ತಾರಾ ಜೋಡಿಯಾಗಿರುವ ಕತ್ರಿನಾ ವಿಕ್ಕಿ ಕೌಶಲ್ ಮದುವೆಯಾಗಿ ಒಂದೂವರೆ ವರ್ಷಗಳಾಗಿದ್ದು, ಅವರ ಡಿವೋರ್ಸ್ ಸುದ್ದಿ ಸಕತ್ ಸೌಂಡ್ ಮಾಡ್ತಿದೆ. ಏನಿದು ವಿಷ್ಯ?
ಸೆಲೆಬ್ರಿಟಿಗಳು ಅದರಲ್ಲಿಯೂ ಮುಖ್ಯವಾಗಿ ಚಿತ್ರ ತಾರೆಯರೆಂದರೆ ಅವರ ಸುತ್ತಲೂ ಯಾವಾಗಲೂ ಗಾಸಿಪ್ ಗಿರಕಿ ಹೊಡೆಯುತ್ತಲೇ ಇರುತ್ತದೆ. ಮದುವೆ, ಡಿವೋರ್ಸ್, ಡೇಟಿಂಗ್ (Dating), ಅಕ್ರಮ ಸಂಬಂಧ... ಹೀಗೆ ಒಂದೇ ಎರಡೆ? ಮದುವೆಯಾಗದಿದ್ದರೆ ಮದ್ವೆ ಯಾವಾಗ ಎಂದೂ, ಮದುವೆ ಆಯ್ತು ಅಂದರೆ ಮಕ್ಕಳು ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತೆ. ಅದೇ ವಿಷಯದಲ್ಲಿ ಸದ್ಯ ನಟಿ ಕತ್ರಿನಾ ಕೈಫ್ ಸುದ್ದಿಯಲ್ಲಿದ್ದಾರೆ. 2021ರ ಡಿಸೆಂಬರ್ 9ರಂದು ಕತ್ರಿನಾ, ವಿಕ್ಕಿ ಕೌಶಲ್ ಅವರ ಜೊತೆ ಮದುವೆಯಾಗಿದ್ದಾರೆ. ಒಂದೂವರೆ ವರ್ಷಗಳಾಗುತ್ತಲೇ ಮಕ್ಕಳು ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಅದರಲ್ಲಿಯೂ ಸದ್ಯ ಬಾಲಿವುಡ್ನಲ್ಲಿ ಮದ್ವೆ, ಮಕ್ಕಳ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಅದರಂತೆಯೇ ಕತ್ರಿನಾ ಕೂಡ ಗರ್ಭಿಣಿ (Pregnant) ಎನ್ನುವ ಸುದ್ದಿ ಸದ್ಯ ಹರಿದಾಡಿತ್ತು. ಆದರೆ ಇದಕ್ಕೆ ಖುದ್ದು ಕತ್ರಿನಾ ಪ್ರತಿಕ್ರಿಯೆ ನೀಡಿದ್ದು, ಹಾರಿದಾಡುತ್ತಿರುವ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದರು. ಸದ್ಯ ನಾನು ಜೀ ಲೇ ಜರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ. ಈ ಸಿನಿಮಾ ಬಳಿಕ ಮಗುವಿನ ಬಗ್ಗೆ ಪ್ಲಾನ್ ಮಾಡಲಿದ್ದೇವೆ ಎಂದಿದ್ದರು. ಸಿನಿಮಾದ ಶೂಟಿಂಗ್ ಮುಗಿಸಿ ನಂತರ ಪ್ಲಾನ್ ಮಾಡುತ್ತೇನೆ. ಸದ್ಯ ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದರು.
ಇದೇನೋ ಸರಿ. ಆದರೆ ಇದರ ನಡುವೆಯೇ ಈ ತಾರಾ ದಂಪತಿಯ ಡಿವೋರ್ಸ್ (Divorce) ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ. ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ (Vicky Kaushal) ಡಿವೋರ್ಸ್ ಪಡೆಯಲಿದ್ದಾರಾ ಎನ್ನುವ ಪ್ರಶ್ನೆಯ ಸುದ್ದಿ ಇದಾಗಿದೆ. ಇದು ಆನ್ಲೈನ್ನಲ್ಲಿ ಚರ್ಚೆ ಹುಟ್ಟುಹಾಕಿದೆ. ಝರಾ ಹಟ್ಕೆ, ಝರಾ ಬಚ್ಕೆ ಸಿನಿಮಾದ ಪ್ರಮೋಷನ್ ವೇಳೆ ಈ ಡಿವೋರ್ಸ್ ವಿಚಾರ ಜೋರಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ವಿಕ್ಕಿ ಕೌಶಲ್ ಅವರು ನಟಿಸಿದ ಹೊಸ ಸಿನಿಮಾ ‘ಜರಾ ಹಟ್ಕೆ ಜರಾ ಬಚ್ಕೆ’ (Jara Hatke Zara Bachke) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಮದುವೆ, ಡಿವೋರ್ಸ್, ಮರು ಮದುವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಥೆ ಇದೆ. ಹಾಗಾಗಿ ಪತ್ರಕರ್ತರೊಬ್ಬರು ವಿಕ್ಕಿ ಕೌಶಲ್ (Vicky Kaushal) ಅವರಿಗೆ ಈ ರೀತಿ ನೇರವಾಗಿ ವಿಚ್ಚೇದನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಹೌದು, ಡಿವೋರ್ಸ್ ಸುದ್ದಿ ಶುರುವಾಗಿದ್ದು ಪತ್ರಕರ್ತ ಕೇಳಿದ ಆ ಒಂದು ಪ್ರಶ್ನೆಯಿಂದ.
ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ-ವಿಕ್ಕಿ ಜೋಡಿ? ಮೌನ ಮುರಿದ ಸ್ಟಾರ್ ನಟಿ
ಪತ್ರಕರ್ತನೊಬ್ಬ ವಿಕ್ಕಿ ಅವರಿಗೆ, ಒಂದು ವೇಳೆ ಕತ್ರಿನಾ ಕೈಫ್ಗಿಂತ ಒಳ್ಳೆ ಹುಡುಗಿ ಸಿಕ್ಕಿದರೆ ಅವರಿಗೆ ಡಿವೋರ್ಸ್ ಕೊಡುತ್ತೀರಾ ಎಂದು ಕೇಳಿದ್ದಾರೆ. ‘ನಮ್ಮ ದೇಶದಲ್ಲಿ ಮದುವೆಗೆ ಹಲವು ಜನ್ಮಗಳ ಸಂಬಂಧ ಇರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ನಿಮಗೆ ಕತ್ರಿನಾ ಕೈಫ್ಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ? ಕತ್ರಿನಾ ಕೈಫ್ಗೆ ಡಿವೋರ್ಸ್ ನೀಡುತ್ತೀರಾ?’ ಎಂದು ಕೇಳಲಾಯಿತು. ಇದಕ್ಕೆ ಅಲ್ಲಿಯೇ ಇದ್ದ ನಟಿ ಸಾರಾ ಅಚ್ಚರಿಯ ರಿಯಾಕ್ಷನ್ ಕೊಟ್ಟರೆ ವಿಕ್ಕಿ ಮಾತ್ರ ತಮಾಷೆಯ ಉತ್ತರ ಕೊಟ್ಟಿದ್ದಾರೆ.
‘ನೀವು ಈಗ ಏನು ಕೇಳಿದ್ದೀರಿ? ನಾನು ಮನೆಗೆ ಹೋಗಬೇಕು. ನೀವು ಎಂತಹ ಕಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಈ ವಿಷಯದಲ್ಲಿ ನಾನಿನ್ನೂ ಬಾಲಕ. ಸ್ವಲ್ಪ ದೊಡ್ಡೋನಾಗೋಕೆ ಬಿಡಿ ಎಂದಿದ್ದಾರೆ ವಿಕ್ಕಿ ಕೌಶಲ್. ಈ ಅಪಾಯಕಾರಿ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ’ ಎಂದು ಹೇಳುವ ಮೂಲಕ ಅವರು ನಗು ಚೆಲ್ಲಿದ್ದಾರೆ. ಇದು ಡೇಂಜರಸ್ ಪ್ರಶ್ನೆ ಎಂದು ನಕ್ಕ ವಿಕ್ಕಿ, ಈ ಮದುವೆ ಜನ್ಮ ಜನ್ಮದ ಮದುವೆ ಎನ್ನುವ ಮೂಲಕ ಮುಂದಿನ ಜನ್ಮದಲ್ಲೂ ಕತ್ರಿನಾ ಕೈಫ್ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.
Real Story: ಈ ಸಂಸಾರಕ್ಕೆ ಕತ್ರಿನಾ ಕೈಫ್ ವಿಲನ್! ಅಷ್ಟಕ್ಕೂ ಇವಳೇನು ಮಾಡಿದ್ಲು?
‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ವಿಕ್ಕಿ ಕೌಶಲ್ಗೆ ಜೋಡಿಯಾಗಿ ಸಾರಾ ಅಲಿ ಖಾನ್ (Sara Ali Khan) ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದಲ್ಲದೇ ಇನ್ನೂ ಹಲವು ಪ್ರಾಜೆಕ್ಟ್ಗಳಲ್ಲಿ ವಿಕ್ಕಿ ಕೌಶಲ್ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಸಿನಿಮಾ ಜೂನ್ 2ರಂದು ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ಮದುವೆ ಮುಗಿಸಿ ಹೆಚ್ಚು ಬ್ರೇಕ್ ಇಲ್ಲದೆ ಈ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದರು. ಅಂತೂ ಸಿನಿಮಾ ಪ್ರೇಕ್ಷಕರ ಮುಂದರೆ ಬರಲು ರೆಡಿಯಾಗಿದೆ. ಸಾರಾ ಅಲಿ ಖಾನ್ ಅವರು ಅಟ್ರಾಂಗಿ ರೇ ಸಿನಿಮಾದಲ್ಲಿ ಧನುಷ್ ಜೊತೆ ಕಾಣಿಸಿಕೊಂಡಿದ್ದರು. ಸಿನಿಮಾದ ಹಾಡುಗಳು ಹಿಟ್ ಆದರೂ ಈ ಮೂವಿ ಕಮರ್ಷಿಯಲ್ ಸಕ್ಸಸ್ ಎನಿಸಿಕೊಳ್ಳಲಿಲ್ಲ. ಹಾಗಾಗಿ ಈ ಚಿತ್ರ ಸಾರಾ ಅಲಿ ಖಾನ್ಗೂ ಅಗತ್ಯವಾಗಿದೆ.