ಶಾರೂಕ್ ಜೊತೆಗಿನ 4 ಚಿತ್ರಗಳನ್ನು ತಿರಸ್ಕರಿಸಿದ್ದ ಜನಪ್ರಿಯ ನಟಿ; ಇದರಿಂದ ಲಾಭವಾಗಿದ್ದು ಜೂಹಿ ಚಾವ್ಲಾಗೆ!

By Suvarna News  |  First Published Feb 3, 2024, 12:11 PM IST

ಕಿಂಗ್ ಖಾನ್ ಜೊತೆ ನಟಿಸೋ ಆಸೆ ಬಾಲಿವುಡ್‌ನ ಯಾವ ನಟಿಯರಿಗಿರುವುದಿಲ್ಲ ಹೇಳಿ? ಹಾಗಿದ್ದೂ, ಈ ನಟನ ಜೊತೆ ಅಭಿನಯಿಸುವ ಅವಕಾಶ ಹೊಂದಿದ 4 ಆಫರ್‌ಗಳನ್ನು ತಿರಸ್ಕರಿಸಿದ ಆ ನಟಿ ಯಾರು?


ಕೆಲ ವರ್ಷಗಳ ಹಿಂದೆ ಹೋದರೆ ಬಾಲಿವುಡ್‌ನಲ್ಲಿ ಶಾರೂಖ್ ಖಾನ್‌ ಎಂದರೆ ದಶಕಗಳ ಕಾಲ ಸೋಲರಿಯದ ನಟ. ತನ್ನ ದೊಡ್ಡ ಮಟ್ಟದ ಯಶಸ್ಸಿನಿಂದಾಗಿ ಬಾಲಿವುಡ್ ಬಾದ್‌ಶಾ ಎಂಬ ಬಿರುದು ಪಡೆದವರು. ಇಂಥ ಶಾರೂಖ್ ಚಿತ್ರದಲ್ಲಿ ಸಣ್ಣ ಪಾತ್ರಗಳು ಸಿಕ್ಕರೂ ಸಾಕು ಎಂದು ಕಾಯುವವರ ಸಂಖ್ಯೆ ಹಲವು. ಅಂಥದರಲ್ಲಿ ನಟನಿಗೆ ಎದುರು ಮುಖ್ಯನಟಿಯಾಗಿ ಅಭಿನಯಿಸುವ 4 ಆಫರ್‌ಗಳನ್ನು ತಿರಸ್ಕರಿಸಿದ್ದರಂತೆ ಈ ನಟಿ! ಅವೆಲ್ಲವೂ ಹಿಟ್ ಚಿತ್ರಗಳಾದವಷ್ಟೇ ಅಲ್ಲ, ಒಂದು ಚಿತ್ರವಂತೂ ಜೂಹಿ ಚಾವ್ಲಾರನ್ನು ಸೂಪರ್ ಸ್ಟಾರ್ ಮಾಡಿತು. 

ಯಾರೀ ನಟಿ? ಶಾರೂಖ್ ಚಿತ್ರಗಳನ್ನು ಆಕೆ ಸಾರಾಸಗಟಾಗಿ ತಿರಸ್ಕರಿಸಲು ಕಾರಣವೇನು?
ಅವರೇ ಮಸ್ತ್ ಮಸ್ತ್ ಹುಡುಗಿ, ಕೆಜಿಎಫ್‌ನಲ್ಲಿ ಯಶ್‌ ಪಾತ್ರಕ್ಕೆ ಸವಾಲು ಹಾಕಿದ ರವೀನಾ ಟಂಡನ್. ರವೀನಾ ಟಂಡನ್ ಹಿಂದಿ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಅವರು ಅನೇಕ ಹಿಟ್ ಚಿತ್ರಗಳೊಂದಿಗೆ ಉತ್ತಮ ವೃತ್ತಿಜೀವನವನ್ನು ಹೊಂದಿದ್ದಾರೆ. ಕನ್ನಡದಲ್ಲಿ ಉಪೇಂದ್ರ ಚಿತ್ರದಲ್ಲಿ ಮಸ್ತು ಮಸ್ತು ಹುಡುಗಿ ಬಂದ್ಲು ಹಾಡಿಗೆ ಕುಣಿದು ಹುಚ್ಚೆಬ್ಬಿಸಿದ್ದರು. ಇತ್ತೀಚೆಗೆ ಕೆಜಿಎಫ್‌ನಲ್ಲೂ ಖಡಕ್ ಪಾತ್ರ ಮಾಡಿದ್ದರು. ಈ ದಿನಗಳಲ್ಲಿ ನಟಿ ಇತ್ತೀಚೆಗೆ ಬಿಡುಗಡೆಯಾದ ವೆಬ್ ಸರಣಿ 'ಕರ್ಮ ಕಾಲಿಂಗ್'ಗಾಗಿ ಸುದ್ದಿಯಲ್ಲಿದ್ದಾರೆ. ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ ರವೀನಾ ಟಂಡನ್ ಅವರ ಟಿವಿ ಸರಣಿ 'ಕರ್ಮ ಕಾಲಿಂಗ್' ಜನವರಿ 26, 2024 ರಂದು ಸ್ಟ್ರೀಮಿಂಗ್ ಪ್ರಾರಂಭಿಸಿದೆ. ಇದು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ.

