ನಂದೆಲ್ಲಾ ಒರಿಜಿನಲ್ ಅಂದಿದ್ರು ಜಯಪ್ರದಾ! ಆದ್ರೂ ಕೌಂಟರ್‌ ಕೊಡದೇ ಯಾಕೆ ಸುಮ್ನಿದ್ರು ಶ್ರೀದೇವಿ?

By Shriram Bhat  |  First Published Oct 16, 2024, 2:04 PM IST

ಅದೆಷ್ಟೋ ಸಿನಿಮಾಗಳಲ್ಲಿ ಜಯಪ್ರದಾ ಹಾಗು ಶ್ರೀದೇವಿ ಅವರಿಬ್ಬರೂ ಜೊತೆಯಾಗಿ ನಟಿಸಬೇಕಾಗಿತ್ತು, ನಟಿಸಿದ್ದರು. ಆ ಸಮಯದಲ್ಲಿ ನಟಿ ಶ್ರೀದೇವಿ ಅವರು ಸೌಜನ್ಯಕ್ಕೆ ಕೂಡ ಜಯಪ್ರದಾ ಅವರೊಂದಿಗೆ ಮಾತನಾಡುತ್ತಿರಲಿಲ್ಲ ಎಂಬ ಪುಕಾರು ಹಬ್ಬಿತ್ತು. ಆದರೆ, ಅದು ಶ್ರೀದೇವಿಯ ಅಹಂಕಾರವಲ್ಲ, ಬದಲಿಗೆ...


ಬಾಲಿವುಡ್ ಚಿತ್ರರಂಗವನ್ನು ಆಳಿದ್ದ ನಟಿಯರಲ್ಲಿ ಶ್ರೀದೇವಿ (Sridevi) ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂಬ ಮಾತಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ನಟಿ ಶ್ರೀದೇವಿಗೆ ಪ್ರಬಲ ಸ್ಪರ್ಧೆ ನೀಡಿ ಬಹಳಷ್ಟು ಜನಪ್ರಿಯತೆ ಪಡೆದ ನಟಿಯರಲ್ಲಿ ಜಯಪ್ರದಾ (Jayaprada) ಹಾಗೂ ಮಾಧುರಿ ದೀಕ್ಷಿತ್ (Madhuri Dixit) ಹೆಸರು ಹೇಳದೇ ಇರಲು ಸಾಧ್ಯವಿಲ್ಲ. ಈ ಮೂವರ ತ್ರಿಕೋನ ಸ್ಪರ್ಧೆ ಅದ್ಯಾವ ರೀತಿ ಇತ್ತು ಎಂದರೆ, ನಟಿ ಶ್ರೀದೇವಿ ಅವರಿಗೆ ಜಯಪ್ರದಾ ಪಕ್ಕದಲ್ಲೇ ನಿಂತು ತಿವಿಯುತ್ತಿದ್ದರೆ, ಕೆಳಗಿನಿಂದ ನಟಿ ಮಾಧುರಿ ದೀಕ್ಷಿತ್ ಕಾಲೆಳೆಯುತ್ತಿದ್ದರು ಎನ್ನಬಹುದು. 

ಬಾಲಿವುಡ್‌ನಲ್ಲಿ 80 ಹಾಗೂ 90ರ ದಶಕದಲ್ಲಿ ಅಂದಿನ ಕಾಲದ ಪರಿಸ್ಥಿತಿ ಹೇಗಿತ್ತು ಎಂದರೆ, ನಟಿ ಶ್ರೀದೇವಿ ಅವರು ದಕ್ಷಿಣ ಭಾರತದ ಚಿತ್ರರಂಗದಿಂದ ಹಿಂದಿಗೆ ವಲಸೆ ಹೋಗಿದ್ದರು. ಆದರೆ ತಮ್ಮ ಅಸಾಧಾರಣ ಸೌಂದರ್ಯ ಹಾಗು ಅಮೋಘ ಅಭಿನಯದಿಂದ ಬಾಲಿವುಡ್‌ ನಟಿಯರನ್ನು ಗುಡಿಸಿ ಕಸದಬುಟ್ಟಿಗೆ ಎಸೆದುಬಿಟ್ಟಿದ್ದರು ಎನ್ನಬಹುದು. ಆದರೆ, ಶ್ರೀದೇವಿ ಅವರಂತೆಯೇ ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಹೋಗಿರುವ ನಟಿಯರಾದ ಜಯಪ್ರದಾ, ರೇಖಾ ಸೇರಿದಂತೆ ಕೆಲವರು ಶ್ರೀದೇವಿ ಅಲೆಗೆ ಜಗ್ಗದೇ ಬಗ್ಗದೇ ಅವಕಾಶ ಗಿಟ್ಟಿಸಿಕೊಂಡು ಸಾಕಷ್ಟು ಮಿಂಚುತ್ತಿದ್ದರು. 

