ರಶ್ಮಿಕಾ ಮಂದಣ್ಣ ಇಂದು ಅಂದ್ರೆ ಏಪ್ರಿಲ್ 5ರಂದು 28ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರು ತಮ್ಮ ಅಭಿಮಾನಿಗಳಿಗೆ ಡಬಲ್ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಏನದು?
ನಟಿ ರಶ್ಮಿಕಾ ಮಂದಣ್ಣ ಅನಿಮಲ್ನ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಬಳಿಕ ಸಕತ್ ಫೇಮಸ್ ಆಗಿದ್ದಾರೆ. ಅದೇ ಇನ್ನೊಂದೆಡೆ ನಟ ವಿಜಯ್ ದೇವರಕೊಂಡ ಅವರ ಜೊತೆಗಿನ ಸಂಬಂಧದ ಬಗ್ಗೆ ಹಲವಾರು ತಿಂಗಳುಗಳಿಂದ ಸುದ್ದಿ ಓಡಾಡುತ್ತಲೇ ಇದೆ. ಇವರಿಗೆ ಬಾಲಿವುಡ್ನಲ್ಲಿಯೂ ಸಕತ್ ಬೇಡಿಕೆ ಬರುತ್ತಿದೆ. ಹಣ, ಹೆಸರು ಜೊತೆಗೆ ರಶ್ಮಿಕಾ ವಿವಾದಗಳಲ್ಲೂ ಸಿಲುಕಿದ್ದಾರೆ. ಕನ್ನಡವನ್ನು ಮರೆತಿದ್ದಾರೆ, ತಾವು ಹತ್ತಿ ಬಂದ ಏಣಿಯನ್ನೇ ಒದ್ದಿದ್ದಾರೆ ಎಂಬ ಆರೋಪ ರಶ್ಮಿಕಾ ಮೇಲಿದೆ. ಇದೇನೇ ಆದ್ರೂ, ಮೊದಲ ಸಿನಿಮಾಗೂ ಈಗಿನ ಚಿತ್ರಕ್ಕೂ ರಶ್ಮಿಕಾ ಸ್ಟೇಟಸ್ ಬಹಳ ಬದಲಾಗಿದೆ. 'ಕಿರಿಕ್ ಪಾರ್ಟಿ'ಯ ಸಾನ್ವಿ ಪಾತ್ರದಿಂದ 'ಮಿಷನ್ ಮಜ್ನು' ಚಿತ್ರದ ನಸ್ರೀನ್‌ವರೆಗೂ ರಶ್ಮಿಕಾ, ವಿಭಿನ್ನ ಪಾತ್ರಗಳು ಹಾಗೂ ಅನೇಕ ಸ್ಟಾರ್ ನಟರ ಜೊತೆ ನಟಿಸಿ ಹೆಸರು ಮಾಡಿದ್ದಾರೆ. ರಶ್ಮಿಕಾ ಚಿತ್ರರಂಗದಲ್ಲಿ 8 ವರ್ಷಗಳನ್ನು ಪೂರೈಸಿದ್ದಾರೆ. ಇದರ ಜೊತೆಗೇ ಇವರ ಮದ್ವೆ ಸುದ್ದಿ ಸದ್ದು ಮಾಡುತ್ತಲೇ ಇದೆ.
ಇದರ ನಡುವೆಯೇ ಇಂದು ಅಂದ್ರೆ ಏಪ್ರಿಲ್ 5 ರಶ್ಮಿಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ದಿನದಂದು ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿದ್ದಾರೆ. ಇವರ ಎರಡು ಚಿತ್ರಗಳ ಪೋಸ್ಟರ್ ಇಂದು ರಿಲೀಸ್ ಆಗಿದೆ. ಒಂದನೆಯದ್ದು ಗರ್ಲ್ಫ್ರೆಂಡ್ ಮತ್ತೊಂದು ಪುಷ್ಪಾ-2. ಅಂದಹಾಗೆ ರಶ್ಮಿಕಾ ಇಂದು ತಮ್ಮ ಹುಟ್ಟುಹಬ್ಬವನ್ನು ಅಬುದಾಬಿಯಲ್ಲಿ ಭರ್ಜರಿ ಆಚರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಡಬಲ್ ಧಮಾಕಾ ಆಗಿದೆ. ಭಾರಿ ಸದ್ದು ಮಾಡಿದ್ದ ಪುಷ್ಪಾ ಚಿತ್ರದ ಪಾರ್ಟ್-2 ಮತ್ತು ಬಹು ನಿರೀಕ್ಷಿತ ಗರ್ಲ್ಫ್ರೆಂಡ್ ಪೋಸ್ಟರ್ ಬಿಡುಗಡೆಯಾಗುವ ಮೂಲಕ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ ಈ ನ್ಯಾಷನಲ್ ಕ್ರಷ್.
ಯಶ್ ಚಿತ್ರ ಟಾಕ್ಸಿಕ್‌ಗೆ ನೋ, ಕಾರ್ತಿಕ್ ಆರ್ಯನ್‌ಗೆ ಓಕೆ ಎಂದ ತೃಪ್ತಿ ಡಿಮ್ರಿ!
