ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಹ ಪೂರ್ವ ಪಾರ್ಟಿಯು ಹಡಗಿನೊಳಗೆ ನಡೆಯಲಿದ್ದು, ಈ ಸಂಬಂಧ ನಿಮ್ಮ ಆಸಕ್ತಿ ಕೆರಳಿಸೋ ಎಲ್ಲ ವಿಷಯಗಳೂ ಇಲ್ಲಿವೆ. ಜೊತೆಗೆ, ಅವರು ತೆರಳಲಿರುವ ಕ್ರೂಸ್‌ನ ಒಳಾಂಗಣ ವಿಡಿಯೋ ಕೂಡಾ ಇದೆ.
ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭ ನೋಡಿ ಜಗತ್ತು ಈಗಾಗಲೇ ಅವಾಕ್ಕಾಗಿದೆ. ಇದೀಗ ಎಲ್ಲರ ಚಿತ್ತ ಅಂಬಾನಿ ಕುಟುಂಬ ಹಮ್ಮಿಕೊಂಡ ಎರಡನೇ ವಿವಾಹಪೂರ್ವ ಕ್ರೂಸ್ ಪಾರ್ಟಿಯತ್ತ ಹಬ್ಬಿದೆ.
ಈ ಕ್ರೂಸ್ ಇಟಲಿಯಿಂದ ಹೊರಟು ಸ್ವಿಜರ್‌ಲ್ಯಾಂಡ್ ತಲುಪಲಿದೆ. ಎರಡು ಅದ್ಭುತ ನೋಟ ಹೊಂದಿರುವ ದೇಶಗಳ ನಡುವೆ ನೀರಿನೊಳಗೆ ನಿಂತು ಜಗತ್ತಿನ ಎ ಲಿಸ್ಟರ್ ಸೆಲೆಬ್ರಿಟಿಗಳೆಲ್ಲ ಈ ಹಡಗಿನೊಳಗಿನ ಪಾರ್ಟಿಯಲ್ಲಿ ಭಾಗವಹಿಸಲಿದ್ದಾರೆ.
ಈ ಪಾರ್ಟಿಯಲ್ಲಿ ಸುಮಾರು 800 ಜನ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದು, ಬಾಲಿವುಡ್‌ನ ಶಾರೂಖ್ ಖಾನ್, ರಣಬೀರ್ ಕಪೂರ್‌ರಿಂದ ಹಿಡಿದು ಕ್ರಿಕೆಟಿಗರು, ಉದ್ಯಮ ದಿಗ್ಗಜರು ಮುಂತಾದವರು ಇದರಲ್ಲಿರಲಿದ್ದಾರೆ.
ಅನಂತ್- ರಾಧಿಕಾ ವಿವಾಹಕ್ಕೆ 1 ತಿಂಗಳು ಬಾಕಿ; ವಧುವಿನ ವೆಡ್ಡಿಂಗ್ ಪಾರ್ಟಿ ಡ್ರೆಸ್ ಲುಕ್ ಔಟ್!
ಬಾಹ್ಯಾಕಾಶ ಥೀಮ್‌ನ ಈ ಕ್ರೂಸ್ ಪಾರ್ಟಿಗಾಗಿ ಈಗಾಗಲೇ ಆಹ್ವಾನಿತರು ಮತ್ತು ಕುಟುಂಬಸ್ಥರು ಇಟಲಿಗೆ ತೆರಳಿದ್ದಾರೆ. ಮೇ 29ರಿಂದ ಜೂ.1ರವರೆಗೆ ನಡೆವ ಶ್ರೀಮಂತಿಕೆಯ ಈ ಪ್ರದರ್ಶನ ಜಗತ್ತನ್ನು ಬೆರಗುಗೊಳಿಸುವುದರಲ್ಲಿ ಅನುಮಾನವಿಲ್ಲ.
