ಬಾತ್ ರೂಮ್ ಕನ್ನಡಿ ಮುಂದೆ ಹಾಟ್ ಕ್ವೀನ್, ರಾಗಿಣಿ ವಿಡಿಯೋಗೆ ಫ್ಯಾನ್ಸ್ ಬೋಲ್ಡ್

By Roopa Hegde  |  First Published Oct 16, 2024, 12:48 PM IST

ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಬ್ಯೂಟಿಯಲ್ಲಿ ಎತ್ತಿದ ಕೈ. ಸ್ವಿಮ್ ಸೂಟ್ ನಲ್ಲಿ ನೀರಿಗಿಳಿದ್ರೆ ನೀರಿನ ಬಿಸಿ ಹೆಚ್ಚಾಗುತ್ತೆ. ತಮ್ಮ ನಟನೆ, ಸೌಂದರ್ಯದಿಂದಲೇ ಎಲ್ಲರ ಮನಸ್ಸು ಕದ್ದಿರುವ ರಾಗಿಣಿಯ ವಿಡಿಯೋ ಈಗ ವೈರಲ್ ಆಗಿದೆ. 
 


ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Thuppada Bedagi Ragini Dwivedi) ಸ್ಯಾಂಡಲ್ವುಡ್ ಬ್ಯೂಟಿ (Sandalwood Beauty) ಕ್ವೀನ್. ಪಡ್ಡೆ ಹುಡುಗರ ನಿದ್ದೆ ಕದಿಯೋದ್ರಲ್ಲಿ ಮುಂದಿರುವ ಬೆಡಗಿ, ಆಗಾಗ ಹಾಟ್ ಫೋಟೋ (Hot photo)ಗಳ ಮೂಲಕ ಮಿಂಚುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಸ್ವಿಮ್ ಸೂಟ್ ಫೋಟೋ ಹಾಕಿ, ಹುಡುಗ್ರಿಗೆ ಬೆವರಿಳಿಸಿದ್ದ ರಾಗಿಣಿ ಈಗ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಸಿನಿಮಾ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ರಾಗಿಣಿ ವಿಡಿಯೋ ಈಗ ಸದ್ದು ಮಾಡಿದೆ.

ರಾಗಿಣಿ ತಮ್ಮ ದುಬೈ ಟ್ರಿಪ್ ವಿಡಿಯೋಗಳನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಥ್ರೋ ಬ್ಯಾಕ್ ವಿಡಿಯೋ ಎಂದು ಶೀರ್ಷಿಕೆ ಹಾಕಿರುವ ರಾಗಿಣಿ ದ್ವಿವೇದಿ, ಬಾತ್ ರೂಮಿ (Bathroom) ನಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಸ್ವಿಮ್ ಸೂಟ್ ನಲ್ಲಿ ಈಜುಕೊಳಕ್ಕೆ ಇಳಿಯುವ ರಾಗಿಣಿ ಹಾಟ್ನೆಸ್ ನೋಡಿ ಫ್ಯಾನ್ಸ್ ಕಳೆದುಹೋಗಿದ್ದಾರೆ. ರಾಗಿಣಿ ತಮ್ಮ ವಿಡಿಯೋದಲ್ಲಿ ರಿಲ್ಯಾಕ್ಸ್ ಆಗಿ ಸಮಯ ಕಳೆಯುತ್ತಿರೋದನ್ನು ನೀವು ನೋಡ್ಬಹುದು.  ವಿಡಿಯೋ ನೋಡಿದ ಫ್ಯಾನ್ಸ್, ರಾಗಿಣಿ ಸೂಪರ್, ರಾಗಿಣಿ ಹಾಟ್, ನಿಮ್ಮ ಸೌಂದರ್ಯಕ್ಕೆ ಸರಿಸಾಟಿ ಯಾರಿಲ್ಲ, ಸ್ಯಾಂಡಲ್ವುಡ್ ನಲ್ಲಿ ನಿಮ್ಮಂಥ ಬ್ಯೂಟಿ ಇಲ್ಲ ಎಂದೆಲ್ಲ ಕಮೆಂಟ್ ಮಾಡಿದ್ದಾರೆ. ಇಷ್ಟೊಂದು ಫಿಟ್ನೆಸ್ ಮೆಂಟೇನ್ ಮಾಡಿರುವ, ಅಧ್ಬುತ ನಟಿಯಾದ ನೀವು, ಹೆಚ್ಚಿನ ಸಿನಿಮಾದಲ್ಲಿ ಯಾಕೆ ಕಾಣಿಸಿಕೊಳ್ತಿಲ್ಲ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ.   

