ನಟ ಅನುಪಮ್ ಖೇರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೆಯಲ್ಲ ತನ್ನ ತಾಯಿ ಕೊಟ್ಟಿದ್ದ ವಿಶೇಷ ಗಿಫ್ಟ್ ಅನ್ನು ಮೋದಿಗೆ ನೀಡಿದ್ದಾರೆ. ಪ್ರಧಾನಿ ಮೋದಿಯನ್ನು ಭೇಟಿಯಾದ ಬಗ್ಗೆ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್(Anupam Kher) ಸದ್ಯ ಕಾಶ್ಮೀರ್ ಫೈಲ್ಸ್(Kashmi Files) ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಸೂಪರ್ ಸಕ್ಸಸ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಚಿತ್ರಪ್ರೇಕ್ಷಕರು ಮಾತ್ರವಲ್ಲದೆ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಗಣ್ಯರು ಸಹ ಹಾಡಿ ಹೊಗಳಿದ್ದಾರೆ. ಅನೇಕ ರಾಜಕೀಯ ನಾಯಕರು ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ( PM Narendra Modi) ಸಹ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು.
ಇದೇ ಖುಷಿಯಲ್ಲಿ ತೇಲುತ್ತಿರುವ ನಟ ಅನುಪಮ್ ಖೇರ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಅಷ್ಟೆಯಲ್ಲ ತನ್ನ ತಾಯಿ ಕೊಟ್ಟಿದ್ದ ವಿಶೇಷ ಗಿಫ್ಟ್ ಅನ್ನು ಮೋದಿಗೆ ನೀಡಿದ್ದಾರೆ. ಪ್ರಧಾನಿ ಮೋದಿಯನ್ನು ಭೇಟಿಯಾದ ಬಗ್ಗೆ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಕಠಿಣ ಶ್ರಮಕ್ಕೆ ಧನ್ಯವಾದ ತಿಳಿಸಿದ್ದಾರೆ. ಮೊದಲ ಫೋಟೋದಲ್ಲಿ ಮೋದಿ ಮತ್ತು ಅನುಪಮ್ ಖೇರ್ ಇಬ್ಬರು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಎರಡನೇ ಫೋಟೋದಲ್ಲಿ ಮೋದಿಗೆ ವಿಶೇಷ ಉಡುಗೊರೆ ನೀಡುತ್ತಿದ್ದಾರೆ.
ಅಂದಹಾಗೆ ನಟ ಅನುಪಮ್ ಖೇರ್ ಮೋದಿ ಅವರಿಗೆ ನೀಡಿದ ವಿಶೇಷ ಉಡುಗೊರೆ ಏನಿರಬಹುದು ಎನ್ನುವ ಪ್ರಶ್ನೆ ಕಾಡುತ್ತಿದಿಯಾ, ಅನುಪಮ್ ಖೇರ್ ತಾಯಿ ಕೊಟ್ಟ ರುದ್ರಾಕ್ಷಿ ಮಾಲೆವನ್ನು ಪ್ರಧಾನಿ ನರೇಂದ್ರ ಮೋದಿಗೆ ನೀಡಿದ್ದಾರೆ. ಇಬ್ಬರು ಭೇಟಿಯಾಗಿದ್ದು ಮೋದಿಯವರ ಅಧಿಕೃತ ಲೋಕ ಕಲ್ಯಾಣ ನಿವಾಸದಲ್ಲಿ. ಪ್ರಧಾನಿ ಮೋದಿ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿ, 'ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರೆ ಇಂದು ನಿಮ್ಮನ್ನು ಭೇಟಿಯಾಗಿ ಮನಸ್ಸು ಮತ್ತು ಆತ್ಮ ಎರಡು ಸಂತೋಷವಾಯಿತು. ನೀವು ದೇಶ ಮತ್ತು ದೇಶವಾಸಿಗಳಿಗೆ ಹಗಲಿರುಳು ಮಾಡುತ್ತಿರುವ ಕಠಿಣ ಪರಿಶ್ರಮಕ್ಕೆ ಧನ್ಯವಾದ ಹೇಳಲು ಅವಕಾಶ ಸಿಕ್ಕಿತು' ಎಂದು ಬರೆದುಕೊಂಡಿದ್ದಾರೆ.
Kashmir Files ನೋಡಿ ಸಲ್ಮಾನ್ ಹೇಳಿದ್ದೇನು ಎಂದು ಬಹಿರಂಗ ಪಡಿಸಿದ ನಟ ಅನುಪಮ್ ಖೇರ್
'ನಿಮ್ಮನ್ನು ಸದಾ ರಕ್ಷಿಸಲು ನನ್ನ ತಾಯಿ ಕಳುಹಿಸಿದ ರುದ್ರಾಕ್ಷ ಮಾಲೆಯನ್ನು ನೀವು ಸ್ವೀಕರಿಸಿದ ಗೌರವವನ್ನು ನಾನು ಮತ್ತು ನನ್ನ ತಾಯಿ ಯಾವಾಗಲು ನೆನಪಿಸಿಕೊಳ್ಳುತ್ತೇವೆ. ನಿಮ್ಮ ಮೇಲೆ ದೇವರ ಆಶೀರ್ವಾದ ಯಾವಾಗಲು ಇರಲಿ. ಹೀಗೆ ನಮ್ಮೆಲ್ಲರಿಗೂ ಶಕ್ತಿಯನ್ನು ನೀಡುತ್ತೀರಿ. ಜೈ ಹಿಂದ್ ಎಂದು' ಹೇಳಿದ್ದಾರೆ.
ಅನುಪಮ್ ಖೇರ್ ಪೋಸ್ಟ್ ಅನ್ನು ಪ್ರಧಾನಿ ಮೋದಿ ಶೇರ್ ಮಾಡಿ, ಪ್ರತಿಕ್ರಿಯೆ ನೀಡಿದ್ದಾರೆ. 'ತುಂಬಾ ಧನ್ಯವಾದಗಳು ಅನುಪಮ್ ಖೇರ್ ಜೀ. ನಿಮ್ಮ ಗೌರವಾನ್ವಿತ ಮಾತಾಜಿ ಮತ್ತು ದೇಶವಾಸಿಗಳ ಆಶೀರ್ವಾದವಿದೆ. ಇದು ಭಾರತ ಸೇವೆಗಾಗಿ ನನ್ನನ್ನು ನಿರಂತರವಾಗಿ ಪ್ರೇರೇಪಿಸುತ್ತಿದೆ' ಎಂದು ಟ್ವೀಟ್ ಮಾಡಿದ್ದಾರೆ.
बहुत-बहुत धन्यवाद जी। यह आदरणीया माताजी और देशवासियों का आशीर्वाद ही है, जो मुझे मां भारती की सेवा के लिए निरंतर प्रेरित करता रहता है। https://t.co/6hFfd7ivmJ
— Narendra Modi (@narendramodi)ಕಾಶ್ಮೀರ್ ಫೈಲ್ಸ್: ಚಿತ್ರ ನೋಡಿ ಕಂಬನಿ ಮಿಡಿದ ಅನುಪಮ್ ಖೇರ್ ತಾಯಿ !
ಅನುಪಮ್ ಖೇರ್ ಕಾಶ್ಮೀರ್ ಫೈಲ್ಸ್ ಸಿನಿಮಾದ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದರು. ವಿವೇಕ್ ಅಗ್ನಿಹೋತ್ರಿ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. 1990ರ ದಶಕದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ವಲಸೆ ಬಗ್ಗೆ ಇರುವ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳು ಮಾತ್ರವಲ್ಲದೆ ಬಹುತೇಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಮಾರ್ಚ್ 11ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.