Happy Birthday Katrina Kaif; ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ ಕ್ಯಾಟ್ ರೋಚಕ ಜರ್ನಿ

Published : Jul 16, 2022, 11:12 AM IST
Happy Birthday Katrina Kaif; ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ ಕ್ಯಾಟ್ ರೋಚಕ ಜರ್ನಿ

ಸಾರಾಂಶ

ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರಿಗೆ ಇಂದು (ಜುಲೈ 16) ಹುಟ್ಟುಹಬ್ಬದ ಸಂಭ್ರಮ. 39ನೇ ವರ್ಷದ ಜನ್ಮದಿನದ ಸಂತಸದಲ್ಲಿರುವ ಕತ್ರಿನಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. 

ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರಿಗೆ ಇಂದು (ಜುಲೈ 16) ಹುಟ್ಟುಹಬ್ಬದ ಸಂಭ್ರಮ. 39ನೇ ವರ್ಷದ ಜನ್ಮದಿನದ ಸಂತಸದಲ್ಲಿರುವ ಕತ್ರಿನಾಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಅಂದಹಾಗೆ ಕತ್ರಿನಾಗೆ ಈ ವರ್ಷದ ಹುಟ್ಟುಹಬ್ಬ ತುಂಬನೇ ವಿಶೇಷ. ಮದುವೆಯಾದ ಬಳಿಕ ಮೊದಲ ಹುಟ್ಟುಹಬ್ಬ ಇದಾಗಿದೆ. ಬಾಲಿವುಡ್ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಕತ್ರಿನಾ, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಹೃತಿಕ್ ರೋಷನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ಸಿನಿಮಾವನ್ನು ಅಪಾರ ಪ್ರೀತಿಸುವ ನಟಿ ಕತ್ರಿನಾಗೆ ಸಿನಿಮಾರಂಗ ನೀಡಿದ ಪ್ರೀತಿ ಅಭಿಮಾನಿಗಳ ಅಭಿಮಾನಕ್ಕೆ ಒಮ್ಮೆ ಭಾವುಕರಾಗಿದ್ದರು. 

ಈ ಹಿಂದೆ ಕತ್ರಿನಾ ಸಿನಿಮಾರಂಗದ ಬಗ್ಗೆ ಮಾಡಿದ್ದ ಭಾವುಕ ಭಾಷಣ ಅಭಿಮಾನಿಗಳ ಹೃದಯ ಮುಟ್ಟಿತ್ತು.  ಅಂದಹಾಗೆ ಕತ್ರಿನಾ 2003ರಲ್ಲಿ ಸಿನಿಮಾರಂಗ ಪ್ರವೇಶ ಮಾಡಿದರು. ಬೂಮ್‌ ಸಿನಿಮೊದೊಂದಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಕತ್ರಿನಾ ಬಳಿಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.  ಕತ್ರಿನಾ 2005ರಲ್ಲಿ ಬಂದ ಮೈನೆ ಪ್ಯಾರ್ ಕ್ಯಾ ಕಿಯಾ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಕತ್ರಿನಾ, ಸಲ್ಮಾನ್ ಖಾನ್, ಸೊಹೈಲ್ ಖಾನ್, ಅರ್ಷದ್ ವಾರ್ಸಿ ಮತ್ತು ಸುಶ್ಮಿತಾ ಸೇನ್ ಅವರೊಂದಿಗೆ ತೆರೆಹಂಚಿಕೊಂಡಿದ್ದರು. ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ಮತ್ತು ಯಶಸ್ಸು ನೀಡಿತ್ತು. ಬಳಿಕ ಬಾಕ್ಸ್ ಆಫೀಸ್ ನಲ್ಲಿ ಹಿಟ್‌ಗಳ ಸರಣಿಯನ್ನು ನೀಡಿದರು. 

ಅಂದಹಾಗೆ ಕತ್ರಿನಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಬರೊಬ್ಬರಿ 2 ದಶಕಗಳು ಸಮೀಪಿಸುತ್ತಿದೆ. ಮುಂದಿನ ವರ್ಷಕ್ಕೆ (2023) ಕತ್ರಿನಾ ಸಿನಿಮಾರಂಗಕ್ಕೆ ಬಂದು 20 ವರ್ಷಗಳು ಪೂರೈಸುತ್ತದೆ. 2008ರಲ್ಲಿ ಜೀ ಸಿನಿ ಅವಾರ್ಡ್ ಕಾರ್ಯಕ್ರಮದಲ್ಲಿ ಕತ್ರಿನಾ ಕೈಫ್ ಬಾಲಿವುಡ್ ತನ್ನನ್ನು ಅದ್ದೂರಿಯಾಗಿ ಸ್ವಾಗತಿಸಿದ ರೀತಿ ಮತ್ತು ತನಗೆ ಮನೆ ನೀಡಿದ ಚಿತ್ರರಂಗಕ್ಕೆ ಧನ್ಯವಾದ ತಿಳಿಸಿದ್ದರು. ಲಂಡನ್‌ನಲ್ಲಿ ನಡೆದ ಆ ಸಮಾರಂಭದಲ್ಲಿ, ಕತ್ರಿನಾ ಅವರಿಗೆ ವರ್ಷದ ಬ್ರಿಟಿಷ್ ಇಂಡಿಯನ್ ಸ್ಟಾರ್‌ಗಾಗಿ ವಿಶೇಷ ಜೀ ಸಿನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. 