ಡ್ರೆಸ್ ಕೋಡ್
ಈ ಕ್ರೂಸ್‌ನ ಮೊದಲನೇ ದಿನಕ್ಕೆ ಅತಿಥಿಗಳಿಗೆ ಮೊದಲ ದಿನದ ಡ್ರೆಸ್ ಕೋಡ್ ಕ್ಲಾಸಿಕ್ ಕ್ರೂಸ್ ಅಟೈರ್ ಆಗಿದೆ. ಎರಡನೇ ದಿನ ವೆಸ್ಟರ್ನ್ ಫಾರ್ಮಲ್ಸ್ ಹಾಗೂ ಮೂರನೇ ದಿನ ಟೂರಿಸ್ಟ್ ಚಿಕ್ ಅಟೈರ್ ಆಗಿದೆ. ಅಲ್ಲದೆ ಮೇ 30ರ ರಾತ್ರಿಗೆ ರೆಟ್ರೋ ಶೈಲಿಯಲ್ಲಿ ಎಲ್ಲರೂ ಸಜ್ಜಾಗುವಂತೆ ಕೇಳಲಾಗಿದೆ. ಮೇ 31ರಂದು ಪ್ಲೇಫುಲ್ ಆಗಿ ಸಜ್ಜಾಗುವಂತೆ ಹಾಗೂ ಜೂ. 1ರಂದು ಇಟಾಲಿಯನ್ ಸಮ್ಮರ್ ಥೀಮ್ ಡ್ರೆಸ್ ಕೋಡ್ ನೀಡಲಾಗಿದೆ.
ಈ ಪಾರ್ಟಿಯು ಬಾಲಿವುಡ್ ಲವರ್‌ಗಳಿಗೆ, ಫ್ಯಾಶನ್ ಪ್ರಿಯರಿಗೆ, ಬಿಸ್ನೆಸ್ ಆಸಕ್ತರಿಗೆ, ತಿರುಗಾಟ ಚಟ ಹೊಂದಿರುವವರಿಗೆ- ಹೀಗೆ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಕಾರಣಕ್ಕೆ ಗಮನ ಸೆಳೆಯಲಿದೆ.
ಭಾವಿ ಸೊಸೆ ರಾಧಿಕಾಗೆ ದುಬೈನಲ್ಲಿ 640 ಕೋಟಿ ಮೌಲ್ಯದ ವಿಲ್ಲಾ ಉಡುಗೊರೆ ನೀಡಿದ ನೀತಾ ಅಂಬಾನಿ; ಇಲ್ಲಿವೆ ಫೋಟೋಸ್
ಫೋನ್ ಬಳಸೋ ಹಾಗಿಲ್ಲ
ಅಂದ ಹಾಗೆ, ಎಲ್ಲ ಅತಿಥಿಗಳಿಗೂ ಫೋನ್ ಬಳಸದಂತೆ ಸ್ಟ್ರಿಕ್ಟ್ ಪಾಲಿಸಿ ಇದೆ. ಅಂದ ಹಾಗೆ, ಕ್ರೂಸ್‌ನ ಮೊದಲ ವಿಡಿಯೋ ಹೊರ ಬಿದ್ದಿದ್ದು, ಇದರ ಐಶಾರಾಮಿತನ ನೋಡಿದವರನ್ನು ಹುಚ್ಚೆಬ್ಬಿಸಲಿದೆ.
600 ಸಿಬ್ಬಂದಿ
ಕ್ರೂಸ್‌ನಲ್ಲಿ ಅತಿಥಿಗಳ ಎಲ್ಲ ಬೇಕುಬೇಡಗಳನ್ನು ನೋಡಿಕೊಳ್ಳಲು 600 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಜೋಡಿಯು ಜುಲೈ 12ರಂದು ವಿವಾಹವಾಗಲಿದ್ದಾರೆ.
ಕ್ರೂಸ್ ವಿಡಿಯೋ ಇಲ್ಲಿದೆ.