
ಜೀ ಕನ್ನಡದಲ್ಲಿ ಸೋಮವಾರದಿಂದ ಶನಿವಾರ ರಾತ್ರಿ 9.00 ಗಂಟೆಗೆ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಪ್ರಸಾರವಾಗುತ್ತಿದೆ. ಈ ಸೀರಿಯಲ್ ಇತ್ತೀಚೆಗೆ ಪ್ರಸಾರ ಕಾಣುತ್ತಿರುವ ಮಿಕ್ಕ ಎಲ್ಲ ಧಾರಾವಾಹಿಗಳನ್ನು ಹಿಮ್ಮೆಟ್ಟಿಸಿ 'ಟಿಆರ್‌ಪಿ ರೇಸ್'ನಲ್ಲಿ ಮೊದಲ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಬೇರೆ ಎಲ್ಲಾ ಸೀರಿಯಲ್‌ಗಳೂ ತಮ್ಮ ಸ್ಥಾನವನ್ನು ಪ್ರತಿ ವಾರ ಬದಲಾಯಿಸಿಕೊಳ್ಳುತ್ತಿದ್ದರೆ, ಪುಟ್ಟಕ್ಕನ ಮಕ್ಕಳು ಧಾರಾವಾಹಿ 'ಟಾಪ್ ಒನ್' ಸ್ಥಾನದಲ್ಲೇ ರಾರಾಜಿಸುತ್ತಿದೆ.
ಉಮಾಶ್ರೀ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ 2021ರಿಂದಲೂ ಪ್ರಸಾರ ಕಾಣುತ್ತಿದೆ. ಶುರುವಿನಿಂದಲೂ ಪ್ರೇಕ್ಷಕವರ್ಗವನ್ನು ಭಾರೀ ಎನ್ನವಷ್ಟು ಸೆಳೆದ ಈ ಸೀರಿಯಲ್ ಮಿಕ್ಕ ಎಲ್ಲಾ ಸೀರಿಯಲ್‌ಗಳನ್ನೂ ಮೀರಿ ಜನಪ್ರಿಯತೆ ಪಡೆದಿದೆ. ಈಗಿನ ಎಲ್ಲಾ ಸೀರಿಯಲ್‌ಗಳ ಕಥೆಗೆ ಹೋಲಿಸಿದರೆ ಈ ಕಥೆ ಸಂಪೂರ್ಣ ಗ್ರಾಮೀಣಕ್ಕೆ ಸಂಬಂಧಿಸಿದ್ದರೂ ಇದು ಪಟ್ಟಣಗಳಲ್ಲಿನ ವೀಕ್ಷಕರನ್ನೂ ಸೆಳೆಯುತ್ತಿರುವುದು ವಿಶೇಷ.
ಪಟ್ಟಕ್ಕನ ಸಂಸಾರ ಬಡತನದಲ್ಲೂ ಖುಷಿಯಲ್ಲಿ ಜೀವನ ಸಾಗಿಸುತ್ತಿದೆ. ಜೀವನ ನಿರ್ವಹಣೆಗೆ ಹೊಸದಾಗಿ 'ಊಟದ ಬಂಡಿ' ವ್ಯವಸ್ಥೆ ಮಾಡಿಕೊಂಡಿರುವ ಪುಟ್ಟಕ್ಕ, ತನ್ನ ಸಂಸಾರದ ಸಹಾಯ ಪಡೆದು ಅದನ್ನು ನಡೆಸತೊಡಗಿದ್ದಾಳೆ. ಇದೀಗ ಅವಳ ಒಬ್ಬ ಮಗನಿಗೆ ಒಳ್ಳೆಯ ಕೆಲಸ ಸಿಕ್ಕಿದ್ದು, ಆತ ಹಳ್ಳಿ ಬಿಡುವ ಸಮಯ ಬಂದಿದೆ. ಅವನೊಟ್ಟಿಗೆ ಹೋಗಲು ಆತನ ಹೆಂಡತಿ ನಿರಾಕರಿಸಲು ಪುಟ್ಟಕ್ಕ ಆಕೆಗೆ 'ನೀನು ಹೋಗು, ನಾನು ಇದನ್ನು ಉಳಿದವರ ಸಹಾಯದಿಂದ ನಡೆಸಿಕೊಂಡು ಹೋಗುತ್ತೇನೆ' ಎಂದು ಹೇಳಿ ಅವಳು ಮಗನೊಟ್ಟಿಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ.
ಬಿಗ್ ಬಾಸ್ ಮನೆಗೆ 'ಮಜಾ ಭಾರತ'ದ ಚಂದ್ರಪ್ರಭ ಎಂಟ್ರಿ; ಇದು ಲೇಟೆಸ್ಟ್ ಗಾಸಿಪ್!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮುಂದೇನು ಆಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಸಂಚಿಕೆಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದ್ದು, ಮುಂದಿನ ಸಂಚಿಕೆಗಳಿಗೆ ಕಾಯುವಂತಾಗಿದೆ. ಇದೀಗ, 2 ವರ್ಷ ಕಳೆದರೂ ವೀಕ್ಷಕರಿಂದ ಹೆಚ್ಚಿನ ಕ್ರೇಜ್ ಗಳಿಸಿಕೊಂಡು ಟಾಪ್ ಸೀರಿಯಲ್ ಎಂಬ ಹೆಗ್ಗಳಿಕೆ ಹೊಂದಿ ಪ್ರಸಾರ ಕಾಣುತ್ತಿದೆ ಪುಟ್ಟಕ್ಕನ ಮಕ್ಕಳು. ಮುಂದೇನಾಗುವುದು ಎಂಬದನ್ನು ತಿಳಿಯಲು ಮುಂದಿನ ಸಂಚಿಕೆಗಳನ್ನು ನೋಡಿ.
ಕಣ್ಣು ಮುಚ್ಚಿ 'ಬಾರಮ್ಮ' ಎಂದು ಕರೆದ ವೈಷ್ಣವ್ 'ಲಕ್ಷ್ಮೀ'ಗೆ ತೋರಿಸಿದ್ದೇನು ನೋಡಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.