ಕಾಫಿ ವಿತ್ ಕರಣ್ ಷೋದಲ್ಲಿ ಕರಣ್ ಜೋಹರ್ ಅವರು ಮಧ್ಯಬೆರಳು ತೋರಿಸುವ ಮೂಲಕ ಟ್ರೋಲ್ಗೆ ಒಳಗಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ನಿರ್ಮಾಪಕ, ನಿರೂಪಕ ಕರಣ್ ಜೋಹರ್ (Karan Johar) ಅವರು ‘ಕಾಫಿ ವಿತ್ ಕರಣ್’ ಷೋ ಸದಾ ವಿವಾದಗಳಿಂದಲೇ ತುಂಬಿರುವ ಕಾರಣ, ಅದು ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಅಶ್ಲೀಲತೆ, ಸೆಕ್ಸ್ ಸಂಬಂಧಿತ ಪ್ರಶ್ನೆಗಳೇ ಇದರಲ್ಲಿ ಹೆಚ್ಚು ಎನ್ನುವ ಕಾರಣಕ್ಕೆ ಸಾಕಷ್ಟು ವಿವಾದಕ್ಕೂ ಗುರಿಯಾಗುತ್ತಿದೆ. ಇದರ ನಡುವೆಯೇ, ಕೆಲ ದಿನಗಳ ಹಿಂದೆ ಬಂದಿದ್ದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಕತ್ ಸದ್ದು ಮಾಡಿತ್ತು. ಬಾಲಿವುಡ್ನ ಕ್ಯೂಟ್ ಕಪಲ್ಗಳಲ್ಲಿ ಒಬ್ಬರು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ಈ ಜೋಡಿ ಮದುವೆಯಾಗಿ ಬರುವ ನವೆಂಬರ್ 14ಕ್ಕೆ ಐದು ವರ್ಷಗಳು ಕಳೆಯಲಿವೆ. 2018ರ ನವೆಂಬರ್ 14ರಂದು ಜೋಡಿ ಇಟಲಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿತು. ಕುತೂಹಲದ ವಿಷಯವೇನೆಂದರೆ, ಮದುವೆಯಾಗಿ ಐದು ವರ್ಷವಾದರೂ ಇವರ ವಿಡಿಯೋ ರಿಲೀಸ್ ಮಾಡಿರಲಿಲ್ಲ. ಇದೀಗ ಅವರ ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟಿರೋ ಜೋಡಿ, ಮದುವೆಯ ವಿಡಿಯೋ ರಿಲೀಸ್ ಮಾಡಿದೆ. ಅದು ಸೋಷಿಯಲ್ ಮೀಡಿಯಾದಲ್ಲಿ ಅಲ್ಲ, ಬದಲಿಗೆ ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಕಾಫಿ ವಿಥ್ ಕರಣ್ ಶೋನಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜೋಡಿ ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೆ ಕುತೂಹಲದ ಘಟ್ಟದಲ್ಲಿ ಪತಿ ರಣವೀರ್ ಎದುರೇ ಪ್ರಿಯಾಂಕಾ ಪರಪುರುಷರ ಬಗ್ಗೆ ಡೇಟಿಂಗ್ ಕುರಿತು ಮಾತನಾಡಿದ್ದು, ಅದು ರಣವೀರ್ ಕೋಪಕ್ಕೆ ಕಾರಣವಾಗಿತ್ತು. ಆಗಿದ್ದೇನೆಂದರೆ, ‘ಇಬ್ಬರೂ ರಿಲೇಶನ್ಶಿಪ್ನಲ್ಲಿ ಇದ್ದೀರಿ ಎಂದು ಯಾವಾಗ ಗೊತ್ತಾಯಿತು’ ಎಂದು ಜೋಡಿಗೆ ಕರಣ್ ಜೋಹರ್ ಕೇಳಿದ್ರು. ಇದಕ್ಕೆ ದೀಪಿಕಾ ‘ಕೆಲವು ಕಾಂಪ್ಲಿಕೇಟೆಡ್ ರಿಲೇಶನ್ಷಿಪ್ನಿಂದ ಆಗತಾನೇ ಹೊರಬಂದಿದ್ದೆ. ಹಾಗಾಗಿ ಯಾರ ಉಸಾಬರಿಯೂ ಬೇಡ ಅನ್ನಿಸಿತ್ತು. ಸಿಂಗಲ್ ಆಗಿರೋಕೆ ಇಷ್ಟವಾಗಿತ್ತು. ಆ ಸಮಯದಲ್ಲಿ ರಣವೀರ್ ಸಿಕ್ಕರು. ನಮ್ಮಿಬ್ಬರ ಮಧ್ಯೆ ನಿಜವಾದ ಕಮಿಟ್ಮೆಂಟ್ ಇರ್ಲೇ ಇಲ್ಲ. ಅದಾಗಲೇ ಹಲವಾರು ಪುರುಷರ ಜೊತೆ ಹೋಗಿದ್ದೆ. ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದೆ. ಆದರೆ, ರಣವೀರ್ ಸಿಂಗ್ ಅಷ್ಟು ಎಗ್ಸೈಟಿಂಗ್ ಎಂದು ಯಾರೂ ಅನಿಸಲಿಲ್ಲ. ರಣವೀರ್ ಪ್ರಪೋಸ್ ಮಾಡುವವರೆಗೂ ನಮ್ಮ ಮಧ್ಯೆ ಕಮಿಟ್ಮೆಂಟ್ ಇರಲಿಲ್ಲ’ ಎಂದಿದ್ದರು.
