ಮಾದಕ ನಟಿ ಪೂನಂ ಪಾಂಡೆ ಸತ್ತೇ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ, ಈಕೆ ಕೆಲ ದಿನಗಳ ಹಿಂದಷ್ಟೇ ಹೇಳಿದ ಮಾತೊಂದು ಭಾರಿ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.
ನಿನ್ನೆ ಫೆಬ್ರುವರಿ 2ರಂದು ಬೆಳ್ಳಂಬೆಳಗ್ಗೆ ಬಾಲಿವುಡ್ ಇಂಡಸ್ಟ್ರಿಗೆ ಬರಸಿಡಿಲು ಬಡಿದ ಸುದ್ದಿ ಬಂತು. ಹಾಟೆಸ್ಟ್ ನಟಿ, ಮಾದಕ ತಾರೆ ಎಂದೇ ಖ್ಯಾತಿ ಪಡೆದ, ಸದಾ ತಮ್ಮ ಬಟ್ಟೆಗಳಿಂದಲೇ ವಿವಾದದಲ್ಲಿಯೂ ಇದ್ದ 32 ವರ್ಷದ ನಟಿ ಪೂನಂ ಪಾಂಡೆ ಸಾವಿನ ಸುದ್ದಿಯದು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ ಎಂಬ ಸುದ್ದಿ ಬಂತು. ಗರ್ಭಕಂಠದ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು ಎನ್ನಲಾಗಿತ್ತು. ಇದಕ್ಕೆ ಕಾರಣ, ಪೂನಂ ತಂಗಿ ಹೇಳಿದ ಮಾತು. ಅಕ್ಕ ಗರ್ಭಕಂಠ ಕ್ಯಾನ್ಸರ್ ಸತ್ತಿದ್ದಾಗಿ ಹೇಳಿದ್ದರು.
ಆದರೆ ಇದೀಗ ಪೂನಂ ಪಾಂಡೆಯ ಸಾವಿನ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇವರು ಸಾವನ್ನಪ್ಪಿದರೆ, ಅವರ ಬಾಡಿ ಸಿಗುತ್ತಿಲ್ಲ. ಮನೆಯವರ ಫೋನ್ ಸ್ವಿಚ್ ಆಫ್ ಆಗಿದೆ. ಇದರಿಂದಾಗಿ ಈಕೆಯ ಸಾವಿನ ಬಗ್ಗೆ ಅನುಮಾನಗಳು ಶುರುವಾಗಿದೆ. ಸಾಲದು ಎಂಬುದಕ್ಕೆ ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಪೂನಂ ವಿಡಿಯೋ ಶೇರ್ ಮಾಡಿದ್ದರು. ಅವರನ್ನು ನೋಡಿದರೆ ಅನಾರೋಗ್ಯಪೀಡಿತರಂತೆ ಕಾಣಿಸುತ್ತಿರಲಿಲ್ಲ, ಇದರ ಬಗ್ಗೆ ಕೂಡ ಯಾರಿಗೂ ಹೇಳಿಕೊಂಡಿರಲಿಲ್ಲ. ಏಕಾಏಕಿ ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಬಂದಿದ್ದರಿಂದ ಎಲ್ಲರೂ ಶಾಕ್ ಆಗಿದ್ದರು. ಇದೀಗ ಸಾವಿನ ಹಿಂದೆ ಪ್ರಚಾರದ ಗಿಮಿಕ್ ಇದ್ಯಾ ಎನ್ನುವ ಮಾತು ಕೇಳಿ ಬರುತ್ತಿದೆ.