ಸಿನಿಮಾ ಸಕ್ಸಸ್ ಬಳಿಕ ನಿರ್ಮಾಪಕರಿಂದ ದುಬಾರಿ ಗಿಫ್ಟ್‌ ಪಡೆದ ಸ್ಟಾರ್ಸ್‌ ಇವರು

ಸಮಾರಂಭದಲ್ಲಿಮಾತನಾಡಿದ ಕತ್ರಿನಾ ಕೈಫ್, 'ನನ್ನ ತಾಯಿ ಲಂಡನ್‌ನವರು, ನನ್ನ ತಂದೆ ಭಾರತದವರು. ಆದ್ದರಿಂದ ಇದು ಎರಡೂ ಪ್ರಪಂಚಗಳ ಸಮ್ಮಿಲನವಾಗಿದೆ. ಆದರೆ ಈ ಉದ್ಯಮ ನನಗೆ ಅತ್ಯಂತ ಅದ್ಭುತವಾದ ಸ್ವಾಗತಾರ್ಹ ಉದ್ಯಮವಾಗಿದೆ. ನಾನು ನನ್ನ ಕುಟುಂಬವನ್ನು ಕಂಡುಕೊಂಡಿದ್ದೇನೆ, ನಾನು ಜೀವನದಲ್ಲಿ ನನ್ನ ಸ್ಥಾನವನ್ನು ಕಂಡುಕೊಂಡಿದ್ದೇನೆ. ನಾನು ನನ್ನ ಮನೆಯನ್ನು ಕಂಡುಕೊಂಡಿದ್ದೇನೆ, ಈ ಉದ್ಯಮವು ನನಗೆ ಎಲ್ಲವೂ ಆಗಿದೆ. ನಿಮ್ಮ ಪ್ರೀತಿಗೆ, ನಿಮ್ಮ ಬೆಂಬಲಕ್ಕೆ ಎಲ್ಲರಿಗೂ ತುಂಬಾ ಧನ್ಯವಾದಗಳು' ಎಂದು ಹೇಳಿದರು. 

2015ರಲ್ಲಿ ಸಂದರ್ಶನವೊಂದರಲ್ಲಿ ಕತ್ರಿನಾ, ಭಾರತದಲ್ಲಿ ಮನೆ ಹುಡುಕುವ ಬಗ್ಗೆ ಮಾತನಾಡಿದ್ದರು. 'ನಾನು ಇಲ್ಲಿ ಅದ್ಭುತ ಸಮಯವನ್ನು ಹೊಂದಿದ್ದೇನೆ. ನನ್ನ ಪಯಣ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ಹೆಚ್ಚಿನದನ್ನು ಕೇಳಲು ಸಾಧ್ಯವಾಗಲಿಲ್ಲ ಮತ್ತು ನಾನು ಇಲ್ಲಿಗೆ ಬಂದಾಗ ನಾನು ಜೀವನದಲ್ಲಿ ನನ್ನ ಸ್ಥಾನವನ್ನು ಕಂಡುಕೊಂಡೆ ಎಂದು ನಾನು ಭಾವಿಸುತ್ತೇನೆ. ನಾನು ಇಲ್ಲಿ ನನ್ನ ಮನೆಯನ್ನು ಕಂಡುಕೊಂಡೆ, ನಾನು ಇಲ್ಲಿಯೇ ನೆಲೆಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಾನು ಉದ್ಯಮದಿಂದ ಪಡೆದ ಪ್ರೀತಿ ಮತ್ತು ಸ್ವಾಗತ ನಂಬಲಾಗದು' ಎಂದು ಹೇಳಿದರು.

ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಪತಿ ವಿಕ್ಕಿ ಕೌಶಲ್‌ಗೆ ಕತ್ರಿನಾ ಕೈಫ್ ಬರ್ತಡೇ ವಿಶ್

ಕತ್ರಿನಾ ಕೈಫ್ ಸದ್ಯ ಫೋನ್ ಭೂತ್ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಸಿದ್ಧಾಂತ್ ಚತುರ್ವೇದಿ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಕ್ಟೋಬಪ್ 7ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಟೈಗರ್ 3 ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಸೌತ್ ಸ್ಟಾರ್ ವಿಜಯ.್ ಸೇತುಪತಿ ಜೊತೆ ಮೇರಿ ಕ್ರಿಸ್ಮಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್