KGF 2 ಮೊದಲ ದಿನ 134.5 ಕೋಟಿ ರೂ.ಗಳಿಕೆ; ಬಾಲಿವುಡ್ ಇತಿಹಾಸದಲ್ಲೇ ದಾಖಲೆ ಬರೆದ ರಾಕಿ ಭಾಯ್

By Shruiti G Krishna  |  First Published Apr 15, 2022, 4:03 PM IST

ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್-2 ಮೊದಲ ದಿನ ಭರ್ಜರಿ ಗಳಿಕೆ ಮಾಡಿದೆ. ಭಾರತದಲ್ಲಿ ಕೆಜಿಎಫ್-2 134 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್ ಇತಿಹಾಸದಲ್ಲೇ ಕೆಜಿಎಫ್-2 ದಾಖಲೆ ಗಳಿಕೆ ಮಾಡಿದೆ. 


ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದು ಸಂಭ್ರಮಿಸುತ್ತಿದೆ. ವಿಶ್ವದಾದ್ಯಂತ ಕೆಜಿಎಫ್-2 ಸಿನಿಮಾದೇ ಸದ್ದು. ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಕೆಜಿಎಫ್2 ಏಪ್ರಿಲ್ 14ರಂದು ಅದ್ದೂರಿಯಾಗಿ ತೆರೆಗೆ ಬಂದಿದ್ದು ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳು ಭರ್ಜರಿ ಸ್ವಾಗತ ಮಾಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಕೆಜಿಎಫ್-2 ಮೊದಲ ದಿನ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್(KGF 2 box office collection) ಮಾಡಿದೆ. ಅದರಲ್ಲೂ ಹಿಂದಿ ಭಾಗದಲ್ಲಿ ಕೆಜಿಎಫ್2 ದಾಖಲೆ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ಮಂದಿಗೆ ಶಾಕ್ ನೀಡಿದೆ.

ದೇಶದಾದ್ಯಂತ ಕೆಜಿಎಫ್-2 ಸಿನಿಮಾ ಸಂಭ್ರಮಾಚರಣೆ ನಡೆಯುತ್ತಿದೆ. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಇಡೀ ಸಿನಿಮಾತಂಡ ಸಂತಸದಲ್ಲಿದೆ. ಅಂದಹಾಗೆ ಕೆಜಿಎಫ್-2 ಸಿಮಾದ ಕ್ರೇಜ್ ಮತ್ತು ಅಭಿಮಾನಿ ಸಾಗರ ನೋಡಿದ ಮೇಲೆ ಮೊದಲ ದಿನದ ಕಲೆಕ್ಷನ್ ಎಷ್ಟು ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು. ಇದೀಗ ಸಿನಿಮಾತಂಡ ಅಧಿಕೃತ ಮಾಹಿತಿ ಬಹಿರಂಗ ಪಡಸಿದೆ. ಹೊಂಬಾಳೆ ಫಿಲ್ಸ್ಮ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕಲೆಕ್ಷನ್ ವರದಿ ಬಹಿರಂಗ ಪಡಿಸಿದೆ.

Tap to resize

Latest Videos

ಅಂದಹಾಗೆ ಕೆಜಿಎಫ್-2 ಸಿನಿಮಾ ಮೊದಲ ದಿನ ಭಾರತದಲ್ಲಿ ಬರೋಬ್ಬರಿ 134.5 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಭಾರತದ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಗಳಿಕೆಯಾಗಿದೆ. ದೊಡ್ಡ ಮಟ್ಟದ ಗಳಿಕೆ ಮಾಡಲಿದೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಅದರಂತೆ ಸಿನಿಮಾ ಮೊದಲ ದಿನವೇ ಉತ್ತಮ ಕಮಾಯಿ ಮಾಡಿದೆ. ಅದರಲ್ಲೂ ಹಿಂದಿ ಭಾಗದಲ್ಲಿ ಕೆಜಿಎಫ್-2 ದಾಖಲೆ ಗಳಿಕೆ ಮಾಡಿದೆ. ಈ ಬಗ್ಗೆ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ. ಕೆಜಿಎಫ್-2 ಹಿಂದಿಯಲ್ಲಿ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಹೃತಿಕ್ ರೋಷನ್ ನಟನೆಯ ವಾರ್ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡಿದೆ.

This is the biggest national issue now! ⚠️

Thank you, everyone ❤️ pic.twitter.com/5NWmHKZqBw

— Hombale Films (@hombalefilms)


KGF 2 ಅಬ್ಬರದ ನಡುವೆ ವಿಜಯ್ 'ಬೀಸ್ಟ್' ಸಿನಿಮಾ ಗಳಿಸಿದೆಷ್ಟು?

 

ಅಂದಹಾಗೆ ಕೆಜಿಎಫ್-1 ಹಿಂದಿಯಲ್ಲಿ 44.9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೀಗ ಮೊದಲ ಭಾಗದ ದಾಖಲೆಯನ್ನು ಮುರಿದು ಮುನ್ನುಗ್ಗಿದೆ. ಹಿಂದಿ ಭಾಗದಲ್ಲಿ ಕೆಜಿಎಫ್-2 ಚಿತ್ರಕ್ಕೆ ಭಾರಿ ಬೇಡಿಕೆ ಇತ್ತು. ಅಭಿಮಾನಿಗಳ ಕ್ರೇಜ್ ಕೂಡ ಹಾಗೆ ಇತ್ತು. ಅದರಂತೆ ಕಲೆಕ್ಷನ್ ವಿಚಾರದಲ್ಲೂ ಭರ್ಜರಿಯಾಗಿದೆ. ಹೃತಿಕ್ ರೋಷನ್ ನಟನೆಯ ವಾರ್ ಸಿನಿಮಾ 51.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ಥಗ್ಸ್ ಆಫ್ ಹಿಂದೂಸ್ತಾನ್ ಸಿನಿಮಾ 50.57 ಕೋಟಿ ರೂ ಬಾಚಿಕೊಂಡಿತ್ತು. ಇದೀಗ ಕೆಜಿಎಫ್-2ಈ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿದೆ.

ಇಂದು 2ನೇ ದಿನ ಗುಡ್ ಫ್ರೈಡೇ ಇರುವುದರಿಂದ ಕಲೆಕ್ಷನ್ ವಿಚಾರದಲ್ಲಿ ಸಿನಿಮಾತಂಕ್ಕೆ ಪ್ಲಸ್ ಆಗಲಿದೆ. ನಾಳೆ ವೀಕೆಂಡ್ ಪ್ರಾರಂಭವಾಗುತ್ತದೆ. ಹಾಗಾಗಿ ಕೆಜಿಎಫ್2 ಮತ್ತಷ್ಟು ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್-2 ಮೊದಲ ವಾರದ ಅಂತ್ಯಕ್ಕೆ ಎಷ್ಟು ಕೋಟಿ ಬಾಚಿಕೊಳ್ಳಲಿದೆ ಎಂದು ಕಾದು ನೋಡಬೇಕು.
KGF 2 ಮೊದಲ ದಿನದ ಅಂದಾಜು ಲೆಕ್ಕಾಚಾರ; ಹಿಂದಿ ಭಾಗದಲ್ಲಿ 50 ಕೋಟಿ ರೂ.ಅಧಿಕ ಕಲೆಕ್ಷನ್

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಮತ್ತು ಸಂಜಯ್ ದತ್ ನಟನೆ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಆಕ್ಷನ್ ದೃಶ್ಯ, ಸಂಗೀತ ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. 2ನೇ ದಿನವು ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

click me!