ಪೂನಂ ಪಾಂಡೆ ಬಾಡಿ ಮಿಸ್ಸಿಂಗ್; ಕುಟುಂಬ ನಾಟ್ ರೀಚೇಬಲ್; ಸಾವಿನ ಸುತ್ತ ಬೆಳೀತಿದೆ ಅನುಮಾನದ ಹುತ್ತ!

Tap to resize

Latest Videos

ರವೀನ್ ಟಂಡನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಅವರೊಂದಿಗಿನ ನಾಲ್ಕು ಚಿತ್ರಗಳನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. 
ಹೌದು, ಶಾರುಖ್ ಖಾನ್ ಜೊತೆಗಿನ 4 ಚಿತ್ರಗಳಿಗೆ ಸಹಿ ಹಾಕಿದರೂ, ಕಾರಣಾಂತರಗಳಿಂದ ಆಕೆ ಆ ಚಿತ್ರಗಳನ್ನು ತಿರಸ್ಕರಿಸಬೇಕಾಯಿತು ಎಂದವರು ಹೇಳಿದ್ದಾರೆ. 

ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್; ಫೆಬ್ರವರಿ 9 ಪ್ರತಿಯೊಬ್ಬರೂ ಕಾಟೇರ ಸಿನಿಮಾ ನೋಡ್ಬೋದು!

ಮಿರ್ಚಿ ಪ್ಲಸ್ ಜೊತೆಗಿನ ಸಂಭಾಷಣೆಯಲ್ಲಿ, ರವೀನಾ ಟಂಡನ್, ನಿರ್ದೇಶಕರ ಸಾವಿನಿಂದ ಶಾರುಖ್ ಅವರೊಂದಿಗಿನ ತನ್ನ ಮೊದಲ ಚಿತ್ರವು ಸ್ಥಗಿತಗೊಂಡಿತು ಎಂದು ಹೇಳಿದರು. ಎರಡನೇ ಚಿತ್ರವನ್ನು ಅದರಲ್ಲಿ ನಟಿಯ ಡ್ರೆಸ್‌ಗಳು ತನಗಿಷ್ಟವಾಗದ ಕಾರಣ ತಿರಸ್ಕರಿಸಲಾಯಿತು. ಇವುಗಳಲ್ಲಿ ರವೀನಾ ಮತ್ತು ಶಾರುಖ್ ಖಾನ್ ಒಟ್ಟಿಗೆ ಮಾಡಲು ಹೊರಟಿದ್ದ 'ಡರ್' ಚಿತ್ರವೂ ಒಂದು. ಆದರೆ, ಇದರಿಂದಲೂ ಆಕೆ ಹಿಂದೆ ಸರಿದಿದ್ದಳು. ನಂತರ, ಜೂಹಿ ಚಾವ್ಲಾ ಶಾರುಖ್ ಖಾನ್ ಜೊತೆ 'ಡರ್' ಚಿತ್ರದಲ್ಲಿ ನಟಿಸಿದರು. 1993 ರಲ್ಲಿ ಬಿಡುಗಡೆಯಾದ ಈ ಚಿತ್ರ ಬ್ಲಾಕ್ ಬಸ್ಟರ್ ಆಗಿತ್ತು. ಈ ಚಿತ್ರವು ಜೂಹಿ ಚಾವ್ಲಾ ಅವರ ವೃತ್ತಿಜೀವನದ ದೊಡ್ಡ ಚಿತ್ರಗಳಲ್ಲಿ ಒಂದಾಗಿದೆ.

ರವೀನಾ ಪ್ರಕಾರ, ಅವರು 10 ವರ್ಷಗಳ ಹಿಂದೆ 'ಕರ್ಮ ಕಾಲಿಂಗ್' ಅನ್ನು ಕೂಡಾ ತಿರಸ್ಕರಿಸಿದ್ದರು. ಈ ಕಾರ್ಯಕ್ರಮದ ಯೋಜನೆ 10 ವರ್ಷಗಳ ಹಿಂದೆಯೇ ಮಾಡಲಾಗಿತ್ತು. ಆದರೆ ಆ ಸಮಯದಲ್ಲಿ  ಮಗನಿಗೆ ಕೇವಲ 3-4 ತಿಂಗಳ ವಯಸ್ಸಾಗಿತ್ತು. ಆದ್ದರಿಂದ ಅವರು ಆ ಯೋಜನೆಯನ್ನೂ ನಿರಾಕರಿಸಿದ್ದಾಗಿ ರವೀನಾ ಹೇಳಿದ್ದಾರೆ.
 

click me!