ಮಾರ್ಕೆಟ್ ಮಾಫಿಯಾ ಬಯಲಿಗೆಳೆಯಲು ಹೊರಟ 'ಕನ್ನಡತಿ' ನಟ ಕಿರಣ್ ರಾಜ್

By Shruiti G Krishna  |  First Published Apr 15, 2022, 2:42 PM IST

ಕನ್ನಡತಿ ಹರ್ಷ ಎಂದೇ ಖ್ಯಾತಿಗಳಿಸಿರುವ ನಟ ಕಿರಣ್ ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಭರ್ಜರಿ ಗಂಡು ಸಿನಿಮಾಗೆ ನಿರ್ದೇಶನ ಮಾಡಿದ್ದ ಪ್ರಸಿದ್ಧ್ ಜೊತೆ ಕಿರಣ್ ರಾಜ್ ಮತ್ತೆ ಸಿನಿಮಾ ಮಾಡುತ್ತಿದ್ದು ಮಾರ್ಕೆಟ್ ಮಾಫಿಯಾ ಬಗ್ಗೆ ಇರುವ ಕಥೆಯಾಗಿದೆಯಂತೆ. 


ಕನ್ನಡತಿ ಧಾರಾವಾಹಿ(Kannadati) ಮೂಲಕ ಕನ್ನಡಿಗರ ಮನೆಮಾತಾಗಿರುವ ನಟ ಕಿರಣ್ ರಾಜ್(Kiran Raj ) ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಕಿರಣ್ ರಾಜ್ ಎನ್ನುವುದಕ್ಕಿಂತ ಕನ್ನಡತಿ ಹರ್ಷ ಎಂದೇ ಖ್ಯಾತಿಗಳಿಸಿರುವ ನಟ ಕಿರಣ್ ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ ಕಿರಣ್ ರಾಜ್ ಈಗಾಗಲೇ ಭರ್ಜರಿ ಗಂಡು ಎನ್ನುವ ಸಿನಿಮಾ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. ಆಗಲೇ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಚಿತ್ರಕ್ಕೆ ಪ್ರಸಿದ್ಧ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಭರ್ಜರಿ ಗಂಡು ಸಿನಿಮಾಗೆ ನಿರ್ದೇಶನ ಮಾಡಿದ್ದ ಪ್ರಸಿದ್ಧ್ ಇದೀಗ ಮತ್ತೆ ಕಿರಣ್ ರಾಜ್ ಜೊತೆ ಸಿನಿಮಾ ಮಾಡುತ್ತಿರುವುದು ಕುತೂಹಲ ಹೆಚ್ಚಿಸಿದೆ. ಈಗಾಗಲೇ ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಇತ್ತೀಚಿಗಷ್ಟೆ ಬಂಡಿಮಹಾಕಾಳಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿದ್ದು ಇಡೀ ಸಿನಿಮಾತಂಡ ಭಾಗಿಯಾಗಿತ್ತು. ಪ್ರಸಿದ್ಧ್ ಫಿಲ್ಮಂ ಬ್ಯಾನರ್ ನಲ್ಲಿಯೇ ಈ ಹೊಸ ಸಿನಿಮಾ ಕೂಡ ಮೂಡಿಬರುತ್ತಿದೆ. ಅಂದಹಾಗೆ ರಾಯಲ್ ಆಗಿ ಕಾಣಿಸಿಕೊಳ್ಳುವ ಕಿರಣ್ ರಾಜ್ ಈ ಸಿನಿಮಾದಲ್ಲಿ ಪಕ್ಕ ಲೋಕಲ್ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ನಗರದ ಮಾರ್ಕೆಟ್ ಮಾಫಿಯಾದ ಸುತ್ತ ನಡೆಯುವ ಸಿನಿಮಾ ಇದಾಗಿದೆ.

Kannadathi: ನಿಶ್ಚಿತಾರ್ಥ ಮಂಟಪದಲ್ಲಿ ಭುವಿ ಹರ್ಷನಿಗೆ ತೊಡಿಸಬೇಕಿದ್ದ ರಿಂಗೇ ನಾಪತ್ತೆ! ಹಿಂಗ್ಯಾಕಾಯ್ತು ಶಿವಾ..

