ಬೆಡ್ ರೂಮಲ್ಲಿ ಗಂಡ-ಹೆಂಡ್ತಿ ಬಂಧ ಹೇಗಿರುತ್ತೆ ಅಂತ ಯಾರಿಗೂ ಹೇಳಲಾಗೋಲ್ಲ: ಶಾರುಖ್ ಹೀಗ್ಯಾಕಂದ್ರು?

By Roopa Hegde  |  First Published Jun 6, 2024, 3:56 PM IST

ಶಾರುಕ್ ಖಾನ್ ಹಾಗೂ ಗೌರಿ.. ಬಾಲಿವುಡ್ ಪ್ರಸಿದ್ಧ ದಂಪತಿ. ಆಗಾಗ ಪತ್ನಿ ಗೌರಿಯನ್ನು ಹೊಗಳುವ ಶಾರುಕ್, ಕೆಲವೊಂದು ಇಂಟರೆಸ್ಟಿಂಗ್ ವಿಷ್ಯವನ್ನು ಹೊರಗೆ ಹಾಕ್ತಿರುತ್ತಾರೆ. ಹಿಂದೆ ಗೌರಿಗೆ ನೀವು ಭಯಪಡ್ತಿರಾ ಎಂದು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ ಭಿನ್ನವಾಗಿತ್ತು. 
 


ಬಾಲಿವುಡ್ ನ ಸೂಪರ್ ಜೋಡಿಗಳಲ್ಲಿ (Bollywood Super Couple) ಶಾರುಖ್ ಖಾನ್ ಹಾಗೂ ಗೌರಿ ಖಾನ್ ಹೆಸರು ಮುಂದಿದೆ. ಮಾದರಿ ದಂಪತಿ ಎಂಬ ಬಿರುದನ್ನು ಇವರು ಪಡೆದಿದ್ದಾರೆ. ಇವರನ್ನು ಬಾಲಿವುಡ್ ನ ಐಟಿ ಜೋಡಿ ಎಂದೇ ಕರೆಯುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಪ್ರೀತಿಗೆ ಬಿದ್ದು, ಮದುವೆಯಾದ ದಂಪತಿ ಮಧ್ಯೆ 32 ವರ್ಷ ಕಳೆದ್ರೂ ಕಿಂಚಿತ್ತು ಪ್ರೀತಿ ಕಡಿಮೆ ಆಗಿಲ್ಲ. ಜೀವನದಲ್ಲಿ ಎಷ್ಟೇ ಏರಿಳಿತ ಬಂದ್ರೂ ಹೊಂದಿಕೊಂಡು ಹೋಗ್ತಿರುವ ಜೋಡಿ ಅನೇಕರಿಗೆ ಮಾದರಿ. 

