ಸೋನಮ್​ ಕಪೂರ್​ ಪದೇ ಪದೇ ಎದೆ ತೋರಿಸೋದ್ಯಾಕೆ? ಹೃದಯ ಗೆದ್ದ ನೆಟ್ಟಿಗನ ಉತ್ತರ!

By Suvarna News  |  First Published Jan 7, 2023, 12:01 PM IST

ಪದೇ ಪದೇ ಎದೆ ತೋರಿಸುವ ಡ್ರೆಸ್​ ಹಾಕಿಕೊಂಡು ಟ್ರೋಲ್​ ಆಗುತ್ತಿರುವ ನಟಿ ಸೋನಮ್​ ಕಪೂರ್​ ನಿಜವಾಗ್ಲೂ ಎದೆ ಯಾಕೆ ತೋರಿಸ್ತಾರೆ ಎನ್ನೋದಕ್ಕೆ ಅಭಿಮಾನಿಗಳು ಏನು ಹೇಳ್ತಾರೆ ಕೇಳಿ. 
 


ಈಗ ಚಿತ್ರನಟಿಯರು ಬಿಕಿನಿ ಧರಿಸುವುದು, ತಮ್ಮ ಎಲ್ಲಾ ಅಂಗಗಳನ್ನು ಪ್ರದರ್ಶಿಸುವುದು ಸಾಮಾನ್ಯ. ಅತ್ಯಂತ ಕನಿಷ್ಠ ಉಡುಗೆ ತೊಟ್ಟು ಟ್ರೋಲ್‌ ಆಗುವ ನಟಿಯರು, ಟ್ರೋಲ್‌ ಆಗಲೆಂದೇ ತುಂಡುಡುಗೆ ತೊಡುವವರೂ ಇಂಡಸ್ಟ್ರಿಯಲ್ಲಿದ್ದಾರೆ. ಹೀಗಿದ್ದರೂ ಈಗ ಸುದ್ದಿಯಲ್ಲಿ ಇದ್ದಾರೆ ಬಾಲಿವುಡ್‌ನ ಹಾಟ್‌ ತಾರೆ ಸೋನಮ್‌ ಕಪೂರ್‌. ನಿಮಗೆ ನಿನಪಿರಬಹುದು. ಎರಡು ವರ್ಷಗಳ ಹಿಂದೆ ಸೋನಮ್‌ ಕಪೂರ್‌ (Sonam Kapoor) ಭಾರಿ ಟ್ರೋಲ್‌ಗೆ ಒಳಗಾಗಿದ್ದರು. ಇದಕ್ಕೆ ಕಾರಣ, ಈಕೆ ತಮ್ಮ ತಂದೆ ಅನಿಲ್‌ ಕಪೂರ್‌ ಅವರ ಜೊತೆಗೆ ಫೋಟೋಗೆ ಪೋಸ್‌ ಕೊಟ್ಟಿದ್ದರು. ಫೋಟೋಗೆ ಪೋಸ್‌ ಕೊಟ್ಟಿದ್ದರಲ್ಲಿ ಏನೂ ತಪ್ಪಿಲ್ಲ. ಆದರೆ ತಮ್ಮ ಬಹುಪಾಲು ಎದೆಯ ಭಾಗ ಕಾಣಿಸುವಂಥ ಬಟ್ಟೆ ತೊಟ್ಟು ಸೋನಮ್‌ ಫೋಟೋ ಕ್ಲಿಕ್ಕಿಸಿ ಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Breast Feeding ಸಖತ್ ಈಸಿ ಅಂತಿದ್ದಾರೆ ಸೋನಂ, ಅವರ ದೇಹದಲ್ಲಿ ಸ್ಟ್ರೆಚ್ ಮಾರ್ಕ್ ಗಳೇ ಇಲ್ವಂತೆ!

