ಕಮಲ್ ಹಾಸನ್ ಮತ್ತು ವಾಣಿ ಗಣಪತಿ ಅವರ ವಿಚ್ಛೇದನದ ಕಾರಣ ಹಲವು ವರ್ಷಗಳ ಕಾಲ ರಹಸ್ಯವಾಗಿತ್ತು. ಕಮಲ್ ಹಾಸನ್ ತಾನು ವಾಣಿಗೆ ಜೀವನಾಂಶ ನೀಡಿದ್ದರಿಂದ ದಿವಾಳಿಯಾದೆ ಎಂದು ಹೇಳಿಕೊಂಡ ನಂತರ ವಾಣಿ ಗಣಪತಿ ಮೌನ ಮುರಿದರು.
'ಚಾಚಿ 420', 'ಏಕ್ ದುಜೆ ಕೆ ಲಿಯೇ', 'ಸದ್ಮಾ', 'ದಶಾವತಾರ್', 'ಇಂಡಿಯನ್' ಮತ್ತು 'ಪುಷ್ಪಕ್' ನಂತಹ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯದಿಂದ ದಂತಕಥೆಯಾಗಿರುವ ಕಮಲ್ ಹಾಸನ್ ನಮ್ಮನ್ನು ತಮ್ಮ ಅಭಿನಯ ಚಾತುರ್ಯದಿಂದ ಬೆರಗುಗೊಳಿಸಿದವರು. ಅವರ ಬಹುಮುಖ ಪ್ರತಿಭೆ ದಶಕಗಳಿಂದ ನಮ್ಮನ್ನು ಮೋಡಿ ಮಾಡಿದೆ. ಆದರೆ ಬೆಳ್ಳಿ ಪರದೆಯನ್ನು ಮೀರಿ, ಅವರ ವೈಯಕ್ತಿಕ ಜೀವನವೂ ಸಾಕಷ್ಟು ಸಂಚಲನ ಸೃಷ್ಟಿಸಿದೆ. ವಿಶೇಷವಾಗಿ ಅವರ ಹಲವು ವಿವಾಹಗಳು ಮತ್ತು ವಾಣಿ ಗಣಪತಿಯೊಂದಿಗಿನ ಕಹಿ ವಿಘಟನೆ.
ಕಮಲ್ ಮತ್ತು ವಾಣಿ ಮೊದಲು ಪರಸ್ಪರ ಸ್ನೇಹಿತರ ಮೂಲಕ ಭೇಟಿಯಾದರು. ನಂತರ 1975ರಲ್ಲಿ 'ಮೆಲ್ನಾಟು ಮರುಮಗಲ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಪ್ರಸಿದ್ಧ ಭರತನಾಟ್ಯ ನರ್ತಕಿ ವಾಣಿ. ಈಕೆ ಕಮಲ್ ಜೊತೆಗೆ ಲಿವ್-ಇನ್ ಸಂಬಂಧದಲ್ಲಿ ತೃಪ್ತರಾಗಲಿಲ್ಲ. ಆದ್ದರಿಂದ ಅವರು 1978ರಲ್ಲಿ ವಿವಾಹವಾದರು. ಅವರ ದಾಂಪತ್ಯ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಯಿತು. 1988ರಲ್ಲಿ ಬೇರ್ಪಟ್ಟರು. ವಿಚ್ಛೇದನದ ಹಲವು ವರ್ಷಗಳ ವರೆಗೂ ಇಬ್ಬರೂ ಆ ಬಗ್ಗೆ ಮೌನ ಕಾಪಾಡಿಕೊಂಡಿದ್ದರು. ನಂತರ ಮೊದಲಿಗೆ ಕಮಲ್ ಹಾಸನ್ ಅವರೇ ಮೌನ ಮುರಿದರು. ತಾನು ವಾಣಿಗೆ ಪಾವತಿಸಿದ ಜೀವನಾಂಶವು ತನ್ನನ್ನು ಬಹುತೇಕ ದಿವಾಳಿಯಾಗಿಸಿದೆ ಎಂದು ಹೇಳಿಕೊಂಡರು. ಇದು ವಾಣಿ ಅವರನ್ನು ಕೆರಳಿಸಿತು. ವರ್ಷಗಳ ಕಾಲ ತಮ್ಮ ವಿಚ್ಛೇದನದ ಬಗ್ಗೆ ಮೌನವಾಗಿದ್ದ ಅವರು ಈ ಬಾರಿ ಮಾತನಾಡಲು ನಿರ್ಧರಿಸಿದರು.
