ರೈಲಿನಲ್ಲಿ ಭಜನೆ ಹೇಳ್ತಿದ್ದ ಅಂಧನ ಅದೃಷ್ಟ ಬದಲಿಸಿದ ಹನುಮಾನ ಅಂಶ್ ಸಿನಿಮಾ

Published : Sep 03, 2026, 01:48 PM IST
Sunil Lodhi

ಸಾರಾಂಶ

ಯಾರ ಲಕ್ ಯಾವಾಗ ಬದಲಾಗುತ್ತೆ ಹೇಳೋಕೆ ಸಾಧ್ಯವಿಲ್ಲ. ಅದಕ್ಕೆ ಸಿಂಗರ್ ಸುನಿಲ್ ಲೋಧಿ ಉತ್ತಮ ನಿದರ್ಶನ. ತಮ್ಮ ಅಂಗವೈಕಲ್ಯವನ್ನು ದೌರ್ಬಲ್ಯದಂತೆ ನೋಡ್ದೆ ಜೀವನ ನಡೆಸ್ತಿದ್ದ ಅವರ ಬಾಳಿಗೆ ಹೊಸ ತಿರುವು ಸಿಕ್ಕಿದೆ. ಹುಟ್ಟು ಕುರುಡ ಸುನೀಲ್ ಲೋಧಿ ಈಗ ತಮ್ಮ ಧ್ವನಿಯಿಂದ ಪ್ರಸಿದ್ಧಿ ಪಡೆದಿದ್ದಾರೆ.

ಬಾಲಿವುಡ್ ನಲ್ಲಿ ಸದ್ದಿಲ್ಲದೆ ಸುದ್ದಿ ಮಾಡಿದ ಸಿನಿಮಾ ಅಂದ್ರೆ ಹನುಮಾನ್ ಅಂಶ್. ದಾಖಲೆ ಮಟ್ಟದಲ್ಲಿ ಗಳಿಕೆ ಮಾಡ್ತಿರುವ ಸಿನಿಮಾದಿಂದ ಹೊಸ ಹಾಡುಗಾರ ಬಾಲಿವುಡ್ ಇಂಡಸ್ಟ್ರಿಗೆ ಸಿಕ್ಕಿದ್ದಾರೆ. ಹುಟ್ಟಿನಿಂದಲೇ ಕುರುಡನಾಗಿದ್ದ ಸುನಿಲ್ ಲೋಧಿ, ಒಂದು ಕಾಲದಲ್ಲಿ ರೈಲುಗಳಲ್ಲಿ ಭಜನೆಗಳನ್ನು ಹಾಡುವ ಮೂಲಕ ತಮ್ಮ ಜೀವನ ಸಾಗಿಸ್ತಿದ್ರು. ಇಂದು, ಹನುಮಾನ್ ಸಿನಿಮಾದ ಮೇರೆ ಸಂಕಟ್ ಕೆ ಕಟೈಯಾ ಹನುಮಾನ್ ಎಂಬ ಭಜನೆ ಅವರನ್ನು ಸೂಪರ್ಹಿಟ್ ಗಾಯಕರ ಸ್ಥಾನಕ್ಕೆ ತಂದು ನಿಲ್ಲಿಸಿದೆ.

ಬಾಲಿವುಡ್ ಗೆ ಹೇಗೆ ಬಂದ್ರು ಸುನೀಲ್ ಲೋಧಿ?

ಮಧ್ಯಪ್ರದೇಶದ ಬುಂದೇಲ್ಖಂಡ್ ಪ್ರದೇಶದ, ಸಾಗರ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯಿಂದ ಬಂದವರು ವರು ಸುನಿಲ್ ಲೋಧಿ. ಅವರ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿತ್ತು. ಹುಟ್ಟಿನಿಂದಲೇ ಕುರುಡನಾಗಿದ್ದರಿಂದ ಶಾಲೆಗೆ ಹೋಗಲು ಹಣವಿರಲಿಲ್ಲ. ಸಂಗೀತವು ಅವರಲ್ಲಿ ಸಹಜವಾಗಿ ಬಂದಿತ್ತು. ಬಾಲ್ಯದಿಂದಲೂ, ಅವರು ಭಜನೆಗಳು ಮತ್ತು ಬುಂದೇಲಿ ಜಾನಪದ ಗೀತೆಗಳನ್ನು ತಮುರಾ (ಸಾಂಪ್ರದಾಯಿಕ ವಾದ್ಯ) ದೊಂದಿಗೆ ಹಾಡಲು ಪ್ರಾರಂಭಿಸಿದರು. ಗ್ರಾಮಸ್ಥರು ಅವರ ಧ್ವನಿಯಿಂದ ಆಕರ್ಷಿತರಾದರು. ಜೀವನೋಪಾಯಕ್ಕಾಗಿ, ಸುನಿಲ್ ರೈಲುಗಳಲ್ಲಿ ಹಾಡಬೇಕಾಗಿತ್ತು. ಅವರು ಹನುಮಾನ್ ಮತ್ತು ಇತರ ದೇವತೆಗಳ ಸ್ತುತಿಗೀತೆಗಳನ್ನು ಹಾಡುತ್ತಾ ರೈಲಿನಲ್ಲಿ ತಿರುಗುತ್ತಿದ್ರು.

