ಸಿಲ್ಕ್ ಸ್ಮಿತಾ, ಶ್ರೀದೇವಿ, ದಿವ್ಯಾ ಭಾರತಿ: ಎಂಥ ನಟಿಯರಿಗೆ ಎಂಥ ಸಾವು!

Suvarna News   | Asianet News
Published : Nov 26, 2020, 06:12 PM IST
ಸಿಲ್ಕ್ ಸ್ಮಿತಾ, ಶ್ರೀದೇವಿ, ದಿವ್ಯಾ ಭಾರತಿ: ಎಂಥ ನಟಿಯರಿಗೆ ಎಂಥ ಸಾವು!

ಸಾರಾಂಶ

ಭಾರತದ ಅನೇಕ ಫೇಮಸ್ ನಟಿಯರು ವಿಚಿತ್ರವಾಗಿ ಸತ್ತಿದ್ದಾರೆ. ಉದಾಹರಣೆಗೆ ಶ್ರೀದೇವಿ, ಸಿಲ್ಕ್ ಸ್ಮಿತಾ, ದಿವ್ಯಾ ಭಾರತಿ, ಪರ್ವೀನ್ ಬಾಬಿ ಇತ್ಯಾದಿ. ಇದಕ್ಕೆಲ್ಲ ಕಾರಣವೇನು?

ಎಷ್ಟೋ ಬಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್ - ಇತ್ಯಾದಿ ಸಿನಿಮಾ ನಟಿಯರು ದುರಂತ ಸಾವು ಕಂಡಿದ್ದಾರೆ. ಒಬ್ಬೊಬ್ಬರ ಮರಣಕ್ಕೂ ಒಂದೊಂದು ವಿಚಿತ್ರ ಕಾರಣಗಳು. ಸುಖವಾಗಿ ಬದುಕಿದವರೂ ಹಾಗೆ ಮರಣಿಸಿದ್ದಾರೆ; ಬದುಕಿಡೀ ಯಾತನೆಯನ್ನು ಅನುಭವಿಸಿ ನರಳಾಡಿದವರೂ, ನಾನಾ ಕಾರಣಗಳಿಗಾಗಿ ಸುದ್ದಿಯೇ ಆಗಿ ಉಳಿದವರೂ ಮರಣದ ನಂತರವೂ ಸುದ್ದಿಯಾಗಿದ್ದಾರೆ. ಅಂತ ಕೆಲವು ನಟಿಯರ ಮರಣ ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತೆ. ನಟಿಯರಿಗೆ ಇಂಥ ಮರಣ ಒಂದು ಶಾಪವೇ ಎಂಬ ಪ್ರಶ್ನೆಯೂ ಕಾಡುತ್ತೆ. ಹಾಗಂತ ಸುಶಾಂತ್‌ನಂಥ ಕೆವು ನಟರೂ ಸೂಸೈಡ್‌ ಮಾಡಿಕೊಂಡು ಸತ್ತಿದ್ದಾರೆ. ಆದರೆ ನಟರ ವಿಚಾರದಲ್ಲಿ ಹೀಗೆ ಆಗಿರುವುದು ಕಡಿಕೆ. ನಟಿಯರೇ ಹೆಚ್ಚು.

ಸಿಲ್ಕ್ ಸ್ಮಿತಾ

ತಮಿಳೂ ತೆಲುಗು ಕನ್ನಡ ಫಿಲಂಗಳಲ್ಲಿ ನಟಿಸಿ ಹೆಸರು ಮಾಡಿದ್ದ ಸಿಲ್ಕ್ ಸ್ಮಿತಾ, ರೇಶಿಮೆ ನಗುವಿನ ಹುಡುಗಿ ಎಂದೇ ಜನಪ್ರಿಯಳಾದವಳು. ಸಿನಿಮಾದಲ್ಲಿ ಕ್ಯಾಬರೆಗೆ ಒಂದು ಹೊಸ ಲುಕ್ಕು ತಂದುಕೊಟ್ಟವಳು. ಜೀವನವಿಡೀ ನೂರಾರು ಫ್ರೆಂಡ್ಸ್, ಯಾತನಾಮಯ ಬದುಕಿನ ನಂತರ ೧೯೬೬ರಲ್ಲಿ ಚೆನ್ನೈಯ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಹಾಕಿಕೊಂಡು ಸತ್ತುಹೋದಳು. ಭಾರತೀಯ ಚಿತ್ರರಂಗದ ಮರ್ಲಿನ್ ಮನ್ರೋ ಎಂದೇ ಕರೆಯಲ್ಪಟ್ಟ ಈ ನಟಿ ೪೫೦ಕ್ಕೂ ಅಧಿಕ ಫಿಲಂಗಳಲ್ಲಿ ನಟಿಸಿದ್ದಳು. ಹತ್ತಾರು ಪ್ರೇಮಪ್ರಕರಣಗಳಲ್ಲಿ ಈಕೆ ಭಗ್ನಗೊಂಡಿದ್ದಳು. ಸಾಯುವ ಕಾಲಕ್ಕೆ ಗಂಭೀರ ಡಿಪ್ರೆಶನ್‌ನಿಂಧ ನರಳುತ್ತಿದ್ದಳು. ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಇಪ್ಪತ್ತಾರು ವರ್ಷಗಳಾದರೂ ಇನ್ನೂ ಗೊತ್ತಾಗಿಲ್ಲ.