ನಂತರ ಒಂದು ಸಂದರ್ಶನದಲ್ಲಿ ವಾಣಿ, ಕಮಲ್ ಅವರ ʼದಿವಾಳಿತನʼದ ಹೇಳಿಕೆಯನ್ನು ಬಲವಾಗಿ ನಿರಾಕರಿಸಿದರು. ನಾನು ನನ್ನ ವಿಫಲ ವಿವಾಹದ ಬಗ್ಗೆ ಎಂದಿಗೂ ಮಾತನಾಡಲಿಲ್ಲ. ಏಕೆಂದರೆ ಅದನ್ನು ಖಾಸಗಿ ವಿಷಯವೆಂದು ಪರಿಗಣಿಸಿದ್ದೆ. ಆದರೆ ಕಮಲ್ ಅವರ ಆರೋಪಗಳು ಅಸಂಬದ್ಧ. 28 ವರ್ಷಗಳಿಂದ ನಾವು ವಿಚ್ಛೇದಿತರು. ನಾನು ಯಾವಾಗಲೂ ಇಂಥ ಕೆಸರೆರಚಾಟದಿಂದ ದೂರವಿದ್ದೆ. ಏಕೆಂದರೆ ಅದು ತುಂಬಾ ಖಾಸಗಿ ವಿಷಯ. ನಾವಿಬ್ಬರೂ ಅದರಿಂದ ಈಗ ತುಂಬಾ ಮುಂದೆ ಬಂದಿದ್ದೇವೆ. ಈಗ ಕಮಲ್ ಅದರ ಬಗ್ಗೆ ಗೀಳು ಹೊಂದಿದವರಂತೆ ಏಕೆ ವರ್ತಿಸುತ್ತಿದ್ದಾರೆ?" ಎಂದು ಪ್ರತಿಕ್ರಿಯಿಸಿದರು.
ತನ್ನ ಸಂಪತ್ತು ತಾನು ಕಮಲ್‌ನಿಂದ ಪಡೆಯುವ ಜೀವನಾಂಶದಿಂದ ಬಂದಿದೆ ಎಂದು ಜನ ಭಾವಿಸಿದ್ದಕ್ಕೆ ವಾಣಿ ಅಸಮಾಧಾನಗೊಂಡಿದ್ದರು. ನನ್ನ ಸ್ವಂತ ಕಠಿಣ ಪರಿಶ್ರಮದ ಮೂಲಕ ನನ್ನ ಯಶಸ್ಸನ್ನು ನಿರ್ಮಿಸಿಕೊಂಡಿದ್ದೇನೆ. ಜೀವನಾಂಶವು ವಿಚ್ಛೇದನ ಒಪ್ಪಂದದ ಒಂದು ಭಾಗ ಎಂದು ಆಕೆ ಹೇಳಿದರು. ಅದರ ವಿವರಗಳನ್ನು ಚರ್ಚಿಸಲು ನಿರಾಕರಿಸಿದರು. "ನಾವು ಹಂಚಿಕೊಂಡ ಫ್ಲಾಟ್‌ನಿಂದ ಹಿಡಿದು ಬಳಸಿದ ಉಪಕರಣಗಳ ವರೆಗೆ- ಅದನ್ನು ನನಗೆ ನೀಡಲು ಕಮಲ್ ನಿರಾಕರಿಸಿದರು. ಅಂತಹ ವ್ಯಕ್ತಿಯಿಂದ ನಾನು ಏನನ್ನು ನಿರೀಕ್ಷಿಸಬಹುದು?" ಎಂದು ಟೀಕಿಸಿದರು.
