ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಣ್ಣಿಗೆ ಬಿದ್ದು ರಾತ್ರೋರಾತ್ರಿ ಸ್ಟಾರಾದ ರೀಲ್ಸ್ರಾಣಿ ಶ್ರೀಲಕ್ಷ್ಮಿ ಲೈಂಗಿಕತೆ ಕುರಿತು ಏನೆಲ್ಲಾ ಹೇಳಿದ್ದಾರೆ ಕೇಳಿ.
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಪಟ್ಟಿಯಲ್ಲಿ ರಾಮ್ ಗೋಪಾಲ್ ವರ್ಮಾ ಒಬ್ಬರಾಗಿದ್ದಾರೆ. ಶಿವ, ರಂಗೀಲಾ, ಸತ್ಯ, ರಕ್ತಚರಿತ್ರೆ ಸೇರಿದಂತೆ ಅನೇಕ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟಿದ್ದಾರೆ. ಅನೇಕ ಹೊಸ ನಾಯಕಿಯರನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ಆದರೂ ಹುಡುಗಿಯರ ವಿಷಯದಲ್ಲಿ ಸದಾ ಸುದ್ದಿಯಲ್ಲಿಯೇ ಇರುವ ನಿರ್ದೇಶಕ ಇವರು. ಇದೇ ಕಾರಣಕ್ಕೆ, ಇವರನ್ನು ಭಾರತದ ದಕ್ಷಿಣ ಚಿತ್ರರಂಗದ ವಿಚಿತ್ರ ಡೈರೆಕ್ಟರ್ ಎಂದೇ ಕರೆಯಲಾಗುತ್ತದೆ. ಕೆಲ ತಿಂಗಳ ಹಿಂದೆ 'ಆರ್‌ಜಿವಿ ಡೆನ್' ಎಂಬ ಹೊಸ ಕಚೇರಿ ತೆರೆದಿದ್ದರು. ಅಲ್ಲಿ ಸದಾ ಬಿಕಿನಿ ಸುಂದರಿ, ಚಡ್ಡಿ ಸುಂದರಿ ಎಂದೇ ಖ್ಯಾತಿಯಾಗಿದ್ದ ಅಪ್ಸರಾ ರಾಣಿಗೇ ಅವಕಾಶ ಹೆಚ್ಚಾಗಿದ್ದವು. ಕಳೆದ ಕೆಲವು ವರ್ಷಗಳಿಂದ ಹಾಟ್ ಬ್ಯೂಟಿ ಅಪ್ಸರಾ ರಾಣಿಗೋಸ್ಕರ ಕೆಲವು ಸಿನಿಮಾಗಳನ್ನು ಮಾಡಿದ್ದರು. ಆದರೆ ಇದೀಗ ಇವರ ಜೊತೆ ಕೇಳಿಬರುತ್ತಿರುವ ಹೆಸರು ಕೇರಳದ ರೀಲ್ಸ್ ರಾಣಿ ಶ್ರೀಲಕ್ಷ್ಮಿ ಸತೀಶ್.