Tap to resize

Latest Videos

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು ತನ್ನ ಪಾತ್ರದ ಬಗ್ಗೆ ವಿವರಿಸಿದ್ದಾರೆ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ ಮತ್ತು ನಮ್ಮ ದೃಷ್ಟಿಕೋನ ಹೊಂದಾಣಿಕೆಯಾಗುತ್ತದೆ ಹಾಗಾಗಿ ಮತ್ತೆ ನಮ್ಮನ್ನು ಒಟ್ಟಿಗೆ ಸೇರುವಂತೆ ಮಾಡಿದೆ. ಭರ್ಜರಿ ಗಂಡು ಚಿತ್ರದ ಮೇಲಿನ ನಮ್ಮ ಕೆಲಸದ ಆತ್ಮವಿಶ್ವಾಸ ನಮ್ಮನ್ನು ಮತ್ತೊಂದು ಬೃಹತ್ ವಿಷಯವನ್ನು ಕೊಗೆತ್ತಿಕೊಳ್ಳುವಂತೆ ಮಾಡಿದೆ. ಈ ಸಿನಿಮಾ ನಗರದ ಮಾರ್ಕೆಟ್ ಮಾಫಿಯಾ ಸುತ್ತ ನಡೆಯುವ ಕಥೆಯಾಗಿದೆ. ವಿಭಿನ್ನವಾದ ಫೈಟ್ ಚಿತ್ರದಲ್ಲಿದೆ. ಸ್ಕೇಟಿಂಗ್ ಮತ್ತು ಬೈಕ್ ಸ್ಟಂಟ್ ಇದೆ. ಜನರು ನನ್ನನ್ನು ಹಿಂದೆಂದೂ ನೋಡಿರದ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೀನಿ ಎಂದು ಹೇಳಿದ್ದಾರೆ.

ಅಂದಹಾಗೆ ನಟ ಕಿರಣ್ ರಾಜ್ ಕನ್ನಡತಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿಗಳಿಸಿದ್ದಾರೆ. ಧಾರಾವಾಹಿ ಜೊತೆಗೆ ಅವರ ಬಳಿ ಐದು ಸಿನಿಮಾಗಳು ಬಿಡುಗಡೆಗೆ ಕಾಯುತ್ತಿವೆ. ಈ ಬಗ್ಗೆ ಮಾತನಾಡಿದ ಕಿರಣ್ ರಾಜ್, ನನ್ನ ವೃತ್ತಿಜೀವನವು ಮತ್ತೆ ಪ್ರಾರಂಭವಾಗುವಂತೆ ಭಾಸವಾಗುತ್ತಿದೆ. ಏಕೆಂದರೆ ನನ್ನ ಕೊನೆಯ ಸಿನಿಮಾ 2018ರಲ್ಲಿ ಬಿಡುಗಡೆಯಾಯಿತು. ಆದರೆ ಕೊರೊನಾ ಕಾರಣದಿಂದ ತುಂಬ ತೊಂದರೆ ಅನುಭವಿಸಿದೆವು. ಹಾಗಾಗಿ ಈ ವರ್ಷ ಹೆಚ್ಚು ಸಿನಿಮಾಗಳು ಬಿಡುಗಡೆ ಹೊಂದುತ್ತವೆ ಎಂದು ಅಂದುಕೊಂಡಿದ್ದೇನೆ ಎಂದು ಹೇಳಿದರು.

ದೀಪಿಕಾ ಲವ್ಸ್ ಆನಂದ್: ದೊರೆಸಾನಿ Serialನಲ್ಲಿ ಕಚಗುಳಿ ಇಡೋ ಪ್ರೀತಿ

ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿಸಿ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ಆದರೆ ಇನ್ನು ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಅಂದಹಾಗೆ ಕಿರಣ್ ರಾಜ್ ಜೊತೆ ನಾಯಕಿಯಾಗಿ ಸುರೇಖ ನಟಿಸುತ್ತಿದ್ದಾರೆ. ಸದ್ಯದಲ್ಲೇ ಸಿನಿಮಾದ ಟೈಟಲ್ ಮತ್ತು ಉಳಿದ ತಾರಬಳಗದ ಬಗ್ಗೆ ಮಾಹಿತಿ ರಿವೀಲ್ ಮಾಡಲಿದೆ ಸಿನಿಮಾತಂಡ.

 

click me!