ಬ್ಯಾಟ್‌ಮ್ಯಾನ್ ಖ್ಯಾತಿಯ ನಟ ವಾಲ್ ಕಿಲ್ಮರ್ ಇನ್ನಿಲ್ಲ

ಹಾಲಿವುಡ್‌ನ ಖ್ಯಾತ ನಟ ಬ್ಯಾಟ್‌ಮ್ಯಾನ್ ಹಾಗೂ ಜಿಮ್ ಮೊರಿಸನ್‌ ಪಾತ್ರಗಳಿಂದ ಖ್ಯಾತಿ ಗಳಿಸಿದ್ದ ವಾಲ್ ಕಿಲ್ಮರ್ ಲಾಸ್‌ ಏಂಜಲೀಸ್‌ನಲ್ಲಿ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.  


ಹಾಲಿವುಡ್‌ನ ಖ್ಯಾತ ನಟ ಬ್ಯಾಟ್‌ಮ್ಯಾನ್ ಹಾಗೂ ಜಿಮ್ ಮೊರಿಸನ್‌ ಪಾತ್ರಗಳಿಂದ ಖ್ಯಾತಿ ಗಳಿಸಿದ್ದ ವಾಲ್ ಕಿಲ್ಮರ್ ಲಾಸ್‌ ಏಂಜಲೀಸ್‌ನಲ್ಲಿ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.  ವಾಲ್ ಎಡ್ವರ್ಡ್ ಕಿಲ್ಮರ್ ಡಿಸೆಂಬರ್ 31, 1959 ರಂದು ಲಾಸ್ ಏಂಜಲೀಸ್‌ನಲ್ಲಿ ಜನಿಸಿದ್ದರು.

ಅವರ ನಿಧನಕ್ಕೆ ಹಾಲಿವುಡ್‌ನ ಅನೇಕ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ಅವರು ಪುತ್ರಿ ಮರ್ಸಿಡಿಸ್‌ ಕಿಲ್ಮರ್‌ ಹೇಳಿದ್ದಾರೆ. ಬ್ಯಾಟ್‌ಮ್ಯಾನ್ ಫಾರೆವರ್ ಮತ್ತು ಟಾಪ್ ಗನ್ ನಂತಹ ಚಿತ್ರಗಳಲ್ಲಿನ ಪಾತ್ರಗಳಿಂದ ಅವರು ಬಹಳಷ್ಟು ಪ್ರಸಿದ್ಧಿ ಪಡೆದಿದ್ದರು. 1986 ರ ಮೆಗಾ ಬಾಕ್ಸ್ ಆಫೀಸ್ ಹಿಟ್ ಟಾಪ್ ಗನ್ ನಲ್ಲಿ ಟಾಮ್ ಕ್ರೂಸ್ ಜೊತೆಗೆ ಫೈಟರ್‌ ನೌಕಾ ವಿಮಾನದ ಚಾಲಕ ಟಾಮ್ ಐಸ್‌ಮ್ಯಾನ್ ಕಜಾನ್ಸ್ಕಿ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ ವಾಲ್ ಕಿಲ್ಮರ್‌, ಲಾಸ್ ಏಂಜಲೀಸ್‌ನಲ್ಲಿ ನ್ಯುಮೋನಿಯಾದಿಂದ ನಿಧನರಾದರು ಎಂದು ಅವರ ಮಗಳು ಮರ್ಸಿಡಿಸ್ ಕಿಲ್ಮರ್ ದಿ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ .

ವಿಶ್ವದ ನಂಬರ್ 1 ಶಾಪಗ್ರಸ್ತ ಹಾರರ್ ಸಿನಿಮಾ; ಶೂಟಿಂಗ್‌ನಲ್ಲಿಯೇ 20 ಜನರ ಸಾವು? ಥಿಯೇಟರ್‌ನಲ್ಲಿ ರಕ್ತದ ವಾಂತಿ!

Latest Videos

ಅವರಿಗೆ 2014 ರಲ್ಲಿ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಜುಲೈ 2021 ರಲ್ಲಿ ಕೇನ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಂಡ ಅವರ ಜೀವನದ ಕುರಿತಾದ ಸಾಕ್ಷ್ಯಚಿತ್ರ 'ವಾಲ್, ನಲ್ಲಿ ಅವರಿಗೆ ಉಸಿರಾಟದ ಕೊಳವೆಯ ಅಗತ್ಯವಿದೆ ಎಂಬುದನ್ನು ಸಿನಿಮಾ ತೋರಿಸಿತ್ತು.  ರಾನ್ ಹೊವಾರ್ಡ್ ಅವರ ಮಕ್ಕಳ ಫ್ಯಾಂಟಸಿ ಚಿತ್ರ ವಿಲ್ಲೋ (1988) ಸೆಟ್‌ನಲ್ಲಿ ಭೇಟಿಯಾದ ನಟಿ ಜೋನ್ನೆ ವ್ಯಾಲಿ ಅವರನ್ನು ವಾಲ್ ಕಿಲ್ಮರ್ ಮದುವೆಯಾಗಿದ್ದರು. ಆದರೆ ಈ ಮದುವೆ ವಿಚ್ಚೇದನದಲ್ಲಿ ಅಂತ್ಯಗೊಂಡಿತ್ತು.

