ವಿಜಯ್‌ ಸೇತುಪತಿ ಮಗಳಿಗೆ ರೇಪ್​ ಬೆದರಿಕೆ ಹಾಕಿದ್ದ ಚಿತ್ರ ಕೊನೆಗೂ ರಿಲೀಸ್​: ನಾಳೆಯೇ ಚಿತ್ರಮಂದಿರಗಳಲ್ಲಿ!

By Suvarna News  |  First Published Oct 5, 2023, 3:46 PM IST

ವಿಜಯ್‌ ಸೇತುಪತಿ ಮಗಳಿಗೆ ರೇಪ್​ ಬೆದರಿಕೆ ಹಾಕಿದ್ದ 800 ಹೆಸರಿನ ಚಿತ್ರ ನಾಳೆಗೆ ರಿಲೀಸ್ ಆಗಲಿದೆ. ಏನಿದು ಕಥೆ, ಗಲಾಟೆ?
 


ಸದ್ಯ ಕಾಲಿವುಡ್‌ ನಟ ವಿಜಯ್‌ ಸೇತುಪತಿ ಜವಾನ್​ ಚಿತ್ರದ ಖುಷಿಯಲ್ಲಿದ್ದಾರೆ.  ಬಾಲಿವುಡ್​ನ ಹಲವು ದಾಖಲೆಗಳನ್ನು ಅಳಿಸಿಹಾಕಿ ಇನ್ನೂ ಮುನ್ನುಗ್ಗುತ್ತಲೇ ಸಾಗಿವೆ.  ಈ ಚಿತ್ರದಲ್ಲಿ ಏಳು ವಿಭಿನ್ನ ಶೇಡ್​ಗಳಲ್ಲಿ ನಾಯಕ ನಟ ಶಾರುಖ್​ ಕಾಣಿಸಿಕೊಂಡಿದ್ದರೆ, ಕಾಳಿ ಗಾಯಕ್ವಾಡ್ ಪಾತ್ರದಲ್ಲಿ ವಿಜಯ್ ಸೇತುಪತಿ ಮಿಂಚಿದ್ದಾರೆ. ಸದ್ಯ ವಿಜಯ್​ ಅವರು  ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಅದರ ಬೆನ್ನಲ್ಲೇ ಅವರ ನಟನೆಯ ಬಹು ಕುತೂಹಲ ಚಿತ್ರವೊಂದು ನಾಳೆ ರಿಲೀಸ್​ ಆಗುತ್ತಿದೆ. ಈ ಚಿತ್ರ ಕುತೂಹಲ ಹುಟ್ಟಿಸಲು ಕಾರಣವೂ ಇದೆ. ಅದೇನೆಂದರೆ ಈ ಚಿತ್ರ ರಿಲೀಸ್​ ಆದರೆ ವಿಜಯ್​ ಸೇತುಪತಿ ಅವರ ಮಗಳಿಗೆ ರೇಪ್​  ಮಾಡುವುದಾಗಿ ಈ ಹಿಂದೆ ಬೆದರಿಕೆಯೂ ಬಂದಿತ್ತು. ಆ ಚಿತ್ರವೇ 800! ಹೌದು. ಚಿತ್ರದ ಹೆಸರೇ 800.  ಜವಾನ್​ ಚಿತ್ರದ ಯಶಸ್ಸಿನ ಬಳಿಕ  ಹಲವು ಬಾಲಿವುಡ್‌ ಸಿನಿಮಾಗಳಿಂದಲೂ ಆಫರ್‌ ಸ್ವೀಕರಿಸುತ್ತಿರುವ ವಿಜಯ್​ ಅವರ ಬಹುನಿರೀಕ್ಷಿತ 800 ನಾಳೆ (ಅಕ್ಟೋಬರ್​ 6) ಬಿಡುಗಡೆಯಾಗಲಿದೆ. ಕತ್ರಿಕಾ ಕೈಫ್ ಜತೆಗಿನ ಮೇರಿ ಕ್ರಿಸ್‌ಮಸ್‌ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ ಆಗಲಿದೆ. ಅದರ ಮಧ್ಯೆ 800 ನಾಳೆ ಬಿಡುಗಡೆಯಾಗಲಿದೆ. 