ಸೆಲೆಬ್ರಿಟಿಗಳ್ಯಾಕೆ ಈ ಪರಿ ಮಾಲ್ಡೀವ್ಸ್‌ಗೆ ಮುಗಿ ಬೀಳ್ತಿದ್ದಾರೆ! ...

ದಿವ್ಯ ಭಾರತಿ

ಐಶ್ವರ್ಯ ರೈಯಷ್ಟೇ ಜನಪ್ರಿಯ ಆಗುವ ಸಾಧ್ಯತೆ ಹೊಂದಿದ್ದ, ಅಷ್ಟೇ ಸೌಂದರ್ಯ ಹಾಗೂ ಅಭಿನಯ ಕೌಶಲವನ್ನೂ ಹೊಂದಿದ್ದ ನಟಿ ದಿವ್ಯಾ ಭಾರತಿ. ತನ್ನ ೧೯ನೇ ವಯಸ್ಸಿನಲ್ಲೇ ಈಕೆ ಕಾಲವಾದಳು. ಸತ್ತದ್ದೂ ಆಕಸ್ಮಿಕ ಹಾಗೂ ವಿಚಿತ್ರವಾಗಿ. ಮುಂಬಯಿಯ ವರ್ಸೋವಾದಲ್ಲಿರುವ ತನ್ನ ಐದನೇ ಮಹಡಿಯ ಅಪಾರ್ಟ್‌ಮೆಂಟ್‌ನ ಬಾಲ್ಕನಿಯಿಂದ ಬಿದ್ದು ಈಕೆ ಮೃತಪಟ್ಟವಳು. ಆಗ ಕೆರಿಯರ್‌ನ ಉತ್ತುಂಗದಲ್ಲಿದ್ದ ದಿವ್ಯಾ ಕೂಡ ಸಿಲ್ಕ್ ಸ್ಮಿತಾ ಥರವೇ ಡಿಪ್ರೆಶನ್‌ನಿಂದ ಬಳಲುತ್ತಿದ್ದಳು. ಆದರೆ ಆ ವಿಚಿತ್ರವಾದ ರಾತ್ರಿ, ಆಕೆ, ತನ್ನ ಮಿತಿಗಿಂತ ಮೀರಿ ರಮ್ ಸೇವಿಸಿದ್ದಳು ಎಂದು ಡಾಕ್ಟರ್‌ಗಳು ಹೇಳಿದ್ದರು. ಕುಡಿದು ಮತ್ತಳಾಗಿದ್ದ ಆಕೆ ಬಾಲ್ಕನಿ ಪ್ಯಾರಾಪೆಟ್ ಏರಲು ಹೋಗಿ ಕೆಳಗೆ ಬಿದ್ದುಬಿಟ್ಟಿದ್ದಳು. ಗಂಡ ಸಾಜಿದ್ ನಾಡಿಯಾವಾಲಾನಿಗೆ ಮರುದಿನ ಆಕೆಯ ಮೃತದೇಹ ಕಂಡು ಹಾರ್ಟ್ ಅಟ್ಯಾಕ್ ಆಗಿತ್ತು.

ಫಿಲ್ಮಂ ಸೆಟ್‌ನಲ್ಲಿ ಕೂದಲು ಹಿಡಿದು ಕಿತ್ತಾಡಿದ ಕರಿಷ್ಮಾ, ರವೀನಾ! ...

