
ಜೈಲುವಾಸ ಸೇರಿದಂತೆ ಹಲವು ವಿವಾದಗಳ ಸುಳಿಗೆ ಸಿಲುಕಿದ್ದರೂ ಪ್ರೇಕ್ಷಕರ ಪಾಲಿಗೆ ಮಾತ್ರ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟ ಸಂಜಯ್ ದತ್. ನಟನೆಯ ಜೊತೆಗೆ ತಮ್ಮ ವೈಯಕ್ತಿಕ ಜೀವನದಿಂದಾಗಿ ಅವರು ಆಗಾಗ ಜನಮನದಲ್ಲಿದ್ದಾರೆ. ಬಾಲಿವುಡ್‌ನ 'ಸಂಜು ಬಾಬಾ' ವೈಯಕ್ತಿಕ ಜೀವನವು ಹಲವಾರು ಏರಿಳಿತದಿಂದ ಕೂಡಿದ್ದು, ಚಲನಚಿತ್ರ ಸ್ಟೋರಿಗಿಂತ ಕಡಿಮೆಯೇನಿಲ್ಲ. ಬಾಲನಟನಾಗಿ ಚಲನಚಿತ್ರ ವೃತ್ತಿಜೀವನ ಪ್ರಾರಂಭಿಸಿದ್ದ ನಟ ‘ರೇಷ್ಮಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಲನಚಿತ್ರವು 1972 ರಲ್ಲಿ ಬಿಡುಗಡೆಯಾಗಿತ್ತು. 1981ರಲ್ಲಿ ‘ರಾಕಿ’ ಚಿತ್ರದ ಮೂಲಕ ಸಂಜಯ್ ನಿಜವಾದ ಅರ್ಥದಲ್ಲಿ ಕೆಲಸ ಮಾಡಲು ಆರಂಭಿಸಿದರು. ಅವರ ಸಿನಿಮಾ ಸೂಪರ್ ಹಿಟ್ ಆಯಿತು. ತಾಯಿಯ ಹಠಾತ್ ಸಾವಿನ ನಂತರ ಸಂಜಯ್ ತುಂಬಾ ಒಂಟಿಯಾಗಿದ್ದರು. ಡ್ರಗ್ಸ್ ಚಟಕ್ಕೆ ದಾಸರಾದರು. ಹಾಗಾಗಿ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು.
1987 ರಲ್ಲಿ ರಿಚಾ ಶರ್ಮಾ ಅವರನ್ನು ವಿವಾಹವಾದರು. ಆದರೆ ಮದುವೆಯಾದ ಒಂಬತ್ತು ವರ್ಷಗಳ ನಂತರ ರಿಚಾ ಬ್ರೈನ್ ಟ್ಯೂಮರ್‌ನಿಂದ ಸಾವನ್ನಪ್ಪಿದರು. ಆ ನಂತರ ಸಂಜಯ್ ಮತ್ತೆ ಒಂಟಿಯಾದರು. ಅದರ ನಂತರ ಅವರು ಮತ್ತೆ ಮದುವೆಯಾದರು. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು ವಿಚ್ಛೇದನ ಪಡೆದರು. 'ಮುನ್ನಾಭಾಯಿ ಎಂಬಿಬಿಎಸ್' (Munnabai MBBS) ಚಿತ್ರದ ಮೂಲಕ ಸಂಜಯ್ ಮತ್ತೊಮ್ಮೆ ಬಾಲಿವುಡ್‌ಗೆ ಕಮ್ ಬ್ಯಾಕ್ ಮಾಡಿದರು. ಇದು ಸೂಪರ್ ಹಿಟ್ ಆಗುತ್ತಲೆ, 2008 ರಲ್ಲಿ, ಸಂಜು ಮಾನ್ಯತಾ ಅವರನ್ನು ವಿವಾಹವಾದರು. ನಂತರ ಬಾಲಿವುಡ್ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಸಂಜಯ್ ಜೀವನಾಧಾರಿತ ‘ಸಂಜು’ ಸಿನಿಮಾ ಕೂಡ ಕೆಲ ದಿನಗಳ ಹಿಂದೆ ಪ್ರೇಕ್ಷಕರ ಮುಂದೆ ಬಂತು.
ವಿಜಯ್ ಸೇತುಪತಿ ಮಗಳಿಗೆ ರೇಪ್ ಬೆದರಿಕೆ ಹಾಕಿದ್ದ ಚಿತ್ರ ಕೊನೆಗೂ ರಿಲೀಸ್: ನಾಳೆಯೇ ಚಿತ್ರಮಂದಿರಗಳಲ್ಲಿ!
ಇಂತಿಪ್ಪ ಸಂಜಯ್ ದತ್ ಅವರು, ತಾವು ಪತ್ನಿ ಮತ್ತು ಆಕೆಯ ಪ್ರಿಯಕನನ್ನು ಕೊಲೆ ಮಾಡಿದ್ದ ಶಾಕಿಂಗ್ ವಿಷ್ಯ ರಿವೀಲ್ ಮಾಡಿದ್ದಾರೆ. ವರ್ಷಗಳ ಹಿಂದೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಅವರು ತಿಳಿಸಿದ್ದು, ಅದೀಗ ಪುನಃ ವೈರಲ್ ಆಗಿದೆ. ಅಷ್ಟಕ್ಕೂ ಸಂಜಯ್ ದತ್ ಅವರ ಪತ್ನಿ ಮಂತ್ರಿಯೊಬ್ಬರ ಜೊತೆ ಅಫೇರ್ ಇಟ್ಟುಕೊಂಡಿದ್ದರಂತೆ. ಆದ್ದರಿಂದ ಇಬ್ಬರನ್ನೂ ಕೊಲೆ ಮಾಡಿದೆ. ಅದೇ ಕರ್ಮ ನನ್ನನ್ನು ಇಂದಿಗೂ ಕಾಡುತ್ತಿದೆ ಎಂದಿದ್ದಾರೆ! ಹಾಗಿದ್ದರೆ, ಈ ವಿಷ್ಯ ಬೆಳಕಿಗೆ ಯಾಕೆ ಬರಲಿಲ್ಲ ಅಂತೀರಾ? ಅಷ್ಟಕ್ಕೂ ಸಂಜಯ್ ದತ್ ಹೇಳಿರುವುದು ಅವರ ಹೋದ ಜನ್ಮದ ಕುರಿತು.