Wishing the 𝒏𝒂𝒕𝒊𝒐𝒏'𝒔 𝒉𝒆𝒂𝒓𝒕𝒕𝒉𝒓𝒐𝒃 'Srivalli' aka a very Happy Birthday 🫰🏻 on April 8th 🔥 💥 Grand Release Worldwide on 15th AUG 2024.
Icon Star … pic.twitter.com/AnsbEXZqJT
ಪುಷ್ಟ-2 ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರ ತಂಡವು, "ಹುಟ್ಟುಹಬ್ಬದ ಶುಭಾಶಯಗಳು ಶ್ರೀವಲ್ಲಿ" ಎಂದು ಬರೆದಿದೆ. ಇದರಲ್ಲಿ ಹಸಿರು ಸೀರೆ, ಭಾರಿ ಚಿನ್ನದ ಒಡವೆಗಳಲ್ಲಿ ನಟಿ ಮಿರಮಿರ ಮಿಂಚುತ್ತಿದ್ದಾರೆ. ಒಂದು ಕಣ್ಣಿಗೆ ಬೆರಳನ್ನು ಇಟ್ಟು ವಿಭಿನ್ನವಾಗಿ ರಶ್ಮಿಕಾ ಪೋಸ್ ನೀಡಿದ್ದಾರೆ. ಮುಗ್ಧ ಹುಡುಗಿಯಂತಿದ್ದ ಶ್ರೀವಲ್ಲಿ ಇದೀಗ ರೆಬೆಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ನಡೆದಿದೆ ಎನ್ನಲಾಗಿದೆ. ಮೊದಲ ಭಾಗಕ್ಕಿಂತ 2ನೇ ಭಾಗ ದೊಡ್ಡದಾಗಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ. ಆಗಸ್ಟ್ 15ರಂದು ಚಿತ್ರ ಬಿಡುಗಡೆಯಾಗಲಿದೆ.
ಇನ್ನು ಗರ್ಲ್ಫ್ರೆಂಡ್ ಕುರಿತು ಹೇಳುವುದಾದರೆ, ಈ ಚಿತ್ರಕ್ಕಾಗಿ ರಶ್ಮಿಕಾ ಅವರು ಮಾರ್ಷಲ್ ಆರ್ಟ್ಸ್ ಕಲಿತಿದ್ದಾರೆ ಎನ್ನಲಾಗಿದೆ. ‘ದಿ ಗರ್ಲ್ಫ್ರೆಂಡ್’ ಎಂದ ತಕ್ಷಣ ಇದು ಅಪ್ಪಟ ಪ್ರೇಮಕಥೆಯುಳ್ಳ ಸಿನಿಮಾ ಎಂದು ಪ್ರೇಕ್ಷಕರು ಊಹಿಸುವುದು ಸಹಜ. ಆದರೆ ವಾಸ್ತವ ಆ ರೀತಿ ಇಲ್ಲವಂತೆ. ಈ ‘ದಿ ಗರ್ಲ್ಫ್ರೆಂಡ್’ ನೀವಂದುಕೊಂಡ ರೀತಿಯಲ್ಲಿ ಇಲ್ಲ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ ಅವರು ಫೈಟಿಂಗ್ ಕೂಡ ಮಾಡಲಿದ್ದಾರೆ. ಅಂದಹಾಗೆ ಇದರ ಶೂಟಿಂಗ್ ಹೈದರಾಬಾದ್ನ ಹೊರವಲಯದಲ್ಲಿ ನಡೆದಿದೆ. ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ‘ಅನಿಮಲ್’ ಸಿನಿಮಾದ ಪ್ರಮೋಷನ್ ಮಾಡಿದ ಬಳಿಕ ರಶ್ಮಿಕಾ ಮಂದಣ್ಣ ಅವರು ನೇರವಾಗಿ ‘ದಿ ಗರ್ಲ್ಫ್ರೆಂಡ್’ ಸಿನಿಮಾದ ಶೂಟಿಂಗ್ ಸೆಟ್ಗೆ ಬಂದಿದ್ದರು. ಮೊದಲ 20 ದಿನದ ಚಿತ್ರೀಕರಣದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಶೂಟ್ ಮಾಡಿರುವ ನಟಿ, ಸಾಹಸ ಮೆರೆದಿದ್ದಾರೆ. ಇದರಿಂದ ಈ ಚಿತ್ರದಲ್ಲಿ ಇವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು.
ಆರ್ವಿಜಿ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರಾದ ರೀಲ್ಸ್ರಾಣಿ ಶ್ರೀಲಕ್ಷ್ಮಿ ಲೈಂಗಿಕತೆ ಕುರಿತು ಹೀಗೊಂದು ಪಾಠ!
Her eyes smile before she does. And they speak the words that she won't 🫰🏻❤️
Introducing 🫰🏻😍
Wishing the National crush, the ever joyous & cheerful a very Happy Birthday ✨ … pic.twitter.com/850RWKE8mD