ಈ ಚಿತ್ರ,  ಮುತ್ತಯ್ಯ ಮುರಳೀಧರನ್‌ ಬಯೋಪಿಕ್‌ ಕುರಿತಾಗಿ. ಶ್ರೀಲಂಕಾದ ಲೆಜೆಂಡ್‌ ಆಟಗಾರ ಮುತ್ತಯ್ಯ ಮುರಳೀಧರನ್‌ ಅವರ ಜೀವನ ಆಧರಿತ ಸಿನಿಮಾ ಇದು. ಚಿತ್ರವು 2020ರಲ್ಲಿಯೇ ಘೋಷಣೆ ಆಗಿತ್ತು. ಆಗಿನಿಂದಲೂಇದು  ವಿವಾದ ಹುಟ್ಟುಹಾಕುತ್ತಲೇ ಇದೆ.  ಚಿತ್ರದ ಪೋಸ್ಟರ್‌ವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗಲೂ ಈ ಚಿತ್ರ ವಿವಾದದ ಸುಳಿಯಲ್ಲಿಯೇ ಸಿಲುಕಿದೆ.  

Tap to resize

Latest Videos

ವಿಜಯ್​ ಸೇತುಪತಿಯನ್ನು ಮದ್ವೆಯಾಗಲಿದ್ದಾರಂತೆ ಶಾರುಖ್​ ಖಾನ್​: ಟೈಮ್​ ಕೂಡ ಫಿಕ್ಸ್​!

ಆ ಬಯೋಪಿಕ್‌ಗೆ ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ಕಥೆ ಕೇಳಿ ನಟಿಸುವುದಾಗಿ ಒಪ್ಪಿಗೆ ಸೂಚಿಸಿದ್ದರು. ನಟ ವಿಜಯ್‌ ಅವರ ಈ ನಡೆ ತಮಿಳುನಾಡಿನಲ್ಲಿ ಮೆಚ್ಚುಗೆಗಿಂತ ಟೀಕೆಗೆ ಒಳಗಾಗಿದ್ದೇ ಹೆಚ್ಚು. ಅದೆಲ್ಲದಕ್ಕೂ ಹೆದರಿ, ಸಿನಿಮಾದಿಂದಲೇ ಸೇತುಪತಿ ಹಿಂದೆ ಸರಿದಿದ್ದರು. ಇದೀಗ ಅದೇ 800 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್‌ 6ರಂದು ಈ ಚಿತ್ರ ರಿಲೀಸ್‌ ಆಗುತ್ತಿದೆ. ನಿರ್ದೇಶಕ ಎಂ.ಎಸ್‌ ಶ್ರೀಪತಿ ನಿರ್ದೇಶನಲ್ಲಿ ಮೂಡಿ ಬಂದಿರುವ 800 ಸಿನಿಮಾ ಮೂಲ ತಮಿಳಿನಲ್ಲಿ ನಿರ್ಮಾಣವಾಗಿದೆ. ಬಳಿಕ ಅದನ್ನೇ ತೆಲುಗು ಮತ್ತು ಹಿಂದಿಗೆ ಡಬ್‌ ಮಾಡಲಾಗಿದೆ. ಇಂಗ್ಲೀಷ್‌ ಭಾಷೆಯಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡಲು ತಂಡ ಪ್ಲಾನ್‌ ಹಾಕಿದೆ. ವಿವೇಕ್ ರಂಗಾಚಾರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಧುರ್‌ ಮಿತ್ತಲ್‌ ಮುರಳೀಧರನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಷ್ಟಕ್ಕೂ ಇದಕ್ಕೆ ವಿರೋಧ ವ್ಯಕ್ತವಾಗಲು ಕಾರಣವೂ ಇದೆ. ಅದೇನೆಂದರೆ,  ಮುತ್ತಯ್ಯ ಮುರಳೀಧರ್‌ ಅವರಿಗೂ  ತಮಿಳುನಾಡಿಗೂ ಆಗಿ ಬರಲ್ಲ. ಇದಕ್ಕೆ  ಕಾರಣ ಮುರಳೀಧರನ್‌ ಓರ್ವ ಶ್ರೀಲಂಕಾದ ತಮಿಳಿಗ. ಶ್ರೀಲಂಕಾದಲ್ಲಿ ತಮಿಳರು ಎದುರಿಸಿದ್ದ ಸಮಸ್ಯೆ ವೇಳೆ ಇದೇ ನಟ ಆ ತಮಿಳಿಗರ ಬೆಂಬಲಕ್ಕೆ ಬಂದಿರಲಿಲ್ಲ. ಈ ವಿಚಾರವಾಗಿಯೇ ತಮಿಳುನಾಡಿನಲ್ಲಿ ಆತನ ಬಯೋಪಿಕ್‌ಗೆ ವಿರೋಧ ವ್ಯಕ್ತವಾಗಿತ್ತು. ಈ ಚಿತ್ರ ಬಿಡುಗಡೆಯಾದರೆ ನಿಮ್ಮ ಮಗಳ ಮೇಲೆ ರೇಪ್‌ ಆಗುತ್ತೆ ಎಂದು ವಿಜಯ್​ ಸೇತುಪತಿ ಅವರಿಗೆ ರಾಜಕೀಯ ನಾಯಕರಿಂದಲೇ ಬೆದರಿಕೆ ಬಂದಿದ್ದಿದೆ.  ಕೂಡಲೇ ಈ ಸಂಬಂಧ ಚೆನ್ನೈ ಪೊಲೀಸರಿಗೂ ವಿಜಯ್‌ ದೂರು ನೀಡಿದ್ದರು. ಬಳಿಕ ಕೆಲವೇ ಹೊತ್ತಲ್ಲಿ ಆ ಖಾತೆಯನ್ನೇ ನಿಷ್ಕ್ರೀಯಗೊಳಿಸಲಾಗಿತ್ತು.