ಶಾರುಕ್ ಖಾನ್ (Shah Rukh Khan) ಹಾಗೂ ಗೌರಿ (Gauri) ಲವ್ ಸ್ಟೋರಿ (Love Story) ಸಿನಿಮಾಗಿಂತ ಭಿನ್ನವಾಗಿಲ್ಲ. ತಮ್ಮ 14ನೇ ವಯಸ್ಸಿನಲ್ಲೇ ಶಾರುಖ್ ಭೇಟಿಯಾಗಿದ್ದರು ಗೌರಿ. ಆಗ ಶಾರುಕ್ ಖಾನ್ ವಯಸ್ಸು 18. ಸ್ನೇಹಿತರ ಪಾರ್ಟಿಯೊಂದರಲ್ಲಿ ಇಬ್ಬರ ಭೇಟಿಯಾಗಿತ್ತು. ಸ್ವಲ್ಪ ಹೊತ್ತು ಶಾರುಕ್ ಜೊತೆ ಮಾತನಾಡಿದ್ದ ಗೌರಿ ಅಲ್ಲಿಂದ ಹೊರ ನಡೆದಿದ್ದರು. ಆದ್ರೆ ಗೌರಿ ಪ್ರೀತಿ (love)ಯಲ್ಲಿ ಬಿದ್ದಿದ್ದ ಶಾರುಕ್, ಗೌರಿ ನಂಬರ್ ಪಡೆದು ಮಾತುಕತೆ ಶುರು ಮಾಡಿದ್ದರು. ಅನೇಕ ವರ್ಷ ನಡೆದ ಇವರಿಬ್ಬರ ಡೇಟಿಂಗ್ (Dating) ನಂತ್ರ ಮದುವೆಗೆ ಬಂದು ನಿಂತಿತ್ತು. ಅಕ್ಟೋಬರ್ 25, 1991ರಲ್ಲಿ ಗಿ ಹಾಗೂ ಶಾರುಕ್ ಖಾನ್ ದಾಂಪತ್ಯ ಜೀವನಕ್ಕೆ (Married Life) ಕಾಲಿಟ್ಟಿದ್ದರು. ಮೂವರು ಮಕ್ಕಳನ್ನು ಹೊಂದಿರುವ ಶಾರುಕ್,  ಗೌರಿ ಜೋಡಿ ಸಂತೋಷದ, ನೆಮ್ಮದಿಯ ಜೀವನ ನಡೆಸುತ್ತಿದೆ. 

Tap to resize

Latest Videos

ಆ ಕಣ್ಣೋಟಕ್ಕೆ ಕರಗಿಹೋದ ಫ್ಯಾನ್ಸ್​! ಸದ್ಯ ಫಸ್ಟ್​ನೈಟ್​ನಲ್ಲೂ ಕೋಟು ಧರಿಸಿಲ್ಲ ಅನ್ನೋದೇ ಸಮಾಧಾನ ಅಂತಿದ್ದಾರೆ!

ಶಾರುಕ್ ಖಾನ್ ಗೌರಿಯನ್ನು ಪ್ರೀತಿಸ್ತಾರೆ, ಗೌರವಿಸುತ್ತಾರೆ. ಶಾರುಕ್ ಖಾನ್ ಅನೇಕ ಬಾರಿ ಗೌರಿ ಮೇಲಿರುವ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ಆದ್ರೆ ಸಂದರ್ಶನವೊಂದರಲ್ಲಿ ಶಾರುಕ್ ಖಾನ್ ಅವರಿಗೆ ನೀವು ಗೌರಿಯವರಿಗೆ ಹೆದರುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಶಾರುಕ್ ಖಾನ್ ನೀಡಿದ ಉತ್ತರ ಎಲ್ಲರನ್ನು ಅಚ್ಚರಿಗೊಳಿಸಿದ್ದು ಸುಳ್ಳಲ್ಲ. ಅಲ್ಲದೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