ಪರ್ವೀನ್ ಬಾಬಿ

೭೦-೮೦ರ ದಶಕದಲ್ಲಿ ಪರ್ವೀನ್ ಬಾಬಿ ಹಿಂದಿ ಚಿತ್ರರಂಗದಲ್ಲಿ ಭಾರಿ ಹೆಸರು, ಜನಪ್ರಿಯತೆ ಗಳಿಸಿದ್ದಳು, ಚಿತ್ರ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್‌ನಂಥ ಪ್ರಭಾವಿ ಗೆಳೆಯರು, ಸಂಗಾತಿಗಳು ಈಕೆಗೆ ಇದ್ದರು. ನಂತರ ಈಕೆಗೆ ಪ್ಯಾರಾನಾಯ್ಡ್ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆ ಅಂಟಿಕೊಂಡಿತ್ತು. ಏಕಾಂತ, ಭಗ್ನಪ್ರೇಮ, ಯಾತನೆ, ಹಣದ ತಂದುಕೊಡಲಾರದ ನೆಮ್ಮದಿಗಳೆಲ್ಲ ಆಕೆಯನ್ನು ಹಿಂಡಿಹಾಕಿದ್ದವು. ಮಹೇಶ್ ಭಟ್ ಜೊತೆ ಕೆಲಕಾಲ ದಾಂಪತ್ಯ ನಡೆಸಿದಳು. ಎಷ್ಟು ವಿಚಿತ್ರವಾಗಿ ಆಡುತ್ತಿದ್ದಳು ಎಂದರೆ ಒಮ್ಮೆ ಮಹೇಶ್ ಭಟ್ ಹೊರ ಹೊರಟಾಗ ನಗ್ನವಾಗಿ ಆತನ ಹಿಂದೆ ಬೀದಿಗೆ ಓಡಿಬಂದಿದ್ದಳು. ಈಕೆ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮಲಗಿದ್ದಂತೆಯೇ ಸತ್ತುಹೋದಳು. ಯಾಕೆ ಸತ್ತಳು, ಆತ್ಮಹತ್ಯೆ ಮಾಡಿಕೊಂಡಳೇ, ಅಥವಾ ಒಬ್ಬಂಟಿಯಾಗಿದ್ದ ಆಕೆಯನ್ನು ಬಿಪಿ- ಸುಗರ್ ನುಂಗಿಹಾಕಿತೇ ಗೊತ್ತಾಗಲಿಲ್ಲ. ಸತ್ತು ನಾಲ್ಕು ದಿನವಾಗಿ ಹೆಣ ಊದಿಕೊಂಡ ಬಳಿಕ ಸುದ್ದಿ ಹೊರಬಿತ್ತು.

ಫಿಟ್‌ನೆಸ್ ಕೋಚ್‌ ಮೇಲೆ ಅಮೀರ್ ಖಾನ್ ಪುತ್ರಿಗೆ ಲವ್..! ಇಲ್ನೋಡಿ ಫೋಟೋಸ್ ...

ಶ್ರೀದೇವಿ

ಒಂದು ಕಾಲದಲ್ಲಿ ತಮಿಳು ತೆಲುಗು ಮಲಯಾಳ ಹಿಂದೆ ಸೇರಿದಂತೆ ಭಾರತದ ಹಲವು ಚಿತ್ರರಂಗಗಳ ಕಣ್ಮಣಿಯಾಗಿದ್ದ ಶ್ರೀದೇವಿ, ದುಬೈಯ ತನ್ನ ಮನೆಯಲ್ಲಿ ಬಾತ್‌ಟಬ್‌ನಲ್ಲಿ ಮುಳುಗಿ ಸತ್ತುಹೋದಳು. ಇದೊಂದು ವಿಚಿತ್ರ ಹಾಗೂ ನಿಗೂಢ. ಬೋನಿ ಕಪೂರ್‌ನಂಥ ಉದ್ಯಮಿ ಶ್ರೀಮಂತ ಗಂಡನನ್ನು ಹೊಂದಿದ್ದ ಶ್ರೀದೇವಿಗೆ ಏನೂ ಕೊರತೆಯಿರಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣಗಳಿರಲಿಲ್ಲ. ಯಾರೂ ಬಾತ್‌ಟಬ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೂ ಇಲ್ಲ. ದುಬೈ ಸರಕಾರ ಈ ಕೇಸನ್ನು ತರಾತುರಿಯಿಂದ ಮುಚ್ಚಿಹಾಕಿತು ಎಂಬ ಗಾಳಿಸುದ್ದಿಯೂ ಇದೆ. ಬಹುಶಃ ಈಕೆಯ ಸಾವಿನ ಹಿಂದಿನ ಸತ್ಯ ಎಂದೂ ಹೊರಬರಲಾರದು.

ನಫೀಸಾ ಜೋಸೆಫ್

ಎಂಟಿವಿ ವಿಜೆ ಆಗಿದ್ದ ನಫೀಸಾ ಜೋಸೆಫ್‌ ಎಂಬ ಚೆಲುವೆ, ನಂತರ ಬಾಲಿವುಡ್‌ನಲ್ಲಿ ಹೆಸರು ಮಾಡಿದಳು. ೨೦೦೪ರಲ್ಲಿ ಮುಂಬಯಿಯ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೆ ಕೆಲವೇ ವಾರ ಮುನ್ನ, ಆಕೆಯ ಮದುವೆಯ ನಿಶ್ಚಿತಾರ್ಥ ಆಗಿತ್ತು. ಗೌತಮ್ ಖಂಡೂಜಾ ಎಂಬ ಉದ್ಯಮಿ ಆಕೆಯನ್ನು ಮದುವೆಯಾಗಲಿದ್ದ. ಆದರೆ ನಿಶ್ಚಿತಾರ್ಥ ಮುರಿದುಹೋಯಿತು. ಇದೇ ಡಿಪ್ರೆಶನ್ ಆಕೆಯ ಸಾವಿಗೆ ಕಾರಣವಾಯಿತು ಎನ್ನಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?