Tap to resize

Latest Videos

undefined

ಮೊದಲೇ ಹೇಳಿದಂತೆ ಸೋಶಿಯಲ್ ಮೀಡಿಯಾದಲ್ಲಿ ರಾಗಿಣಿ ಸೂಪರ್ ಆಕ್ಟಿವ್ ಇದ್ದಾರೆ. ಅವರು ಯುಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದು, ತಮ್ಮ ಜೀವನದಲ್ಲಿ ನಡೆಯುವ ಮಹತ್ವದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಅದನ್ನು ಫ್ಯಾನ್ಸ್ ಮುಂದೆ ಹಂಚಿಕೊಳ್ತಾರೆ. 

ರಾಗಿಣಿ ಇನ್ಸ್ಟಾದಲ್ಲಿ ಇನ್ನೊಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ದುರ್ಗಾ ಪೂಜೆ ಮಾಡ್ತಿರೋದನ್ನು ನೀವು ನೋಡ್ಬಹುದು. ಪ್ರತಿ ವರ್ಷ ರಾಗಿಣಿ ಮನೆಯಲ್ಲಿ ದುರ್ಗಾ ಪೂಜೆ ಅದ್ಧೂರಿಯಾಗಿ ನಡೆಯುತ್ತದೆ. ರಾಗಿಣಿ ಚಿಕ್ಕ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ಅವರ ಪೂಜೆ ಮಾಡ್ತಾರೆ. ಆ ಮಕ್ಕಳಿಗೆ ಗಿಫ್ಟ್ ನೀಡ್ತಾರೆ. ಅವರಿಗೆ ಊಟ ಬಡಿಸ್ತಾರೆ. ಅಲ್ಲದೆ ಒಂಭತ್ತು ಮುತ್ತೈದೆಯರನ್ನು ಕರೆದು ಅವರಿಗೂ ಪೂಜೆ ಮಾಡ್ತಾರೆ. ಒಂಬತ್ತು ದಿನಗಳ ಉಪವಾಸವನ್ನೂ ಕನ್ಯಾ ಪೂಜೆ ಮೂಲಕ ಮುಕ್ತಾಯಗೊಳಿಸ್ತಾರೆ. ಪೂಜೆಯ ಥುಣುಕುಗಳನ್ನು ಪೋಸ್ಟ್ ಮಾಡಿರುವ ರಾಗಿಣಿ, ಸೀರೆಯುಟ್ಟು ಮಿಂಚಿದ್ದಾರೆ.

ರಾಗಿಣಿ ಸಿನಿಮಾದಲ್ಲೂ ಬ್ಯುಸಿಯಿದ್ದಾರೆ. ಕನ್ನಡ, ಮಲಯಾಳಂ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಐದು ತಿಂಗಳು ಜೈಲಿನಲ್ಲಿದ್ದ ರಾಗಿಣಿ, ಜೈಲಿನಿಂದ ಬಂದ್ಮೇಲೆ ತಮ್ಮ ಕೆಲಸದಲ್ಲಿ ಬ್ಯುಸಿಯಾದ್ರು. ಎಲ್ಲವನ್ನೂ ಧೈರ್ಯವಾಗಿ ಎದುರಿಸಿದ ಅವರು ಥ್ರಿಲ್ಲರ್ ಮತ್ತು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ರಾಗಿಣಿ ಅಭಿನಯದ ಇ ಮೇಲ್ ಈ ವರ್ಷ ತೆರೆಗೆ ಬಂದಿದೆ. ವೃಷಭ ಸಿನಿಮಾದಲ್ಲೂ ರಾಗಿಣಿ ಕಾಣಿಸಿಕೊಂಡಿದ್ದಾರೆ. ಬಿ.ಎಂ.ಗಿರಿರಾಜ್ ನಿರ್ದೇಶನದ, ಕಾದಂಬರಿ ಆಧಾರಿತ ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಮೂರ್ನಾಲ್ಕು ತಿಂಗಳ ಹಿಂದೆಯೇ ರಾಗಿಣಿ ಲುಕ್ ರಿವೀಲ್ ಆಗಿದ್ದು, ಶೂಟಿಂಗ್ ನಡೆಯುತ್ತಿದೆ. ರಾಗಿಣಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಸಂಜು ವೆಡ್ಸ್ ಗೀತಾ 2 ಸೇರಿದೆ. ಅದ್ರಲ್ಲಿ ಶ್ರೀನಗರ್ ಕಿಟ್ಟಿ ಹಾಗೂ ರಚಿತಾ ರಾಮ್ ಲೀಡ್ ಪಾತ್ರದಲ್ಲಿದ್ರೆ ರಾಗಿಣಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಲ್ತಿದ್ದಾರೆ. ಈ ಚಿತ್ರ ಅಕ್ಟೋಬರ್ 24ರಂದು ತೆರೆಗೆ ಬರಲಿದೆ. ರಾಗಿಣಿ ದ್ವಿವೇದಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ ರಾಗಿಣಿ, ಅಭಿನಯ, ಹಾಟ್ನೆಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

click me!