ಹಳ್ಳಿಗಳಲ್ಲಿ ನಡೆಯುವ ಸಣ್ಣ ಕಾರ್ಯಕ್ರಮಗಳಲ್ಲಿಯೂ ಸುನಿಲ್ ಹಾಡುತ್ತಿದ್ರು. ಅವರ ಧ್ವನಿ ಕೇಳುಗರ ಹೃದಯಗಳನ್ನು ಮುಟ್ಟುವ ಭಕ್ತಿಯ ಸ್ವರವನ್ನು ಹೊಂದಿತ್ತು. 2019 ರ ಸುಮಾರಿಗೆ, ಅವರ ಜೀವನವು ಬದಲಾಗತೊಡಗಿತು. ಅವರಿಗೆ ಯೂಟ್ಯೂಬರ್ ಮತ್ತು ಸ್ಥಳೀಯ ಸಂಗೀತ ಪ್ರೇಮಿಯ ಪರಿಚಯವಾಯಿತು. ಅವರು ಸುನಿಲ್ ಅವರ ಭಜನೆಗಳನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಇವುಗಳಲ್ಲಿ ಒಂದಾದ ಸಾಂಪ್ರದಾಯಿಕ ಹನುಮಾನ್ ಭಜನೆ ಮೋರ್ ಸಂಕಟ್ ಕೆ ಕಟೈಯಾ ಹನುಮಾನ್ ಸೋಶಿಯಲ್ ಮೀಡಿಯಾದಲ್ಲಿ ಬೇಗನೆ ವೈರಲ್ ಆಯಿತು. ಇದರ ಸರಳ ಆದರೆ ಭಾವಪೂರ್ಣವಾದ ಪ್ರಸ್ತುತಿ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದಿತು.

ಭಜನೆ, YouTube ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿತು. Instagram ಮತ್ತು ಇತರ ವೇದಿಕೆಗಳಲ್ಲಿ ರೀಲ್ಗಳನ್ನು ರಚಿಸಲು ಪ್ರಾರಂಭಿಸಿತು. ಆಗ ಸುನಿಲ್ ಗಾಯಕನಾಗಿ ಮನ್ನಣೆ ಪಡೆಯಲು ಪ್ರಾರಂಭಿಸಿದರು. ಸಂಗೀತ ನಿರ್ಮಾಪಕ ಪಂಕಜ್ ವಿಆರ್ಕೆ ಅವರ ಕಣ್ಣಿಗೆ ಸುನೀಲ್ ಬಿದ್ರು. ಸುನಿಲ್ ಅವರನ್ನು ಮುಂಬೈಗೆ ಆಹ್ವಾನಿಸಲಾಯ್ತು. ಸ್ಟುಡಿಯೋದಲ್ಲಿ ಹಲವಾರು ಭಜನೆಗಳನ್ನು ರೆಕಾರ್ಡ್ ಮಾಡಲಾಯ್ತು.

ಆ ಸಮಯದಲ್ಲಿ ಈ ಹಾಡುಗಳನ್ನು ಸಿನಿಮಾಕ್ಕೆ ಸೇರ್ತಿವೆ ಎಂಬುದು ಸುನೀಲ್ ಅವರಿಗೆ ತಿಳಿದಿರಲಿಲ್ಲ. ಹನುಮಾನ್ ಅಂಶ್ ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಸುನೀಲ್ ಧ್ವನಿಗೆ ಮರುಳಾಗಿದ್ದರು. ನೀಮ್ ಕರೋಲಿ ಬಾಬಾ ಅವರ ಜೀವನ ಚರಿತ್ರೆ ಮತ್ತು ಹನುಮಂತನ ಮೇಲಿನ ಅವರ ಭಕ್ತಿಯನ್ನು ಆಧರಿಸಿದ ಹನುಮಾನ್ ಅಂಶ್ ಸಿನಿಮಾದಲ್ಲಿಸುನೀಲ್ ಅವರಿಗೆ ಅವಕಾಶ ನೀಡಿದ್ರು. ಹನುಮಾನ್ ಅಂಶ್ ಸಿನಿಮಾ ಆಗಸ್ಟ್ 2026 ರಲ್ಲಿ ಬಿಡುಗಡೆಯಾಗಿದೆ. ಆರಂಭದಲ್ಲಿ ಸಾಧಾರಣ ಪ್ರದರ್ಶನವನ್ನು ಪಡೆದ ಸಿನಿಮಾ ಕ್ರಮೇಣ ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೊಂಬಾಳೆ ಫಿಲ್ಮ್ಸ್ ಮಹತ್ವದ ಹೆಜ್ಜೆ, ದಾಖಲೆ ಕಲೆಕ್ಷನ್ ಮಾಡಿದ ಹನುಮಾನ್ ಅಂಶ್ ಸಿನಿಮಾ ಸೆ.11ಕ್ಕೆ ಜಾಗತಿಕ ರಿಲೀಸ್
ಯಶ್ ಅಮ್ಮ ಪುಷ್ಪಾ ಮಾತಿಗೆ ಉಗ್ರಾವತಾರ ತಾಳಿದ ಆರ್‌ಜಿವಿ; ಅಲ್ಲು ಅರವಿಂದ್ ಸಪೋರ್ಟ್‌ ಮಾಡಿ ಹೇಳಿದ್ದೇನು?