ಪೂನಂ ಪಾಂಡೆ ಸತ್ತಿದ್ದು ಹೌದೋ ಅಲ್ಲವೋ ಎಂಬ ಅನುಮಾನದ ನಡುವೆಯೇ ಆಕೆ ಸತ್ತಿದ್ದರೂ ಅದರ ಸುತ್ತಣ ಚಿತ್ರ ಬೇರೆ ಬೇರೆ ಕತೆ ಹೇಳುತ್ತಿವೆ. ಕುಟುಂಬ ಕೂಡಾ ಆಕೆಯ ಸಾವಿನ ಬಗ್ಗೆ ಮಾತನಾಡಿಲ್ಲ. ಅಷ್ಟೇ ಅಲ್ಲ, ಪಾಂಡೆ ಕುಟುಂಬ ನಾಟ್ ರೀಚೇಬಲ್ ಆಗಿರುವುದು ಮತ್ತಷ್ಟು ಸಮಸ್ಯೆ ತಂದಿದೆ.
ಜನಪ್ರಿಯ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ ಎಂದು ನಟಿಯ ಸೋಷ್ಯಲ್ ಮೀಡಿಯಾ ತಂಡ ಹೇಳಿಕೊಂಡ ನಂತರ ಸಾಮಾಜಿಕ ಮಾಧ್ಯಮದ ತುಂಬಾ ಇದೇ ವಿಷಯ ಹರಿದಾಡಿದೆ. ಅವರ ನಿಧನದ ಬಗ್ಗೆ ಅವರ ತಂಡವು ಅಧಿಕೃತ ಟಿಪ್ಪಣಿಯನ್ನು ಸಹ ಬಿಡುಗಡೆ ಮಾಡಿದೆ. ಈ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಆದರೆ, ನಿಧಾನವಾಗಿ ಈ ಸುದ್ದಿಯ ಸತ್ಯಾಸತ್ಯತೆ ಬಗ್ಗೆ ಬಹಳಷ್ಟು ಅನುಮಾನಗಳು ಗೊಂದಲಗಳು ಸೃಷ್ಟಿಯಾಗಿವೆ. ಪೂನಂ ಪಾಂಡೆ ಸತ್ತಿರುವುದೇ ಸುಳ್ಳು- ಇದು ಪ್ರಚಾರದ ತಂತ್ರವಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಆಕೆ ಸತ್ತಿದ್ದರೂ ಸರ್ವಿಕಲ್ ಕ್ಯಾನ್ಸರ್‌ನಿಂದಲ್ಲ. ಇಲ್ಲೇನೋ ಸರಿ ಇಲ್ಲ ಎನ್ನುತ್ತಿದ್ದಾರೆ.
ನೀನು ಲಂಬೋರ್ಘಿನಿ, ನಾನು ನ್ಯಾನೋ ಕಾರ್... ಎಲ್ಲಿ ಹೋದೆ ಗೆಳತಿ... ಪೂನಂ ನೆನೆದು ಭಾವುಕರಾದ ರಾಖಿ
ಇದಕ್ಕೆ ಮುಖ್ಯ ಕಾರಣ, ಯಾರಾ ಸರ್ವಿಕಲ್ ಕ್ಯಾನ್ಸರ್‌ನಿಂದ ಸಡನ್ನಾಗಿ ಸಾಯುವುದಿಲ್ಲ ಎಂಬುದಾದರೆ, ಎರಡು ದಿನಗಳ ಹಿಂದಷ್ಟೇ ಅವರು ಕಾರ್ಯಕ್ರಮವೊಂದರಲ್ಲಿ ಸಂಪೂರ್ಣ ಆರೋಗ್ಯಕರವಾಗಿ ಕಂಡು ಬಂದಿದ್ದರು. ಇದಲ್ಲದೆ, ಅವರು ಕೇವಲ ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು ಮತ್ತು ಅದರಲ್ಲಿ ಅವರು ಉತ್ತಮ ಆರೋಗ್ಯದಲ್ಲಿದ್ದಾರೆ. ಜೊತೆಗೆ, ತಮಗೆ ಅನಾರೋಗ್ಯವಿರುವ ವಿಷಯವನ್ನೂ ಇಂಡಸ್ಟ್ರಿಯಲ್ಲಿ ಯಾರೊಬ್ಬರ ಬಳಿಯೂ ಹೇಳಿಲ್ಲ. ಜೊತೆಗೆ, ಸೋಷ್ಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಆಕೆಯ ನಿರ್ವಹಣಾ ತಂಡವು ಮೊದಲಲ್ಲಿ ಈ ಬಗ್ಗೆ ಸಹೋದರಿ ಖಚಿತ ಪಡಿಸಿದ್ದಾರೆ ಎಂದಿದ್ದರು. ನಂತರದಲ್ಲಿ ಈ ವಿಷಯವಾಗಿ ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು.
