KGF Chapter 2: 39 ದಿನದಲ್ಲಿ ಗಳಿಸಿದ್ದೆಷ್ಟು? ಹಲವು ದಾಖಲೆಗಳು ಉಡೀಸ್

Published : May 23, 2022, 02:31 PM IST
KGF Chapter 2: 39 ದಿನದಲ್ಲಿ ಗಳಿಸಿದ್ದೆಷ್ಟು? ಹಲವು ದಾಖಲೆಗಳು ಉಡೀಸ್

ಸಾರಾಂಶ

ಬಾಕ್ಸ್‌ ಆಫೀಸ್‌ನಲ್ಲಿ ಕೊಳ್ಳೆ ಮುಂದುವರೆಸಿದ ಕೆಜಿಎಫ್2 39 ದಿನದಲ್ಲಿ ಕೆಜಿಎಫ್‌ ಚಾಪ್ಟರ್ 2 ಗಳಿಸಿದ್ದೆಷ್ಟು? ಮೇ 14 ರಂದು ರಿಲೀಸ್ ಆದ ಯಶ್ ಅಭಿನಯದ ಸಿನಿಮಾ

ಯಶ್ ನಟನೆಯ ಕೆಜಿಎಫ್‌ ಚಾಪ್ಟರ್ 2 ಸಿನಿಮಾದ ಮೋಡಿ ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರೆದಿದೆ. ನಿರ್ಮಾಪಕ ಪ್ರಶಾಂತ್ ನೀಲ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಹಲವಾರು ದಾಖಲೆಗಳನ್ನು ಮುರಿದಿದೆ. ಮೇ 14 ರಂದು ತೆರೆಕಂಡ ಈ ಚಿತ್ರ ವಿಶ್ವದಾದ್ಯಂತ ಪ್ರೇಕ್ಷಕರ ಮನ ಗೆದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಯಶ್ ಅವರ ಕೆಜಿಎಫ್ 2 ವಿಶ್ವಾದ್ಯಂತ 39 ದಿನಗಳಲ್ಲಿ ಒಟ್ಟು 1221. 13 ಕೋಟಿ ರೂ. ಗಳಿಸಿದೆ.

ಯಶ್ ಅವರ ಕೆಜಿಎಫ್ 2 ಏಪ್ರಿಲ್ 14 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಇದುವರೆಗಿನ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ನಾಗಲೋಟದಿಂದ ಮುನ್ನುಗುತ್ತಿದೆ. ಈ ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಥಳಪತಿ ವಿಜಯ್ (halapathy Vijay) ಅವರ ಬೀಸ್ಟ್, ರಾಜಮೌಳಿಯವರ (Rajamouli)  RRR ಮತ್ತು ಹಲವಾರು ಇತರ ಬಾಲಿವುಡ್ (Bollywood )ಸಿನಿಮಾಗಳು ಪೈಪೋಟಿ ನೀಡಿದ್ದವು. ಆದಾಗ್ಯೂ, ಯಶ್ ಅವರ ಈ ಸಿನಿಮಾ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. 

 

ಟ್ರೇಡ್ ವಿಶ್ಲೇಷಕ (Trade analyst) ಮನೋಬಾಲಾ ವಿಜಯಬಾಲನ್ (Manobala Vijayabalan) ಅವರು ಕೆಜಿಎಫ್ ಚಾಪ್ಟರ್‌ 2 ವಿಶ್ವದಾದ್ಯಂತ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಹಣ ಗಳಿಸಿದೆ ಎಂಬುದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್‌ 2 ಸಿನಿಮಾ ವಿಶ್ವದಾದ್ಯಂತ 1221.13 ಕೋಟಿ ರೂ ಗಳಿಸಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. 

KGF Chapter 2: ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್‌ನ ಮ್ಯಾಜಿಕ್ ಹೀಗಿದೆ ನೋಡಿ

#KGFCchapter2 ಬಾಕ್ಸ್ ಆಫೀಸ್ ವಾರ 1 ರಿಂದ 5 ರಲ್ಲಿ 1210.53 ಕೋಟಿ ಗಳಿಸಿದ. ವಾರ 6 ರಲ್ಲಿ ದಿನ 1 ರಿಂದ 3.10 ಕೋಟಿ ಗಳಿಸಿದೆ. ದಿನ 2 ರಲ್ಲಿ 3.48 ಕೋಟಿ ದಿನ 3 ರಂದು 4.02 ಕೋಟಿ ಒಟ್ಟು - 1221.13 ಕೋಟಿ ಗಳಿಸಿದೆ. ಹೊಸ ಬಿಡುಗಡೆಗಳು ಮತ್ತು ಒಟಿಟಿಗಳ ಹೊರತಾಗಿಯೂ ಜನರು ಈ ಮಾಸ್ ಎಂಟರ್‌ಟೈನರ್‌ಗೆ ಆದ್ಯತೆ ನೀಡುತ್ತಿದ್ದಾರೆ ಎಂದರು. 

KGF Chapter 2: ಹಾಲಿವುಡ್‌ ಕೂಡಾ ಬೆಚ್ಚಿ ಬಿದ್ದಿದೆಯಂತೆ ರಾಕಿ ಭಾಯ್ ಸಿನಿಮಾ ನೋಡಿ!
 

ಕೆಜಿಎಫ್‌ ಚಾಪ್ಟರ್ 2 ಸಿನಿಮಾವನ್ನು ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದು, ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಯಶ್ (Yash) , ಸಂಜಯ್ ದತ್ (Sanjay Dutt), ರವೀನಾ ಟಂಡನ್ (Raveena Tandon) ಮತ್ತು ಶ್ರೀನಿಧಿ ಶೆಟ್ಟಿ (Srinidhi Shetty) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ (Ravi Basrur) ಸಂಗೀತಾ ಸಂಯೋಜನೆ ಮಾಡಿದ್ದು, ಛಾಯಾಗ್ರಾಹಕ ಭುವನ್ ಗೌಡ (Bhuvan Gowda) ಮತ್ತು ಸಂಕಲನಕಾರ ಉಜ್ವಲ್ ಕುಲಕರ್ಣಿ (Ujwal Kulkarni)  ಕೆಜಿಎಫ್‌ನ ತಾಂತ್ರಿಕ ತಂಡದ ಭಾಗವಾಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?