ಆದಿತ್ಯ ರಾಯ್ ಕಪೂರ್ ಹಾಗೂ ದಿಶಾ ಪಟಾನಿ ಅಭಿನಯದ 'ಮಲಂಗ್' ಚಿತ್ರದ ವಿಶೇಷ ಪ್ರದರ್ಶನಕ್ಕೆ ಸೋನಮ್, ತಂದೆ ಅನಿಲ್‌ ಕಪೂರ್‌ (Anil Kapoor) ಜೊತೆಗೆ ಬಂದಿದ್ದರು. ಆದರೆ ಅತೀ ಎನ್ನುವಷ್ಟು ಎಕ್ಸ್‌ಪೋಸ್‌ (expose) ಮಾಡಿದ್ದರಿಂದ ಟ್ರೋಲಿಗೆ ಒಳಗಾಗಿದ್ದರು. ಕೊನೆಯ ಪಕ್ಷ ತಂದೆಯ ಜೊತೆಗಾದರೂ ಸಭ್ಯ ಡ್ರೆಸ್ ಧರಿಸಿ ಎಂದು ನೆಟ್ಟಿಗರು ಭಾಷಣವನ್ನೂ ಮಾಡಿದ್ದರು. ಆದರೆ ಮಗಳ ಈ ಡ್ರೆಸ್‌ಗೆ ಖುದ್ದು ಅವರಪ್ಪನೇ ತಲೆ ಕೆಡಿಸಿಕೊಂಡಿರಲಿಲ್ಲ. ಸದಾ ಮಗಳ ಆಧುನಿಕ ಫ್ಯಾಶನ್ ಔಟ್‌ಫಿಟ್ (Modern Fashin Outfit) ಬೆಂಬಲಿಸುವ ಅನಿಲ್ ಕಪೂರ್ ನನ್ನ ಮಕ್ಕಳು ಫ್ಯಾಷನ್ ಮೂಲಕ ಕಲೆ ಸೃಷ್ಟಿಸುತ್ತಿದ್ದಾರೆ,' ಎಂದಿದ್ದರು. 

Tap to resize

Latest Videos

ಈಗ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿರುವ ಕಾರಣ, ಸೋನಮ್‌ ಕಪೂರ್‌ ತಮ್ಮ ಎದೆಯನ್ನು ಯಾಕೆ ತೋರಿಸುತ್ತಾರೆ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಎತ್ತಿದ್ದಾರೆ! ಬಹಳ ವರ್ಷಗಳ ಹಿಂದೆ ತಮ್ಮ ಎದೆ ಪ್ರದರ್ಶನ ಮಾಡಿ ಸೋನಮ್​ ಕಪೂರ್‌ ಶೇರ್‌ ಮಾಡಿಕೊಂಡಿದ್ದ ಫೋಟೋಗಳೊಂದಿಗೆ ಈಕೆಯ ಈಗಿನ ಫೋಟೋ ವೈರಲ್‌ (/viral) ಆಗುತ್ತಿದ್ದು, ವ್ಯತ್ಯಾಸ ನೋಡಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಷ್ಟಕ್ಕೂ ಆಗಿರುವುದು ಏನೆಂದರೆ ಸೋನಮ್​ ಕಪೂರ್‌ ಕೆಲ ವರ್ಷಗಳ ಹಿಂದೆ ತೆಗೆಸಿಕೊಂಡಿರುವ ಫೋಟೋದಲ್ಲಿ ಈಕೆಯ ಎದೆ ಭಾಗ ಈಗಿನಷ್ಟು ದೊಡ್ಡದು ಇರಲಿಲ್ಲ. ಸಾಮಾನ್ಯವಾಗಿದ್ದ ಎದೆ ಈಗ ಹೀಗೇಕೆ ಎಂದು ಪ್ರಶ್ನೆ ಆಕೆಯ ಅಭಿಮಾನಿಗಳ ತಲೆ ಕೆಡಿಸುತ್ತಿದೆ. ಇದರೊಂದಿಗೆ ಇತ್ತೀಚೆಗೆ ಸೋನಮ್‌ ತಮ್ಮ ಬೃಹತ್‌ ಎದೆಯನ್ನು ಪದೇ ಪದೇ ಕಾಣಿಸುತ್ತಿರುವುದು ಯಾಕೆ ಅಂತ ಕೇಳ್ತಿದ್ದಾರೆ ಅಭಿಮಾನಿಗಳು. ಇಷ್ಟಕ್ಕೇ ಸುಮ್ಮನಾಗದ ಅವರು, ಈ ಪ್ರಶ್ನೆಗಳಿಗೆ ಉತ್ತರವನ್ನೂ ಕಂಡುಕೊಂಡಿದ್ದಾರೆ. 