ಅವರ ಬಾಯಲ್ಲಿಯೇ ಕೇಳುವುದಾದರೆ, 'ಅಶೋಕ ಸಾಮ್ರಾಜ್ಯವಿದ್ದ ಕಾಲವದು. ನಾನು ಆಗ ರಾಜನಾಗಿದ್ದೆ. ನನ್ನ ಪತ್ನಿ ಅಂದ್ರೆ ರಾಣಿ, ನನ್ನ ಮಂತ್ರಿಯೊಂದಿಗೇ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಅವಳಿಗೆ ನಾನು ಸಾಯಬೇಕಿತ್ತು. ಆದ್ದರಿಂದ ಯುದ್ಧಕ್ಕೆ ಕಳುಹಿಸಿದಳು. ನನ್ನನ್ನು ಸಾಯಿಸುವುದು ಆಕೆಯ ಉದ್ದೇಶವಾಗಿತ್ತು. ಆದರೆ ಯುದ್ಧದಲ್ಲಿ ನಾನು ವಿಜೇತನಾದೆ. ಇಷ್ಟರಲ್ಲಿಯೇ ನನ್ನ ಪತ್ನಿಯ ಕುತಂತ್ರ ಗೊತ್ತಾಯಿತು. ಹೀಗಾಗಿ ಪತ್ನಿಯನ್ನು ಹಾಗೂ ಮಂತ್ರಿ ಸಾಯಿಸಿ ಬಿಟ್ಟೆ' ಎಂದಿದ್ದಾರೆ. ಅಷ್ಟಕ್ಕೂ ಇದನ್ನು ತಾವು ತಮಾಷೆಯಾಗಿ ಹೇಳುತ್ತಿಲ್ಲ ಎಂದಿದ್ದರು ಸಂಜಯ್ ದತ್. ಮದ್ರಾಸ್ ಸಮೀಪದ ಹಳ್ಳಿ ಶಿವನಾರಿಯಲ್ಲಿ ತಮ್ಮ ಹಿಂದಿನ ಭವಿಷ್ಯ ಕೇಳಿಕೊಂಡಿದ್ದೆ ಎಂದಿದ್ದಾರೆ. ಇದು ಚೆನ್ನೈನಿಂದ ಎರಡು ಗಂಟೆ ಪ್ರಯಾಣ. ಸಣ್ಣ ಹಳ್ಳಿ. ಅಲ್ಲಿ ಹಸ್ತ ನೋಡಿ ಭವಿಷ್ಯ ಹೇಳುತ್ತಾರೆ. ಅಲ್ಲಿ ತಾವು ಹಿಂದಿನ ಜನ್ಮದ ವಿಷಯ ಕೇಳಿದ್ದು ಎಂದಿದ್ದಾರೆ.
ಸ್ಮಾರ್ಟ್ಫೋನ್ ಕುರಿತು ಸುಳ್ಳು ಹೇಳಿ ಪೇಚಿಗೆ ಸಿಲುಕಿದ ನಟ ಅಮಿತಾಭ್: 10 ಲಕ್ಷ ದಂಡಕ್ಕೆ ಆಗ್ರಹ
ಹಿಂದಿನ ಜನ್ಮದಲ್ಲಿ ಇಬ್ಬರು ವ್ಯಕ್ತಿಗಳನ್ನು ಸಾಯಿಸಿದ್ದರಿಂದ ಈ ಜನ್ಮದಲ್ಲಿ ಆ ಕರ್ಮವನ್ನು ಅನುಭವಿಸಬೇಕಾಗಿದೆ. ಹಿಂದಿನ ಜನ್ಮದಿಂದಲೇ ನಾನು ಒಳ್ಳೆಯ ಕುಟುಂಬದಲ್ಲಿ ಹುಟ್ಟಿದೆ. ಹಾಗಾಗಿಯೇ ನಾನು ಈಗ ಬದುಕಬೇಕಾಗಿದೆ. ಆ ಕಾರಣಕ್ಕೆ ನಾನು ಈ ವೃತ್ತಿಯಲ್ಲಿದ್ದೇನೆ. ಆದರೆ ಆ ಜನ್ಮದಲ್ಲಿ ಎರಡು ಕೊಲೆ ಮಾಡಿದ ಕಾರಣಕ್ಕೆ ತಾಯಿ ನರ್ಗೀಸ್ ದತ್, ಮೊದಲ ಪತ್ನಿ ರಿಚಾ ಶರ್ಮಾ ಕಳೆದುಕೊಂಡಿದೆ. ಯಾವುದ್ಯಾವುದೋ ಕಾರಣಕ್ಕೆ ಬಂಧನ, ಜೈಲುವಾಸ, ಇವೆಲ್ಲವೂ ಈ ಜನ್ಮದಲ್ಲಿ ಅನುಭವಿಸುತ್ತಿದ್ದೇನೆ. ಇದು ಹಿಂದಿನ ಜನ್ಮದ ಕರ್ಮ ಎಂದು ಸಂಜಯ್ ದತ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.