"ಜೀವನಾಂಶ ಪಾವತಿಸಿ ತಾನು ದಿವಾಳಿಯಾಗಿದ್ದೇನೆ ಎಂಬ ಕಮಲ್ ಹೇಳಿಕೆ ಉತ್ಪ್ರೇಕ್ಷೆ. ಜಗತ್ತಿನ ಯಾವುದೇ ಕಾನೂನು ವ್ಯವಸ್ಥೆಯು ಯಾರನ್ನಾದರೂ ಹಾಗೆ ದಿವಾಳಿಯಾಗುವಂತೆ ಜೀವನಾಂಶ ನೀಡಲು ಒತ್ತಾಯಿಸುವುದಿಲ್ಲ. ಜಗತ್ತಿನ ಯಾವ ನ್ಯಾಯಾಲಯದಲ್ಲಿ ಜೀವನಾಂಶವು ಯಾರನ್ನಾದರೂ ದಿವಾಳಿತನಕ್ಕೆ ದೂಡುವಂತೆ ಮಾಡಿದೆ? ಅದನ್ನು ಓದಿದಾಗ ನನಗೆ ಸಂಪೂರ್ಣವಾಗಿ ಆಘಾತವಾಯಿತು. ನಾನು ದಾಂಪತ್ಯದಿಂದ ಹೊರನಡೆದಾಗ ಅವನ ಅಹಂಗೆ ನೋವಾಗಿರಬೇಕು. ಆದರೆ ನಾನೂ ಸಂಕಟ ತುಂಬಾ ಸಂಭವಿಸಿದೆ. ಅವರು ಆರ್ಥಿಕ ಬಿಕ್ಕಟ್ಟು ಎಂದು ಹೇಳಿ ವಿಷಯವನ್ನು ಮುಗಿಸಬಹುದಿತ್ತು" ಎಂದಳು.
ಅಂಜದ ಗಂಡಿನ ಕ್ಯಾಬರೆ ಡ್ಯಾನ್ಸರ್ ಡಿಸ್ಕೋ ಶಾಂತಿ ಈಗೇನು ಕೆಲ್ಸ ಮಾಡ್ತಿದ್ದಾರೆ ನೋಡಿ!
ಕಮಲ್ ಜೊತೆ 12 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿರುವ ವಾಣಿ, ಅಹಿತಕರ ಸಂದರ್ಭಗಳನ್ನು ಕಮಲ್ ಹೇಗೆ ತಪ್ಪಿಸಿಕೊಳ್ಳುತ್ತಿದ್ದ ಮತ್ತು ಕಠಿಣ ಪ್ರಶ್ನೆಗಳನ್ನು ತಪ್ಪಿಸಲು ತನ್ನ ಮೋಡಿಯನ್ನು ಹೇಗೆ ಬಳಸುತ್ತಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾರೆ. "ಬಯಸದಿದ್ದರೆ ಯಾವುದೇ ಪ್ರಶ್ನೆಗೆ ಅವನು ಉತ್ತರಿಸುವುದಿಲ್ಲ. ಕಮಲ್‌ಗೆ ನಗುವನ್ನು ನಕಲಿ ಮಾಡುವುದು ಮತ್ತು ಬಿಕ್ಕಟ್ಟಿನ ಪರಿಸ್ಥಿತಿಯಿಂದ ಮೋಡಿ ಮಾಡಿ ಹೊರಬರುವ ರೀತಿ ಎಲ್ಲರಿಗಿಂತ ಚೆನ್ನಾಗಿ ತಿಳಿದಿದೆ" ಎಂದು ಟೀಕಿಸಿದಳು.
ವಾಣಿಯಿಂದ ಬೇರ್ಪಟ್ಟ ನಂತರ ಕಮಲ್ ನಟಿ ಸಾರಿಕಾ ಜೊತೆ ಸಂಬಂಧ ಬೆಳೆಸಿಕೊಂಡರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ- ಶ್ರುತಿ ಮತ್ತು ಅಕ್ಷರ ಹಾಸನ್. ಅವರು ಈಗ ನಟಿಯರಾಗಿದ್ದಾರೆ. ಸಾರಿಕಾ ಅವರೊಂದಿಗಿನ ಸಂಬಂಧ ಕೊನೆಗೊಂಡ ಬಳಿಕ ಕಮಲ್ ಅವರು ನಟಿ ಗೌತಮಿ ಅವರೊಂದಿಗೆ ದೀರ್ಘಕಾಲದ ಲಿವ್-ಇನ್ ಸಂಬಂಧದಲ್ಲಿದ್ದರು. ಅದೂ ಕೂಡ ಕೆಲವು ವರ್ಷಗಳ ನಂತರ ಕೊನೆಗೊಂಡಿತು.
ಮದುವೆಯಾದ ಹೀರೋನ ಗುಟ್ಟಾಗಿ ಪ್ರೀತಿಸಿದ್ದ ಶ್ರೀದೇವಿ: ರಾತ್ರಿಯೆಲ್ಲಾ ಜಗಳ.. ದೂರವಾಗಿದ್ದು ಯಾಕೆ?