30 ಕೆಜಿ ಅಲ್ಲ ಈಗ 50 ಕೆಜಿ ಇಳಿಸಿಕೊಳ್ಳಬೇಕು; ಡಯಟ್‌ನಿಂದ ಡಿಪ್ರೆಶನ್‌ಗೆ ಜಾರಿದ ಗೀತಾ ಭಾರತಿ ಭಟ್

ಚಿಕ್ಕದಾಗಿದ್ದ ಸ್ತನಗಳನ್ನು ಸೋನಮ್‌ ಕಪೂರ್‌ ಶಸ್ತ್ರಚಿಕಿತ್ಸೆಯ ಮೂಲಕ ಬೃಹದಾಕಾರವಾಗಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಲವು ನಟಿಯರು ಕೂಡ ಈ ಪ್ರಕ್ರಿಯೆಗೆ ಒಳಗಾಗಿದ್ದು, ಸೋನಮ್‌ ಕಪೂರ್‌ ಕೂಡ ತಮ್ಮ ಅಂದವನ್ನು ವೃದ್ಧಿಸಿಕೊಳ್ಳಲು ಆಪರೇಷನ್‌ ಮಾಡಿಸಿಕೊಂಡಿದ್ದಾರೆ. ಅದಾದ ಮೇಲೆ ಸ್ತನ (Breast) ತೋರಿಸುವುದು ಹೆಚ್ಚಾಗಿದೆ ಎನ್ನುತ್ತಿದ್ದಾರೆ  ನೆಟ್ಟಿಗರು. ಸೋನಮ್‌ ಕಪೂರ್‌ ಎದೆಯನ್ನಾಗಿ ಅಷ್ಟು ತೋರಿಸುತ್ತಾಳೆ ಎಂಬ ಪ್ರಶ್ನೆಗೆ ದೆಹಲಿಯ ಸಾಫ್ಟ್‌ವೇರ್‌ಎಂಜಿನಿಯರ್‌ (Software Engineer) ಪ್ರಿನ್ಸ್‌ ಕೌಶಿಕ್‌ ಅವರು ’ಎದೆ’ಗಾರಿಕೆ ಉತ್ತರ ಕೊಟ್ಟಿದ್ದು, ಇದೀಗ ವೈರಲ್‌ ಆಗುತ್ತಿದೆ.

ಅಷ್ಟಕ್ಕೂ ಪ್ರಿನ್ಸ್‌ ಕೌಶಿಕ್‌ ಹೇಳಿದ್ದೇನೆಂರೆ, ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿದೆ.  ಸೋನಮ್​ ಕಪೂರ್ ಅವರಿಗೆ ಏನು ಬೇಕೋ ಅದನ್ನು ಧರಿಸುತ್ತಾರೆ. ಏಕೆಂದರೆ ಅವರು ಅದನ್ನು ಬಯಸುತ್ತಾರೆ. ಅದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಈ ರೀತಿಯ ಡ್ರೆಸ್‌ ಹಾಕಿಕೊಂಡ ಸೋನಮ್​ ಕಪೂರ್‌ ಯಾವುದೇ ತಪ್ಪು ಮಾಡಲಿಲ್ಲ. ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ (Hruthik Roshan) ಅವರಂತಹ ನಟರು ಚಲನಚಿತ್ರಗಳಲ್ಲಿ ತಮ್ಮ ದೇಹವನ್ನು ಏಕೆ ಪ್ರದರ್ಶಿಸುತ್ತಾರೆ ಹೇಳಿ ನೋಡೋಣ,   ಅವರ ದೇಹವು ಪ್ರದರ್ಶಿಸಲು ಯೋಗ್ಯವಾಗಿದೆ ಎಂದು ಭಾವಿಸಿ ಅದನ್ನು ತೋರಿಸುತ್ತಾರೆ. ಹಾಗಿದ್ದ ಮೇಲೆ ಉತ್ತಮ ಮೈಕಟ್ಟು ಹೊಂದಿರುವ ನಟಿ ಏಕೆ ಎದೆ ತೋರಿಸಬಾರದು? ದೇಹವನ್ನು ಪ್ರದರ್ಶಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಎನಿಸುತ್ತದೆ. ಅವುಗಳನ್ನು ಚೆನ್ನಾಗಿ ಇಟ್ಟುಕೊಳ್ಳಲು ನೀವು ಶ್ರಮಿಸಿದ್ದೇ ಹೌದಾದರೆ ದೇಹ ಪ್ರದರ್ಶಿಸುವಲ್ಲಿ ತಪ್ಪಿಲ್ಲ ಎಂದಿದ್ದಾರೆ. ಇದಕ್ಕೆ ಈಗ ಪರ-ವಿರೋಧ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ.

click me!