
ಮಾಲಿವುಡ್ ಮಲರ್, ಟಾಲಿವುಡ್ ಕರ್ಲಿ ಗರ್ಲ್, ಸ್ಯಾಂಡ್‌ವುಡ್ ಗಾರ್ಗಿ...ಅಭಿಮಾನಿಗಳು ಕೊಟ್ಟಿರುವ ಪಟ್ಟಗಳ ಬಗ್ಗೆ ಬರೆದರೆ ಒಂದು ದಿನ ಸಾಲದು. ಸದ್ಯ ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಅಭಿನಯಿಸಿದರುವ ತಂಡೇಲ್ ಸಿನಿಮಾ ಭರ್ಜರಿ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ. ಇತ್ತೀಚಿಗೆ ಸಾಯಿ ಪಲ್ಲವಿ ಸಿನಿಮಾಗಳನ್ನು ಆಯ್ಕೆ ಮಾಡುವ ರೀತಿ ತುಂಬಾ ಬದಲಾಯಿಸಿಕೊಂಡಿದ್ದಾರೆ. ಜನರಿಗೆ ಹತ್ತಿರವಾಗುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ರಿಲೀಸ್ ಆದ ಅಮರನ್ ಕೂಡ ಬಿಗ್ ಹಿಟ್ ಕಂಡಿತ್ತು. ಅಲ್ಲಿಗೆ ಪಲ್ಲವಿ ಸಂಭಾವನೆ ಗಗನ ಮುಟ್ಟುವುದರಲ್ಲಿ ಅನುಮಾನವಿಲ್ಲ.
ವಿಭಿನ್ನ ಪಾತ್ರಗಳ ಮೂಲಕ ಜನರಿಗೆ ಇಷ್ಟವಾಗಿರುವ ಸಾಯಿ ಪಲ್ಲವಿ ಸಿಕ್ಕಾಪಟ್ಟೆ ಸಿಂಪಲ್. ಯಾರೇ ಬಂದು ಸೆಲ್ಫಿ ಅಥವಾ ಆಟೋಗ್ರಾಫ್ ಕೇಳಿದ್ದರೆ ಇಲ್ಲ ಅನ್ನದೆ ಕೂಲ್ ಆಗಿ ಹ್ಯಾಂಡಲ್ ಮಾಡುತ್ತಾರೆ. ಇತ್ತೀಚಿಗೆ ತಂಡೇಲ್ ಸಿನಿಮಾದ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು ಸಾಯಿ ಪಲ್ಲವಿಯನ್ನು ಕಂಡು ಖುಷಿಯನ್ನು ಕುಣಿದು ಸೆಲ್ಫಿ ಕೇಳುತ್ತಾರೆ. ಸೆಲ್ಫಿ ಪಡೆದ ನಂತರ ಕೈ ಕುಲುಕಿಸಿ ನಂತರ ಅದೇ ಕೈಗೆ ಮುತ್ತು ಕೊಡುತ್ತಾರೆ. ಅಭಿಮಾನಿ ಮುಖದಲ್ಲಿ ಖುಷಿ ನೋಡಿ ಸಾಯಿ ಪಲ್ಲವಿ ನಾಚಿಕೊಳ್ಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿತ್ತು....ಕೋಟಿಗೊಬ್ಬ ಸಿನಿಮಾದ ಬಿಜಿಎಂ ಮಿಕ್ಸ್ ಹಾಕಿ ಹಾಡನ್ನು ವೈರಲ್ ಮಾಡುತ್ತಿದ್ದಾರೆ. ನಿಜವಾದ ಲೇಡಿ ಸೂಪರ್ ಸ್ಟಾರ್ ನಯನತಾರ ಅಲ್ಲ ಸಾಯಿ ಪಲ್ಲವಿ ಎನ್ನುತ್ತಿದ್ದಾರೆ.
ಸುದೀಪ್ ಕುಟುಂಬದಿಂದ ಬಂಪರ್ ಆಫರ್ ಪಡೆದ ಉಗ್ರಂ ಮಂಜು; ಎಷ್ಟು ಲಕ್ಷ ಎಂದ ನೆಟ್ಟಿಗರು
ಸಾಯಿ ಪಲ್ಲವಿ ನಟನೆಯ ಮೂರ್ನಾಲ್ಕು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಯ್ತು. ಆದರೆ ಅಮರನ್ ಸಿನಿಮಾ ಬಿಗ್ ಹಿಟ್ ತಂದುಕೊಟ್ಟಿತ್ತು. ಇದನ್ನು ಪಲ್ಲವಿ ಕಮ್‌ಬ್ಯಾಕ್ ಸಿನಿಮಾ ಎನ್ನಲಾಗಿದೆ. ರಾಕಿಂಗ್ ಸ್ಟಾರ್ ಯಶ್, ರಣಬೀರ್ ಕಪೂರ್, ಸೈಫ್ ಅಲಿ ಖಾನ್, ಕರೀನಾ ಕಪೂರ್...ಹೀಗೆ ದೊಡ್ಡ ತಾರ ಬಳಗ ಹೊಂದಿರುವ ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಅದು ಸೀತಾ ಪಾತ್ರದಲ್ಲಿ ಮಿಂಚುತ್ತಿರುವುದು ಮತ್ತೊಂದು ಸ್ಪೆಷಲ್. ಸಿನಿಮಾ ಚಿತ್ರೀಕರಣ ಭರ್ಜರಿಯಾಗಿ ಮುಂಬೈನಲ್ಲಿ ನಡೆಯುತ್ತಿದೆ. ಇದುವರೆಗೂ ಮಾಹಿತಿ ಮಾತ್ರ ರಿವೀಲ್ ಆಗಿರುವುದು ಹೀಗಾಗಿ ಫಸ್ಟ್ ಲುಕ್, ಪೋಸ್ಟರ್ ಅಥವಾ ಟೀಸರ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಜನರಿಗೆ ಇಷ್ಟವಾಗಿದ್ದೇ ಗುಂಗುರು ಕೂದಲು ಅದನ್ನೇ ಬದಲಾಯಿಸಿಬಿಟ್ರಾ ಸಾಯಿ ಪಲ್ಲವಿ? ಫೋಟೋ ವೈರಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.