ಹೆಣ್ಣೆಂದರೆ 'ಅನಿಮಲ್' ನಿರ್ದೇಶಕನ ದೃಷ್ಟಿಯಲ್ಲಿ ಹೀಗಂತೆ! ಯಾವುದ್ರಿಂದ ಹೊಡಿಬೇಕು ನಿಂಗೆ ಕೇಳ್ತಿದ್ದಾರೆ ನೆಟ್ಟಿಗರು
ಇಷ್ಟೇ ಅಲ್ಲದೇ, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದ್ದೆ ಎಂದರು. ಇದನ್ನು ಕೇಳಿ ರಣವೀರ್ ಕಿಡಿಕಿಡಿಯಾದರು. ಪತ್ನಿಗೆ ಬುದ್ಧಿ ಕಲಿಸಲು ಪ್ರಶ್ನೆಯೊಂದಕ್ಕೆ ನಾನು ಮೂರು ಜನರನ್ನು ಭೇಟಿಯಾಗಿ ಬರುತ್ತಿದ್ದೆ ಎಂದರು. ಆಗ ದೀಪಿಕಾ ಯಾರು ಅವರು ಎಂದು ಅಚ್ಚರಿಯಿಂದ ಕೇಳಿದಾಗ, ರಣವೀರ್, ‘ನಾನು ಇತರರನ್ನು ಭೇಟಿ ಮಾಡುತ್ತಿದ್ದೆ ಮತ್ತೆ ಮರಳಿ ರಣವೀರ್ ಬಳಿ ಬರುತ್ತಿದೆ ಎಂದು ಈಗತಾನೇ ನೀನು ಹೇಳಿದೆ. ಈಗ ಅದು ನೆನಪಿಲ್ಲವೇ? ನನ್ನನ್ನೇ ಪ್ರಶ್ನೆ ಮಾಡ್ತಿಯಾ ಎಂದರು. ತಾವು ಹೇಳಿದ್ದು ನೆನಪೇ ಇಲ್ಲ ಎಂದರು ಪ್ರಿಯಾಂಕಾ. ಆಗ ರಣವೀರ್ ನನಗೆ ಚೆನ್ನಾಗಿ ನೆನಪಿದೆ ಎಂದು ಕಿಡಿಕಿಡಿಯಾಗುತ್ತಲೇ ಹೇಳಿದ್ರು.
