ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ಪ್ರಕರಣಕ್ಕೆ 25 ಕೋಟಿ ರೂ. ಖರ್ಚಾಗಿದೆ; ಸಲ್ಮಾನ್ ತಂದೆ ಸಲೀಂ ಖಾನ್

By Shruthi KrishnaFirst Published Nov 26, 2022, 4:50 PM IST
Highlights

ಸಲ್ಮಾನ್ ಖಾನ್ ಅವರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚಾಗಿದೆ ಎಂದು ತಂದೆ ಸಲೀಮ್ ಖಾನ್ ಹೇಳಿದ್ದಾರೆ.  

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ  ಭಾರತೀಯ ನಟ. ದೇಶ-ವಿದೇಶಗಳಲ್ಲಿ ಸಲ್ಮಾನ್ ಖಾನ್ ಅವರನ್ನು ಆರಾಧಿಸುವ, ಪ್ರೀತಿಸುವ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಸಲ್ಮಾನ್ ಖಾನ್ ಸಿನಿಮಾಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರಗಳಿಗೆ ಸುದ್ದಿಯಾಗಿದ್ದೇ ಹೆಚ್ಚು. ಕಾನೂನಿನ ಹೋರಾಟದಲ್ಲಿ ಸಲ್ಮಾನ್ ಖಾನ್ ಸಾಕಪ್ಪ ಎನ್ನುವ ಮಟ್ಟಕ್ಕೆ ಸುಸ್ತಾಗಿ ಹೋಗಿದ್ದಾರೆ. ಹಿಟ್ ಅಂಡ್ ರನ್ ಪ್ರಕರಣ, ಕೃಷ್ಣ ಮೃಗ ಬೇಟೆ ಪ್ರಕರಣಗಳು ಸಲ್ಮಾನ್ ಖಾನ್ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಬಗ್ಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. 2002ರ ಹಿಟ್ ಅಂಡ್ ರನ್ ಪ್ರಕರಣದಿಂದ ಸಲ್ಮಾನ್ ಖಾನ್ ಪಾರಾಗಲು ಬರೋಬ್ಬರಿ 20 ರಿಂದ 25 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.  

ದಬಂಗ್ ಸ್ಟಾರ್ ಕುಡಿದು ವಾಹನ ಚಲಾಯಿಸಿ ಫುಟ್‌ಪಾತ್ ಮೇಲೆ ಮಲಗಿದ್ದ ಕೆಲವು ಪಾದಚಾರಿಗಳ ಮೇಲೆ ಕಾರನ್ನು ಹತ್ತಿಸಿದ ಪ್ರಕರಣ ದೇಶವನ್ನೆ ಬೆಚ್ಚಿಬೀಳಿಸಿತ್ತು. ಹಿಟ್ ಅಂಡ್ ರನ್ ಆರೋಪ ಎದುರಿಸುತ್ತಿದ್ದ ಸಲ್ಮಾನ್ ಖಾನ್ ಈ ಪ್ರಕರಣದಿಂದ ಹೊರಬರಲು ಭಾರಿ ಪ್ರಯತ್ನ ಪಟ್ಟಿದ್ದಾರೆ. ಆಗಾಗ ನ್ಯಾಯಾಲಕ್ಕೆ ಹೋಗಿ ಬರುತ್ತಿದ್ದರು. ಬಳಿಕ ಈ 2015ರಲ್ಲಿ ಈ ಪ್ರಕರಣದಿಂದ ಸಲ್ಮಾನ್ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿತು. ಈ ಮೂಲಕ ಸಲ್ಮಾನ್ ಖಾನ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು. 

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ: ಭದ್ರತೆಗೆ ಆಗುವ ಖರ್ಚು ಎಷ್ಟು ಗೊತ್ತಾ?

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸೂಪರ್‌ಸ್ಟಾರ್ ಅನುಭವಿಸಿದ ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡಿದ್ದರು. 'ಎಲ್ಲರೂ ಸಂತೋಷವಾಗಿ ಇದ್ದಾರೆ. ಬಾವನಾತ್ಮಕವಾಗಿ ಸಲ್ಮಾನ್ ಹತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಂತೋಷವಾಗಿದ್ದಾರೆ. ನನಗೂ ಸಂತೋಷ ಮತ್ತು ನೆಮ್ಮದಿಯಾಗಿದೆ. ಕೆಲವು ದಿನಗಳು ಜೈನಿಲ್ಲಿ ಇದ್ದ. ಈ ಪ್ರಕರಣಕ್ಕೆ 20 ರಿಂದ 25 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆತ ಅನುಭವಿಸಿದ ಟೆನ್ಶನ್ ಮತ್ತು ಎಲ್ಲರೂ ಅದರ ಬಗ್ಗೆಯೇ ಯೋಚಿಸುತ್ತಿದ್ದೆವು' ಎಂದು ಹೇಳಿದ್ದಾರೆ.   

ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಳ; ಅಕ್ಷಯ್ ಕುಮಾರ್, ಅನುಪಮ್ ಖೇರ್‌ಗೆ X ಶ್ರೇಣಿ ಸೆಕ್ಯೂರಿಟಿ

ಸಲ್ಮಾನ್ ಖಾನ್ ಸದ್ಯ ಕೃಷ್ಣ ಮೃಗ ಹತ್ಯೆ ಮಾಡಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್​ಗಾಗಿ ​ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದ ಸಲ್ಮಾನ್​ ಖಾನ್ ಸಿನಿಮಾ ತಂಡದ ಕೆಲವರ ಜೊತೆ ಸೇರಿ ಕೃಷ್ಣ ಮೃಗವನ್ನು ಬೇಟೆಯಾಡಿದ್ದರು ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸೆಷನ್ಸ್​ ನ್ಯಾಯಾಲಯ ಅವರಿಗೆ ಐದು ವರ್ಷ ಶಿಕ್ಷೆಯನ್ನೂ ವಿಧಿಸಿತ್ತು. ಆ ಬಳಿಕ ಸಲ್ಮಾನ್ ಖಾನ್​ ಅವರು ಈ ಪ್ರಕರಣಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ರಾಜಸ್ಥಾನ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

click me!