ಗೌರಿಗೆ ಹೆದರುತ್ತಾರಾ ಶಾರುಕ್ ? : ಈ ಪ್ರಶ್ನೆಗೆ ಶಾರುಕ್ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ನೀವು ಅದನ್ನು ತಿಳಿಯಲು ಸಾಧ್ಯವಿಲ್ಲ. ನೀವು ನನ್ನ ಪತ್ನಿಯಾಗಿದ್ದರೆ ತಿಳಿಯುತ್ತಿತ್ತು ಎನ್ನುತ್ತಲೇ ಮಾತು ಆರಂಭಿಸುವ ಶಾರುಕ್ ಖಾನ್, ನೀವು ನಿಜವಾಗಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಬ್ಬರ ನಡುವಿನ ಸಂಬಂಧಗಳು ಅದರಲ್ಲೂ ಗಂಡ-ಹೆಂಡತಿ, ಗೆಳತಿ-ಗೆಳೆಯ ಸಂಬಂಧ ತೀರಾ ವೈಯಕ್ತಿಕ. ಹಾಗಾಗಿ ಆ ಸಂಬಂಧವನ್ನು ಹೊರಗಿನಿಂದ ಯಾವ ವ್ಯಕ್ತಿಯೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮಲಗುವ ಕೋಣೆಯಲ್ಲಿ ನಡೆಯುವ ಸಂಬಂಧವನ್ನು ಹೊರಗಿನಿಂದ ಯಾರೂ ಅರ್ಥಮಾಡಿಕೊಳ್ಳಲು ಆಗೋದಿಲ್ಲ. ಹಾಗಾಗಿ ನಾನು ಭಯಪಡುತ್ತೇನೆ ಎಂದು ಕೆಲವರು ಭಾವಿಸಬಹುದು. ಇನ್ನು ಕೆಲವರು ನಾನು ಸಂತೋಷವಾಗಿದ್ದೇನೆಂದು ಭಾವಿಸ್ತಾರೆ. ನಾನು ಗೌರಿಯನ್ನು ತುಂಬಾ ಪ್ರೀತಿಸುತ್ತೇನೆ ಎಂದು ಮತ್ತ್ಯಾರೋ ಭಾವಿಸುತ್ತಾರೆ. ಆದ್ರೆ ನಮ್ಮಿಬ್ಬರ ನಡುವೆ ಏನಾಗಿದೆ ಎಂಬುದು ಇಬ್ಬರಿಗೆ ಮಾತ್ರ ಗೊತ್ತು. ಈ ಬಗ್ಗೆ ಮಾತನಾಡಿದ್ರೂ ಜನರಿಗೆ ಅರ್ಥವಾಗುವುದಿಲ್ಲ ಎಂದು ಶಾರುಖ್ ಖಾನ್ ಹೇಳಿದ್ದರು. 

ಕರೀನಾಳಿಂದ ಆಮೀರ್ ಖಾನ್‌ವರೆಗೆ.. ಪ್ರೇಮಿಗಾಗಿ ಕ್ರೇಜಿ ಕೆಲಸ ಮಾಡಿದ 6 ಬಾಲಿವುಡ್ ತಾರೆಯರು..

ಶಾರುಖ್ ಖಾನ್ ಈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಾಲಿವುಡ್ ಬಾದ್ ಷಾ, ಗೌರಿ ಬಗ್ಗೆ ಹೆಚ್ಚು ಪೊಸಿಸಿವ್ ಆಗಿದ್ದಾರೆ. ಹಿಂದೊಮ್ಮೆ ಡಾರ್ಲಿಂಗ್ ಪತ್ನಿ ಗೌರಿ, ಬೇರೆ ಯಾವುದೇ ಹುಡುಗರ ಜೊತೆ ಮಾತನಾಡಿದ್ರೂ ನನಗೆ ಸಹಿಸೋಕೆ ಆಗಲ್ಲ ಎಂದಿದ್ದರು. ಆಕೆ 6 ವರ್ಷದ ಮಗುವನ್ನು ಪ್ರೀತಿಸಿದ್ರೂ ನನಗೆ ಸಿಟ್ಟುಬರುತ್ತೆ ಎಂದಿದ್ದರು. ಒಮ್ಮೆ, ನಾನು ನನ್ನ ಹೆಂಡತಿಯ ಬಗ್ಗೆ ಹುಚ್ಚನಂತೆ ಪೊಸೆಸಿವ್ ಆಗಿದ್ದೆ. ಅವಳು ಆರು ವರ್ಷದ ಹುಡುಗನೊಂದಿಗೆ ಮಾತನಾಡಿದರೂ ನಾನು ಕಿರಿಕಿರಿಗೊಳ್ಳುತ್ತಿದ್ದೆ. ಇಂದು ನಾನು ನಿರಾಳವಾಗಿದ್ದೇನೆ. ನಾನು ಹೆಚ್ಚು ಸುರಕ್ಷಿತವಾಗಿದ್ದೇನೆ ಎಂದಿದ್ದರು. 

click me!