ಮಗಳನ್ನು ಸ್ಕ್ರೀನ್ ನಿಂದ ದೂರವಿಟ್ಟ ಅನುಪ್ರಭಾಕರ್, ತೋರಿಸಿದ್ದು ಒಂದೇ ಒಂದು ಸಿನಿಮಾ

By Roopa Hegde  |  First Published Oct 15, 2024, 10:02 PM IST

ಸ್ಯಾಂಡಲ್ವುಡ್ ನಟಿ ಅನುಪ್ರಭಾಕರ್ ಹಾಗೂ ನಟ ರಘು ಮುಖರ್ಜಿ ತಮ್ಮ ಮಗಳು ನಂದನಾಗೆ ಇನ್ನೂ ಸಿನಿಮಾ ತೋರಿಸಿಲ್ಲ. ಒಂದೇ ಒಂದು ಚಿತ್ರಕ್ಕಾಗಿ ಮಗಳನ್ನು ಥಿಯೇಟರ್ ಗೆ ಕರೆದೊಯ್ದಿದ್ದೆ ಎಂದು ಅನುಪ್ರಭಾಕರ್ ಹೇಳಿದ್ದಾರೆ. 
 


ಸ್ಯಾಂಡಲ್ವುಡ್ ನಟಿ ಅನುಪ್ರಭಾಕರ್ ಮತ್ತು ನಟ ರಘು ಮುಖರ್ಜಿ (Sandalwood actress Anuprabhakar and actor Raghu Mukherjee) ಮುದ್ದಿನ ಮಗಳು ನಂದನಾ (Nandana). ಅವಳಿಗೆ ಈಗ 6 ವರ್ಷ. ಸೆಲೆಬ್ರಿಟಿ ಮಕ್ಕಳು ಹೇಗಿರ್ತಾರೆ, ಅಪ್ಪ – ಅಮ್ಮನ ಸಿನಿಮಾ ತೆರೆ ಮೇಲೆ ನೋಡ್ತಾರಾ? ಯಾವ ಸಿನಿಮಾ ಅವರಿಗೆ ಇಷ್ಟ ಎಂಬುದನ್ನೆಲ್ಲ ತಿಳಿದುಕೊಳ್ಳಲು ಫ್ಯಾನ್ಸ್ ಕಾತರರಾಗಿರ್ತಾರೆ, ಅನುಪ್ರಭಾಕರ್, ತಮ್ಮ ಮಗಳು ನಂದನಾ ಸಿನಿಮಾ ವೀಕ್ಷಣೆ ಬಗ್ಗೆ ತಿಳಿಸಿದ್ದಾರೆ. ನಂದನಾ ಈವರೆಗೆ ಕೇವಲ ಒಂದೇ ಒಂದು ಸಿನಿಮಾವನ್ನು ತೆರೆ ಮೇಲೆ ನೋಡಿದ್ದಾಳೆ. ಅದೂ ಪುನೀತ್ ರಾಜ್ ಕುಮಾರ್ (Puneet Rajkumar) ಕೊನೆ ಚಿತ್ರ ಗಂಧದ ಗುಡಿ (Gandhada Gudi). 

ಸಂದರ್ಶನವೊಂದರಲ್ಲಿ ಮಾತನಾಡಿದ ಅನುಪ್ರಭಾಕರ್, ನಾವೆಲ್ಲ ಸಿನಿಮಾಗಳಲ್ಲಿ ಕೆಲಸ ಮಾಡುವವರಾಗಿದ್ದರೂ, ನಾವು ಚಲನಚಿತ್ರಗಳನ್ನು ನೋಡಲು ಮಗಳು ನಂದಾಳನ್ನು ಥಿಯೇಟರ್‌ಗಳಿಗೆ ಕರೆದೊಯ್ದಿಲ್ಲ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದ ಗುಡಿ ಮಾತ್ರ ಇದಕ್ಕೆ ಹೊರತಾಗಿತ್ತು. ಪ್ರಕೃತಿ ಮತ್ತು ಪ್ರಾಣಿಗಳನ್ನು ನಂದನಾ ಪ್ರೀತಿಸುತ್ತಾಳೆ. ಹಾಗಾಗಿ ಅವಳನ್ನು ಈ ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದೆವು. ಪುನೀತ ರಾಜ್ಕುಮಾರ್ ಅವರನ್ನು ಮತ್ತು ಸಿನಿಮಾವನ್ನು ನಂದನಾ ಆಗಾಗ ನೆನಪು ಮಾಡಿಕೊಳ್ತಾಳೆ ಎಂದಿದ್ದಾರೆ ಅನುಪ್ರಭಾಕರ್. 