Tap to resize

Latest Videos

ಸಾಯುವ ಮುನ್ನ ನಟಿ ಶ್ರೀದೇವಿಯ ಕೊನೆಯ ಆಸೆ ಕೈಗೂಡಲೇ ಇಲ್ಲ; ಹಣೆಬರಹ ಅಂದ್ರೆ ಅದೇನಾ?

ಅತಿಲೋಕ ಸುಂದರಿ ಎಂದೇ ಖ್ಯಾತಿ ಪಡೆದಿದ್ದ ನಟಿ ಶ್ರೀದೇವಿಗೆ ಭಾರೀ ಫೈಟ್ ಕೊಡುತ್ತಿದ್ದ ನಟಿಯೆಂದರೆ ಅದು ಜಯಪ್ರದಾ ಎನ್ನಲಾಗಿದೆ. ಜಯಪ್ರದಾ ನಟಿಸಿದ್ದ ಹಲವು ಸೌತ್ ಸಿನಿಮಾಗಳ ರೀಮೇಕ್ ಬಾಲಿವುಡ್ ಚಿತ್ರಗಳಲ್ಲಿ ನಟಿ ಶ್ರೀದೇವಿ ನಟಿಸಿದ್ದರು. ಈ ಕೋಪ ನಟಿ ಜಯಪ್ರದಾರಿಗೆ ಇತ್ತು ಎನ್ನಲಾಗಿದೆ. ಜೊತೆಗೆ, ದಕ್ಷಿಣ ಭಾರತದಿಂದ ಬಂದಿರುವ ನಟಿ ಶ್ರೀದೇವಿ ಬಗ್ಗೆ ಬಾಲಿವುಡ್ ನಟಿಯರಿಗೆ ಮನಸ್ಸಿನ ಮೂಲೆಯಲ್ಲಿ ಅಸಹನೆ ಮನೆಮಾಡಿತ್ತು ಎನ್ನುತ್ತವೆ ಅಂದಿನ ಕಾಲದ ಸುದ್ದಿ ಮೂಲಗಳು. ಈ ಕಾರಣಕ್ಕೆ ಬಾಲಿವುಡ್ ಮಾಧ್ಯಮಗಳು ಶ್ರೀದೇವಿ ಪರವಾಗಿ ಇರಲಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ, ನಟಿಯರಾದ ಜಯಪ್ರದಾ-ಶ್ರೀದೇವಿ ಮಧ್ಯೆ ಸರಿ ಇರಲಿಲ್ಲ ಎನ್ನಲಾಗಿದೆ. 

ಶ್ರೀದೇವಿ ಅವರು ಅಂದಿನ ಕಾಲದ ಎಲ್ಲ ಬಾಲಿವುಡ್ ಸ್ಟಾರ್ ನಟರೊಂದಿಗೂ ತೆರೆ ಹಂಚಿಕೊಂಡಿದ್ದರು. ನಂಬರ್ ಒನ್ ಸ್ಟಾರ್ ನಟಿಯಾಗಿ ಮಿರಮಿರ ಮಿಂಚುತ್ತಿದ್ದರು. ಆದರೆ, ಅದೆಷ್ಟೋ ಸಿನಿಮಾಗಳಲ್ಲಿ ಜಯಪ್ರದಾ ಹಾಗು ಶ್ರೀದೇವಿ ಅವರಿಬ್ಬರೂ ಜೊತೆಯಾಗಿ ನಟಿಸಬೇಕಾಗಿತ್ತು, ನಟಿಸಿದ್ದರು. ಆ ಸಮಯದಲ್ಲಿ ನಟಿ ಶ್ರೀದೇವಿ ಅವರು ಸೌಜನ್ಯಕ್ಕೆ ಕೂಡ ಜಯಪ್ರದಾ ಅವರೊಂದಿಗೆ ಮಾತನಾಡುತ್ತಿರಲಿಲ್ಲ ಎಂಬ ಪುಕಾರು ಹಬ್ಬಿತ್ತು. ಆದರೆ, ಅದು ಶ್ರೀದೇವಿಯ ಅಹಂಕಾರವಲ್ಲ, ಬದಲಿಗೆ ಅವರಿಗೆ ಹಿಂದಿ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ, ಈ ಕಾರಣಕ್ಕೆ ಅವರು ಜಯಪ್ರದಾ ಅಂತಲ್ಲ, ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. 