ಇಷ್ಟು ಸಾಲದೆಂಬಂತೆ ಪೂನಂ ಪಾಂಡೆಯ ಪಾರ್ಥಿವ ಶರೀರ ಎಲ್ಲಿಯೂ, ಯಾರಿಗೂ ಕಾಣಿಸುತ್ತಿಲ್ಲ. ಆಕೆ ವಾಸಿಸುತ್ತಿದ್ದ ಕಟ್ಟಡದಲ್ಲೂ ಈ ವಿಷಯದ ಬಗ್ಗೆ ಯಾರೂ ಏನೂ ಬಾಯಿ ಬಿಡುತ್ತಿಲ್ಲ. ಇನ್ನು ಆಕೆಯ ಕುಟುಂಬ ಕೂಡಾ ಈ ವಿಷಯವಾಗಿ ಎಲ್ಲಿಯೂ ತುಟಿ ಎರಡು ಮಾಡಿಲ್ಲ. ಜೊತೆಗೆ, ಅವರ್ಯಾರೂ ಸಂಪರ್ಕಕ್ಕೇ ಸಿಲುಕುತ್ತಿಲ್ಲ. ಪೂನಂ ಪಾಂಡೆ ಬಾಡಿಯ ಜೊತೆಗೆ ಕುಟುಂಬವೂ ಯಾರಿಗೂ ಸಿಗದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಶುಕ್ರವಾರ, ಪೂನಂ ಪಾಂಡೆಯ ಸಾವಿನ ಸುದ್ದಿಯು ಇಂಟರ್ನೆಟ್ ನಲ್ಲಿ ಬಿರುಗಾಳಿಯಂತೆ ಹರಡಿತು. ಆದರೆ, ಶನಿವಾರದ ಹೊತ್ತಿಗಾಗಲೇ ಈ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಆಕೆ, ಬದುಕಿದ್ದು, ಇದು ಪ್ರಚಾರದ ತಂತ್ರವೆಂದು ಬಹಳಷ್ಟು ಜನ ಊಹಿಸುತ್ತಿದ್ದಾರೆ. ಇನ್ನಾಕೆ ಸತ್ತಿದ್ದರೆ, ಡ್ರಗ್ಸ್ ಓವರ್‌ಡೋಸ್‌ನಿಂದ ಸತ್ತಿರಬಹುದು ಎಂದೂ ಹೇಳಲಾಗುತ್ತಿದೆ.
ಮಾಧ್ಯಮವೊಂದು ಪೂನಂ ತಂಗಿಯನ್ನು ಆರಂಭದಲ್ಲಿ ಮಾತಾಡಿಸಿತ್ತು. ಆಗ ಆಕೆ ಮಾತಾಡಿದ್ದರು. ಅಕ್ಕ ಸರ್ವಿಕಲ್ ಕ್ಯಾನ್ಸರ್‌ನಿಂದ ಸತ್ತಿದ್ದಾಗಿಯೂ ಹೇಳಿದ್ದರು. ಆದರೆ, ಕೆಲ ಸಮಯ ಬಿಟ್ಟು ಮತ್ತೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಫೋನ್ ತಲುಪುತ್ತಿಲ್ಲ. ಅವರು ಮಾತ್ರವಲ್ಲ ಕುಟುಂಬದ ಯಾರೊಬ್ಬರ ಫೋನ್ ಕೂಡಾ ಕರೆಗೆ ನಿಲುಕುತ್ತಿಲ್ಲ. ಜೊತೆಗೆ ನಿರ್ವಾಹಕ ತಂಡದ ಸದಸ್ಯರ ಫೋನ್‌ಗಳೂ ಸ್ವಿಚ್ಡ್ ಆಫ್ ಆಗಿವೆ ಎಂದು ಮಾಧ್ಯಮ ಮೂಲಗಳು ವರದಿ ಮಾಡಿವೆ.
ಸಿನಿಮಾ, ಮಾಡೆಲಿಂಗ್ ಹೊರತಾಗಿ ಈ ಮೂಲಕ ಹಣ ಸಂಪಾದಿಸುತ್ತಿದ್ದ ಪೂನಂ ಪಾಂಡೆ ನೆಟ್ ವರ್ತ್ ಎಷ್ಷು ಗೊತ್ತಾ?
ದೇಹಕ್ಕಾಗಿ ಹುಡುಕಾಟ
ಪೂನಂ ಸಾವಿನ ಸುದ್ದಿಯ ಬೆನ್ನಲ್ಲೇ ಆಕೆಯ ಮೃತದೇಹ ಎಲ್ಲಿದೆ ಎಂದು ತಿಳಿಯಲು ಎಲ್ಲರೂ ಕಾತರರಾಗಿದ್ದಾರೆ. ಆದರೆ, ಅದರ ಬಗ್ಗೆ ಆಕೆಯ ಕುಟುಂಬವಾಗಲೀ, ನಿರ್ವಾಹಕ ತಂಡವಾಗಲೀ ಯಾವುದೇ ಮಾಹಿತಿ ನೀಡುತ್ತಿಲ್ಲ.