Tap to resize

Latest Videos

undefined

ಅನಂತ್‌ ಮದುವೆ ಡಾಕ್ಯೂಮೆಂಟರಿಯಲ್ಲಿ ಅಭಿ- ಐಶ್‌, ಸಣ್ಣ ಝಲಕ್‌ ಗೆ ಟ್ರೋಲರ್‌ ಬಾಯಿ ಬಂದ್‌

ಮಗಳು ನಂದನಾ ಸ್ಕ್ರೀನ್ ಟೈಂ ಬಗ್ಗೆಯೂ ಅನುಪ್ರಭಾಕರ್ ಮಾತನಾಡಿದ್ದಾರೆ. ಮನೆಯಲ್ಲಿಯೂ ನಂದನಾ ಸ್ಕ್ರೀನ್ ಟೈಂ ಮಿತಿಗೊಳಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ. ಅಪ್ಪ ರಘು ಮುಖರ್ಜಿ ಹಾಗೂ ಅನುಪ್ರಭಾಕರ್, ಸಿನಿಮಾ ಜೊತೆ ಎಷ್ಟು ನಂಟು ಹೊಂದಿದ್ದಾರೆ ಎಂಬುದು ನಂದನಾಗೆ ಇನ್ನೂ ಅರ್ಥವಾಗಿಲ್ಲ. ಅವಳು ಸ್ಕ್ರೀನ್ ಮೇಲೆ ಅಪ್ಪ ಮತ್ತು ಅಮ್ಮನನ್ನು ನೋಡಿರಬಹುದು. ಆದ್ರೆ ಆಕೆಗೆ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಇಲ್ಲ ಎಂದಿದ್ದಾರೆ ಅನುಪ್ರಭಾಕರ್. 

2016ರಲ್ಲಿ ಅನುಪ್ರಭಾಕರ್, ನಟ ರಘು ಮುಖರ್ಜಿ ಜೊತೆ ಎರಡನೇ ಮದುವೆಯಾದ್ರು. 2018ರಲ್ಲಿ ಅನುಪ್ರಭಾಕರ್ ಹಾಗೂ ರಘು ಮುಖರ್ಜಿ ಮೊದಲ ಬಾರಿ ಪೋಷಕರಾದ್ರು. ನಂದನಾ ಎಂದು ಅನು, ಮಗಳಿಗೆ ಹೆಸರಿಟ್ಟಿದ್ದಾರೆ. ನಂದನಾಗೆ ಈಗ ಆರು ವರ್ಷ ವಯಸ್ಸು. ರಘು ಮುಖರ್ಜಿ ಹಾಗೂ ಅನುಪ್ರಭಾಕರ್ ಪೆರೆಂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ರಿಯಾಲಿಟಿ ಶೋ ಸೇರಿದಂತೆ ಸಿನಿಮಾದಲ್ಲಿ ಅನುಪ್ರಭಾಕರ್ ಬ್ಯುಸಿಯಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅನುಪ್ರಭಾಕರ್ ನಟಿಸಿರುವ ಸಿನಿಮಾ ಹಗ್ಗ ತೆರೆಗೆ ಬಂದಿದೆ. ಇದೊಂದು ಹಾರರ್ ಚಿತ್ರ. ಇನ್ನು ರಘು ಮುಖರ್ಜಿ, ದಂತಕಥೆಯಲ್ಲಿ ಬ್ಯುಸಿಯಿದ್ದು, ನವೆಂಬರ್ 15ರಂದು ಸಿನಿಮಾ ತೆರೆಗೆ ಬರಲಿದೆ. ಕಲಾವಿದರು ಸಿನಿಮಾದಲ್ಲಿ ಬ್ಯುಸಿಯಿದ್ರೂ ಸಾಮಾಜಿಕ ಜಾಲತಾಣದಲ್ಲಿ ನಂದನಾ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ.  

