಾದ ಸಂಬಂಧಗಳಿಗೇ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಡೇಟಿಂಗ್ ಹೆಸರಿನಲ್ಲಿ ಲೈಂಗಿಕ ತೃಷೆ ತೀರಿಸಿಕೊಂಡು ನಂತರ ಹೆಚ್ಚಾಗಿ ಹೆಣ್ಣುಮಕ್ಕಳು ಪಡಬಾರದ ಕಷ್ಟ ಪಡುತ್ತಿರುವುದು ಎಲ್ಲರಿಗೂ ತಿಳಿದದ್ದೇ.
Zeenat Aman: ದುಡ್ಡಿಗೆ ಪ್ರೀತಿ ಕೊಳ್ಳೋ ತಾಕತ್ತಿಲ್ಲ, ಬದುಕಿನುದ್ದಕ್ಕೂ ನೋವುಂಡ ನಟಿಯ ಜೀವನ ಪಾಠ
ಈ ಬಗ್ಗೆ ನಟಿಯೀಗ ಮಾತನಾಡಿದ್ದಾರೆ. ಸಂವಹನವು ಎಲ್ಲಾ ಪ್ರಣಯ ಸಂಬಂಧಗಳ ಆಧಾರವಾಗಿರಬೇಕು ಎಂದಿರುವ ನಟಿ, ಡೇಟಿಂಗ್ ಹೆಸರಿನಲ್ಲಿ ಒಬ್ಬರಿಗೊಬ್ಬರು ಹಾಸಿಗೆಗೆ ಹಾರುವ ಮೊದಲು ಸ್ವಲ್ಪ ಕಾಯಬೇಕಾಗಿರುವುದು ಅತ್ಯಗತ್ಯ ಎಂದಿದ್ದಾರೆ. 'ಇದನ್ನು ಹೇಳಲು ನಾನು ನಿಜವಾಗಿಯೂ ವಿಷಾದಿಸುತ್ತೇನೆ. ಆದರೆ ಯುವ ಜನತೆ ತಮ್ಮ ದೈಹಿಕ ಕಾಮನೆಗಳನ್ನು ಹಿಡಿದಿಟ್ಟುಕೊಳ್ಳಬೇಕು. ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಾಮಾನ್ಯವಾದರೂ, ಇಬ್ಬರೂ ಪರಿಚಯ, ಡೇಟಿಂಗ್ ಎನ್ನುವ ಹೆಸರಿನಲ್ಲಿ ತಕ್ಷಣವೇ ಹಾಸಿಗೆಗೆ ಜಿಗಿಯಬೇಡಿ. ಪರಸ್ಪರ ತಿಳಿದುಕೊಳ್ಳಲು ಕಾಯಿರಿ. ನೀವೇ ಬಹಳ ಅಮೂಲ್ಯರು. ಅದನ್ನು ಮೊದಲು ಮನಗಾಣಿಕೊಳ್ಳಿ. ಏಕಾಏಕಿ ಮಾಡುವ ನಿರ್ಧಾರದಿಂದ ಬದುಕೇ ಅಲ್ಲೋಲ ಕಲ್ಲೋಲ ಆಗಬಹುದು ಎಂದಿದ್ದಾರೆ.
ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿರುವುದು (Economic independence) ಇಂದಿನ ಅಗತ್ಯ ಎಂದಿರುವ ನಟಿ ಜೀನತ್, 'ಪ್ರತಿಯೊಬ್ಬ ಮಹಿಳೆ ಆತ್ಮವಿಶ್ವಾಸ ಮತ್ತು ಆರ್ಥಿಕವಾಗಿ ತಮ್ಮನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ತಮ್ಮ ಸ್ವಂತ ಭವಿಷ್ಯವನ್ನು ನಿಯಂತ್ರಿಸಲು ಅದು ಅನುವು ಮಾಡಿಕೊಡುತ್ತದೆ. ಮಹಿಳೆಯರು ಹಣಕಾಸಿನ ಸಂಪನ್ಮೂಲ ಹೊಂದಿದ್ದರೆ, ಜೀವನದಲ್ಲಿ ಬರುವ ಅಡೆತಡೆಗಳನ್ನು ಜಯಿಸಬಹುದು. ಅಲ್ಲಿಯವರೆಗೆ ಭಾವೋದ್ರೇಕಗಳನ್ನು ತಡೆದುಕೊಳ್ಳಬೇಕು. ಮೊದಲು ಗುರಿ ಮತ್ತು ಕನಸುಗಳಿಗೆ ಹೊಂದಿಕೆಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆರ್ಥಿಕವಾಗಿ ಸ್ವತಂತ್ರವಾಗಿರುವುದು ಎಂದರೆ ಕೇವಲ ಹಣವನ್ನು ಹೊಂದಿರುವುದು ಮಾತ್ರವಲ್ಲ; ಇದು ಇತರರ ಮೇಲೆ ಅವಲಂಬಿತರಾಗದೆ ಸ್ವಂತ ನಿಯಮಗಳ ಮೇಲೆ ಬದುಕುವ ಸ್ವಾತಂತ್ರ್ಯವನ್ನು ಸೂಚಿಸುತ್ತದೆ ಎಂದು ನಟಿ ಬುದ್ಧಿಮಾತು ಹೇಳಿದ್ದಾರೆ.
Zeenat Aman: ಮೊದಲ ಪತಿ ದವಡೆ ಮುರಿದ, 3ನೇಯವ ರೇಪ್ ಮಾಡಿದ, ಬಾಲಿವುಡ್ ಸೆಕ್ಸಿಯ ಭಯಾನಕ ಸ್ಟೋರಿ!