ಕೇಸರಿ ತುಂಡುಡುಗೆ ಹಾಕ್ಕೊಂಡು ಉರ್ಫಿ ಮಾಡಿರೋ ಕಿತಾಪತಿ ಇದು!

By Suvarna NewsFirst Published Jan 7, 2023, 10:56 AM IST
Highlights

ದೀಪಿಕಾ ಟ್ರೋಲ್​ ಆಗುತ್ತಿರುವ ಬೆನ್ನಲ್ಲೇ ಕೇಸರಿ ತುಂಡುಡುಗೆ ಹಾಕ್ಕೊಂಡು ಉರ್ಫಿ ಜಾವೇದ್​  ಕಿತಾಪತಿ ಮಾಡಿದ್ದಾರೆ. ಉರ್ಫಿಯ ಡ್ರೆಸ್ಸಿಗೆ ಸಿಗೋ ಕಮೆಂಟ್ಸ್ ಎಲ್ಲರಿಗೂ ಗೊತ್ತು. ಇದಕ್ಕೆ ಸಿಕ್ಕಿದ್ಕು ಹೇಗಿದೆ?

ಪಠಾಣ್​ ಚಿತ್ರದ 'ಬೇಷರಂ ರಂಗ್' ಹಾಡಿಗೆ ಕೇಸರಿ ಬಿಕಿನಿ ಧರಿಸಿ ಇಡೀ ಪಠಾಣ್​ ತಂಡ ಪಡಬಾರದ ಕಷ್ಟ ಪಡುತ್ತಿದ್ದರೆ, ಇತ್ತ ತುಂಡುಡುಗೆ ಚೆಲುವೆ ಉರ್ಫಿ ಜಾವೇದ್​ (Urfi Javed) ಕಿತಾಪತಿ ಮಾಡಿದ್ದಾರೆ. ಕೇಸರಿ ಬಟ್ಟೆಯ ಬಿಕಿನಿ ಧರಿಸಿ ಬೇಷರಂ ಎಂದು ಹಾಡಿದ್ದಕ್ಕೆ ಹಿಂದೂಗಳಿಂದ ದೀಪಿಕಾ ಹಾಗೂ ಪಠಾಣ್​ ತಂಡ ಛೀಮಾರಿ ಹಾಕಿಸಿಕೊಳ್ತಿದ್ರೆ, ಟ್ರೋಲ್​ ಮಾಡಿಸಿಕೊಂಡು ಖುಷಿ ಪಟ್ಟುಕೊಳ್ತೀರೋ ಉರ್ಫಿ ತಾನೂ ಕೇಸರಿ ಬಣ್ಣದ ತುಂಡುಡುಗೆ ತೊಟ್ಟು ಬೇಷರಂ ರಂಗ್​ಗೆ ಹೆಜ್ಜೆ ಹಾಕಿದ್ದಾಳೆ!

ಮೈಮೇಲೆ ಅರ್ಧಂಬರ್ಧ ಬಟ್ಟೆ ಹಾಕಿಕೊಂಡೋ ಇಲ್ಲವೇ ಟಾಪ್​ಲೆಸ್​ (Topless) ಆಗಿ ಕಾಣಿಸಿಕೊಂಡು ಟ್ರೋಲ್​ ಆಗುತ್ತಿರುವ ಉರ್ಫಿಯನ್ನು ನೋಡಿ ನೆಟ್ಟಿಗರು ಈಗ ಉಫ್​ ಎನ್ನುತ್ತಿದ್ದಾರೆ. 
ಉರ್ಫಿ ಸದ್ಯ ಹಾಕುತ್ತಿರುವ ಬಟ್ಟೆಗಿಂತ ತುಸು ಹೆಚ್ಚಿಗೆ ಎನ್ನುವಷ್ಟು ಕೇಸರಿ ಬಣ್ಣದ ಕಟೌಟ್ ಡ್ರೆಸ್ ಧರಿಸಿ ಬೇಷರಂ ರಂಗ್​ ಹಾಡಿಗೆ ಕ್ಯಾಟ್​ವಾಕ್​  ಮಾಡುತ್ತಾ ಬಂದಿದ್ದಾರೆ. ಈ ಹಾಡಿನ ಪೂರ್ವಾರ್ಧ ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದು, 'ಬೇಷರಂ ರಂಗ್​' (Besharam Rang) ಎನ್ನುವ ಶಬ್ದ ಮಾತ್ರ ಕೇಳುತ್ತಿಲ್ಲ.

'ಬೇಶರಂ ರಂಗ್'​ಗೆ ಭಾರಿ ಟ್ವಿಸ್ಟ್: ಕಳಚಿ ಹೋಗುತ್ತಾ ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ?

