ಮಾರ್ಚ್ ನಲ್ಲಿ ಮದುವೆ- ಆಗಸ್ಟ್ ನಲ್ಲಿ ಡಿವೋರ್ಸ್ ! ಎರಡನೇ ಹೆಂಡ್ತಿಯಿಂದ ದೂರವಾದ ಬಾದ್ ಶಾ

Published : Sep 01, 2026, 03:39 PM IST
Baadshah

ಸಾರಾಂಶ

Baadshah Divorce : ಗಾಯಕ ಬಾದ್‌ ಶಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರು ಬೇರೆ ಆಗ್ತಾರೆ ಎನ್ನುವ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇಬ್ಬರೂ ಅಧಿಕೃತವಾಗಿ ಡಿವೋರ್ಸ್‌ ಘೋಷಣೆ ಮಾಡಿದ್ದಾರೆ.

ಜನಪ್ರಿಯ ರ್ಯಾಂಪರ್ ಮತ್ತು ಪಂಜಾಬಿ ಸಿಂಗರ್ ಬಾದ್ಶಾ ಹಾಗೂ ನಟಿ ಇಶಾ ರಿಖಿ ಅಧಿಕೃತವಾಗಿ ಬೇರೆಯಾಗಿದ್ದಾರೆ. ಇಬ್ಬರೂ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡು, ಪರಸ್ಪರ ಒಪ್ಪಿಗೆಯಿಂದ ಬೇರ್ಪಡುತ್ತಿರುವುದಾಗಿ ತಿಳಿಸಿದ್ದಾರೆ.

ಐದೇ ತಿಂಗಳಿಗೆ ಮುರಿದು ಬಿದ್ದ ಮದುವೆ

ಬಾದ್ಶಾ ತಮ್ಮ ಪೋಸ್ಟ್ನಲ್ಲಿ, ನಾನು ಮತ್ತು ಇಶಾ ರಿಖಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟು, ನಮ್ಮದೇ ದಾರಿಯಲ್ಲಿ ಮುಂದುವರಿಯಲು ನಿರ್ಧರಿಸಿದ್ದೇವೆ. ಈ ನಿರ್ಧಾರವನ್ನು ಪರಸ್ಪರ ಗೌರವದಿಂದ ತೆಗೆದುಕೊಂಡಿದ್ದೇವೆ. ಈ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.

ಇಶಾ ರಿಖಿ ಕೂಡ ಇದೇ ರೀತಿಯ ಪೋಸ್ಟ್ ಅನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ತಮ್ಮ ಸಂಬಂಧದ ಬಗ್ಗೆ ಯಾವುದೇ ರೀತಿಯ ವದಂತಿ ಅಥವಾ ಊಹಾಪೋಹಗಳನ್ನು ಮಾಡಬೇಡಿ ಎಂದು ಇಬ್ಬರೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಬಾದ್ಶಾ ಮತ್ತು ಇಶಾ ತಮ್ಮ ಸಂಬಂಧವನ್ನು ಸದಾ ಖಾಸಗಿಯಾಗಿಯೇ ಇಟ್ಟುಕೊಂಡಿದ್ದರು. 2026ರ ಮಾರ್ಚ್ನಲ್ಲಿ ಇಶಾ ಅವರ ತಾಯಿ ಪೂನಂ ರಿಖಿ ಅವರು ಇನ್ಸ್ಟಾಗ್ರಾಂನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡ ನಂತರ ಇವರ ಮದುವೆಯ ಸುದ್ದಿ ಬಹಿರಂಗವಾಗಿತ್ತು.

