ರಾತ್ರೋರಾತ್ರಿ ಸ್ಟುಡಿಯೋಗೆ ಕರೆಯುತ್ತಾರೆ: ಸ್ಟಾರ್ ನಟನ ಬಣ್ಣ ಬಯಲು ಮಾಡಿದ ನಟಿ ಯಾಮಿನಿ

By Vaishnavi ChandrashekarFirst Published Jan 7, 2023, 11:09 AM IST
Highlights

ಬಾಸ್ ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆ ರಿವೀಲ್ ಮಾಡಿದ ನಟಿ ಯಾಮಿನಿ ಸಿಂಗ್. ರಾತ್ರಿ ಬರಲ್ಲ ಸಿನಿಮಾನೂ ಮಾಡಲ್ಲ...

ಭೋಜಪುರಿ ಚಿತ್ರರಂಗದ ಖ್ಯಾತ ನಟ ಕಮ್ ಗಾಯಕ ಪವನ್ ಸಿಂಗ್ ವಿರುದ್ಧ ನಟಿ ಯಾಮಿನಿ ಸಿಂಗ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. 2021ರಲ್ಲಿ ಬಿಡುಗಡೆಯಾದ ಬಾಸ್ ಸಿನಿಮಾದಲ್ಲಿ ಪವನ್ ಸಿಂಗ್ ಜೊತೆ ಯಾಮಿನಿ ಸಿಂಗ್ ನಟಿಸಲು ಅವಕಾಶ ಪಡೆದುಕೊಂಡಿದ್ದರಂತೆ. ಆದರೆ ನಟ ಅಸಭ್ಯವಾಗಿ ವರ್ತಸಿದ ಕಾರಣ ಸಿನಿಮಾದಿಂದ ಹೊರ ನಡೆದಿರುವುದಾಗಿ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಆದರೆ ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎಲ್ಲಿಯೂ ಹಂಚಿಕೊಂಡಿಲ್ಲ. 

ನಿರ್ದೇಶಕ ಅರವಿಂದ ಚೌಬೆ ಅವರ ಸಹಾಯದಿಂದ ಬಾಸ್ ಸಿನಿಮಾದಲ್ಲಿ ಯಾಮಿನಿ ಸಿಂಗ್ ಅಭಿನಯಿಸಲು ಅವಕಾಶ ಪಡೆದುಕೊಂಡರು. ಪವನ್ ಸಿಂಗ್ ಜೊತೆ ಅಭಿನಯಿಸಲು ತುಂಬಾನೇ ಖುಷಿಯಿಂದ ಎಲ್ಲೆಡೆ ಪ್ರಚಾರವೂ ಶುರು ಮಾಡಿದ್ದರು. ಪವನ್ ಸಿಂಗ್ ಧ್ವನಿಗೆ ಫುಲ್ ಫಿದಾ ಆಗಿರುವ ಯಾಮಿನಿ ಪ್ರತಿ ಕ್ಷಣವೂ ಅವರ ಪ್ರತಿಭೆಯನ್ನು ಮೆಚ್ಚಿಕೊಳ್ಳುತ್ತಿದ್ದರು ಆದರೆ ಬಾಸ್ ಸಿನಿಮಾ ಚಿತ್ರೀಕರಣ ಸಮಯದಲ್ಲಿ ನಡೆದ ಘಟನೆಯಿಂದ ಬೇಸರಗೊಂಡ ಸಿನಿಮಾದಿಂದ ಹೊರ ನಡೆದಿದ್ದಾರೆ. 

ಬಾಸ್ ಸಿನಿಮಾ ತಂಡದಿಂದ ಒಬ್ಬ ನನಗೆ ಕರೆ ಮಾಡಿದ್ದರು. ರಾತ್ರಿ 9ಕ್ಕೆ ಸ್ಟುಡಿಯೋಗೆ ಬರಲು ಹೇಳಿದ್ದರಂತೆ ಆದರೆ ಅಂದು ಬೆಳಗ್ಗಿನಿಂದ ಶೂಟಿಂಗ್ ಮಾಡಿರುವ ಕಾರಣ ರಾತ್ರಿ ಯಾಕೆ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಇಷ್ಟು ಹೊತ್ತಿಲ್ಲ ಸೆಟ್‌ನಲ್ಲಿ ಯಾರೂ ಇರುವುದಿಲ್ಲ ನನ್ನನ್ನು ಯಾಕೆ ಕರೆಯುತ್ತಿದ್ದಾರೆಂದು ಚಿಂತಿಸಿದ್ದಾರೆ. ಕೆಲವು ನಿಮಿಷಗಳ ನಂತರ ಇಲ್ಲ ನಾನು ರಾತ್ರಿ 9ಕ್ಕೆ ಸೆಟ್‌ಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ತಕ್ಷಣವೇ ಫೋನ್‌ನಲ್ಲಿದ್ದ ವ್ಯಕ್ತಿ ನೀನು ರಾತ್ರಿ ಸ್ಟುಡಿಯೋಗೆ ಬಂದಿಲ್ಲ ಅಂತ್ರೆ ಪವನ್ ಸಿಂಗ್ ಜೊತೆ ನಟಿಸಲು ಅವಕಾಶ ಕಳೆದುಕೊಳ್ಳುವೆ ಎಂದಿದ್ದಾರೆ. ಈ ರೀತಿ ಆಫರ್‌ಗಳನ್ನು ಮಾಡುವವರ ಜೊತೆ ನಾನು ಕೆಲಸ ಮಾಡುವುದಿಲ್ಲ ನನ್ನ ವೃತ್ತಿ ಜೀವನ ಬೆಳೆಯುವುದಿಲ್ಲ ಎಂದು ಯೋಚಿಸಿ ಯಾಮಿನಿ ಸಿಂಗ್ ಸಿನಿಮಾದಿಂದ ಹೊರ ನಡೆದ ಘಟನೆ ಬಗ್ಗೆ ಹೇಳಿದ್ದಾರೆ.  