ಸುಶಾಂತ್ ಸಿಂಗ್ ರಜಪೂತ್ ಆತ್ಮ ಇನ್ನೂ ಮನೆಯಲ್ಲಿದ್ಯಾ? ಅನುಭವ ಬಿಚ್ಚಿಟ್ಟ ಅದಾ ಶರ್ಮಾ

ಬಾಲಿವುಡ್ ಸೇರಿದಂತೆ ಸ್ಯಾಂಡಲ್ವುಡ್ ನ ಅನೇಕ ಕಲಾವಿದರು, ತಮ್ಮ ಚಿಕ್ಕ ಮಕ್ಕಳಿಗೆ ಸಿನಿಮಾ ತೋರಿಸಿಲ್ಲ. ಕೆಲ ಸೆಲೆಬ್ರಿಟಿ ಮಕ್ಕಳಿಗೆ ತಮ್ಮ ಪಾಲಕರು, ಸಿನಿಮಾದಲ್ಲಿ ನಟಿಸ್ತಾರೆ ಎನ್ನುವ ವಿಷ್ಯವೇ ತಿಳಿದಿಲ್ಲ. ಆಲಿಯಾ ಭಟ್, ಕರೀನಾ ಕಪೂರ್ ಸೇರಿದಂತೆ ಅನೇಕರು ತಮ್ಮ ಮಕ್ಕಳಿಗೆ ಸಿನಿಮಾ ತೋರಿಸಲು ಇಷ್ಟಪಡೋದಿಲ್ಲ. ಮಕ್ಕಳ ಸ್ಕ್ರೀನಿಂಗ್ ಟೈಂ ಕಡಿಮೆ ಮಾಡುವ ಗುರಿಯನ್ನು ಅವರೂ ಹೊಂದಿದ್ದಾರೆ. ಆಲಿಯಾ ಭಟ್ ಮಗಳಿಗೆ 16 ವರ್ಷವಾಗ್ತಿದ್ದಂತೆ ಯಾವ ಸಿನಿಮಾ ತೋರಿಸ್ಬೇಕು ಎಂದು ಮಹೇಶ್ ಭಟ್ ಈಗಾಗಲೇ ನಿರ್ಧರಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷ್ಯವನ್ನು ಅವರು ಹಂಚಿಕೊಂಡಿದ್ದಾರೆ. ಆಲಿಯಾ ಭಟ್ ಬದಲು ಪೂಜಾ ಭಟ್ ಸಿನಿಮಾ ತೋರಿಸೋದಾಗಿ ಅವರು ಹೇಳಿದ್ದಾರೆ. ಇನ್ನು ಕೆಲ ಕಲಾವಿದರು ತಮ್ಮ ಮಕ್ಕಳಿಗೆ ಕೆಲ ಸಿನಿಮಾ ತೋರಿಸಲು ಇಷ್ಟಪಡ್ತಿಲ್ಲ. ಶೋ ಒಂದರಲ್ಲಿ ಅಕ್ಷಯ್ ಕುಮಾರ್, ಗೋಲ್ ಮಾಲ್ ಸಿನಿಮಾವನ್ನು ಮಕ್ಕಳಿಗೆ ತೋರಿಸೋದಿಲ್ಲ ಎಂದಿದ್ದರು. 

click me!