ಹಿಂದಿಯಲ್ಲಿ 300 ಕೋಟಿ ರೂ. ಬಾಚಿದ ದಕ್ಷಿಣದ 2ನೇ ಸಿನಿಮಾ KGF 2; ಒಟ್ಟು ಕಲೆಕ್ಷನ್ ಎಷ್ಟು?

By Shruiti G KrishnaFirst Published Apr 24, 2022, 4:00 PM IST
Highlights

ಕೆಜಿಎಫ್-2 (KGF 2) ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದೆ. ಸಿನಿಮಾ ಬಿಡುಗಡೆಯಾಗಿ 10 ದಿನಗಳಲ್ಲಿ ರಾಕಿ ಭಾಯ್ ಸಿನಿಮಾ ಹಿಂದಿಯಲ್ಲಿ 300 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮತ್ತೊಂದು ದಾಖಲೆ ಮಾಡಿದೆ.

ಕೆಜಿಎಫ್-2 (KGF 2) ಬಾಕ್ಸ್ ಆಫೀಸ್ ನಲ್ಲಿ ದೂಳ್ ಎಬ್ಬಿಸಿದೆ. ಸಿನಿಮಾ ಬಿಡುಗಡೆಯಾಗಿ 10 ದಿನಗಳಲ್ಲಿ ರಾಕಿ ಭಾಯ್ ಸಿನಿಮಾ ಹಿಂದಿಯಲ್ಲಿ 300 ಕೋಟಿ ಕಲೆಕ್ಷನ್ ಮಾಡುವ ಮೂಲಕ ಮತ್ತೊಂದು ದಾಖಲೆ ಮಾಡಿದೆ. ಕೆಜಿಎಫ್-2 ಸಿನಿಮಾ ಬಿಡುಗಡೆಗೂ ಮೊದಲೇ ಅನೇಕ ದಾಖಲೆಗಳನ್ನು ಮಾಡಿತ್ತು. ಬಿಡುಗಡೆ ಬಳಿಕವೂ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಅನೇಕ ಘಟಾನುಘಟಿ ಕಲಾವಿದರ ಸಿನಿಮಾಗಳನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ. ಈಗಾಗಲೇ ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕೆಜಿಎಫ್-2 ಗಳಿಕೆ 800 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಆದರೆ ಹಿಂದಿಯಲ್ಲಿ ಯಶ್ ಸಿನಿಮಾ ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡುವ ಮೂಲಕ ಬಾಲಿವುಡ್ ಮಂದಿಯನ್ನು ಬೆಚ್ಚಿಬೀಳಿಸಿದೆ.

ಅತೀ ಕಡಿಮೆ ಅವದಿಯಲ್ಲಿ 300 ಕೋಟಿ ರೂಪಾಯಿ ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಕೂಡ ಕೆಜಿಎಫ್-2 ಗಳಿಸಿದೆ. ಬಾಕ್ಸ್ ಆಫೀಸ್ ಮಾನ್ಸ್ಟಾರ್ ಆಗಿರುವ ಕೆಜಿಎಫ್-2 ಸಿನಿಮಾವನ್ನು ಎಲ್ಲರೂ ಹಾಡಿಹೊಗಳುತ್ತಿದ್ದಾರೆ. ಹಿಂದಿಯಲ್ಲಿ 300 ಕೋಟಿ ದಾಟಿದ ಸಿನಿಮಾಗಳಲ್ಲಿ ಒಂದಾಗಿದೆ. ಹೃತಿಕ್ ರೋಷನ್ ಮತ್ತು ಜಾಕಿ ಶ್ರಾಫ್ ನಟನೆಯ ವಾರ್ ಸಿನಿಮಾ ಬಳಿಕ ಹಿಂದಿಯಲ್ಲಿ 300 ಕೋಟಿ ದಾಟಿದ ಸಿನಿಮಾ ಕೆಜಿಎಫ್-2 ಆಗಿದೆ ಎಂದು ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಹೇಳಿದ್ದಾರೆ.

Latest Videos

ಈ ಬಗ್ಗೆ ಟ್ವೀಟ್ ಮಾಡಿರುವ ರಮೇಶ್ ಬಾಲ ಹಿಂದಿಯಲ್ಲಿ ಕೆಜಿಎಫ್-2 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. 300 ಕೋಟಿ ದಾಟಿದ ದಕ್ಷಿಣ ಭಾರತದ 2ನೇ ಸಿನಿಮಾವಾಗಿದೆ. ಬಾಹುಬಲಿ-2 ಬಳಿಕ ಕೆಜಿಎಫ್-2 300 ಕೋಟಿ ಕ್ಲಬ್ ಸೇರಿದೆ.

ಆಮೀರ್ ಖಾನ್ 'ದಂಗಲ್' ಸಿನಿಮಾದ ಕಲೆಕ್ಷನ್ ಬ್ರೇಕ್ ಮಾಡಿದ 'ಕೆಜಿಎಫ್-2'

As you read this tweet, Hindi has crossed ₹300 crs Nett at the India 🇮🇳 Box office..

Sunday Morning..

Only the 2nd South language dubbed in Hindi movie, after to join the ₹ 300 crs Nett club..

10th Hindi movie to do this feat!

— Ramesh Bala (@rameshlaus)

ಸದ್ಯ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದೆ ಸದ್ದು. ಎಲ್ಲಾ ಭಾಷೆಯಲ್ಲೂ ಕೆಜಿಎಫ್-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ಗಣ್ಯರು ಸಹ ಕೆಜಿಎಫ್-2 ನೋಡಿ ಹಾಡಿಹೊಗಳಿದ್ದಾರೆ. ತೆಲುಗು ಸ್ಟಾರ್ ಅಲ್ಲು ಅರ್ಜುನ್, ರಾಮ್ ಚರಣ್, ಪ್ರಭಾಸ್, ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ಸ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಕೆಜಿಎಫ್2 ಸಿನಿಮಾದ್ದೇ ಸದ್ದು.

KGF 2 ಥಿಯೇಟರ್‌ನಲ್ಲಿ ರಿಯಲ್ ಬುಲೆಟ್ ಗನ್: ಹಾವೇರಿಯಲ್ಲಿ ಸಿನಿಮೀಯ ಘಟನೆ!

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. ವಾರದ ಬಳಿಕವೂ ಕೆಜಿಎಫ್2 ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ.

click me!