ಅರೆನಗ್ನಳಾಗಿ ಕಾಣಿಸಿಕೊಂಡು ಟಾಪ್ ಸ್ಥಾನಕ್ಕೆ ಏರಿದಳಾ 'ಅನಿಮಲ್' ತೃಪ್ತಿ ಧಿಮ್ರಿ

Published : Dec 14, 2023, 04:46 PM ISTUpdated : Dec 14, 2023, 04:54 PM IST
ಅರೆನಗ್ನಳಾಗಿ ಕಾಣಿಸಿಕೊಂಡು ಟಾಪ್ ಸ್ಥಾನಕ್ಕೆ ಏರಿದಳಾ 'ಅನಿಮಲ್' ತೃಪ್ತಿ ಧಿಮ್ರಿ

ಸಾರಾಂಶ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈಗ ನಟಿ ತೃಪ್ತಿ ಧಿಮ್ರಿಗೆ ಕಾಲ ಶುರುವಾಗಿದೆ ಎನ್ನಬಹುದು. 'IMDB' ಮ್ಯಾಗಝಿನ್ ವೀಕ್ಲಿ 'ಭಾರತದ ಅತ್ಯಂತ ಪ್ರಸಿದ್ಧ ತಾರೆ' ಪಟ್ಟವನ್ನು ನಟಿ ತೃಪ್ತಿ ಧಿಮ್ರಿ ಪಡೆದಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ಜೋಡಿಯ ಅನಿಮಲ್ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜತೆ ತುಂಬಾ ಇಂಟಿಮೇಟ್ ದೃಶ್ಯದಲ್ಲಿ ಕಾಣಿಸಿಕೊಂಡು ಇದೀಗ ಜಗತ್ಪ್ರಸಿದ್ಧವಾಗಿರುವ ನಟಿ ತೃಪ್ತಿ ಧಿಮ್ರಿ ಸದ್ಯ ಟಾಕ್ ಆಫ್ ದಿ ನೇಶನ್ ಆಗಿದ್ದಾರೆ. ಅನಿಮಲ್ ಚಿತ್ರ ಬಿಡುಗಡೆ ಆಗಿದ್ದೇ ತಡ, ನಟಿ ತೃಪ್ತಿ ಕೆರಿಯರ್ ಗ್ರಾಫ್ ಅದೆಷ್ಟು ಏರಿಬಿಟ್ಟದೆ ಎಂದರೆ, ಈಗ ಬಾಲಿವುಡ್ ಸ್ಟಾರ್ ಕಿಡ್‌ಗಳೇ ಅವಳ ಲೆವಲ್‌ನಲ್ಲಿ ಇಲ್ಲದಂತಾಗಿದ್ದಾರೆ. ಭಾರತದ ಮೋಸ್ಟ್ ಸೆನ್ಸೇಷನಲ್ ನಟಿಯಾಗಿ ತೃಪ್ತಿ ಧಿಮ್ರಿ ಹೊರಹೊಮ್ಮಿದ್ದಾರೆ. 

ಒಂಬತ್ತನೇ ಕ್ಲಾಸ್ ಓದುತ್ತಿದ್ದಾಗ ಅಪ್ಪ ಕಲಿಸಿದ ಪಾಠ, ಜೀವ ಇರೋವರೆಗೂ ಮರೆಯಲಾರೆ; ಅನುಪಮ್ ಖೇರ್

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಈಗ ನಟಿ ತೃಪ್ತಿ ಧಿಮ್ರಿಗೆ ಕಾಲ ಶುರುವಾಗಿದೆ ಎನ್ನಬಹುದು. 'IMDB'ಮ್ಯಾಗಝಿನ್ ವೀಕ್ಲಿ 'ಭಾರತದ ಅತ್ಯಂತ ಪ್ರಸಿದ್ಧ ತಾರೆ' ಪಟ್ಟವನ್ನು ನಟಿ ತೃಪ್ತಿ ಧಿಮ್ರಿ ಪಡೆದಿದ್ದಾರೆ. ಜತೆಗೆ, ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ಅವರು ಈ  ಐಎಂಡಿಬಿ ವೀಕ್ಲಿ ಮ್ಯಾಗಝಿನ್‌ನ 2ನೇ ಸ್ಥಾನವನ್ನು ಪಡೆದಿದ್ದಾರೆ. ಬಾಲಿವುಡ್ ಸ್ಟಾರ್ ಕಿಡ್‌ಗಳಾದ ಸುಹಾನಾ ಖಾನ್ ಮತ್ತು ಖುಷಿ ಕಪೂರ್ ಕೂಡ ಈಗ ತೃಪ್ತಿ ಧಿಮ್ರಿ ಏರಿರುವ ಎತ್ತರಕ್ಕೆ ಏರಿಲ್ಲ. ಅವರೆಲ್ಲರೂ ಮೊದಲಿದ್ದ ತಮ್ ಸ್ಥಾನವನ್ನು ಕಳೆದುಕೊಂಡು ಕೆಳಕ್ಕೆ ಕುಸಿದು ಕುಳಿತಿದ್ದಾರೆ.

ಆ್ಯನಿಮಲ್‌ನಲ್ಲಿ ದಾಂಪತ್ಯ ಅತ್ಯಾಚಾರ, ಸಮಾಜದಲ್ಲಿ ಇರೋದು ಹೌದು: ಬಾಬ್ಬಿ ಡಿಯೋಲ್

ಇಷ್ಟು ದಿನಗಳು 'IMDB'ಯ ಲಿಸ್ಟ್‌ನಲ್ಲಿ ಟಾಪ್ ಪೊಸಿಶನ್‌ನಲ್ಲಿ ಇದ್ದ ಎಲ್ಲರೂ ಈಗ ಈ ನಟಿ ತೃಪ್ತಿ ಧಿಮ್ರಿಗಿಂತ ಕೆಳಕ್ಕೆ ಇಳಿಯುವಂತಾಗಿದೆ. ಅನಿಮಲ್ ಚಿತ್ರವು ಬಿಡುಗಡೆಯಾದ ಬಳಿಕ ನಟಿ ತ್ರಿಪ್ತಿ ಧಿಮ್ರಿ ಅವರಿಗೆ ಬಹಳಷ್ಟು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುವಂತೆ ಕಾಲ್‌ಗಳು ಬರಲಾರಂಭಿಸಿವೆ ಎನ್ನಲಾಗಿದೆ. ಅಂದಹಾಗೆ, ನಟಿ ತೃಪ್ತಿ ಧಿಮ್ರಿ ಅವರು ರಾಜ್ ಶಾಂಡಿಲ್ಯಾ (Raaj Shaandilyaa) ಅವರ ಮುಂಬರುವ ವಿಕ್ಕಿ ವಿದ್ಯಾ ಕಾ ವಾಹ್ ವಾಲಾ ವಿಡಿಯೋ (Vicky Vidya Ka Woh Wala Video)ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ನಟಿ ತೃಪ್ತಿ ಧಿಮ್ರಿ ಹವಾ ಇಡೀ ಭಾರತದ ತುಂಬೆಲ್ಲ ವ್ಯಾಪಿಸುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!