1980ರ ದಶಕದ ಹಲವು ಚಿತ್ರಗಳಲ್ಲಿ ವಾಲ್ ಕಿಲ್ಮರ್ ನಟಿಸಿದ್ದಾರೆ. ಅವರು ಟಾಪ್ ಗನ್, ರಿಯಲ್ ಜೀನಿಯಸ್, ಟೂಂಬ್‌ಸ್ಟೋನ್, ಹೀಟ್ ಮತ್ತು ದಿ ಸೇಂಟ್‌ನಂತಹ ಸಿನಿಮಾಗಳಲ್ಲಿ ನಟಿಸುವ ಮೂಲಕ ಹಾಲಿವುಡ್‌ನಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಆದರೆ 2021ರ ನಂತರ ಕ್ಯಾನ್ಸರ್‌ನಿಂದಾಗಿ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವರದಿಯಾಗಿದೆ. 

ರಾಕ್ ಸ್ಟಾರ್ ರೀತಿಯಲ್ಲಿ ಎತ್ತರ ಮತ್ತು ಸುಂದರ ನೀಳ ಕಾಯದ ವ್ಯಕ್ತಿಯಾಗಿದ್ದ ಮಿಸ್ಟರ್ ಕಿಲ್ಮರ್ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಕೆಲವು ಬಾರಿ ರಾಕರ್ ಪಾತ್ರದಲ್ಲಿ ನಟಿಸಿದ್ದರು. ಈ ವೇಳೆ ಅವರು ತಾನು ಬ್ಲಾಕ್ಬಸ್ಟರ್ ಯಶಸ್ಸು ಗಳಿಸಬೇಕು ಎಂದು ಗುರಿ ಇಟ್ಟುಕೊಂಡಿದ್ದರಂತೆ. 1984ರಲ್ಲಿ ಅವರು ಶೀತಲ ಸಮರದ ಪತ್ತೇದಾರಿ ಚಲನಚಿತ್ರದ ಅಣಕ 'ಟಾಪ್ ಸೀಕ್ರೆಟ್'ನಲ್ಲಿ ನಟಿಸುವ ಮೂಲಕ ಸಿನಿಮಾದಲ್ಲಿ ಚೊಚ್ಚಲ ಪ್ರವೇಶ ಮಾಡಿದರು. ಈ ಸಿನಿಮಾದಲ್ಲಿ ಅವರು ಬರ್ಲಿನ್‌ನಲ್ಲಿ ಜನಸಮೂಹವನ್ನು ಮೆಚ್ಚಿಸುವ, ಸೊಂಟವನ್ನು ಬಳುಕಿಸುವ ಅಮೇರಿಕನ್ ಗಾಯಕನಾಗಿ ನಟಿಸಿದರು, ತಿಳಿಯದೆಯೇ ದೇಶವನ್ನು ಮತ್ತೆ ಒಂದುಗೂಡಿಸುವ ಪೂರ್ವ ಜರ್ಮನ್ ಸಂಚಿನಲ್ಲಿ ಭಾಗಿಯಾಗಿದ್ದರು.

ಆಲಿವರ್ ಸ್ಟೋನ್ ಅವರ "ದಿ ಡೋರ್ಸ್" (1991) ಚಿತ್ರದಲ್ಲಿ ಅವರು ಮನೋವಿಕೃತ ಇಂದ್ರಿಯತೆಯ ಸಂಕೇತವಾದ ಮಾರಿಸನ್ ಪಾತ್ರದಲ್ಲಿ ಎದ್ದು ಕಾಣುವ ಅಮೋಘ ಅಭಿನಯವನ್ನು ನೀಡಿದರು. ಮತ್ತು ಕ್ವೆಂಟಿನ್ ಟ್ಯಾರಂಟಿನೊ ಬರೆದು ಟೋನಿ ಸ್ಕಾಟ್ ನಿರ್ದೇಶಿಸಿದ ಹಿಂಸಾತ್ಮಕ ಮಾದಕವಸ್ತು ಚೇಸಿಂಗ್ ಕಥಾವಸ್ತು ಹೊಂದಿರುವ ಟ್ರೂ ರೋಮ್ಯಾನ್ಸ್" (1993) ನಲ್ಲಿ ಮೆಂಟರ್ ಪಾತ್ರವನ್ನು ನಿರ್ವಹಿಸಿದರು. 

ಇವರೇ ನೋಡಿ ಪ್ರಪಂಚದ ಶ್ರೀಮಂತ ಹಾಸ್ಯನಟ… ಇವರ ಒಟ್ಟು ಆಸ್ತಿ 7,00,95,33,830 ಬಿಲಿಯನ್!

click me!