ಚಿಕ್ಕ ಡ್ರೆಸ್​ ಹಾಕ್ಕೋಳದ್ಯಾಕೆ- ಈ ಪರಿ ಎಳೆಯೋದ್ಯಾಕೆ? ಇಬ್ರಾಹಿಂ ಒಪ್ಪುತ್ತಾನಾ? ನಟಿ ಪಾಲಕ್ ಸಕತ್​ ಟ್ರೋಲ್

By Suvarna News  |  First Published Sep 16, 2023, 1:17 PM IST

ಕಿರುತೆರೆ ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್​ ತಿವಾರಿ ಚಿಕ್ಕ ಡ್ರೆಸ್​ ಧರಿಸಿ ಅದನ್ನು ಎಳೆದುಕೊಳ್ಳುತ್ತಾ ನೋಡಿರುವ ನೆಟ್ಟಿಗರು ತೀವ್ರವಾಗಿ ಟ್ರೋಲ್​  ಮಾಡುತ್ತಿದ್ದಾರೆ.
 


 ಇಂದು ನಟಿಯರು ಅತ್ಯಂತ ಕಡಿಮೆ ಬಟ್ಟೆ ತೊಟ್ಟು ಕಾಣಿಸಿಕೊಳ್ಳುವುದು ವಿಶೇಷವಲ್ಲ. ಧಾರಾಳವಾಗಿ ದೇಹ ಪ್ರದರ್ಶನ ಮಾಡುವುದು ಒಂದೆಡೆಯಾದರೆ, ಮಿನಿ, ಲಾಂಗ್​ ಸ್ಲಿಟ್​ನಂಥ ಬಟ್ಟೆ ಧರಿಸುವುದು ಮತ್ತೊಂದೆಡೆ.  ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.

ಈಗ ಅಂಥದ್ದೇ ಒಂದು ಕಾರಣಕ್ಕೆ ನಟಿ ಪಾಲಕ್ ತಿವಾರಿ (Palak Tiwari) ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.  ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿಯಾಗಿರುವ 22 ವರ್ಷದ ಪಾಲಕ್ ತಮ್ಮ ಅತ್ಯಾಕರ್ಷಕ ನೋಟದಿಂದಾಗಿ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತಿದ್ದಾರೆ. ಈಕೆ  ಸ್ಟೈಲಿಶ್ ಬಟ್ಟೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಸದ್ಯ ಪಾಲಕ್​, ತಮ್ಮ ಅಮ್ಮ ಕಿರುತೆರೆ ನಟಿ ಶ್ವೇತಾ ತಿವಾರಿ ಅವರಿಗಿಂತಲೂ  ಫೇಮಸ್ ಆಗುತ್ತಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರೋ ಪಾಲಕ್​,  ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ.   ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ  ಪಾಲಕ್​. ಇವರೀಗ ಬಟ್ಟೆ ಹಾಕಿಕೊಂಡಿರೋ ಪರಿ ಹಾಗೂ ಅದರಿಂದ ಪೇಚಿಗೆ ಸಿಲುಕಿರುವುದರಿಂದ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

