ಜೈಲಲ್ಲೇ ಕುಳಿತು ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ; ಆದಿಲ್ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

Published : May 16, 2023, 12:37 PM ISTUpdated : May 16, 2023, 12:47 PM IST
ಜೈಲಲ್ಲೇ ಕುಳಿತು ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ; ಆದಿಲ್ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ

ಸಾರಾಂಶ

ಜೈಲಲ್ಲೇ ಕುಳಿತು ನನ್ನ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಎಂದು ರಾಖಿ ಸಾವಂತ್ ಪತಿ ಆದಿಲ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 

ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಮದುವೆ ವಿಚಾರವಾಗಿ ದೊಡ್ಡ ರಾದ್ದಾಂತ ಮಾಡಿಕೊಂಡಿದ್ದ ರಾಖಿ ಸಾವಂತ್ ಇದೀಗ ಮತ್ತೆ ಸದ್ದು ಮಾಡುತ್ತಿದ್ದಾರೆ. ರಾಖಿ ಸಾವಂತ್ ಕರ್ನಾಟಕದ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಜೊತೆ ಮದುವೆಯಾಗಿದ್ದರು. ಇಬ್ಬರೂ ಮದುವೆಯಾಗಿ ಅನೇಕ ತಿಂಗಳ ಬಳಿಕ ಬಹಿರಂಗ ಪಡಿಸಿದ್ದರು. ಫೋಟೋಗಳನ್ನು ಹಂಚಿಕೊಂಡಿದ್ದರು. ಮದುವೆ ವಿಚಾರ ಬಹಿರಂಗ ಪಡಿಸಿದ ಕೆಲವೇ ದಿನಕ್ಕೆ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಇಬ್ಬರೂ ದೂರ ಆದರು. ಅಷ್ಟೆಯಲ್ಲ ಆದಿಲ್ ಜೈಲು ಪಾಲಾದರು. ಆದಿಲ್ ವಿರುದ್ಧ ರಾಖಿ ಸಾವಂತ್ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಸದ್ಯ ಆದಿಲ್ ಜೈಲಿನಲ್ಲಿದ್ದಾರೆ. ಈ ನಡುವೆ ರಾಖಿ ಸಾವಂತ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಲ್ಲಿದ್ದುಕೊಂಡೆ ರಾಖಿ ತನ್ನನ್ನು ಕೊಲೆ ಮಾಡುವ ಸ್ಕೆಚ್ ಹಾಕಿದ್ದಾರೆ ಎಂದು ಹೇಳಿದ್ದಾರೆ. 

ವಿಡಿಯೋ ಮೂಲಕ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆದಿಲ್ ಖಾನ್ ಜೈಲಿನಲ್ಲಿದ್ದುಕೊಂಡೆ ನನ್ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಈ ಬಗ್ಗೆ ನನಗೆ ಗೊತ್ತಾಗಿದೆ. ಹಾಗಾಗಿ ನಾನು ಸುರಕ್ಷಿತವಾಗಿ ಇರಲು ದುವಾ ಪಠಿಸುತ್ತಿದ್ದೇನೆ. ಅಲ್ಲಾ ನನ್ನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಎನ್ನುವ ನಂಬಿಕೆ ಇದೆ' ಎಂದು ಹೇಳಿದ್ದಾರೆ. 'ನಾನು ಅವನಿಗೆ ಹೇಳುತ್ತೇನೆ ಆದಿಲ್, ನಾನು ದುವಾ ಪಠಿಸುತ್ತಿದ್ದೀನಿ. ಅಲ್ಲಾ ನನ್ನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಎಂದು ನನಗೆ ಗೊತ್ತಿದೆ. ನೀನು ನನ್ನನ್ನು ಕೊಲ್ಲಲು ಸಾಧ್ಯವಿಲ್ಲ. ನೀನು ಯಾಕೆ ಇದನ್ನು ಮಾಡುತ್ತಿದ್ದೀಯಾ? ಆಸ್ತಿ ಮತ್ತು ಸೇಡಿಗಾಗಿನಾ?' ಎಂದು ಪ್ರಶ್ನೆ ಮಾಡಿದ್ದಾರೆ.  

Drama Queen ರಾಖಿ ಸಾವಂತ್​ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು

ಕೊಲೆ ಬೆದರಿಕೆಯ ಬಗ್ಗೆ ಕಾಲ್ ರೆಕಾರ್ಡಿಂಗ್ ಅನ್ನು ನಟಿ ರಾಖಿ ಸಾವಂತ್ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿ ರಾಖಿ ಸಾವಂತ್‌ಗೆ ಕರೆ ಮಾಡಿ, 'ನಾನು ನಿಮ್ಮ ಹಿತೈಷಿ ನನ್ನ ಹೆಸರು ಹೇಳಲು ಬಯಸಲ್ಲ. ಆದಿಲ್ ನಿಮ್ಮನ್ನು ಕೊಲೆ ಮಾಡಲು ಸ್ಕೆಚ್ ಹಾಕುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ಯೋಜನೆ ರೂಪಿಸಿದ್ದಾರೆ.  ಅವನು ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಕೊಂಡುಕೊಳ್ಳಲು ಸಿದ್ಧನಾಗಿದ್ದಾನೆ' ಎಂದು ಹೇಳುವ ರೆಕಾರ್ಡ್ ಶೇರ್ ಮಾಡಿದ್ದಾರೆ. 

ಸಲ್ಮಾನ್ ಖಾನ್‌ನಿಂದ ದೂರ ಉಳಿ; ರಾಖಿ ಸಾವಂತ್‌ಗೆ ಜೀವ ಬೆದರಿಕೆ ಹಾಕಿದ ಲಾರೆನ್ಸ್ ಬಿಷ್ಣೋಯ್!

ಇದೇ ವಿಡಿಯೋದಲ್ಲಿ ರಾಖಿ ಮಾತು ಮುಂದುವರೆಸಿ, 'ನಾನು ರಂಜಾಸ್‌ನಲ್ಲಿ ರೋಸಾ ಮಾಡುವಾಗ ಅವನನ್ನು ಕ್ಷಮಿಸಿದ್ದೆ. ಅವನು ನನ್ನ ತಾಯಿಯನ್ನು ಕೊಂದಿದ್ದಾನೆ. ನನಗೆ ಮೋಸ ಮಾಡಿದ್ದಾನೆ, ನನ್ನ ಹಣ ತೆಗೆದುಕೊಂಡು ಹೋಗಿದ್ದಾನೆ ಆದರೂ ನಾನೂ ಆತನನ್ನು ಕ್ಷಮಿಸಿದ್ದೆ. ಎಲ್ಲಾ ಅಲ್ಲಾನಿಗೆ ಬಿಟ್ಟಿದ್ದೇನೆ' ಎಂದು ಹೇಳಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?