Salman Khan: ಸಲ್ಮಾನ್ ಒಬ್ಬ ಕಾಮುಕ ಮೃಗ: ಎಕ್ಸ್ ಗರ್ಲ್‌ಫ್ರೆಂಡ್‌ ಕಿಡಿ

ಹೀಗರ ಸಂದರ್ಶನದಲ್ಲಿ ಮಾತನಾಡುವಾಗ Compromise ಅನ್ನೋ ಪದ ಬಳಸುತ್ತಾರೆ. ಅಪಾರ ಸಂಖ್ಯೆಯಲ್ಲಿ ಪವನ್ ಅಭಿಮಾನಿಗಳನ್ನು ಹೊಂದಿರುವ ಕಾರಣ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬರುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. 'ಇತ್ತೀಚಿಗೆ ನಡೆದ ಸಂದರ್ಶನದ ಬಗ್ಗೆ ಮೀಡಿಯಾ ಚಾನೆಲ್‌ಗಳು ನೀಡುತ್ತಿರುವ ತಿರುವುಗಳಿಂದ ನನ್ನ ಹೇಳಿಕೆ ತಪ್ಪಾಗಿ ಅರ್ಥ ಪಡೆದುಕೊಳ್ಳುತ್ತಿ. ಕಾಂಪ್ರಮೈಸ್ ಅನ್ನೊದು ದೊಡ್ಡ ಪದ, ಈ ಪದವನ್ನು ಯಾರಿಗೂ ಬಳಸುವುದಿಲ್ಲ ಏಕೆಂದರೆ ಇದರ ಅರ್ಥ ನಾನು ತಿಳಿದುಕೊಂಡಿರುವೆ. ಜನರು ಇದ್ದಕ್ಕೆ ಮತ್ತೊಂದು ಅರ್ಥ ಕೊಟ್ಟ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ. ಸಣ್ಣ ಗೊಂದಲದಿಂದ ಆದ ವಿಚಾರವನ್ನು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. 'ನನ್ನ ಸಹ-ಕಲಾವಿದರನ್ನು ನಾನು ಗೌರವಿಸುತ್ತೀನಿ. ನನ್ನ ಕೆಲಸವನ್ನು ಪ್ರೀತಿಸುತ್ತೀನಿ' ಎಲ್ಲರಿಗೂ ಇದೇ ನನ್ನ ಉತ್ತರ ಎಂದು ಯಾಮಿನಿ ಬರೆದುಕೊಂಡಿದ್ದಾರೆ. 

'ಮಹಿಳೆಯಾಗಿ ಅದರಲ್ಲೂ ನಾಯಕಿಯಾಗುವುದು ತುಂಬಾನೇ ಕಷ್ಟ. ಇದನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ನಾನು ಹೇಳಬೇಕು. ನಾನು ಇಲ್ಲಿರುವುದು ಕೆಲಸ ಮಾಡುವುದಕ್ಕೆ, ನನ್ನ ಕೆಲಸಕ್ಕೆ ಏನೇ ತಡೆ ಬಂದರೂ ಅದನ್ನು ಹೇಗೆ ನಿಭಾಯಿಸಬೇಕು ಎಂದು ಗೊತ್ತಿದೆ. ಭೋಜಪುರಿ ಸಿನಿಮಾ ನಿರ್ದೇಶಕರು, ಸಹ ಕಲಾವಿದರು ಹಾಗೂ ಸಿನಿ ರಸಿಕರನ್ನು ಗೌರವಿಸುತ್ತೇನೆ. ಭೋಜಪುರಿ ಸಿನಿಮಾರಂಗವನ್ನು ದೇಗುಲದ ರೀತಿ ನೋಡುವೆ. ಶಿಸ್ತು ಮತ್ತು ಶ್ರಮಜೀವಿ ಆದ ನಾನು ಬೆಳಗ್ಗೆ ರಾತ್ರಿ ಎಂದು ಲೆಕ್ಕ ಮಾಡದೆ ಕೆಲಸ ಮಾಡುವೆ. ನನ್ನ ಅಭಿಮಾನಿಗಳಿಗೆ 100% ಮನೋರಂಜನೆ ನೀಡುವೆ. ಇದನ್ನು ಇಲ್ಲಿಗೆ ನಿಲ್ಲಿದೆ. ದಯವಿಟ್ಟು ಇಂತಹ ಕಾಂಟ್ರವರ್ಸಿಗಳಿಂದ ನನ್ನನ್ನು ದೂರವಿಡಿ' ಎಂದು ಯಾಮಿನಿ ಹೇಳಿದ್ದಾರೆ.

click me!