Tap to resize

Latest Videos

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

ಅಷ್ಟಕ್ಕೂ ಆಗಿರುವುದು ಏನೆಂದರೆ, ಪಾಲಕ್​ ಅವರು ವಿಮಾನ ನಿಲ್ದಾಣಕ್ಕೆ ಹೋಗುವ ಸಮಯದಲ್ಲಿ ಮಿನಿ ಸ್ಕರ್ಟ್​ ಧರಿಸಿದ್ದಾರೆ. ಅವರು ಕಾರಿನಿಂದ ಇಳಿಯುವುದನ್ನೇ ಕಾಯುತ್ತಿದ್ದ ಪಾಪರಾಜಿಗಳು ಕೆಳಗೆ ಇಳಿಯುತ್ತಿದ್ದಂತೆಯೇ ಫೋಟೋ ಕ್ಲಿಕ್​ ಮಾಡಿದ್ದಾರೆ. ಈ ಸಮಯದಲ್ಲಿ ಪಾಲಕ್​ ತಮ್ಮ ಡ್ರೆಸ್​ ಎಳೆದುಕೊಳ್ಳುವಲ್ಲಿ ನಿರತರಾಗಿದ್ದರು. ಹಾಕಿರೋದು ಚಿಕ್ಕ ಡ್ರೆಸ್​. ಅದನ್ನು ಸರಿ ಮಾಡಿಕೊಂಡೇ ಮುಗಿಯಲಿಲ್ಲ. ಮೇಲುಗಡೆ ಧರಿಸಿರುವ ಟಾಪ್​ ಕೂಡ ಎಳೆದುಕೊಂಡು ಸರಿ ಮಾಡಿಕೊಳ್ಳುತ್ತಿದ್ದರು. ಇದರಿಂದ ಅವರು ಸಕತ್​ ಟ್ರೋಲ್​ಗೆ ಒಳಗಾಗಿದ್ದಾರೆ. ಹಾಕಿರುವುದೇ ಇಷ್ಟು ಚಿಕ್ಕ ಡ್ರೆಸ್​, ಕಾಣುವುದೆಲ್ಲವೂ ಕಾಣಿಸುತ್ತದೆ, ಎಳೆದುಕೊಳ್ಳುವುದು ಏಕೆ ಎಂದು ಟ್ರೋಲಿಗರು ಪ್ರಶ್ನಿಸುತ್ತಿದ್ದಾರೆ. ಇನ್ನು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ಬಗ್ಗೆಯೂ ಪ್ರಶ್ನೆ ಕೇಳಿರುವ ನೆಟ್ಟಿಗರು, ಈ ಪರಿಯ ಚಿಕ್ಕ ಡ್ರೆಸ್​ ಅವರಿಗೆ ಒಪ್ಪಿಗೆನಾ ಎಂದೂ ಪ್ರಶ್ನಿಸಿದ್ದಾರೆ. 

ಸದ್ಯ ಪಾಲಕ್​ ಹೆಚ್ಚು ಸದ್ದು ಮಾಡ್ತಿರೋದು  ಅವರು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಅವರ ಜೊತೆ ರಿಲೇಷನ್​ನಲ್ಲಿ ಇರುವ ಕಾರಣ.  ಇದನ್ನು ಅವರು ಒಪ್ಪಿಕೊಳ್ಳದಿದ್ದರೂ ನಟ ಸಲ್ಮಾನ್​ ಖಾನ್​ ಅವರೇ ಪರೋಕ್ಷವಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದೂ ಉಂಟು. ಆದರೆ ಇದನ್ನು ನಟಿ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಆದರೆ ಇದೀಗ ಅವರ ತಂದೆ ರಾಜಾ ಚೌಧರಿ, (ಶ್ವೇತಾ ತಿವಾರಿ ಅವರ ವಿಚ್ಛೇದಿತ ಪತಿ) ಮಗಳ ಬಗ್ಗೆ ಮಾತನಾಡಿದ್ದಾರೆ. ಇಬ್ರಾಹಿಂ ಅಲಿ ಖಾನ್ ಜೊತೆಗಿನ ಮಗಳ ಸಂಬಂಧದ ಕುರಿತು ನೇರವಾಗಿ ಹೇಳದ ಅವರು, ಈ ಸಮಯದಲ್ಲಿ, ಮಕ್ಕಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಪಡೆದಿರುತ್ತಾರೆ. ಅವರು ಏನನ್ನು ಚೆನ್ನಾಗಿ ಭಾವಿಸಿದರೂ, ನಾನು ಅದರಲ್ಲಿ ಸಂತೋಷವಾಗಿರುತ್ತೇನೆ. ಅವಳು ಸಂತೋಷವಾಗಿದ್ದರೆ ನನಗೆ  ಸಂತೋಷ, ಅವಳು ದುಃಖಿತಳಾದರೆ,  ನಾನು ದುಃಖಿತನಾಗುತ್ತೇನೆ ಎಂದಿದ್ದಾರೆ. ಈ ಮೂಲಕ ಮಗಳ ರಿಲೇಷನ್​ ಕುರಿತು ಪರೋಕ್ಷವಾಗಿ ತಿಳಿಸಿದ್ದಾರೆ. 
Janhvi Kapoor: ಮೇಲೆ-ಕೆಳಗೆ ಸರಿ ಮಾಡ್ಕೊಂಡೇ ಮುಗೀತಿಲ್ವಲ್ಲಾ ತಾಯೀ ಎಂದು ನಟಿ ಟ್ರೋಲ್​

click me!