ನಟಿ ಪೂಜಾ ಹೆಗ್ಡೆ ತೆಲುಗಿನ ಎಫ್ -3 ಸಿನಿಮಾದಲ್ಲಿ ಐಟಂ ಡಾನ್ಸ್ ಮಾಡಲು ಭರ್ಜರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಪೂಜಾ ಹೆಗ್ಡೆ ವೆಂಕಟೇಶ್ ದಗ್ಗುಬಾಟಿ ಮತ್ತು ವರುಣ್ ತೇಜ್ ನಟನೆಯ ಸಿನಿಮಾದಲ್ಲಿ ಪೂಜಾ ಹೆಗ್ಡೆ ಐಟಂ ಡಾನ್ಸ್ ಮಾಡುತ್ತಿದ್ದಾರೆ.
ಬಹುಭಾಷಾ ನಟಿ ಪೂಜಾ ಹೆಗ್ಡೆ(Pooja Hegde) ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದಕ್ಷಿಣದ ಸ್ಟಾರ್ ನಟನ ಜೊತೆ ತೆರೆಹಂಚಿಕೊಳ್ಳುತ್ತಿರುವ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಇತ್ತೀಚಿಗಷ್ಟೆ ವಿಜಯ್(Vijay) ನಟನೆಯ ಬೀಸ್ಟ್(Beast) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಪೂಜಾ ಹೆಗ್ಡೆ ಇದೀಗ ಸಂಭಾವನೆ ಏರಿಸಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ನಟಿ ಪೂಜಾ ಹೆಗ್ಡೆ ಐಟಂ ಹಾಡೊಂದಕ್ಕೆ ಹೆಜ್ಜೆ ಭಾರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಸಿನಿಮಾರಂಗ ಎರಡೂ ಕಡೆ ಬ್ಯಾಲೆನ್ಸ್ ಮಾಡುತ್ತಿರುವ ನಟಿ ಪೂಜಾ ಹೆಗ್ಡೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗಾಗಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪೂಜಾ ಹೆಗ್ಡೆ ಇದೀಗ ಮತ್ತೊಂದು ಬಹುನಿರೀಕ್ಷೆಯ ಸಿನಿಮಾದಲ್ಲಿ ಐಟಂ ಹಾಡು ಮಾಡಲು ಸಜ್ಜಾಗಿದ್ದಾರೆ. ತೆಲುಗು ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಪೂಜಾ ಭರ್ಜರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದಹಾಗೆ ಪೂಜಾ ಐಟಂ ಡಾನ್ಸ್ ಮಾಡುತ್ತಿರುವುದು ತೆಲುಗಿನ ಎಫ್-3 ಸಿನಿಮಾದಲ್ಲಿ.
Beast Review: ಹಿಟ್ ಆಗುತ್ತಾ, ಫ್ಲಾಪ್ ಆಗುತ್ತಾ Vijay ಮತ್ತು Pooja Hegde ಸಿನಿಮಾ?
ಅನಿಲ್ ರವಿಪುಡಿ ನಿರ್ದೇಶನದ ಎಫ್ 3 ಫನ್ ಅಂಡ್ ಫ್ರಸ್ಟ್ರೇಶನ್ ಚಿತ್ರದಲ್ಲಿ ಪೂಜಾ ಹೆಗ್ಡೆ ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ವೆಂಕಟೇಶ್ ದಗ್ಗುಬಾಟಿ ಮತ್ತು ವರುಣ್ ತೇಜ್ ನಟನೆಯ ಎಫ್-3 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಚಿತ್ರದ ಐಟಂ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಪೂಜಾ ಹೆಗ್ಡೆ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಹಾಡಿನ ಬಗ್ಗೆ ಪೂಜಾ ಸಖತ್ ಉತ್ಸುಕರಾಗಿದ್ದಾರೆ. ಅಂದಹಾಗೆ ಈ ಒಂದು ಹಾಡಿನಲ್ಲಿ ಹೆಜ್ಜೆ ಹಾಕಲು ಪೂಜಾ ಹೆಗ್ಡೆ ಬರೋಬ್ಬರಿ 1.25 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಸಿನಿಮಾತಂಡ ಕೊನೆಗೆ 1 ಕೋಟಿ ರೂಪಾಯಿಗೆ ಫೈನಲ್ ಮಾಡಿದ್ದು ಪೂಜಾ ಡೀಲ್ ಓಕೆ ಮಾಡಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಪೂಜಾ ಹೆಗ್ಡೆ ಈ ಮೊದಲು ತೆಲುಗು ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು. ಸೂಪರ್ ಹಿಟ್ ರಂಗಸ್ಥಳಂ ಸಿನಿಮಾದಲ್ಲಿ ಪೂಜಾ, ರಾಮ್ ಚರಣ್ ಜೊತೆ ಹೆಜ್ಜೆ ಹಾಕಿದ್ದರು. ಈ ಹಾಡು ಪೂಜಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಇದೀಗ ಮತ್ತೆ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಪೂಜಾ ಡಾನ್ಸ್ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.
'ದಳಪತಿ 66' ಸಿನಿಮಾಗೆ ರಶ್ಮಿಕಾಗೂ ಮೊದಲು ಆಯ್ಕೆಯಾಗಿದ್ದು ಈ ಸ್ಟಾರ್ ನಟಿ
ಎಫ್-3 ಸಿನಿಮಾದಲ್ಲಿ ನಾಯಕಿಯರಾಗಿ ತಮನ್ನಾ ಮತ್ತು ಮೆಹರಿನ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿದ್ದು ಮೇ 27ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಇನ್ನು ನಟಿ ಪೂಜಾ ಹೆಗ್ಡೆ ಬಗ್ಗೆ ಹೇಳುವುದಾದರೆ ಆಚಾರ್ಯ ಸಿನಿಮಾದಲ್ಲಿ ನಟಿಸಿದ್ದಾರೆ. ರಾಮ್ ಚರಣ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ನಟನೆಯ ಕಭಿ ಈದ್ ಕಭಿ ದಿವಾಲಿ, ರಣ್ವೀರ್ ಸಿಂಗ್ ನಟನೆಯ ಸರ್ಕಸ್ ನಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದಲ್ಲಿ ಮಹೇಶ್ ಬಾಬು ನಟನೆಯ 28ನೇ ಸಿನಿಮಾಗೆ ನಾಯಕಿಯಾಗಿ ನಟಿಸುವ ಮೂಲಕ ಎರಡನೇ ಬಾರಿ ಪ್ರಿನ್ಸ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.