ಇವರು ಆರ್ವಿಜಿ ಕಣ್ಣಿಗೆ ಬೀಳುತ್ತಲೇ ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ತಮ್ಮ ವಿರುದ್ಧ ಬರುತ್ತಿರುವ ನೆಗೆಟಿವ್ ಕಮೆಂಟ್ಗಳಿಗೆ ಕಿಡಿ ಕಾರಿದ್ದಾರೆ ಶ್ರೀಲಕ್ಷ್ಮಿ. ಅಷ್ಟಕ್ಕೂ ಇವರು ಈಗ ಆರಾಧ್ಯ ದೇವಿ ಎಂದು ಹೆಸರು ಬಲಾಯಿಸಿಕೊಂಡಿದ್ದಾರೆ. ತಾವು ಸಿನಿಮಾ ಗಿಟ್ಟಿಸಿಕೊಂಡಿರುವ ಕುರಿತು ಬರುತ್ತಿರುವ ನೆಗೆಟಿವ್ ಕಮೆಂಟ್ಗಳಿಗೆ ಹಾಗೂ ತಮ್ಮ ಹಾಟ್ ರೀಲ್ಸ್ಗಳನ್ನು ರಾಮ್ ಗೋಪಾಲ್ ವರ್ಮಾ ಅವರು ಹಂಚಿಕೊಳ್ಳುತ್ತಿರುವುದಕ್ಕೆ ಸಂಬಂಧಿಸಿದಂತೆ ಬರುತ್ತಿರುವ ಕಮೆಂಟ್ಗಳ ಕುರಿತು ಶ್ರೀಲಕ್ಷ್ಮಿ ಮಾತನಾಡಿದ್ದದಾರೆ. ರಾಮ್ಗೋಪಾಲ್ ವರ್ಮಾ ಅವರು ನನ್ನ ಒಪ್ಪಿಗೆ ಪಡೆದುಕೊಂಡೇ ನನ್ನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಪಾಕ್ ನಟರಿಂದ ಬಾಲಿವುಡ್ ಖಾನ್ತ್ರಯರಿಗೆ ಅಭದ್ರತೆ ಕಾಡ್ತಿದೆಯಂತೆ: ನಟಿ ಕೊಟ್ಟ ಸ್ಟೇಟ್ಮೆಂಟ್ ಏನು ನೋಡಿ...
ಅವರು ನನ್ನ ಅನುಮತಿ ಪಡೆದು ವಿಡಿಯೋ ಶೇರ್ ಮಾಡುವ ವಿಷಯ ಯಾರಿಗೂ ಗೊತ್ತಿಲ್ಲ. ನಾನು ಗ್ರಾಮೀಣ ಪ್ರದೇಶದಿಂದ ಬಂದವಳು. ಆರ್ವಿಜಿ ಅವರು ನನ್ನ ವಿಡಿಯೋ ಶೇರ್ ಮಾಡುವುದಕ್ಕೆ ಸಾಕಷ್ಟು ಕೆಟ್ಟ ರೀತಿಯಲ್ಲಿ ಮಾತನಾಡಲಾಗುತ್ತಿದೆ. ರಾಮ್ ಗೋಪಾಲ್ ವರ್ಮಾ ಹೆಣ್ಣುಬಾಕ ಎಂದೆಲ್ಲಾ ಹೇಳಲಾಗುತ್ತಿದೆ. ಇದು ಸರಿಯಲ್ಲ, ಇಂಥ ಟೀಕೆಗಳು ನನಗೆ ತುಂಬಾ ನೋವು ಉಂಟು ಮಾಡುತ್ತದೆ ಎಂದು ಶ್ರೀಲಕ್ಷ್ಮಿ ಹೇಳಿದ್ದಾರೆ. ಆರ್‌ಜಿವಿ ತುಂಬಾ ಗೌರವ ಇರುವ ವ್ಯಕ್ತಿ. ಸದಾ ನನ್ನನ್ನು ಕೇಳಿಯೇ ಎಲ್ಲಾ ಕೆಲಸ ಮಾಡಿದ್ದಾರೆ. ನನ್ನನ್ನು ಕನ್ಫರ್ಟ್ ಆಗಿ ಇರುವಂತೆ ನೋಡಿಕೊಂಡಿದ್ದಾರೆ. ತುಂಬಾ ಗೌರವ ಇರುವ ವ್ಯಕ್ತಿ ಎಂದಿರುವ ನಟಿ, ಕೇರಳಿಗರು ತಮ್ಮ ವಿರುದ್ಧ ಮಾತನಾಡುವುದಕ್ಕೆ ಆಕ್ರೋಶ ಹೊರಹಾಕುತ್ತಾ, ಕೇರಳಿಗರು ಲೈಂಗಿಕವಾಗಿ ಅಲ್ಪತೃಪ್ತರು, ಲೈಂಗಿಕ ವಿಷಯದಲ್ಲಿ ಅವರು ಬಡವರು. ಅದೇ ಕಾರಣಕ್ಕೆ ನನ್ನ ಮತ್ತು ಆರ್ವಿಜಿ ವಿರುದ್ಧ ಹೀಗೆಲ್ಲಾ ಮಾತನಾಡುತ್ತಾರೆ ಎಂದಿದ್ದಾರೆ. ಇದೇ ವೇಳೆ ನನ್ನ ದೇಹದ ಮೇಲೆ ನನಗೆ ವಿಶ್ವಾಸವಿದೆ ಎಂದೂ ಹೇಳಿದ್ದಾರೆ.
