ಹಿಂದೇಟು ಹಾಕಿದ ಮಯೂರಿ ವೀಲ್ ಚೇರ್ ರೋಮಿಯೋನಾ ಒಪ್ಪಿಕೊಂಡಿದ್ದೇಗೆ..?

By Anusha KbFirst Published May 23, 2022, 1:15 PM IST
Highlights
  • ವೀಲ್ ಚೇರ್ ರೋಮಿಯೋ ಮೊದಲಿಗೆ ನಿರಾಕರಿಸಿದ್ದ ಮಯೂರಿ
  • ಮೇ. 27ರಂದು ರಿಲೀಸ್ ಆಗಲಿರುವ ವೀಲ್ ಚೇರ್ ರೋಮಿಯೋ

ಕೆಲವೊಂದು ಕಥೆಗಳನ್ನು ಕೇಳಿದವರು ಆ ಬಗ್ಗೆ ಬೇರೆ ರೀತಿಯಲ್ಲಿಯೇ ಯೋಚನೆ ಮಾಡಿ ರಿಜೆಕ್ಟ್ ಮಾಡುತ್ತಾರೆ. ಈ ರೀತಿ ರಿಜೆಕ್ಟ್ ಮಾಡಿದ ಹಲವು ಸಿನಿಮಾಗಳು ಹಿಟ್ ಆಗಿ ಇತಿಹಾಸದಲ್ಲಿ ಉಳಿದುಬಿಟ್ಟಿವೆ. ಸದ್ಯ ಇದೇ ತಿಂಗಳ 27ರಂದು ರಿಲೀಸ್ ಆಗಲಿರುವ ವೀಲ್ ಚೇರ್ ರೋಮಿಯೋ ಸಿನಿಮಾದ ಕಥೆಯೂ ಅದೇ ಆಗಿತ್ತು. ವೀಲ್ ಚೇರ್ ರೋಮಿಯೋ ಸಿನಿಮಾದ ಕಥೆ ವಿಭಿನ್ನವಾಗಿದೆ. ವೇಶ್ಯೆ ಮತ್ತು ವೀಲ್ ಚೇರ್ ಮೇಲೆ ಕುಳಿತುಕೊಂಡು ಜೀವನ ಸಾಗಿಸುವಂತ ಹುಡುಗನ ಮಧ್ಯೆ ಪ್ರೀತಿ ಶುರುವಾಗುವ ಕಥೆ. ನಾಯಕಿಯ  ಮತ್ತೊಂದು ತೊಂದರೆ ಎಂದರೆ ಕಣ್ಣು ಕಾಣಲ್ಲ‌. ಪ್ರೀತಿಯಾದ ಬಳಿಕ ಜೀವನ ಹೇಗೆ, ಮನೆಯವರ ಒಪ್ಪಿಗೆ ಹೀಗೆ ಅನೇಕ ಸವಾಲಿನ ನಡುವೆ ಸಿನಿಮಾ ಸಾಗುತ್ತದೆ. ಕೇಳುವುದ್ದಕ್ಕೆ ಇಷ್ಟೊಂದು ಥ್ರಿಲ್ಲಿಂಗ್ ಎನಿಸಿದರೆ, ಇನ್ನು ಸಿನಿಮಾದಲ್ಲಿ ಇನ್ನೆಷ್ಟು ಕೌತುಕತೆ ಅಡಗಿರಬೇಡ ಒಮ್ಮೆ ಯೋಚಿಸಿ.

ಈ ರೀತಿಯಾದ ತೀರಾ ವಿಭಿನ್ನ ಕಥೆಯನ್ನು ನಾಯಕಿಯರ ಮುಂದಿಟ್ಟಾಗ ರಿಜೆಕ್ಟ್ ಮಾಡಿದ ಮಂದಿಯೇ ಹೆಚ್ಚು ಜನ. ಆದರೆ ಡೈರೆಕ್ಟರ್ ನಟರಾಜ್ ತಲೆಯಲ್ಲಿ ಅಚ್ಚಾಗಿ ಕುಳಿತಿದ್ದದ್ದು ನಟಿ‌ ಮಯೂರಿ. ಕಡೆಗೆ ಈ ಸಿನಿಮಾದ ನಾಯಕಿ ಪಾತ್ರಕ್ಕೆ ಅವರ ಬಳಿಯೇ ಅನುಮತಿಗಾಗಿ ಹೋಗಲಾಗಿತ್ತು. ಸಿನಿಮಾದ ಕಥೆ ಕೇಳಿ, ಡೈಲಾಗ್ ಕೇಳಿ ಒಂದು ಕ್ಷಣ ಮಯೂರಿ ಕೂಡ ಈ ಸಿನಿಮಾ ಬೇಡ ಎಂದೇ ಹೇಳಿದ್ದರು. 

Rangu Raate: ಜಾಮೀನು ಸಿಗದಂತೆ ಬಂಧಿಯಾದ ವೀಲ್ ಚೇರ್ ರೋಮಿಯೋ!

ಆದರೆ ಕಡೆಗೆ ಕಥೆಯ ಆಳ ಅಗಲ ತಿಳಿದು ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟರು. ಸಿನಿಮಾ ಅಂದು ಕೊಂಡದ್ದಕ್ಕಿಂತ ಕೊಚ್ಚ ಹೆಚ್ಚಿಗೇನೆ ಅದ್ಭುತವಾಗಿ ಮೂಡಿ ಬಂದಿದೆ. ಇದಕ್ಕೆ ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಹಾಗೂ ವಿಡಿಯೋ ಸಾಂಗ್ಸ್ ಗಳೇ ಸಾಕ್ಷಿ. ನಿರ್ದೇಶಕನ ಕಥೆಗೆ ತಕ್ಕಂತೆ ರಾಮ್ ಚೇತನ್ (Ram Chetan) ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

ಅಂತಿಂಥಾ ರೋಮಿಯೋ ಅಲ್ಲವೇ ಅಲ್ಲ! ವ್ಹೀಲ್ ಚೇರ್ನಲ್ಲೇ ಕೂತು ಪ್ರೀತಿಯಲ್ಲಿ ಬೀಳಿಸ್ತಾನೆ!
ಬಿ.ಜೆ.ಭರತ್ (BJ Bharat) ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್ (Pandi Camera Work) , ವಿ ನಾಗೇಂದ್ರ ಪ್ರಸಾದ್ (V Nagendra Prasad), ಜಯಂತ್ ಕಾಯ್ಕಿಣಿ (Jayant Kaikini) ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್ (Suchendraprasad), ತಬಲ ನಾಣಿ (Tabala Nani), ರಂಗಾಯಣ ರಘು (Rangayana Raghu) ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ (Agastya Creations) ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು (Bangalore), ಮಹಾರಾಷ್ಟ್ರ (Maharashtra), ಪುಣೆಯಲ್ಲಿ (Pune) ಚಿತ್ರೀಕರಣ ನಡೆಸಲಾಗಿದೆ

 

click me!