ಸುದೀಪ್ 'ವಿಕ್ರಾಂತ್ ರೋಣ' Next Level ಸಿನಿಮಾವೆಂದು ಹಾಡಿಹೊಗಳಿದ RGV

Published : Apr 24, 2022, 02:51 PM IST
ಸುದೀಪ್ 'ವಿಕ್ರಾಂತ್ ರೋಣ' Next Level ಸಿನಿಮಾವೆಂದು ಹಾಡಿಹೊಗಳಿದ RGV

ಸಾರಾಂಶ

ಅಭಿನಯ ಚಕ್ರವರ್ತಿ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಕೆಲವು ಫೂಟೇಜ್ ನೋಡಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಹಾಡಿಹೊಗಳಿದ್ದಾರೆ. ಇದು ನೆಕ್ಸ್ಟ್ ಲೆವೆಲ್ ಸಿನಿಮಾ. ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಸದ್ಯ ವಿಕ್ರಾಂತ್ ರೋಣ(Vikrant Rona) ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಕ್ರಾಂತ್ ರೋಣ ಜುಲೈ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚಿಗಷ್ಟೆ ಅಂದರೆ ಯುಗಾದಿ ಹಬ್ಬದಲ್ಲಿ ಬಿಡುಗಡೆಯಾದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಅಭಿನಯ ಚಕ್ರವರ್ತಿ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಕೆಲವು ಫೂಟೇಜ್ ನೋಡಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಹಾಡಿಹೊಗಳಿದ್ದಾರೆ.

ಈ ಬಗ್ಗೆ ರಾಮ್ ಗೋಪಾಲ್ ವರ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 'ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕೆಲವು 3ಡಿ ಫೂಟೇಜ್ ನೋಡುವ ಭಾಗ್ಯ ಸಿಕ್ಕುತ್ತು. ಇದು ನೆಕ್ಸ್ಟ್ ಲೆವೆಲ್ ಸಿನಿಮಾ. ಅದ್ಭುತವಾಗಿದೆ. ಜುಲೈ 28ರಂದು ಬರ್ತಿರುವ ಈ ಸಿನಿಮಾವನ್ನು ನೋಡಲು ನಾನು ಕಾಯುತ್ತಿದ್ದೀನಿ' ಎಂದು ಹೇಳಿದ್ದಾರೆ. RGV ಟ್ವೀಟ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ.

ಇನ್ನು ರಾಮ್ ಗೋಪಾಲ್ ವರ್ಮ ಅವರ ಟ್ವೀಟ್ ಶೇರ್ ಮಾಡಿ ನಿರ್ದೇಶಕ ಅನೂಪ್ ಭಂಡಾರಿ ಸಹ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ರಾಮ್ ಗೋಪಾಲ್ ವರ್ಮ ಇತ್ತೀಚಿಗಷ್ಟೆ I am R ಸಿನಿಮಾ ಟೈಟಲ್ ಬಿಡುಗಡೆಗೆ ಬೆಂಗಳೂರಿಗೆ ಆಗಮಿಸಿದ್ದರು. I am R ಸಿನಿಮಾಗೆ ರಾಮ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುತ್ತಿದ್ದು ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಟೈಟಲ್ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಹರಿಸಿದರು. ಟೈಟಲ್ ಬಿಡುಗಡೆ ವೇಳೆ ಮಾತನಾಡಿದ್ದ ಸುದೀಪ್ ತನ್ನ ವೃತ್ತಿ ಬದುಕಿನಲ್ಲಿ ಕೆಲವು ನಿರ್ದೇಶಕರು ಪ್ರಭಾವ ಬೀರಿದ್ದಾರೆ ಎಂದು ಹೇಳಿದರು. ಇಲ್ಲಿಂದ ತನ್ನನ್ನು ಕರೆದುಕೊಂಡು ಹೋಗಿ ಮುಂಬೈಗೆ ಪರಿಚಯಿಸಿ ಅಲ್ಲಿಂದ ನನ್ನ ಬದುಕನ್ನು ಬೇರೆ ರೀತಿ ಬದಲಾಗುವಂತೆ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎಂದು ಸುದೀಪ್ ಹೆಮ್ಮೆಯಿಂದ ಹೇಳಿದರು.


ನೀವು ತುಂಬಾ ಸಾತ್ವಿಕರಾಗಬೇಡಿ, ನಿಮ್ಮ ತಂಟೆಗೆ ಬಂದವರನ್ನ ಸುಮ್ಮನೆ ಬಿಡಬೇಡಿ: ಜಗ್ಗೇಶ್

 

ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ

ಗುಮ್ಮದ ಕಥೆಯಿಂದ ಪ್ರಾರಂಭವಾಗುವ ಟೀಸರ್ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಅಂದಹಾಗೆ ವಿಕ್ರಾಂತ್ ರೋಣ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಚಿತ್ರದಲ್ಲಿ ಕಿಚ್ಚ ಸುದೀಪ್ ನಾಯಕನಾಗಿ ಮಿಂಚಿದ್ರೆ, ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಅನೇಕರು ನಟಿಸಿದ್ದಾರೆ. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ.

'ವಿಕ್ರಾಂತ್ ರೋಣ' ಟೀಸರ್ ಡೈಲಾಗ್‌ನಲ್ಲಿ RCB ತಂಡದ ಗ್ಲೆನ್ ಮ್ಯಾಕ್ಸ್ವೆಲ್ ..!

ಚಿತ್ರದ ಮತ್ತೊಂದು ವಿಶೇಷ ಎಂದರೆ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಲುಕ್ ಈಗಾಗಲೇ ವೈರಲ್ ಆಗಿದೆ. ಕಿಚ್ಚ ಮತ್ತು ಜಾಕ್ವೆಲಿನ್ ಕಾಂಬಿನೇಷನ್ ಹಾಡು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನು ಚಿತ್ರಕ್ಕೆ ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?