ಈ ಘಟನೆ ಬಳಿಕ ಕರಣ್ ಷೋ ಕುರಿತು ಸಾಕಷ್ಟು ಟ್ರೋಲ್ ಆಗಿತ್ತು. ಕರಣ್ ಅವರಿಗೂ ಅಸಂಬಂಧ ಪ್ರಶ್ನೆ ಕೇಳಿದ್ದಾರೆ ಎನ್ನಲಾಗಿತ್ತು. ಈ ಮಾತನ್ನು ಕೇಳಿ ಒಳಗೊಳಗೇ ಕುದಿಯುತ್ತಿದ್ದ ಕರಣ್ ಜೋಹರ್ ಅವರು, ಇನ್ನೊಂದು ಷೋನಲ್ಲಿ ಆ ಆಕ್ರೋಶವನ್ನು ಹೊರಹಾಕಿದ್ದಾರೆ. ತಮ್ಮ ಷೋ ಆಗಮಿಸಿದ್ದ ನಟರಾದ ಆದಿತ್ಯ ರಾಯ್ ಕಪೂರ್ ಹಾಗೂ ಅರ್ಜುನ್ ಕಪೂರ್ ಸಂದರ್ಶನದ ಸಮಯದಲ್ಲಿ ಕರಣ್ ಟ್ರೋಲ್ ವಿಚಾರ ಮಾತನಾಡಿದ್ದಾರೆ. ‘ಅದು ನಮ್ಮ ಅತ್ಯುತ್ತಮ ಎಪಿಸೋಡ್ಗಳಲ್ಲಿ ಒಂದಾಗಿದೆ. ರಣವೀರ್ ಮತ್ತು ದೀಪಿಕಾ ಇಬ್ಬರೂ ಪ್ರಾಮಾಣಿಕರಾಗಿದ್ದರು, ಶ್ರದ್ಧೆಯಿಂದ ಇದ್ದರು ಮತ್ತು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಆದರೆ, ಅವರ ಬಗ್ಗೆ ನೀವು ಅಸಂಬದ್ಧವಾಗಿ ಮಾತನಾಡಿದಿರಿ. ವ್ಯಕ್ತಿಯ ವೈಯಕ್ತಿಕ ಜೀವನ ಮತ್ತು ಮದುವೆಯ ಬಗ್ಗೆ ನಿಮಗೆ ಏನು ತಿಳಿದಿದೆ ಎಂದು ಪ್ರಶ್ನಿಸಿದ ಕರಣ್ ಅವರು, ನಿಮ್ಮ ಮನೆಯನ್ನು ನೀವು ನೋಡಿಕೊಳ್ಳಿ. ಇಂಥವರಿಗೆ ನಾನು ಮಧ್ಯ ಬೆರಳು ತೋರಿಸುತ್ತೇನೆ ಎನ್ನುವ ಮೂಲಕ ಮಧ್ಯ ಬೆರಳು ತೋರಿಸಿದ್ದಾರೆ.
ಪತಿಯ ಪ್ರೋತ್ಸಾಹದಿಂದ ಬೆತ್ತಲಾಗಿ ಸೆಕ್ಸ್ ಸೀನ್ ಆರಾಮಾಗಿ ಮಾಡಿದೆ: ಲಸ್ಟ್ ಸ್ಟೋರಿಸ್ ನಟಿ ಅಮೃತಾ ಸುಭಾಷ್!
ಈ ಅಸಭ್ಯ ವರ್ತನೆಯಿಂದ ಈಗ ಮತ್ತಷ್ಟು ಕರಣ್ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ರಣವೀರ್ ಸಿಂಗ್ ಅವರು ದೀಪಿಕಾನ ಭೇಟಿ ಮಾಡಿದ್ದು 2012ರಲ್ಲಿ. ಸಂಜಯ್ ಬನ್ಸಾಲಿ ನಿರ್ದೇಶನದ ‘ರಾಮ್ಲೀಲಾ’ ಚಿತ್ರದಲ್ಲಿ ರಣವೀರ್ ಸಿಂಗ್ಗೆ ಜೊತೆಯಾಗಿ ಕರೀನಾ ಕಪೂರ್ ಅವರು ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಕರೀನಾ ಸಿನಿಮಾದಿಂದ ಹೊರ ನಡೆದರು. ಆಗ, ದೀಪಿಕಾ ಹೆಸರನ್ನು ಫೈನಲ್ ಮಾಡಲಾಯಿತು. 2012ರಿಂದಲೇ ಇಬ್ಬರೂ ಡೇಟಿಂಗ್ ಶುರು ಹಚ್ಚಿಕೊಂಡಿದ್ದರು. ರಣವೀರ್ ಸಿಂಗ್ ಅವರು ಗಂಭೀರವಾಗಿ ಪ್ರೀತಿಯಲ್ಲಿದ್ದರು. ಆದರೆ, ದೀಪಿಕಾ ಆ ರೀತಿ ಇರಲಿಲ್ಲ ಎನ್ನಲಾಗಿದೆ. ‘ರಾಮ್ ಲೀಲಾ’ ರಿಲೀಸ್ ಆದ ಬಳಿಕ ರಣವೀರ್ ಸಿಂಗ್ ಅವರು ದೀಪಿಕಾಗೆ ಪ್ರಪೋಸ್ ಮಾಡಿದ್ದರು. ದ್ವೀಪ ಒಂದಕ್ಕೆ ಕರೆದುಕೊಂಡು ಹೋಗಿ ರಿಂಗ್ ನೀಡಿ ರಣವೀರ್ ಮದುವೆ ಪ್ರಪೋಸಲ್ ಇಟ್ಟಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಇವರು ಮದುವೆ ಆದರು. ದೂರದ ಇಟಲಿಯಲ್ಲಿ ಈ ಜೋಡಿ ಮದುವೆ ಆಯಿತು.