ಅಂದು ಹಬ್ಬಿದ್ದ ಸುದ್ದಿಗಳಲ್ಲಿ ಪ್ರಮುಖವಾಗಿದ್ದು ಎಂದರೆ, ನಟಿ ಶ್ರೀದೇವಿ ಬಗ್ಗೆ ಜಯಪ್ರದಾ ಅವರು ಒಮ್ಮೆ ಹೇಳಿದ್ದಾರೆ ಎನ್ನಲಾದ ಈ ಮ್ಯಾಟರ್! ಅದೇನು ಎಂದರೆ, 'ನನ್ನದು ಎಲ್ಲವೂ ಒರಿಜಿನಲ್, ಕೆಲವರಂತೆ ಯಾವುದೂ ಡುಪ್ಲಿಕೇಟ್ ನನ್ನಲಿಲ್ಲ' ಎಂದಿದ್ದರಂತೆ ಜಯಪ್ರದಾ. ನಟಿ ಜಯಪ್ರದಾ ಅವರು ಸಂದರ್ಶನವೊಂದರಲ್ಲಿ ಹೆಸರು ಹೇಳದೇ ಹೀಗೆ ಹೇಳಿದ್ದರು ಎನ್ನಲಾಗಿದೆ. ಆದರೆ, ಅವರು ಹೆಸರು ಹೇಳದಿದ್ದರೂ, ಅಂದಿನ ಕಾಲದಲ್ಲಿ ಆ ಮಾತನ್ನು ಜಯಪ್ರದಾ ಅವರು 'ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಶ್ರೀದೇವಿ ಅವರಿಗೇ ಹೇಳಿದ್ದು' ಎಂಬುದನ್ನು ಯಾರೂ ಯಾರಿಗೆ ಹೇಳಬೇಕಾಗಿಯೇ ಇರಲಿಲ್ಲ ಎಂದು ಸುದ್ದಿಯಾಗಿತ್ತು. 

ಮಾಲಾಶ್ರೀ ಮತ್ತು ಸುಧಾರಾಣಿ ಮಧ್ಯೆ ಅಂದು ಏನಾಗಿತ್ತು? ಸೀಕ್ರೆಟ್ ಬಿಚ್ಚಿಟ್ಟ 'ಮನ ಮೆಚ್ಚಿದ ಹುಡುಗಿ'..!

ಒಂದೇ ಚಿತ್ರದಲ್ಲಿ ಇಬ್ಬರೂ ನಟಿಸಬೇಕಿದ್ದ ಸಮಯದಲ್ಲಿ ಈ ಇಬ್ಬರೂ ದೂರದೂರವೇ ಕುಳಿತಿರುತ್ತಿದ್ದರಂತೆ. ನಟಿ ಶ್ರೀದೇವಿ ಸಿನಿಮಾ ವಿಷಯ ಬಿಟ್ಟು ಬೇರೆ ಏನೂ ಮಾತನಾಡುತ್ತಲೇ ಇರಲಿಲ್ಲವಂತೆ. ಜಯಪ್ರದಾ ಮಾತನಾಡಿಸಿದರೂ 'ಹೂಂ, ಹಾಂ' ಎಂದಷ್ಟೇ ಹೇಳಿ ಮೌನ ವಹಿಸಿ ಎಲ್ಲೋ ನೋಡುತ್ತ ಕುಳಿತಿರುತ್ತಿದ್ದರು ಎನ್ನಲಾಗಿದೆ. ಆದರೆ, ಶ್ರೀದೇವಿಗೆ ಸರಿಯಾಗಿ ಹಿಂದಿ ಮಾತನಾಡಲು ಬರುವುದಿಲ್ಲ ಎಂದು ಗೊತ್ತಿದ್ದರೂ ಅದನ್ನು ಅರ್ಥಮಾಡಿಕೊಳ್ಳದೇ ಜಯಪ್ರದಾ ಶ್ರೀದೇವಿಯನ್ನು ಅಪಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ. ಒಟ್ಟಿನಲ್ಲಿ, ಶ್ರೀದೇವಿ-ಜಯಪ್ರದಾ ಕಥೆಗಳು ಅಂದು ಮಾತ್ರವಲ್ಲ, ಇಂದಿಗೂ ಕುತೂಹಲ ಉಳಿಸಿಕೊಂಡಿವೆ.

click me!