ಈಕೆಯ ಈ ಅವತಾರಕ್ಕೆ ನೆಟ್ಟಿಗರು ಸುಸ್ತಾಗಿದ್ದರೂ ಹಲವರು ದೀಪಿಕಾರ ಹಾಗೆ ಬಿಕಿನಿ ಧರಿಸಿಲ್ಲವಲ್ಲ, ಅಷ್ಟೇ ಖುಷಿ ಎಂದು ತಮಗೆ ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಬೇಷರಂ ರಂಗ್​ ಎನ್ನುವ ಪೂರ್ಣ ಹಾಡನ್ನು ಹಾಕುವ ಧೈರ್ಯ ತೋರಿಲ್ಲದ ನಿನಗೆ ಸಲಾಂ ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಪಠಾಣ್​ಗಶಾಕ್ ನೀಡಿದೆ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆಯ ನೃತ್ಯ ಕೆಲ ಸೀನ್‌ಗೆ ಕತ್ತರಿ ಹಾಕಲು  ನಿರ್ದೇಶಿಸಿದೆ. ದೀಪಿಕಾ ಪಡುಕೋಣೆ ಬಿಕಿನಿ ಸೀನ್ ಹಾಗೂ ನೆಲದಲ್ಲಿ ಸೊಂಟ ಬಳುಕಿಸಿದ ದೃಶ್ಯ ತೆಗೆದು ಹಾಕಲು CBFC ಸೂಚಿಸಿದೆ. ಚಿತ್ರ ಬಿಡುಗಡೆ ಮಾಡುವಾಗ ನಿರ್ದೇಶಿಸುವ ಸೀನ್‌ ತೆಗೆದುಹಾಕುವಂತೆ ಖಡಕ್ ಆದೇಶ ನೀಡಿದೆ.

ಇನ್ನು ಉರ್ಫಿಯ ಬಗ್ಗೆ ಹೇಳುವುದಾದರೆ ತಿಂಗಳುಗಳಿಂದ ಉರ್ಫಿಯ ಹೊಸ ಹೊಸ ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​  ಆಗುತ್ತಲೇ ಇವೆ. ಈಕೆಯ ಅತ್ಯಂತ ಕನಿಷ್ಠ ಬಟ್ಟೆಯನ್ನು ನೋಡಿ ಕಿಡಿ ಕಾರಿದ್ದ ಬಿಜೆಪಿ ಸದಸ್ಯೆ ಚಿತ್ರಾ ವಾಘ್ (Chitra Wagh) ನಟಿ ಉರ್ಫಿ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅಶ್ಲೀಲತೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು. 'ಇವರು ಮುಂಬೈ ಬೀದಿಗಳಲ್ಲಿ ಸಾರ್ವಜನಿಕವಾಗಿ ನಗ್ನತೆ ಪ್ರಚಾರ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದರು. ಉರ್ಫಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು.

ಈ ಮಾತಿಗೆ ಉರ್ಫಿಯೂ ಕೆಂಡಾಮಂಡಲವಾಗಿದ್ದರು. 'ನನ್ನನ್ನು ಜೈಲಿಗೆ ಕಳುಹಿಸಲು ಸಂವಿಧಾನದಲ್ಲಿ ಯಾವುದೇ ವಿಧಿ ಇಲ್ಲ. ಅಶ್ಲೀಲತೆ, ನಗ್ನತೆಯ ವ್ಯಾಖ್ಯಾನವು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ನನ್ನ ಖಾಸಗಿ ಭಾಗಗಳು (Private Parts) ಕಾಣಿಸದ ಹೊರತು, ನೀವು ನನ್ನನ್ನು ಜೈಲಿಗೆ ಕಳುಹಿಸಲು ಸಾಧ್ಯವಿಲ್ಲ. ಪ್ರಚಾರ ಪಡೆಯಲು ಮಾತ್ರ ಇವರು ಇದನ್ನು ಮಾಡುತ್ತಿದ್ದಾರೆ' ಎಂದು ಕೆಂಗಣ್ಣು ಬೀರಿದ್ದರು. ಉರ್ಫಿ ಬಾಯಲ್ಲಿ ಅಶ್ಲೀಲತೆಯ ಪಾಠ ಬಂದಿದ್ದು ಪುನಃ ಟ್ರೋಲ್​ ಆಗಿತ್ತು. 

ಅಯ್ಯೋ..! ಸರಿಯಾಗಿ ಬಟ್ಟೆ ಹಾಕಳಮ್ಮ; ಅರೆಬೆತ್ತಲಾದ ಉರ್ಫಿಗೆ ನೆಟ್ಟಿಗರ ಕ್ಲಾಸ್

ಇದು ಸಾಲದು ಎನ್ನುವಂತೆ ಉರ್ಫಿ ದುಬೈನಲ್ಲಿ (Dubai) ಅರೆಬೆತ್ತಲಾಗಿ ಉಡುಪು ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಶೂಟಿಂಗ್ ಮಾಡುತ್ತಿದ್ದರಿಂದ  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದೂ ಸುದ್ದಿಯಾಗಿತ್ತು.

click me!