ಅಷ್ಟಕ್ಕೂ, ಸೀರೆಯುಟ್ಟು ಹಾಟ್ ರೀಲ್ಸ್ ಮಾಡುತ್ತಿದ್ದ ಶ್ರೀಲಕ್ಷ್ಮೀ ಸತೀಶ್ ಅವರು ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದಿದ್ದರು. ಆಗ ಹಳದಿ ಸೀರೆಯುಟ್ಟು, ಕೈಯಲ್ಲಿ ಕ್ಯಾಮೆರಾ ಹಿಡಿದು ಪೋಸ್ ಕೊಟ್ಟಿರುವ ಅಪರಿಚಿತ ಸುಂದರಿಯ ವಿಡಿಯೋವನ್ನು ಶೇರ್ ಮಾಡಿದ್ದ ಇವರು, Can someone tell me who she is? ಅಂತ ಪ್ರಶ್ನಿಸಿದ್ದರು. ಕೊನೆಗೂ ಈ ಹುಡುಗಿ ಯಾರು ಎಂದು ತಿಳಿದಿತ್ತು. ಈಕೆಯೇ ಕೇರಳದ ಶ್ರೀಲಕ್ಷ್ಮಿ ಸತೀಶನ್. ಈಕೆ ಮಾಡಿದ ಒಂದೇ ಒಂದು ವಿಡಿಯೋ ಆರ್ವಿಜಿ ಗಮನಕ್ಕೆ ಹೋಗಿ ಸಿನಿಮಾದಲ್ಲಿಯೂ ಈಕೆಗೆ ಅವಕಾಶ ಸಿಕ್ಕಿತು. ಸೀರೆ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದು, ಅದಕ್ಕೆ ಶ್ರೀಲಕ್ಷ್ಮೀ ಸತೀಶ್ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. "ಸೀರೆ ಒಂದು ಸುಂದರವಾದ ಉಡುಗೆ ಎಂದು ಈ ವರೆಗೂ ಎಷ್ಟೋ ಮಂದಿ ಹೇಳಿದ್ದಾರೆ. ಆದರೆ ನಾನು ಆ ಮಾತನ್ನು ನಂಬಿರಲಿಲ್ಲ. ಆದರೆ, ಈ ವಿಡಿಯೋ ನೋಡಿದ ಮೇಲೆ ಅದು ನಿಜ ಎನಿಸುತ್ತಿದೆ. ಈ ರೀಲ್ಸ್ ನೋಡಿದ ಮೇಲೆ ನಾನು ಆಕೆಯ ಸಲುವಾಗಿ ಸೀರೆ ಹೆಸರಿನ ಮಾಡಲು ನಿರ್ಧರಿಸಿದ್ದೇನೆ" ಎಂದು ಪೋಸ್ಟ್ ಹಂಚಿಕೊಂಡಿದ್ದರು ಆರ್‌ಜಿವಿ.
ಯಶ್ ಚಿತ್ರ ಟಾಕ್ಸಿಕ್‌ಗೆ ನೋ, ಕಾರ್ತಿಕ್ ಆರ್ಯನ್‌ಗೆ ಓಕೆ ಎಂದ ತೃಪ್ತಿ ಡಿಮ್ರಿ!