32 ಲಕ್ಷ ಚಂದಾದಾರರ ಈ ಆ್ಯಪ್ ಪೂನಂ ಪಾಂಡೆಯನ್ನು ಕೋಟ್ಯಧಿಪತಿ ಮಾಡಿತ್ತು! ನಟಿಯ ಸಂಪಾದನೆ ಮಾರ್ಗ ಹೀಗಿತ್ತು
ಅಷ್ಟಕ್ಕೂ ಕಾಮಪ್ರಚೋದಕ ನಟನೆಯಿಂದ ಫೇಮಸ್ ಆಗಿರುವ ನಟಿ ಸಿಕ್ಕಾಪಟ್ಟೆ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಡ್ರಗ್ಸ್ ಮಿತಿಮೀರಿ ಈ ರೀತಿ ಸುಳ್ಳು ಹೇಳಿಕೆ ಕೊಟ್ಟಿರಬಹುದು ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ, ನಟಿಗೆ ಗರ್ಭಕಂಠ ಕ್ಯಾನ್ಸರ್ ಇದ್ದದ್ದೇ ಹೌದಾದರೆ ವ್ಯಕ್ತಿ ಏಕಾಏಕಿ ಮೃತಪಡುವುದಿಲ್ಲ ಎಂದೂ ತಜ್ಞರು ಹೇಳುತ್ತಿದ್ದಾರೆ. ಅಷ್ಟಕ್ಕೂ ಸಾವು ಹೇಗಾದರೂ ಬರಬಹುದು ಎನ್ನುವುದು ದಿಟವೇ. ಆದರೆ ಈ ಎಲ್ಲಾ ಊಹಾಪೋಹಗಳ ನಡುವೆ ಕೆಲ ದಿನಗಳ ಹಿಂದಷ್ಟೇ ನಟಿ ಆಡಿದ ಮಾತೀಗ ಭಾರಿ ವೈರಲ್ ಆಗುತ್ತಿದೆ.
ಇದರಲ್ಲಿ ನಟಿ, ತಾವು ಶೀಘ್ರದಲ್ಲಿ ಎಲ್ಲರಿಗೂ ಶಾಕ್ ಕೊಡುವುದಾಗಿ ಹೇಳಿದ್ದರು. ಬ್ರೈಟ್ ಅವಾರ್ಡ್ಸ್ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಮಾಧ್ಯಮಗಳ ಜೊತೆ ನೀಡಿದ್ದ ಸಂದರ್ಶನದಲ್ಲಿ ನಟಿ, ‘ನಿಮ್ಮ ಮುಂದೆ ಶೀಘ್ರದಲ್ಲಿ ಯಾರೂ ಊಹೆ ಮಾಡಲು ಒಂದು ದೊಡ್ಡ ಸುದ್ದಿ ಬರುತ್ತದೆ, ಕಾಯುತ್ತಿರಿ, ಅದು ಎಲ್ಲರನ್ನೂ ಸರ್ಪ್ರೈಸ್ ಮಾಡುತ್ತದೆ. ನನಗೆ ಫ್ಯಾನ್ಸ್ಗೆ ಸರ್ಪ್ರೈಸ್ ಕೊಡುವುದು ಎಂದರೆ ಎಲ್ಲಿಲ್ಲದ ಖುಷಿ. ನಾನು ಬದಲಾಗಿದ್ದೇನೆ ಎಂದು ಜನರಿಗೆ ತಿಳಿದಾಗ ಸರ್ಪ್ರೈಸ್ ಎನಿಸುತ್ತದೆ. ಆದ್ದರಿಂದ ಬೇಗನೇ ಸರ್ಪ್ರೈಸ್ ಸಿಗಲಿದ್ದು, ನೀವು ಅದರ ಭಾಗವಾಗಲಿದ್ದೀರಿ. ಎಲ್ಲರಿಗೂ ಶಾಕ್ ಆಗಲಿದೆ. ನಿಮ್ಮ ಪ್ರತಿಕ್ರಿಯೆ ನೋಡಲು ಕಾದಿದ್ದೇನೆ’ ಎಂದು ಹೇಳಿದ್ದರು. ಹಾಗಿದ್ದರೆ ಸರ್ಪ್ರೈಸ್ ಹೆಸರಿನಲ್ಲಿ ಪೂನಂ ಪಾಂಡೆ, ಸಾವಿನ ಸುದ್ದಿ ಕೊಟ್ಟರೇ ಎನ್ನಲಾಗುತ್ತಿದೆ.
39 ವರ್ಷ ಹಿರಿಯ ಶಕ್ತಿ ಕಪೂರ್ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್ ನೈಟ್ ಸೀನ್: ಬೆಚ್ಚಿಬಿದ್ದ ಪ್ರೇಕ್ಷಕರು!