ನಂತರ 2026ರ ಜೂನ್ನಲ್ಲಿ ಇಶಾ ರಿಖಿ ಇನ್ಸ್ಟಾಗ್ರಾಂನ ‘Ask Me Anything’ ಸೆಷನ್ನಲ್ಲಿ ತಮ್ಮ ಮದುವೆಯನ್ನು ಖಚಿತಪಡಿಸಿದ್ದರು. ಮದುವೆಗೂ ಮುನ್ನ ಇಬ್ಬರೂ ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಆದರೆ ಮದುವೆಯಾದ ಕೇವಲ ಐದು ತಿಂಗಳಲ್ಲೇ ಇಬ್ಬರೂ ಬೇರ್ಪಟ್ಟಿದ್ದಾರೆ. ಇವರ ವಿಚ್ಛೇದನಕ್ಕೆ ನಿಖರವಾದ ಕಾರಣ ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ.

ಇದು ಬಾದ್ಶಾ ಅವರ ಎರಡನೇ ಮದುವೆ. ಇದಕ್ಕೂ ಮೊದಲು 2012ರಲ್ಲಿ ಅವರು ಜಾಸ್ಮಿನ್ ಮಸೀಹ್ ಅವರನ್ನು ಮದುವೆಯಾಗಿದ್ದರು. 2017ರಲ್ಲಿ ಇವರಿಗೆ ಮಗಳು ಜೆಸೆಮಿ ಗ್ರೇಸ್ ಮಸೀಹ್ ಸಿಂಗ್ ಜನಿಸಿದ್ದರು. ನಂತರ 2020ರಲ್ಲಿ ಇಬ್ಬರೂ ಬೇರ್ಪಟ್ಟಿದ್ದರು. ಸದ್ಯ ಜಾಸ್ಮಿನ್ ತಮ್ಮ ಮಗಳೊಂದಿಗೆ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಬಾದ್ಶಾ ಮತ್ತು ಜಾಸ್ಮಿನ್ ಇಬ್ಬರೂ ಸೇರಿ ತಮ್ಮ ಮಗಳ ಆರೈಕೆ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ಇಶಾ ರಿಖಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಇದು ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಎಬ್ಬಿಸಿತ್ತು. ಇಶಾ ತಮ್ಮ ಪೋಸ್ಟ್‌ನಲ್ಲಿ ಬಾದ್‌ಶಾ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ಇಶಾ ರಿಖಿ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಜೀವನದಲ್ಲಿ ಎದುರಿಸಿದ ಭಯ ಮತ್ತು ಮೌನದ ಬಗ್ಗೆ ಭಾವನಾತ್ಮಕವಾಗಿ ಬರೆದಿದ್ದರು. ಕೆಲವು ಯುದ್ಧಗಳಲ್ಲಿ ಯಾವುದೇ ಗೋಚರ ಬಾಹ್ಯ ಚಿಹ್ನೆಗಳಿರುವುದಿಲ್ಲ. ನಾನು ಭಯದಿಂದ ದೀರ್ಘಕಾಲ ಮೌನವಾಗಿದ್ದೆ. ನನ್ನ ಮೌನ ಎಂದರೆ ನಾನು ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ ಎಂದಲ್ಲ. ಅದು ಕೇವಲ ಪರಿಸ್ಥಿತಿಯನ್ನು ನಿಭಾಯಿಸುವ ಒಂದು ಮಾರ್ಗವಾಗಿತ್ತು. ಆದರೆ ಇಂದು ನಾನು ಭಯಕ್ಕಿಂತ ಧೈರ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್‌ಜಿವಿ ಅಥವಾ ರಾಜಮೌಳಿ, ಇಬ್ಬರಲ್ಲಿ ನಿಮ್ಮ ಫೇವರೆಟ್ ಯಾರು? ಈ ಪ್ರಶ್ನೆಗೆ 'ಸ್ಟನ್ನಿಂಗ್' ಉತ್ತರ ಕೊಟ್ಟ ಕಿಚ್ಚ ಸುದೀಪ್!
Kalabhairava: ತಮ್ಮನೊಂದಿಗೆ ಸಿನಿಮಾ, ಅಣ್ಣನೊಂದಿಗೆ ಲವ್; ಎಂಎಂ ಕೀರವಾಣಿ ಮಗನ ಕೈಹಿಡಿಯಲಿರುವ ನಟಿ ಕಾವ್ಯ ಕಲ್ಯಾಣ್‌ರಾಮ್