ಸ್ಮಾರ್ಟ್​ಫೋನ್​ ಕುರಿತು ಸುಳ್ಳು ಹೇಳಿ ಪೇಚಿಗೆ ಸಿಲುಕಿದ ನಟ ಅಮಿತಾಭ್: 10 ಲಕ್ಷ ದಂಡಕ್ಕೆ ಆಗ್ರಹ
 
ನಾಳೆ ಇದರ ಬಿಡುಗಡೆಗೆ ಡೇಟ್​ ಫಿಕ್ಸ್ ಆಗುತ್ತಲೇ,  ಮುತ್ತಯ್ಯ ಖುದ್ದು ಕೆಲವೊಂದು ವಿಷಯ ಶೇರ್​ ಮಾಡಿಕೊಂಡಿದ್ದಾರೆ.  "800 ಬಯೋಪಿಕ್‌ಗೆ ನಿರ್ದೇಶಕ ಎಂ.ಎಸ್‌ ಶ್ರೀಪತಿ ಅವರ ಮೊದಲ ಆಯ್ಕೆಯೇ ವಿಜಯ್‌ ಸೇತುಪತಿಯಾಗಿತ್ತು. ಐಪಿಎಲ್‌ ಸಮಯದಲ್ಲಿ, ನಾನು ಉಳಿದುಕೊಂಡ ಹೊಟೇಲ್‌ನಲ್ಲಿಯೇ ವಿಜಯ್‌ ಸೇತುಪತಿ ತಂಗಿದ್ದಾರೆ, ಅವರೊಂದಿಗೆ ಒಂದು ಮೀಟಿಂಗ್‌ ಅರೆಂಜ್‌ ಮಾಡಿದ್ದರು ನಿರ್ದೇಶಕರು. ನನ್ನ ಅಭಿಮಾನಿಯೂ ಎಂದು ಹೇಳಿಕೊಂಡು ನನ್ನನ್ನು ಭೇಟಿಯಾಗು ಖುಷಿ ವ್ಯಕ್ತಪಡಿಸಿದ್ದರು. ಸುಮಾರು 2 ಗಂಟೆ ಇದರ  ಚರ್ಚೆ ನಡೆಯಿತು. ಐದು ದಿನ ಚರ್ಚೆ ಮುಂದುವರೆಯಿತು. ಐದು ದಿನಗಳ ಬಳಿಕ  ಅವರಿಂದ ಒಪ್ಪಿಗೆಯೂ ಸಿಕ್ಕಿತು. ನಮ್ಮ ನಿರ್ದೇಶಕರಿಗೂ ತಂಡಕ್ಕೂ ಇದು ಖುಷಿಯ ಸಂಗತಿಯಾಗಿತ್ತು. ಆದರೆ, ಅದೇ ವಿಜಯ್‌ ಸೇತುಪತಿ ನಮ್ಮ ಸಿನಿಮಾದಿಂದ ಹಿಂದೆ ಸರಿದರು. ಅದಕ್ಕೆ ಅವರ ಮೇಲೆ ರಾಜಕೀಯವಾಗಿಯೂ ಒತ್ತಡ ಹೆಚ್ಚಾಗಿತ್ತು. ಅವರ ಕುಟುಂಬಕ್ಕೂ ಬೆದರಿಕೆ ಹಾಕಿದ್ದರು. ಇದೊಂದು ಕ್ರಿಕೆಟಿಗನ ಕಥೆ ಮಾತ್ರ ಆಗಿತ್ತು. ಇದರಲ್ಲಿ ರಾಜಕೀಯ ಮಿಶ್ರಣ ಇರಲಿಲ್ಲ ಎಂದಿದ್ದಾರೆ. 

click me!