ಐಪಿಎಲ್ನಲ್ಲಿ ಶಾರುಖ್ ಖಾನ್ಗಿಂತಲೂ ಹೆಚ್ಚಾಗಿ ಮಿಂಚಿದ್ದು ಅವರು ಧರಿಸಿದ್ದ ವಾಚ್! ಹಾಗಾದ್ರೆ ಅವರ ವಾಚ್ ಬೆಲೆ ಎಷ್ಟೆಂದು ಊಹಿಸಬಲ್ಲಿರಾ?
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಈಗ ಐಪಿಎಲ್ನಲ್ಲಿ ಕೆಕೆಆರ್ ತಂಡ ಗೆದ್ದ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ, ಈ ತಂಡದ ಮಾಲೀಕ ಶಾರುಖ್ ಖಾನ್. ಚೆಪಾಕ್ ಮೈದಾನದಲ್ಲಿ ನಡೆದ ಐಪಿಎಲ್ 2024ರ ಫೈನಲ್ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಕೆಕೆಆರ್, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಮೂರನೇ ಟ್ರೋಫಿ ಗೆದ್ದಿತು. ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಸನ್‌ರೈಸರ್ಸ್ ನೀಡಿದ 114 ರನ್‌ಗಳ ಸುಲಭ ಗುರಿಯನ್ನು ಕೇವಲ 10.3 ಓವರ್‌ಗಳಲ್ಲಿ ಬೆನ್ನಟ್ಟಿದ ತಂಡವು, ದಾಖಲೆಯ ಜಯಭೇರಿ ಬಾರಿಸಿತು.
ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಾರುಖ್ ಮಾಸ್ಕ್ ಧರಿಸಿಕೊಂಡೇ ಫೈನಲ್ ಮ್ಯಾಚ್ ನೋಡಲು ಬಂದಿದ್ದರು. ಅಂದಹಾಗೆ, 2008ರಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾದಾಗಿನಿಂದ ಬಾಲಿವುಡ್ ನಟ ಶಾರುಖ್ ಖಾನ್ ಕೆಕೆಆರ್ ತಂಡದ ಸಹ ಮಾಲೀಕರಾಗಿದ್ದಾರೆ. ಪ್ರತಿ ಬಾರಿಯೂ ತಂಡವನ್ನು ಹುರಿದುಂಬಿಸುವ ಶಾರುಖ್, ಫೈನಲ್‌ನಲ್ಲಿ ತಂಡದ ಗೆಲುವಿನ ನಂತರ ಆಟಗಾರರನ್ನು ತಬ್ಬಿಕೊಂಡು ಸಂಭ್ರಮಿಸಿದ್ದಾರೆ. ಮೈದಾನದಲ್ಲಿ ಗಂಭೀರ್ ಅವರನ್ನು ಅಪ್ಪಿಕೊಂಡ ಶಾರುಖ್, ಅವರ ಹಣೆಗೆ ಮುತ್ತಿಟ್ಟರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಇವುಗಳ ನಡುವೆಯೇ ಶಾರುಖ್ ಖಾನ್ ಧರಿಸಿದ ವಾಚ್ನತ್ತ ಎಲ್ಲರ ದೃಷ್ಟಿ ಹರಿಸಿದೆ.
ಮದ್ವೆಯಾಗ್ತೀಯಾ ಎಂದು ಪ್ರಿಯಾಂಕಾಗೆ ಕೇಳಿದ್ದ ಶಾರುಖ್! ಮತ್ತೆ ಮುನ್ನೆಲೆಗೆ ಬಂತು ಹಳೆಯ ಸಂಬಂಧ
ಸಾಮಾನ್ಯವಾಗಿ ಸ್ಟಾರ್ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಲೆಕ್ಕವೇ ಇಲ್ಲ ಬಿಡಿ. ಆದರೂ ಶಾರುಖ್ ಖಾನ್ ಧರಿಸಿದ ಈ ವಾಚಿನ ಬೆಲೆ ಕೇಳಿದ್ರೆ ಹೌಹಾರೋದು ಗ್ಯಾರೆಂಟಿ. ಶಾರುಖ್ ಖಾನ್ ಧರಿಸಿದ್ದ ವಾಚಿನ ಬೆಲೆ ಎಷ್ಟು ಗೊತ್ತಾ? ನಾಲ್ಕು ಕೋಟಿ 15 ಲಕ್ಷ ರೂಪಾಯಿಗಳು! ಜನಸಾಮಾನ್ಯನೊಬ್ಬ ಬಹುಶಃ ಜೀವನಪೂರ್ತಿ ನಿಯತ್ತಿನಿಂದ ದುಡಿದರೂ ಇಷ್ಟು ಮೊತ್ತವನ್ನು ನೋಡಿರಲು ಸಾಧ್ಯವಿಲ್ಲ. ಲಕ್ಷುರಿ ಲೈಫ್ಸ್ಟೈಲ್ಗೆ ಹೆಸರಾಗಿರುವ ಶಾರುಖ್ ಅಷ್ಟು ದುಬಾರಿ ಬೆಲೆಯ ವಾಚನ್ನು ಧರಿಸಿದ್ದಾರೆ. ಇವರ ವಾಚೀಗ ಸಾಮಾಜಿಕ ಜಾಲತಾಣದಲ್ಲಿ (social media) ಸಕತ್ ಸೌಂಡ್ ಮಾಡುತ್ತಿದೆ. ರಿಚರ್ಡ್ ಮಿಲ್ಲೆ ಆರ್ಎಂ 052 ಸ್ಕಲ್ ಟೈತಾನಿಯಮ್ 2012 (RICHARD MILLE RM 052 Tourbillon Skull Titanium 2012) ವಾಚು ಇದಾಗಿದ್ದು ಇದರ ಬೆಲೆ ಡಾಲರ್ನಲ್ಲಿ ಹೇಳುವುವದಾದರೆ ಐದು ಲಕ್ಷ ಡಾಲರ್, ರೂಪಾಯಿಗಳಲ್ಲಿ ಹೇಳುವುದಾದರೆ 4.15 ಕೋಟಿಗೂ ಅಧಿಕ! ಅಷ್ಟಕ್ಕೂ ಶಾರುಖ್ ಅವರ ಬಳಿ ನಾಲ್ಕು ಕೋಟಿ ರೂಪಾಯಿ ಬೆಲೆ ಬಾಳುವ ಹಲವಾರು ವಾಚ್ಗಳ ಸಂಗ್ರಹ ಇದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಇಂಟರ್‌ನ್ಯಾಷನಲ್ ಲೀಗ್ ಟಿ20 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗಲೂ ಶಾರುಖ್ ಅವರ ವಾಚಿನ ಬಗ್ಗೆ ಎಲ್ಲರ ಬಾಯಲ್ಲೂ ಮಾತೇ ಮಾತು. ಅಷ್ಟಕ್ಕೂ ಈ ವಾಚಿನ ಬೆಲೆಯನ್ನು ಖುದ್ದು ಶಾರುಖ್ ಅವರೇನೂ ಹೇಳಿಲ್ಲ. ಆಡಮಾಸ್ ಪೀಗೆ (Audemars Piguet) ಬ್ರಾಂಡ್‌ನ ಈ ದುಬಾರಿ ವಾಚಿನ ಗುಟ್ಟನ್ನು ಅವರು ರಟ್ಟು ಮಾಡಿಯೂ ಇಲ್ಲ. ಆದರೆ ಅವರ ಫ್ಯಾನ್ ಒಬ್ಬ ಈ ವಾಚ್‌ನ ಬೆಲೆಯನ್ನು ಹುಡುಕಿ ಟ್ವೀಟ್ ಮಾಡಿದ್ದರು. ರಾಯಲ್ ಓಕ್ ಪರ್ಚುವಲ್ ಕ್ಯಾಲೆಂಡರ್ (Royal Oak Perchual Calendar) ಮಾಡೆಲ್ನ ಈ ವಾಚಿನ ಬೆಲೆ ಮಾರುಕಟ್ಟೆ ದರದಲ್ಲಿ ಹೇಳುವುದಾದರೆ ಸುಮಾರು 4 ಕೋಟಿ 74 ಲಕ್ಷ 47 ಸಾವಿರ ರೂಪಾಯಿ ಎಂದು ಅವರು ಹೇಳಿದ್ದರು.
ಈ ಏಳು ಗುಣವಿದ್ದರೆ ಸುಹಾನಾ ಖಾನ್ ಜೊತೆ ಡೇಟಿಂಗ್ ಮಾಡಲು ಅಪ್ಪ ಶಾರುಖ್ ಗ್ರೀನ್ ಸಿಗ್ನಲ್!
ಈಗ ಈ ವಾಚಿನ ಬಗ್ಗೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಒಂದು ಫಂಕ್ಷನ್ಗೆ ಅಟೆಂಡ್ ಆದರೆ ಸಾಕು, ಶಾರುಖ್ ಇದಕ್ಕಿಂತಲೂ ದುಬಾರಿ ಬೆಲೆಯನ್ನು ಪಡೆಯುವಾಗ ಅವರಿಗೆ ಇದೇನು ದೊಡ್ಡ ಮೊತ್ತವಲ್ಲ ಎಂದು ಒಬ್ಬ ಕಮೆಂಟಿಗ ಹೇಳಿದರೆ, ಕಾಲು ನಿಮಿಷದ ಜಾಹೀತಾರಿಗೆ ಇವರು ಇಷ್ಟು ಸಂಭಾವನೆ ಪಡೆಯಲಿಕ್ಕೆ ಸಾಕು, ಈ ಮೊತ್ತವೇನು ಮಹಾ ಎಂದು ಇನ್ನೊಬ್ಬ ಹೇಳಿದ್ದಾನೆ. ಮತ್ತೆ ಕೆಲವರು ಶಾರುಖ್ ಕಾಲೆಳೆದಿದ್ದು, ನಿಜಕ್ಕೂ ಇದು ನಿಮ್ಮ ನಿಯತ್ತಿನ ದುಡಿಮೆಯಿಂದ ಪಡೆದದ್ದಾ ಎಂದು ಪ್ರಶ್ನಿಸಿದ್ದರೆ, ಇನ್ನು ಕೆಲವರು ಯಾರೂ ಪುಕ್ಸಟೆ ಗಿಫ್ಟ್ ಕೊಟ್ಟಿರಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಜಾಲತಾಣದಲ್ಲಿ ಶಾರುಖ್ ಅವರ ವಾಚಿನದ್ದೇ ಮಾತು.